ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

Written By: Rahul TS

ರಸ್ತೆಗೆ ಇಳಿಯುವ ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತಗಳ ಪ್ರಮಾಣದಲ್ಲೂ ಗಣನೀಯ ಹೆಚ್ಚಳವುಂಟಾಗಿದೆ. ಕಾರಿನಲ್ಲಿ ಸಂಚರಿಸುವಾಗ ಆಗುವ ಅಪಘಾತಗಳಲ್ಲಿ ಚಾಲಕ ಹಾಗೂ ಆತನ ಪಕ್ಕದ ಸವಾರರಿಗೆ ಅತಿ ಹೆಚ್ಚಿನ ಘಾಸಿಯುಂಟಾಗುತ್ತದೆ.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಇದೇ ಕಾರಣಕ್ಕಾಗಿ 'ಏರ್ ಬ್ಯಾಗ್' ಎಂಬ ಜೀವರಕ್ಷಕ ಸಲಕರಣೆಗೆ ನಾವು ಧನ್ಯವಾದ ಹೇಳಲೇಬೇಕಾಗುತ್ತದೆ. ಏಕೆಂದರೆ ಏರ್ ಬ್ಯಾಗ್ ಬಳಕೆಯ ಬಳಿಕ ಅಪಘಾತ ಪ್ರಮಾಣದಲ್ಲಿ ವರ್ಧನೆಯುಂಟಾಗಿದ್ದರೂ ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆಯುಂಟಾಗಿದೆ.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಆಧುನಿಕ ವಾಹನಗಳಲ್ಲಿ ಏರ್ ಬ್ಯಾಗ್ ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಅಷ್ಟಕ್ಕೂ ಏರ್ ಬ್ಯಾಗ್ ಎಂದರೇನು? ಇದರನ್ನು ಅವಿಷ್ಕಾರ ಮಾಡಿದವರು ಯಾರು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಎಂಬಿತ್ಯಾದಿ ಮಹತ್ವದ ಪ್ರಶ್ನೆಗಳಿಗೆ ವಿವರವಾದ ಉತ್ತರವನ್ನು ಕಂಡುಹುಡುಕುವ ಪ್ರಯತ್ನವನ್ನು ನಾವಿಂದು ಮಾಡಲಿದ್ದೇವೆ.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಮೇಲೆ ತಿಳಿಸಿದಂತೆ ಅಪಘಾತ ಸಂದರ್ಭಗಳಲ್ಲಿ ಚಾಲಕ ದಿಢೀರ್ ಬ್ರೇಕ್ ಹಾಕುವ ಸಂದರ್ಭದಲ್ಲಿ ಎದುರಿನ ಸ್ಟೀರಿಂಗ್ ಅಥವಾ ಡ್ಯಾಷ್ ಬೋರ್ಡ್‌ಗಳಿಗೆ ತಲೆ ಅಪ್ಪಳಿಸಿ ತೀವ್ರ ರೀತಿಯ ಪೆಟ್ಟು ಬೀಳುವ ಸಂಭವವಿರುತ್ತದೆ. ಇದನ್ನು ತಡೆಯುವಲ್ಲಿ ಏರ್ ಬ್ಯಾಗ್‌ಗಳು ನಿರ್ಣಾಯಕ ಪಾತ್ರವಹಿಸುತ್ತದೆ. ಇನ್ನು ಸರಳ ವಾಕ್ಯಗಳಲ್ಲಿ ವಿವರಿಸುವುದಾದ್ದಲ್ಲಿ ಏರ್ ಬ್ಯಾಗ್ ಎಂಬುದು ವಾಹನಗಳಲ್ಲಿ ಆಳವಡಿಸಲಾಗುವ ಸುರಕ್ಷಾ ಸಾಧನವಾಗಿದೆ.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಇತಿಹಾಸ

ಏರ್ ಬ್ಯಾಗ್ ಇತಿಹಾಸವನ್ನು ಹುಡುಕಿಕೊಂಡು ಸಾಗಿದಾಗ 1941ನೇ ಇಸವಿಯಲ್ಲಿ ಜರ್ಮನಿಯ ಎಂಜಿನಿಯರ್ ವಾಲ್ಟರ್ ಲಿಂಡೆರರ್ ( Walter Linderer)ಮತ್ತು ಅಮೆರಿಕದ ಕೈಗಾರಿಕೋದ್ಯಮ ಎಂಜಿನಿಯರ್ ಜಾನ್ ಡಬ್ಲ್ಯು ಹೆಟ್ರಿಕ್ (John W. Hetrick)ಎಂಬವರು ಮೊದಲು ವಿನ್ಯಾಸಗೊಳಿಸಿದ್ದರು. ಈ ಪೈಕಿ ವಾಲ್ಟರ್ 1951 ಅಕ್ಟೋಬರ್ 6ರಂದು ಹಕ್ಕುಪತ್ರಕ್ಕಾಗಿ (patent)ಅರ್ಜಿ ಸಲ್ಲಿಸಿದರೂ 1953 ನವೆಂಬರ್ 12ರಂದು ಅನುಮತಿ ದೊರಕಿತ್ತು. ಇದಾದ ಮೂರು ತಿಂಗಳಲ್ಲೇ ಹೆಟ್ರಿಕ್ ಕೂಡಾ ಪೇಟೆಂಟ್ (1953 ಆಗಸ್ಟ್ 18) ಗಿಟ್ಟಿಸಿಕೊಂಡಿದ್ದರು.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಹಾಗಿದ್ದರೂ ಅಪಘಾತ ಸಂದರ್ಭಗಳಲ್ಲಿ ಪ್ರಯೋಗಿಕವಾಗಿ ತ್ವರಿತ ಗತಿಯಲ್ಲಿ ಬಳಕೆ ಕಷ್ಟವಾಗಿದ್ದರಿಂದ ಲಿಂಡರರ್ ಏರ್ ಬ್ಯಾಗ್ ಸಿದ್ಧಾಂತವು ಹಿನ್ನೆಡೆ ಅನುಭವಿಸಿತ್ತು. ಇನ್ನೊಂದೆಡೆ ಆಟೋಮೊಬೈಲ್ ಹೂಡಿಕೆದಾರರು ಹೂಡಿಕೆ ಮಾಡಲು ಹಿಂಜರಿದ್ದರಿಂದ ಹೆಟ್ರಿಕ್ ಸಿದ್ಧಾಂತವು ಬದಿಗೆ ಸರಿಸಲ್ಪಟ್ಟಿತ್ತು. ಆದರೆ ನಿಧಾನವಾಗಿ ಫೋರ್ಡ್ ಹಾಗೂ ಮರ್ಸಿಡಿಸ್ ಬೆಂಝ್‌ಗಳಂತಹ ಸಂಸ್ಥೆಗಳು ತನ್ನ ವಾಹನಗಳಿಗೆ ಏರ್ ಬ್ಯಾಗ್ ಪ್ರಯೋಗವನ್ನು ಆರಂಭಿಸಿತ್ತು.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಯಾವಾಗ ಅಲೆನ್ ಕೆ ಬ್ರೀಡ್ ಎಂಬವರು ಮೆಕ್ಯಾನಿಕಲ್ ಸೆನ್ಸಾರ್ ಆಳವಡಿಸಿದರೂ ಅಂದಿನಿಂದಲೇ ಏರ್ ಬ್ಯಾಗ್ ನೈಜ ಯಶಸ್ಸು ಆರಂಭವಾಯಿತು. ಇದು ಕೇವಲ 30 ಮಿಲ್ಲಿ ಸೆಕೆಂಡುಗಳಲ್ಲೇ ತೆರೆದುಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಇಲ್ಲಿ ಏರ್ ಬ್ಯಾಗ್ ತೆರೆದುಕೊಳ್ಳಲು ಸಂಕುಚಿತ ವಾಯುವಿನ ಬದಲು ಸೋಡಿಯಂ ಅಜೈಡ್ ಬಳಕೆ ಮಾಡಲಾಗಿತ್ತು. ಬಳಿಕ ಬ್ರೀಡ್ ಅವರ ಈ ನಾವೀನ್ಯ ತಂತ್ರಜ್ಞಾನವು ಫಿಯೆಟ್ ಕ್ಲೈಸ್ಲರ್‌ನಲ್ಲಿ ಬಳಕೆಯಾಗಿತ್ತಲ್ಲದೆ 1990ರ ದಶಕದಲ್ಲಿ ಅಮೆರಿಕದೆಲ್ಲೆಡೆ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿತ್ತು.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

