ವರ್ಷಗಳುರುಳಿದರೂ ಕಾರು ಲಕಲಕ ಅಂತಿರಬೇಕು

ಬೈಕ್ ಆಗಲಿ ಕಾರ್ ಆಗಲಿ ಅಥವಾ ಪೆಡಲ್ ತುಳಿಯುವ ಸೈಕಲ್ ಆಗಲಿ, ಕೆಲವೊಬ್ಬರು ಅದರ ಜೊತೆ ಒಂದು ರೀತಿಯ ಅಟ್ಯಾಚ್ಮೆಂಟ್ ಬೆಳೆಸಿಕೊಂಡುಬಿಟ್ಟಿರುತ್ತಾರೆ. ವರ್ಷಗಳೇ ಉರುಳಿದರೂ, ತಾವು ಓಡಿಸುವ ಸವಕಲೇ ಆದರೂ ಅದನ್ನು ತಮ್ಮ ಹೆಂಡತಿಗಿಂತ ಚೆನ್ನಾಗಿ ನೋಡಿಕೊಂಡಿರುತ್ತಾರೆ, ಬಂಧುಗಳಿಗಿಂತ ಹೆಚ್ಚಾಗಿ ಪ್ರೀತಿಸಿರುತ್ತಾರೆ. ಅಂಥವರ ವಾಹನಗಳತ್ತ ಒಮ್ಮೆ ಕಣ್ಣು ಹಾಯಿಸಿ ನೋಡಿ. ನಿನ್ನೆ ಮೊನ್ನೆ ಕೊಂಡಿದ್ದಾರೇನೋ ಎಂಬಷ್ಟು ಫಳಫಳ ಅನ್ನುತ್ತಿರುತ್ತದೆ. ಅದರ ಮೇಲೆ ಒಂದು ಗೀರು ಕೂಡ ಆಗಲು ಅವರು ಬಿಟ್ಟಿರುವುದಿಲ್ಲ.

ಅದೇ ಇನ್ನೂ ಕೆಲವೊಂದು ವಾಹನಗಳನ್ನು ನೋಡಿ, ಕೊಂಡು ತಿಂಗಳೆರಡೂ ಆಗಿರುವುದಿಲ್ಲ, 'ಯು ನೀಡ್ ವಾಷ್', 'ದಯವಿಟ್ಟು ನನ್ನ ತೊಳೆದು ಪುಣ್ಯ ಕಟ್ಕೊಳ್ಳಿ' ಎಂದು ಅದರ ಅವಸ್ಥೆ ನೋಡಿ ಅಸಹ್ಯಪಟ್ಟುಕೊಂಡವರು ಬೆರಳಲ್ಲಿ ಬರೆದಿರುವ 'ಸಾಹಿತ್ಯ'ವನ್ನು ನೋಡಿರುತ್ತೀರಿ. ಕಾರು ಅಥವಾ ಬೈಕ್ ತೊಳೆಯದಿರಲು ನಾನಾ ಕಾರಣಗಳಿರಬಹುದು. ಆದರೆ ಕನಿಷ್ಠಪಕ್ಷ ಸ್ವಲ್ಪ ಕ್ಲೀನಾಗಾದರೂ ಇಟ್ಟುಕೊಳ್ಳಬಹುದಲ್ಲ? ವಾಹನಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ನಮ್ಮ ಮನಸ್ಸು ಕೂಡ ಅಷ್ಟೇ ನಿರ್ಮಲವಾಗಿರುತ್ತದೆ ಎಂಬುದನ್ನು ಮರೆಯಬಾರದು.

