ಟೈರ್ ಮೇಲಿನ ಬರಹ ಓದಿ ತಿಳಿದುಕೊಳ್ಳೋದು ಹೇಗೆ?
ಟೈರ್ ಮೇಲೆ ಬರೆದಿರುವುದನ್ನು ಓದಿದರೆ ಆ ಟೈರ್ ಭವಿಷ್ಯ ತಿಳಿದುಕೊಳ್ಳಬಹುದು. ನೀವು ಹೊಸ ಟೈರೇ ಖರೀದಿಸಬಹುದು. ಆದ್ರೆ ಅದು ಓಲ್ಡ್ ಸ್ಟಾಕ್ ಆಗಿದ್ರೆ ಏನ್ಮಾಡ್ತಿರಿ. ಅಂಗಡಿಯಾತ ಹಳೆ ಟೈರ್ ಮಾರಿಬಿಟ್ರೆ ಏನ್ಮಾಡ್ತಿರಿ? ಟೈರುಗಳಿಗೆ ಎಕ್ಸ್ ಪೈರ್ ಡೇಟ್ ಇರುತ್ತೆ. ಆ ಮಾಹಿತಿ ಸಹ ಟೈರ್ ಮೇಲೆ ಬರೆದಿರುತ್ತೆ.
ಟೈರ್ ಉತ್ಪಾದನಾ ದಿನಾಂಕ, ಬಾಳಿಕೆ ಅವಧಿ, ವೇಗ ಮತ್ತು ಭಾರ ಸಾಮರ್ಥ್ಯ ಇತ್ಯಾದಿ ಮಾಹಿತಿಗಳೆಲ್ಲ ಟೈರ್ ಮೇಲೆ ಬರೆದಿರುತ್ತದೆ. ಒಟ್ಟಾರೆ ನೀವು ಖರೀದಿಸುವ ಟೈರ್ ಮೇಲೆ ಅದರ ಸಂಪೂರ್ಣ ಜಾತಕವನ್ನೇ ಬರೆದಿರಲಾಗುತ್ತದೆ. ಅದನ್ನು ತಿಳಿದುಕೊಳ್ಳಲು ಈ ಕೆಳಗಿನ ಚಿತ್ರವನ್ನು ಸರಿಯಾಗಿ ನೋಡಿಬಿಡಿ.
ಟೈರ್ ಮೇಲೆ ಬರೆದಿರುವ ಮಾಹಿತಿಗಳನ್ನು ಅರ್ಥಮಾಡಿಕೊಳ್ಳಲು ನಮ್ಮಲ್ಲೊಂದು ಚಿತ್ರ ಮಾಹಿತಿಯಿದೆ. ಸೂಕ್ಷ್ಮವಾಗಿ ಈ ಚಿತ್ರನೋಡಿ. ಅದರಲ್ಲಿ ಕಾಣದ ಅಕ್ಷರಗಳನ್ನು ಅರಿತುಕೊಳ್ಳಲು ಕೊಂಚ ವಿವರಣೆ ಕೆಳಗೆ ನೀಡಿದ್ದೇವೆ. ಬೇಕಿದ್ರೆ ಈ ಚಿತ್ರವನ್ನು ಡೌನ್ ಲೋಡ್ ಮಾಡಿ ಝೂಮ್ ಮಾಡಿಕೊಂಡು ಸ್ಪಷ್ಟವಾಗಿ ಓದಿಕೊಳ್ಳಬಹುದು.
ಟೈರ್ ನಲ್ಲಿ ಮ್ಯಾಕ್ಸ್ ಪ್ರೆಸ್ ಅಂತ ಬರೆದಿರುತ್ತದೆ ಅಲ್ವಾ? ಅದು ಟೈರ್ ನ ಗಾಳಿ ಒತ್ತಡ ತಿಳಿಸುತ್ತದೆ. ಉದಾಹರಣೆಗೆ ಅಲ್ಲಿ 35ಪಿಎಸ್ಐ ಎಂದಿರಬಹುದು. ಟೈರ್ ಗಾತ್ರ, ವಿಶಾಲತೆ, ರಿಮ್ ಸೈಜ್ ಇತ್ಯಾದಿ ಮಾಹಿತಿಗಳು ಕೂಡ ಬರೆದಿರುತ್ತದೆ. ಉದಾಹರಣೆಗೆ ಈ ಚಿತ್ರದಲ್ಲಿ 215/65ಆರ್15 89ಎಚ್ ಎಂದು ಬರೆದಿದೆ.
ಟೈರ್ ಉತ್ಪಾದನೆ ದಿನಾಂಕ ಮಾಹಿತಿ ರಿಮ್ ಹತ್ತಿರ ಇರುತ್ತದೆ. ಸರಿಯಾಗಿ ನೋಡಿ DOT ಸೇಫ್ಟಿ ಕೋಡ್ ಎಂದಿದೆ. ಅದರಲ್ಲಿ ಕೊನೆಯ ನಾಲ್ಕು ಅಕ್ಷರದ ಮೂಲಕ ಟೈರ್ ಉತ್ಪಾದನಾ ದಿನಾಂಕ ನೋಡಿಕೊಳ್ಳಬಹುದು.
ಅದರಲ್ಲಿ ಕೊನೆಯ ನಾಲ್ಕು ಅಕ್ಷರ 1212 ಎಂದಿದ್ರೆ 2012ರನೇ ವರ್ಷದ 12ನೇ ವಾರವೆಂದು ಅರ್ಥಮಾಡಿಕೊಳ್ಳಬಹುದು. ಇನ್ನಷ್ಟು ಮಾಹಿತಿಗಾಗಿ ಮೇಲಿನ ಚಿತ್ರವನ್ನು ಡೌನ್ ಲೋಡ್ ಮಾಡಿಕೊಂಡು ಡೀಪ್ ಆಗಿ ನೋಡಿ. ಧನ್ಯವಾದ.


Click it and Unblock the Notifications