1970 ದಶಕದಲ್ಲಿ ಬಹುತೇಕ ಪ್ರಯಾಣಿಕರು ಸೀಟು ಬೆಲ್ಟ್ ಬಳಕೆ ಮಾಡದಿರುವ ಹಿನ್ನಲೆಯಲ್ಲಿ ಏರ್ ಬ್ಯಾಗ್ ಸೌಲಭ್ಯವನ್ನು ಒದಗಿಸಲಾಗಿತ್ತು. ಆರಂಭದಲ್ಲಿ ಸಣ್ಣ ಕಾರುಗಳಿಗೆ ಏರ್ ಬ್ಯಾಗ್ ತಂತ್ರಗಾರಿಕೆ ಬಳಕೆ ಮಾಡುತ್ತಿದ್ದ ಫೋರ್ಡ್ ಸಂಸ್ಥೆಯನ್ನು ಬಳಿಕ ಜನರಲ್ ಮೋಟಾರ್ಸ್ ಹಿಂಬಾಲಿಸಿತ್ತು. ಆದರೆ ದುರದೃಷ್ಟವೆಂಬಂತೆ ಆರಂಭಿಕ ಕಾಲಘಟ್ಟದಲ್ಲಿ ಜಿಎಂ ವಾಹನಗಳಲ್ಲಿ ಏಳರಷ್ಟು ಅಪಘಾತ ಪ್ರಕರಣಗಳು ದಾಖಲಾಗಿದ್ದವು. ಇದರಿಂದ 'ಕಿಲ್ಲರ್' ಎಂಬ ಅಪಖ್ಯಾತಿಕ್ಕೊಳಗಾಗಿತ್ತು.

ಇದಾದ ಬಳಿಕ ರಸ್ತೆ ನಿಯಮ ಕಟ್ಟುನಿಟ್ಟಾದ ಬಳಿಕ ಸೀಟು ಬೆಲ್ಟ್ ಬಳಕೆ ಕಡ್ಡಾಯ ಮಾಡಲಾಯಿತು. ಇದರಿಂದ ಏರ್ ಬ್ಯಾಗ್ ಮಗದೊಮ್ಮೆ ದೀರ್ಘ ಕಾಲದ ವರೆಗೆ ಹಿನ್ನೆಡೆ ಅನುಭವಿಸಿತು.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಏರ್ ಬ್ಯಾಗ್ ವಿಧಗಳು

ಸಂಭವನೀಯ ಕಾರು ಅಪಘಾತದಲ್ಲಿ ಮಾನವ ದೇಹವನ್ನು ಗಾಯದಿಂದ ಪಾರು ಮಾಡುವುದು ಏರ್ ಬ್ಯಾಗ್ ಗುರಿಯಾಗಿದೆ. ಹಾಗೆಯೇ ಅನೇಕ ವಿಧ ಹಾಗೂ ಆಕಾರಗಳಲ್ಲಿ ಏರ್ ಬ್ಯಾಗ್ ಲಭ್ಯವಿರುತ್ತದೆ. ಅಷ್ಟೇ ಯಾಕೆ ಆಧುನಿಕ ತಂತ್ರಗಾರಿಕೆಯ ಅಭಿವೃದ್ಧಿಯಾದಂತೆ ಪಾದಚಾರಿಗಳನ್ನು ರಕ್ಷಿಸುವ ಏರ್ ಬ್ಯಾಗ್‌ಗಳನ್ನು ಸಹ ಅಭಿವೃದ್ಧಿಪಡಿಸಲಾಗಿದೆ.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಫ್ರಂಟ್ ಏರ್ ಬ್ಯಾಗ್