ನಮ್ಮನ್ನು ನಮ್ಮ ಕುಟುಂಬದವರನ್ನು ಪ್ರೀತಿಸಿದಷ್ಟೇ ನಮ್ಮ ವಾಹನಗಳನ್ನು ನಾವು ಪ್ರೀತಿಸಬೇಕು. ಅವುಗಳ ಸ್ವಚ್ಛತೆಗೆ ಅಷ್ಟೇ ಲಕ್ಷ್ಯವಹಿಸಬೇಕು. 'ನೋಡೋ, ಏನ್ ಸಖತ್ತಾಗಿಟ್ಗೊಂಡವ್ನೆ' ಎಂದು ದಾರಿಹೋಕರು ತಮ್ಮ ಮನದಲ್ಲೇ ಆಡಿಕೊಂಡಿರಬೇಕು, ಹಾಗಿರಬೇಕು ನಮ್ಮ ವಾಹನಗಳು. ಕಾರಿನ ಅಂಗಅಂಗಗಳು ವರ್ಷಗಳು ಕಳೆದರೂ ಹೊಸದಾಗಿ ಕಾಣಿಸುವಂತೆ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಕಾರ್ ಶಾಂಪೂ, ಕ್ರೀಮ್ ಪಾಲಿಶ್, ಡ್ಯಾಶ್‌ಬೋರ್ಡ್ ಪಾಲಿಶ್, ಇಂಜಿನ್ ಫ್ಲಶ್, ಸೀಟ್ ಮತ್ತು ಕಾರ್ಪೆಟ್ ಕಲೆ ನಿವಾರಿಸುವ ಅನೇಕ ಸಲಕರಣೆಗಳ ಬಗ್ಗೆ ಒಂದು ಕಣ್ಣು ಹಾಯಿಸೋಣ.

ಮೇಲೆ ತಿಳಿಸಿರುವ ಐದು ಟಿಪ್ಸ್‌ಗಳನ್ನು ಹಿಂಬಾಲಿಸಿದರಾಯಿತು. ಕಾರಿನ ಹೊರ ಆವರಣ ಎಷ್ಟು ಲಕಲಕ ಅಂತಿರಬೇಕೋ, ಒಳ ಆವರಣ ಕೂಡ ಮನಸ್ಸಿಗೆ ಹಿತವಾಗಿರುವಂತೆ ಇರಬೇಕು. ಜೊತೆಗೆ ನಿಯಮಿತವಾಗಿ ಕಾರು ಸರ್ವೀಸಿಂಗ್ ಮಾಡಿಸುತ್ತ, ಸಲಕಲಾಗುತ್ತಿರುವ ಸ್ಪೇರ್ ಪಾರ್ಟ್ಸ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸುತ್ತಿದ್ದರೆ ನಮ್ಮ ಮೆಚ್ಚಿನ ಕಾರನ್ನು ವರ್ಷಗಟ್ಟಲೆ ಅಂದವಾಗಿಟ್ಟುಕೊಳ್ಳುವಲ್ಲಿ ಸಾಧ್ಯವಾಗುತ್ತದೆ. ಡ್ರೈವ್‌ಸ್ಪಾರ್ಕ್ ಪೋರ್ಟಲ್ ನೀಡುವ ಟಿಪ್ಸ್‌ಗಳನ್ನು ಫಾಲೋ ಮಾಡಿ ಮತ್ತು ನಿಮ್ಮತನವನ್ನು ನಿಮ್ಮ ಕಾರಲ್ಲಿ ಕಂಡುಕೊಳ್ಳಿರಿ.

