ವಾಹನ ಸವಾರರೇ ಪಾಲಿಸಿ ಈ ಸಲಹೆಗಳನ್ನ, ತಪ್ಪಿಸಿ ಪೆಟ್ರೋಲ್ ಬಂಕ್'ಗಳಲ್ಲಿ ಮೋಸ ಹೋಗುವುದನ್ನ

ಪೆಟ್ರೋಲ್ ಬಂಕ್'ಗಳಲ್ಲಿ ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಚ್ಚಿನ ಹಣದಾಸೆಗೆ ಗ್ರಾಹಕರನ್ನು ವಂಚಿಸಲಾಗುತ್ತಿದೆ. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇಂಧನವನ್ನು ತುಂಬಿಸಿ ಗ್ರಾಹಕರಿಗೆ ಮೋಸಮಾಡಲಾಗುತ್ತಿದೆ.

ವಾಹನ ಸವಾರರೇ ಪಾಲಿಸಿ ಈ ಸಲಹೆಗಳನ್ನ, ತಪ್ಪಿಸಿ ಪೆಟ್ರೋಲ್ ಬಂಕ್'ಗಳಲ್ಲಿ ಮೋಸ ಹೋಗುವುದನ್ನ

ಇದೇ ರೀತಿಯ ಹಲವಾರು ತಂತ್ರಗಳನ್ನು ಪೆಟ್ರೋಲ್ ಬಂಕ್ ಸಿಬ್ಬಂದಿ ಮಾಡುತ್ತಿದ್ದಾರೆ. ವಾಹನಗಳಿಗೆ ಪೆಟ್ರೋಲ್ ಹಾಕಿಸುವಾಗ ಕೆಲ ಸಂಗತಿಗಳನ್ನು ಗಮನಿಸುವ ಮೂಲಕ ಮೋಸ ಹೋಗುವುದನ್ನು ತಪ್ಪಿಸಬಹುದು. ಪೆಟ್ರೋಲ್ ಹಾಕಿಸುವಾಗ ಗಮನಿಸಬೇಕಾದ ಕೆಲ ಸಂಗತಿಗಳನ್ನು ಈ ಲೇಖನದಲ್ಲಿ ನೋಡೋಣ.

ವಾಹನ ಸವಾರರೇ ಪಾಲಿಸಿ ಈ ಸಲಹೆಗಳನ್ನ, ತಪ್ಪಿಸಿ ಪೆಟ್ರೋಲ್ ಬಂಕ್'ಗಳಲ್ಲಿ ಮೋಸ ಹೋಗುವುದನ್ನ

1. ಫ್ಯೂಯಲ್ ಮೀಟರ್ ಬಗ್ಗೆ ಗಮನ ಹರಿಸಿ

ಪೆಟ್ರೋಲ್ ಬಂಕಿಗೆ ಹೋದಾಗ ಮೊದಲು ಫ್ಯೂಯಲ್ ಮೀಟರ್ ಪರೀಕ್ಷಿಸಿ. ಫ್ಯೂಯಲ್ ಮೀಟರ್‌ನಲ್ಲಿ ಪೆಟ್ರೋಲ್ ಅಥವಾ ಡೀಸೆಲ್‌ನ ರೀಡಿಂಗ್ ಸೊನ್ನೆ ಇದೆಯೇ ಎಂಬುದನ್ನು ಪರಿಶೀಲಿಸಿ. ರೀಡಿಂಗ್ ಸೊನ್ನೆ ಇಲ್ಲದಿದ್ದರೆ, ರೀಡಿಂಗ್ ಅನ್ನು ಸೊನ್ನೆ ಮಾಡುವಂತೆ ಪೆಟ್ರೋಲ್ ಹಾಕುವವನಿಗೆ ತಿಳಿಸಿ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಾಹನ ಸವಾರರೇ ಪಾಲಿಸಿ ಈ ಸಲಹೆಗಳನ್ನ, ತಪ್ಪಿಸಿ ಪೆಟ್ರೋಲ್ ಬಂಕ್'ಗಳಲ್ಲಿ ಮೋಸ ಹೋಗುವುದನ್ನ

ಪೆಟ್ರೋಲ್ ಹಾಕುವಾಗ ರೀಡಿಂಗ್ ಹೆಚ್ಚಾಗದಿದ್ದರೆ, ನೀವು ಮೋಸ ಹೋಗುತ್ತಿದ್ದೀರಿ ಎಂದು ಅರ್ಥ. ತಕ್ಷಣವೇ ಅಲ್ಲಿನ ವ್ಯವಸ್ಥಾಪಕರಿಗೆ ದೂರು ನೀಡಿ ಅಥವಾಸಂಬಂಧ ಪಟ್ಟ ಆಯಿಲ್ ಕಂಪನಿಯ ಸಹಾಯವಾಣಿಗೆ ಕರೆ ಮಾಡಿ.