ಏರ್ ಬ್ಯಾಗ್‌ಗಳ ಪೈಕಿ ಮುಂಭಾಗದ ಏರ್‌ಬ್ಯಾಗ್‌ಗೆ ಅತಿ ಹೆಚ್ಚಿನ ಪ್ರಾಮುಖ್ಯತೆಯಿದೆ. 1987ರ ಪೋರ್ಷೆ 944 ಟರ್ಬೊ ಕಾರು ಡ್ಯುಯಲ್ ಏರ್ ಬ್ಯಾಗ್ ಹೊಂದಿರುವ ಮೊದಲ ಕಾರೆನಿಸಿಕೊಂಡಿದೆ. ಇದರಲ್ಲಿ ಚಾಲಕ ಸೇರಿದಂತೆ ಪಕ್ಕದ ಪ್ರಯಾಣಿಕರಿಗೂ ಸ್ಟಾಂಡರ್ಡ್ ಆಗಿ ಬಳಕೆ ಮಾಡಲಾಗಿತ್ತು. ಇದು ಸ್ಟೀರಿಂಗ್ ವೀಲ್‌ನಲ್ಲಿ ಆಳವಡಿಸಲಾಗಿದ್ದು, ಅಪಘಾತದ ವೇಳೆ ಪ್ರಯಾಣಿಕರಿಗೆ ಪೆಟ್ಟಾಗದಂತೆ ನೋಡಿಕೊಳ್ಳುತ್ತದೆ.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಸೈಡ್ ಏರ್ ಬ್ಯಾಗ್

ಹೆಸರಲ್ಲೇ ಸೂಚಿಸಿರುವಂತೆಯೇ ಸೈಡ್ ಏರ್ ಬ್ಯಾಗ್‌ಗಳು ಬದಿಯಿಂದ ಢಿಕ್ಕಿಯಾದ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. ಸೈಡ್ ಏರ್ ಬ್ಯಾಗ್ ಎರಡು ವಿಧಗಳಲ್ಲಿರುತ್ತದೆ. ಇದರಲ್ಲಿ ಮೊದಲನೆಯದ್ದು ಸೈಡ್ ಟಾರ್ಸೊ (ದೇಹ) ಏರ್ ಬ್ಯಾಗ್ ಆಗಿದೆ. ಇದು ಸಾಮಾನ್ಯವಾಗಿ ಸೀಟಿನ ಬದಿಯಲ್ಲಿ ಲಗತ್ತಿಸಲಾಗಿದ್ದು, ಅಪಘಾತ ಸಂದರ್ಭದಲ್ಲಿ ಚಾಲಕ ಹಾಗೂ ಬಾಗಿಲು ನಡುವೆ ತೆರೆದುಕೊಳ್ಳುತ್ತದೆ.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಕರ್ಟೈನ್ ಏರ್ ಬ್ಯಾಗ್

ಸೈಡ್ ಏರ್ ಬ್ಯಾಗ್‌ನಲ್ಲಿ ಎರಡನೇಯದ್ದು ಕರ್ಟೈನ್ ಏರ್ ಬ್ಯಾಗ್ ಆಗಿದೆ. ಇದು ಕಾರಿನ ಒಳಮೈಯಲ್ಲಿ ಮೇಲ್ಬಾಗದಲ್ಲಿ ಲಗತ್ತಿಸಲಾಗುತ್ತಿದ್ದು, ಸಂಪೂರ್ಣ ರಕ್ಷಣೆಯನ್ನು ನೀಡುವಲ್ಲಿ ಬದ್ಧವಾಗಿದೆ. ವರದಿಗಳ ಪ್ರಕಾರ ಕರ್ಟೈನ್ ಏರ್ ಬ್ಯಾಗ್‌ಗಳು ಮೆದುಳಿಗೆ ಅಥವಾ ಶೇಕಡಾ 45ರಷ್ಟು ಪೆಟ್ಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಮಾಹಿತಿಗಾಗಿ ಕೆಲವು ವಾಹನಗಳಲ್ಲಿ ಎಲ್ಲ ಮೂರು ಸಾಲುಗಳಲ್ಲೂ ಸೈಡ್ ಕರ್ಟೈನ್ ಏರ್ ಬ್ಯಾಗ್ ಲಭ್ಯವಿರುತ್ತದೆ.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಮೊಣಕಾಲು ಏರ್ ಬ್ಯಾಗ್