ಕಾರ್ ಶಾಂಪೂ

ಕಾರ್ ಶಾಂಪೂ

ರಸ್ತೆರಸ್ತೆಗಳಲ್ಲಿ ನಿಮ್ಮನ್ನು ಸುತ್ತಿಸುತ್ತ ಕಾರು ಅದೆಷ್ಟು ಧೂಳನ್ನು ತನ್ನ ಮೈಮೇಲೆ ಎಳೆದುಕೊಂಡಿರುತ್ತದೋ! ಇನ್ನು ಕೆಳಗೆ ಯಾರಿದ್ದಾರೆ ಎಂಬುದನ್ನು ಲೆಕ್ಕಿಸದೆ ಹಕ್ಕಿಗಳು ಹಾಕುವ ಹಿಕ್ಕೆಗಳು ಕಾರನ್ನು ಮತ್ತಷ್ಟು ಹೊಲಸು ಮಾಡುತ್ತವೆ. ಇಂಥ ಹೊಸಲುಗಳನ್ನು ತಿಂಗಳಾನುಗಟ್ಟಲೆ ಕಾರಿನ ಮೇಲೆಯೇ ಇಟ್ಟರೆ, ಅವು ಗಟ್ಟಿಯಾಗಿ ಸ್ವಚ್ಛ ಮಾಡುವಾಗ ಕಾರಿನ ಮೇಲೆ ಗೀರು ಬೀಳಲೂಬಹುದು. ಇಂಥ ಸಮಯದಲ್ಲಿ ಕಾರ್ ಶಾಂಪೂ ಬಳಸಿ ತೊಳೆದರು ಮತ್ತೆ ಮತ್ತೆ ನೋಡಬೇಕೆನ್ನುವಷ್ಟು ಅಂದವಾಗುತ್ತದೆ. ಕಾರನ್ನು ಕ್ಲೀನ್ ಮಾಡಲು ಮನೆಯಲ್ಲಿ ಬಳಸುವ ಆಸಿಡ್‌ಗಳನ್ನು ಬಳಸುವುದು ಸೂಕ್ತವಲ್ಲ

ಕ್ರೀಮ್ ಪಾಲಿಶ್

ಕ್ರೀಮ್ ಪಾಲಿಶ್

ಕಾರನ್ನು ಶಾಂಪೂ ಹಾಕಿ ತೊಳೆದ ಮೇಲೆ ಸ್ವಚ್ಛವಾಗಿ ಕಾಣಬಹುದು, ಆದರೆ ಮೊದಲಿದ್ದಂತಹ ಹೊಳಪು ಪಡೆಯುವುದಿಲ್ಲ. ಆದ್ದರಿಂದ ಅತ್ಯುತ್ತಮ ಬ್ರಾಂಡ್ ಕ್ರೀಮ್ ಪಾಲಿಶ್ ಬಳಸಿ ಕಾರನ್ನು ಚೆನ್ನಾಗಿ ಉಜ್ಜಿರಿ. ಈ ಕ್ರೀಮ್ ಪಾಲಿಶ್ ಕಾರನ್ನು ಲಕಲಕ ಅನ್ನುವಂತೆ ಮಾತ್ರ ಮಾಡುವುದಿಲ್ಲ, ಕಾರಿನ ಮೇಲೆ ಧೂಳು ಬೀಳದಂತೆ ಮತ್ತು ಸಣ್ಣಪುಟ್ಟ ಗೀರಾಗದಂತೆ ತಡೆಯುತ್ತದೆ. ಮನೆಯಿಂದ ಹೊರಗಡೆ ಹೋಗುವಾಗ ಮುಖಕ್ಕೆ ಕ್ರೀಮ್ ಹಚ್ಚಿಕೊಂಡು ಹೋಗುತ್ತೀರಿ ತಾನೆ?

ಡ್ಯಾಶ್‌ಬೋರ್ಡ್ ಪಾಲಿಶ್

ಡ್ಯಾಶ್‌ಬೋರ್ಡ್ ಪಾಲಿಶ್

ಕಾರ್ ಹೊರಗಿನ ಆವರಣವನ್ನು ಕಾರ್ ಕ್ರೀಮ್ ಪಾಲಿಶ್ ಇಡುವಂತೆ ಡ್ಯಾಶ್‌ಬೋರ್ಡ್ ಪಾಲಿಶ್ ಡ್ಯಾಶ್‌ಬೋರ್ಡನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಅಯ್ಯೋ, ಇದಕ್ಕೆಲ್ಲ ಯಾರು ಪಾಲಿಶ್ ಮಾಡುತ್ತಾರೆ, ಜಸ್ಟ್ ಬಟ್ಟೆ ತೆಗೆದುಕೊಂಡು ಡಸ್ಟ್ ಒರೆಸುತ್ತಿದ್ದರೆ ಸಾಕು ಎಂಬು ಉದಾಸೀನ ಬೇಡವೇ ಬೇಡ.