ವಾಹನ ಸವಾರರೇ ಪಾಲಿಸಿ ಈ ಸಲಹೆಗಳನ್ನ, ತಪ್ಪಿಸಿ ಪೆಟ್ರೋಲ್ ಬಂಕ್'ಗಳಲ್ಲಿ ಮೋಸ ಹೋಗುವುದನ್ನ

2. ರೌಂಡ್ ಫಿಗರ್‌ನಲ್ಲಿ ಪೆಟ್ರೋಲ್ ತೆಗೆದುಕೊಳ್ಳುವುದನ್ನು ತಪ್ಪಿಸಿ

ಸಾಮಾನ್ಯವಾಗಿ ಜನರು ಪೆಟ್ರೋಲ್ ಬಂಕ್'ಗಳಲ್ಲಿ ರೌಂಡ್ ಫಿಗರ್ ಲೆಕ್ಕದಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸುತ್ತಾರೆ. ಅಂದರೆ 100 ರೂಪಾಯಿ, 200 ರೂಪಾಯಿ ಅಥವಾ 500 ರೂಪಾಯಿಗಳಿಗೆ ಪೆಟ್ರೋಲ್, ಡೀಸೆಲ್ ಹಾಕಿಸಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಾಹನ ಸವಾರರೇ ಪಾಲಿಸಿ ಈ ಸಲಹೆಗಳನ್ನ, ತಪ್ಪಿಸಿ ಪೆಟ್ರೋಲ್ ಬಂಕ್'ಗಳಲ್ಲಿ ಮೋಸ ಹೋಗುವುದನ್ನ

ಬಹುತೇಕ ಜನರು ಈ ರೀತಿಯಾಗಿ ಪೆಟ್ರೋಲ್, ಡೀಸೆಲ್ ಹಾಕಿಸುವುದರಿಂದ ಕೆಲವು ಪೆಟ್ರೋಲ್ ಬಂಕ್'ನವರು ಈ ಮೊತ್ತಕ್ಕೆ ಕಡಿಮೆ ಇಂಧನ ಬರುವಂತೆ ಮಾಡಿರುತ್ತಾರೆ. ಇದರಿಂದಾಗಿ ಈ ಮೊತ್ತಕ್ಕೆ ಇಂಧನ ತುಂಬಿಸಿದಾಗ ನಿಮ್ಮ ವಾಹನಕ್ಕೆ ಕಡಿಮೆ ಇಂಧನ ಬರುತ್ತದೆ. ಈ ವಂಚನೆಯನ್ನು ತಪ್ಪಿಸಲು ಲೀಟರ್ ಲೆಕ್ಕದಲ್ಲಿ ಇಂಧನ ತುಂಬಿಸುವುದು ಉತ್ತಮ.

ವಾಹನ ಸವಾರರೇ ಪಾಲಿಸಿ ಈ ಸಲಹೆಗಳನ್ನ, ತಪ್ಪಿಸಿ ಪೆಟ್ರೋಲ್ ಬಂಕ್'ಗಳಲ್ಲಿ ಮೋಸ ಹೋಗುವುದನ್ನ

3. ರಿಮೋಟ್ ಕಂಟ್ರೋಲ್ ಹಾಗೂ ಚಿಪ್ ವಂಚನೆಗೆ ಕಾರಣವಾಗಬಹುದು

ರಿಮೋಟ್ ಕಂಟ್ರೋಲ್'ನಿಂದ ಕಾರ್ಯ ನಿರ್ವಹಿಸಲ್ಪಡುವ ಸಾಧನದಿಂದ ಅನೇಕ ಬಾರಿ ಪೆಟ್ರೋಲ್ ಬಂಕ್ ಮಾಲೀಕರು ಪಂಪ್‌ನ ಫ್ಯೂಯಲ್ ಮೀಟರ್ ಅನ್ನುಹಾಳುಮಾಡುತ್ತಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಾಹನ ಸವಾರರೇ ಪಾಲಿಸಿ ಈ ಸಲಹೆಗಳನ್ನ, ತಪ್ಪಿಸಿ ಪೆಟ್ರೋಲ್ ಬಂಕ್'ಗಳಲ್ಲಿ ಮೋಸ ಹೋಗುವುದನ್ನ

