ನಿಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್

ಭಾರತದಲ್ಲಿ ಬೈಕ್ ಖರೀದಿಸುವ ಗ್ರಾಹಕರು ಮೊದಲು ನೋಡುವುದು ಈ ಬೈಕ್ ಎಷ್ಟು ಮೈಲೇಜ್ ನೀಡುತ್ತದೆ ಎಂದು. ಇನ್ನು ಕುತೂಹಲಕಾರಿ ಅಂಶವೆಂದರೆ ಭಾರತದಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳೇ ಉತ್ತಮವಾಗಿ ಮಾರಾಟವಾಗುತ್ತವೆ.

ನಿಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್

ಭಾರತದಲ್ಲಿ ಹೆಚ್ಚಿನ ಗ್ರಾಹಕರು ಮೈಲೇಜ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬೇರೆ ಗಗನದೆತ್ತರಕ್ಕೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೈಕ್ ಖರೀದಿಸುವ ಗ್ರಾಹಕರು ಹೆಚ್ಚು ಮೈಲೇಜ್ ನೀಡುವ ಬೈಕಿನ ಕಡೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಇದಲ್ಲದೆ ನೀವು ಬೈಕ್ ಅನ್ನು ಬೇಕಾಬಿಟ್ಟಿ ಚಲಾಯಿಸಿದರೆ ಅದರ ಮೈಲೇಜ್ ಡ್ರಾಪ್ ಆಗುತ್ತದೆ. ಆಗದರೆ ನಿಮ್ಮ ಬೈಕ್ ಹೆಚ್ಚು ಮೈಲೇಜ್ ನೀಡಲು ಇಲ್ಲಿವೆ ಕೆಲವು ಪ್ರಮುಖ ಟೆಪ್ಸ್.

ನಿಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್

1. ನಿಮ್ಮ ಬೈಕ್ ಅನ್ನು ಸಮಯಕ್ಕೆ ಸರಿಯಾಗಿ ಸರ್ವಿಸ್ ಮಾಡಿಸಿ .ಬೈಕ್ ಉತ್ತಮವಾಗಿಡಲು ಸರ್ವಿಸ್ ಅತ್ಯಗತ್ಯ. ಸಮಯಕ್ಕೆ ಸರಿಯಾಗಿ ಸರ್ವಿಸ್ ಮಾಡಿಸಿದರೆ ಎಂಜಿನ್ ಆರೋಗ್ಯಕರವಾಗಿರುತ್ತದೆ. ಇದರಿಂದ ಉತ್ತಮ ಮೈಲೇಜ್ ಅನ್ನು ನೀಡುತ್ತದೆ. ಸರ್ವಿಸ್ ಅನ್ನು ಸರಿಯಾಗಿ ಮಾಡಿಸದಿದ್ದರೆ ಮೈಲೇಜ್ ಡ್ರಾಪ್ ಆಗುತ್ತದೆ.

MOST READ: ಬೈಕ್ ಚೈನ್ ರಕ್ಷಣೆಗೆ ಸರಳ ವಿಧಾನಗಳಿವು

ನಿಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್

2. ಸಮಯೋಚಿತ ಸರ್ವಿಸ್ ನಂತರ, ಉತ್ತಮ ಮೈಲೇಜ್ ಗಾಗಿ ಕಾರ್ಬ್ಯುರೇಟರ್ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಬಹುದು. ಮೈಲೇಜ್ ಡ್ರಾಪ್ ಆಗುತ್ತಿದ್ದರೆ, ಕಾರ್ಬ್ಯುರೇಟರ್ ಅನ್ನು ರೀ ಟ್ಯೂನ್ ಮಾಡಿದಾಗ ಬಹಳಷ್ಟು ಸಹಾಯ ವಾಗುತ್ತದೆ.

ನಿಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್

3. ಮೈಲೇಜ್ ವಿಷಯಕ್ಕೆ ಬಂದಾಗ ಟಯರ್ ಒತ್ತಡವು ಪ್ರಮುಖ ಪಾತ್ರ ವಹಿಸುತ್ತದೆ. ಟಯರ್ ನಲ್ಲಿ ಗಾಳಿ ಕಡಿಮೆಯಾದಗ ಒತ್ತಡ ಹೆಚ್ಚಾಗಿ ಮೈಲೇಜ್ ಕಡಿಮೆಯಾಗುತ್ತದೆ. ಇದರಿಂದ ಬೈಕಿನ ಟಯರ್ ಗಳ ಗಾಳಿಯನ್ನು ಪರಿಶೀಲಿಸುತ್ತ ಇರುವುದು ಉತ್ತಮ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ನಿಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್

4. ಉತ್ತಮ ಗುಣಮಟ್ಟದ ಫ್ಯೂಯಲ್(ಇಂಧನ) ಭರ್ತಿ ಮಾಡಿದಾಗ ಬೈಕ್ ಉತ್ತಮ ಮೈಲೇಜ್ ಹಿಂತಿರುಗಿಸಲು ಸಹಾಯ ಮಾಡುತ್ತದೆ.ಇದು ಎಂಜಿನ್ ಅನ್ನು ಆರೋಗ್ಯಕರವಾಗಿಡಲು ಸಹ ಸಹಾಯ ಮಾಡುತ್ತದೆ. ಉತ್ತಮ ಗುಣಮಟ್ಟದ ಪೆಟ್ರೋಲ್ ಯಾವಾಗಲೂ ಎಂಜಿನ್ ಅನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ

ನಿಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್

5. ಇನ್ನು ಬೈಕ್ ಚಾಲಿಸುವಾಗ ಹಠಾತ್ ಸ್ಪೀಡ್ ಅನ್ನು ಹೆಚ್ಚಿಸುವುದು ಮತ್ತು ಹಾರ್ಡ್ ಬ್ರೇಕಿಂಗ್ ಅಂದರೆ ಸಡನ್ ಬ್ರೇಕ್ ಅನ್ನು ಹಾಕಿದ್ದಾಗ ಫ್ಯೂಯಲ್ ಹೆಚ್ಚು ಹೀರಿಕೊಳ್ಳುತ್ತದೆ. ಥ್ರೊಟಲ್ ಮೇಲೆ ಲಘುವಾಗಿ ಕೈ ಇರಿಸಿ ಮತ್ತು ಸಣ್ಣ ಗೇರ್ ನಲ್ಲಿ ಬೈಕ್ ಹೆಚ್ಚಿನ ಆರ್‌ಪಿಎಂ ಮಟ್ಟದಲ್ಲಿ ವೇಗವನ್ನು ಹೆಚ್ಚಿಸದಿರಿ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ನಿಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್

ಕಡಿಮೆ ಆರ್‌ಪಿಎಂ ಮಟ್ಟದಲ್ಲಿ ಸರಿಯಾದ ಗೇರ್‌ನಲ್ಲಿ ಬೈಕು ಸವಾರಿ ಮಾಡಿದಾಗ ಉತ್ತಮ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಹೆಚ್ಚಾಗಿ ದ್ವಿಚಕ್ರ ವಾಹನ ಕಂಪನಿಗಳು ಹೆಚ್ಚಿನ ಮೈಲೇಜ್ ಪಡೆಯಲು ಸುಮಾರು 50-60 ಕಿ.ಮೀ ಸ್ಪೀಡ್ ನಲ್ಲಿ ಬೈಕ್ ಅನ್ನು ಚಲಾಯಿಸಲು ಹೇಳುತ್ತಾರೆ. ಅದರಿಂದ ನೀವು ಬೈಕ್ ಚಲಾಯಿಸುವಾಗ ಸ್ಪೀಡ್ ಬಗ್ಗೆ ಹೆಚ್ಚಿನ ಗಮನಹರಿಸಿ.

ನಿಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್

5. ಒಂದು ವೇಳೆ ನೀವು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡರೆ ಮತ್ತು ಕಾಯುವ ಸಮಯ 40 ಸೆಕೆಂಡ್‌ಗಳಿಗಿಂತ ಹೆಚ್ಚಿದ್ದರೆ ಎಂಜಿನ್ ಆಫ್ ಮಾಡಲು ಮರೆಯಬೇಡಿ. ಇದರಿಂದ ನೀವು ಫ್ಯೂಯಲ್ ವ್ಯರ್ಥವಾಗುವುದನ್ನು ತಡೆಯಬಹುದು.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ನಿಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್

6. ಇನ್ನು ನಿಮ್ಮ ಬೈಕನ್ನು ಹೆಚ್ಚು ಸೂರ್ಯನ ಕಿರಣವನ್ನು ಬೀಳುವ ಪ್ರದೇಶ ಅಥವಾ ಹೆಚ್ಚಿನ ಬಿಸಿಲಿರುವ ಪ್ರದೇಶದಲ್ಲಿ ನಿಲುಗಡೆ ಮಾಡಿದಾಗ ಅಲ್ಪ ಪ್ರಮಾಣದಲ್ಲಿ ಫ್ಯೂಯಲ್ ಆವಿಯಾಗುವ ಸಾಧ್ಯತೆಗಳು ಕೂಡ ಇದೆ. ಇದು ಚಿಕ್ಕ ಪ್ರಮಾಣವಾದರೂ, ಪ್ರತಿ ದಿನವು ಹೆಚ್ಚಿನ ಬಿಸಿಲು ಪ್ರದೇಶದಲ್ಲಿ ನಿಲಿಸಿದ್ದಾಗ ಫ್ಯೂಯಲ್ ವ್ಯರ್ಥವಾಗುವ ಪ್ರಮಾಣ ಹೆಚ್ಚಾಗುತ್ತದೆ.

ನಿಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್

7. ಸರ್ವಿಸ್ ಮಧ್ಯಂತರ ಸಮಯದಲ್ಲಿ ಬೈಕಿನ ಚೈನ್ ಅನ್ನು ಸ್ವಚ್ಚಗೊಳಿಸಿ. ನೀವು ಹೆಚ್ಚು ಮರಳು ಮತ್ತು ಕೆಸರು ಕೂಡಿದ ಪ್ರದೇಶಗಳಲ್ಲಿ ಬೈಕ್ ಚಲಾಯಿಸಿದಾಗ ಇದರ ಬಗ್ಗೆ ಗಮನಹರಿಸಬೇಕು. ಚೈನ್ ನಲ್ಲಿ ಯಾವುದೇ ಕೆಸರು ಇಲ್ಲಿದ್ದರೆ ಸರಾಗವಾಗಿ ತಿರುಗಿದಾಗ ಕಡಿಮೆ ಪವರ್ ಅಗತ್ಯವಿರುವುದರಿಂದ ಉತ್ತಮ ಮೈಲೇಜ್ ಪಡೆಯಲು ಸಹಾಯ ಮಾಡುತ್ತದೆ.

ನಿಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್

8. ಇನ್ನು ಬೈಕ್ ಪ್ರಿಯರು ಬೈಕನ್ನು ಖರೀದಿಸಿದ ಬಳಿಕ ಮಾಡಿಫೈಗೊಳಿಸಲು ಇಷ್ಟ ಪಡುತ್ತಾರೆ. ನೀವು ನಿಮ್ಮ ಬೈಕಿನಲ್ಲಿ ಕಸ್ಟಮ್ ಎಕ್ಸಾಸ್ಟ್, ಏರ್ ಫಿಲ್ಟರ್‌ಗಳು ಮತ್ತು ಹೆಚ್ಚುವರಿ-ಅಗಲವಾದ ಟೈರ್‌ಗಳನ್ನು ಅಳವಡಿಸಿದರೆ ಮೈಲೇಜ್ ಡ್ರಾಪ್ ಆಗುತ್ತದೆ. ಆದರಿಂದ ಮೈಲೇಜ್ ಬಗ್ಗೆ ಹೆಚ್ಚು ಗಮನಹರಿಸುವವರು ಮಾಡಿಫೈಗೊಳಿಸಿದರೆ ಮೈಲೇಜ್ ಕಡಿಮೆಯಾಗುತ್ತದೆ.

Most Read Articles

Kannada
English summary
Easy Ways To Increase The Mileage Of Your Bike. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X