ಸೀಟ್ ಮತ್ತು ಕಾರ್ಪೆಟ್ ಕ್ಲೀನರ್

ಸೀಟ್ ಮತ್ತು ಕಾರ್ಪೆಟ್ ಕ್ಲೀನರ್

ಎಲ್ಲೆಲ್ಲೋ ಅಡ್ಡಾಡಿಕೊಂಡು ಬಂದಿರುತ್ತೀರಿ, ಪಾದರಕ್ಷೆಯನ್ನು ಸ್ವಚ್ಛ ಮಾಡಿಕೊಳ್ಳದೆ ಹಾಗೆಯೇ ಕಾರು ಹತ್ತಿರುತ್ತೀರಿ. ಮಕ್ಕಳು ಕಾರಲ್ಲೇ ಅದೂಇದೂ ತಿನ್ನುತ್ತ ಕಂಡಲ್ಲೆಲ್ಲ ಗಲೀಜು ಮಾಡಿರುತ್ತವೆ. ಇನ್ನು ನಿಮ್ಮ ಅಂದವಾದ ಕಾರನ್ನು ಕಂಡರಾಗದವರು ಬೇಕಂತಲೇ ಕೊಳೆ ಮಾಡುವ ಸಾಧ್ಯತೆಯೂ ಇರುತ್ತದೆ. ಹೀಗಿದ್ರೆ ಹೇಗೆ ಹೇಳಿ? ಈ ಹೊಸಲುಗಳು ಕ್ರಮೇಣ ಕೆಟ್ಟ ವಾಸನೆ ಬೀರಲು ಪ್ರಾರಂಭಿಸುತ್ತವೆ. ಇನ್ನು ಕಾರಿನ ಎಲ್ಲ ಕಿಟಕಿಗಳನ್ನು ಮುಚ್ಚಿದರಂತೂ ಗೋವಿಂದ ಗೋವಿಂದ. ಕಾರ್ಪೆಟ್ ಮತ್ತು ಸೀಟನ್ನು ಶುದ್ಧವಾಗಿಟ್ಟುಕೊಳ್ಳುವುದು ಕೂಡ ನಿಮ್ಮ ಕರ್ತವ್ಯ. ಇದರ ಜೊತೆಗೆ ಕೆಲ ಸುಗಂಧ ದ್ರವ್ಯಗಳನ್ನು ಇಟ್ಟುಕೊಳ್ಳಲು ಮರೆಯಬೇಡಿ.

ಇಂಜಿನ್ ಫ್ಲಶ್

ಇಂಜಿನ್ ಫ್ಲಶ್

ಇಂಜಿನ್ ಎಣ್ಣೆಯನ್ನು ಬದಲಾಯಿಸುವಾಗ ಇಂಜಿನ್ ಫ್ಲಶ್ ಬಳಸುವುದನ್ನು ಮರೆಯಬೇಡಿ. ಈ ಇಂಜಿನ್ ಫ್ಲಶ್ ಇಂಜಿನ್‌ನಲ್ಲಿ ಶೇಖರಣೆಯಾಗಿರುವ ಧೂಳಿನ ಕಣಗಳು, ಹಳೆಯ ಕೊಳಕಾದ ಎಣ್ಣೆಯನ್ನು ತೊಲಗಿಸಲು ಸಹಾಯ ಮಾಡುತ್ತದೆ. ಇಷ್ಟು ಮಾಡಿ. ಇಂಜಿನ್ ಆಯ್ಲ್ ಬದಲಿಸುವ ಮುನ್ನ ಇಂಜಿನ್ ಫ್ಲಶ್ ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಅದರಲ್ಲಿರುವ ರಾಸಾಯನಿಕ ವಸ್ತು ತನ್ನ ಕೆಲಸವನ್ನು ಚೊಕ್ಕದಾಗಿ ಮಾಡಿರುತ್ತದೆ.

More from DriveSpark

Article Published On: Monday, October 1, 2012, 12:10 [IST]
English summary
Your car's look and feel is based on how well you look after it. Take good care of your car, you will have a good car to drive. Let's look at some products that will help you maintain your car. Know more bout how car shampoo, cream polish, dashboard polish, engine flush and seat and carpet stain remover.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+