ಇದು ಪೆಟ್ರೋಲ್, ಡೀಸೆಲ್ ಹರಿವಿನ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.ಕಡಿಮೆ ಇಂಧನ ಹರಿಯುವಂತೆ ರಿಮೋಟ್ ಕಂಟ್ರೋಲ್-ಆಪರೇಟೆಡ್ ಚಿಪ್ ಹೊಂದಿದ್ದ ಪೆಟ್ರೋಲ್ ಬಂಕ್'ಗಳನ್ನು ಹಲವು ಬಾರಿ ತಪಾಸಣೆ ನಡೆಸಿ, ಕ್ರಮ ಕೈಗೊಳ್ಳಲಾಗಿದೆ.

ವಾಹನ ಸವಾರರೇ ಪಾಲಿಸಿ ಈ ಸಲಹೆಗಳನ್ನ, ತಪ್ಪಿಸಿ ಪೆಟ್ರೋಲ್ ಬಂಕ್'ಗಳಲ್ಲಿ ಮೋಸ ಹೋಗುವುದನ್ನ

ಕೆಲವು ಬಾರಿ ತನಿಖಾಧಿಕಾರಿಗಳನ್ನು ವಂಚಿಸಲು ಸಹ ಮೀಟರ್'ಗಳನ್ನು ತಿರುಚಲಾಗುತ್ತದೆ. ಈ ಸನ್ನಿವೇಶದಲ್ಲಿ ಆ ರೀತಿಯ ಯಂತ್ರ ಅಥವಾ ಸಾಧನಗಳನ್ನು ನೋಡಿ ಜಾಗರೂಕರಾಗಿರಬೇಕು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಾಹನ ಸವಾರರೇ ಪಾಲಿಸಿ ಈ ಸಲಹೆಗಳನ್ನ, ತಪ್ಪಿಸಿ ಪೆಟ್ರೋಲ್ ಬಂಕ್'ಗಳಲ್ಲಿ ಮೋಸ ಹೋಗುವುದನ್ನ

4. ಪೆಟ್ರೋಲ್ ಹಾಕುವವನ ಮೇಲೆ ನಿಗಾ ಇರಿಸಿ

ಪೆಟ್ರೋಲ್, ಡೀಸೆಲ್ ಹಾಕಿಸುವಾಗ, ಹಾಕುವವನ ಮೇಲೆ ನಿಗಾ ಇರಿಸಿ. ಪೆಟ್ರೋಲ್ ಹಾಕುವವರು ಪೆಟ್ರೋಲ್ ಪೈಪ್ ಅನ್ನು ಪದೇ ಪದೇ ಮುಚ್ಚುವುದು, ತೆಗೆಯುವುದು ಮಾಡುತ್ತಾರೆ.

ವಾಹನ ಸವಾರರೇ ಪಾಲಿಸಿ ಈ ಸಲಹೆಗಳನ್ನ, ತಪ್ಪಿಸಿ ಪೆಟ್ರೋಲ್ ಬಂಕ್'ಗಳಲ್ಲಿ ಮೋಸ ಹೋಗುವುದನ್ನ

ಇದರಿಂದಾಗಿ ಪೆಟ್ರೋಲ್ ಪೈಪ್ ಮೂಲಕ ಇಂಧನದ ಹರಿವು ಕಡಿಮೆಯಾಗುತ್ತದೆ. ಆದರೆ ಮೀಟರ್ ಚಾಲನೆಯಲ್ಲಿರುತ್ತದೆ. ಈ ರೀತಿಯ ಚಟುವಟಿಕೆ ನಿಮ್ಮ ಗಮನಕ್ಕೆಬಂದರೆ ತಕ್ಷಣವೇ ಎಚ್ಚೆತ್ತು ದೂರು ದಾಖಲಿಸಿ.

Most Read Articles

Kannada
English summary
Follow these tips and avoid being cheated at petrol bunks. Read in Kannada.
Story first published: Monday, February 1, 2021, 10:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X