ಪ್ರಯಾಣಿಕರ ಕಾಲನ್ನು ರಕ್ಷಿಸುವಲ್ಲಿ ಮೊಣಕಾಲು ಏರ್ ಬ್ಯಾಗ್ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಮೊದಲ ಬಾರಿಗೆ 1996ರ ಕಿಯಾ ಸ್ಪೋರ್ಟೆಜ್ ವಾಹನದಲ್ಲಿ ಬಳಕೆ ಮಾಡಲಾಗಿತ್ತು. ಇದನ್ನು ಸಾಮಾನ್ಯವಾಗಿ ಸ್ಟೀರಿಂಗ್ ಕೆಳಗಡೆ ಲಗತ್ತಿಸಲಾಗಿರುತ್ತದೆ. ಇದರ ಯಶಸ್ವಿ ಆಳವಡಿಕೆಯ ಬಳಿಕ 2000ನೇ ಇಸವಿಯಿಂದ ಇದರ ಬಳಕೆ ಸಾಮಾನ್ಯವಾಗಿಬಿಟ್ಟಿದೆ.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ರಿಯರ್ ಕರ್ಟೈನ್ ಏರ್ ಬ್ಯಾಗ್

ಯಾವ ಬದಿಯಿಂದ ಅಪಘಾತ ಸಂಭವಿಸಲಿದೆ ಎಂಬುದನ್ನು ನಮ್ಮಿಂದ ಊಹಿಸಲಸಾಧ್ಯ. ಇದೇ ಕಾರಣಕ್ಕಾಗಿ ಹಿಂದುಗಡೆಯೂ ಕರ್ಟೈನ್ ಏರ್ ಬ್ಯಾಗ್ ಸೌಲಭ್ಯ ನೀಡಲಾಗುತ್ತದೆ. ಇದು ತಲೆಗೆ ಪೆಟ್ಟಾಗುವ ಸಾಧ್ಯತೆಯನ್ನು ಕಡಿಮೆ ಮಾಡಲಿದೆ. 2008ರ ಟೊಯೊಟಾ ಐಕ್ಯೂ ಕಾರಲ್ಲಿ ರಿಯರ್ ಕರ್ಟೈನ್ ಏರ್ ಬ್ಯಾಗ್ ಆಳವಡಿಸಲಾಗಿತ್ತು.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಏರ್ ಬ್ಯಾಗ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಸೆಂಟ್ರಲ್ ಏರ್ ಬ್ಯಾಗ್ ಕಂಟ್ರೋಲ್ ಯುನಿಟ್ (ಎಸಿಯು) ವಾಹನಗಳಲ್ಲಿ ಅನೇಕ ಸಂಬಂಧಿ ಸೆನ್ಸಾರುಗಳನ್ನು ಮಾನಿಟರ್ ಮಾಡುತ್ತದೆ. ಏರ್ ಬ್ಯಾಗ್‌ಗಳು ಸ್ಟೀರಿಂಗ್ ಒಳಗಡೆ ಪ್ಲಾಸ್ಟಿಕ್ ಪೊರೆಯಲ್ಲಿ ಲಗತ್ತಿಸಲಾಗಿರುತ್ತದೆ. ಇದರ ಬಳಕೆ ತುಂಬಾ ಸರಳವಾಗಿದ್ದು, ಅಪಘಾತ ವೇಳೆ ತಕ್ಷಣ ಹೊರಚಿಮ್ಮುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ಇದು ಸ್ಟೀರಿಂಗ್ ಮೇಲೆ ಬಂದಪ್ಪಳಿಸುವ ಪ್ರಯಾಣಿಕರ ಮುಖಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆ. ಅಲ್ಲದೆ ತೆರೆಯಲ್ಪಟ್ಟ ಕ್ಷಣಾರ್ಧದಲ್ಲೇ ಮುದುಡಿಕೊಳ್ಳುತ್ತದೆ. ವಾಹನದ ಮುಂಭಾಗದ ಬಂಪರ್‌ನಲ್ಲಿರುವ ಸೆನ್ಸಾರ್ ಮೇಲೆ ಕೊಂಚ ಒತ್ತಡದ ಸ್ಪರ್ಶ ಬಿದ್ದರೂ ಏರ್ ಬ್ಯಾಗ್ ತೆರೆದುಕೊಳ್ಳುವಂತೆ ಜೋಡಣೆ ಮಾಡಲಾಗಿರುತ್ತದೆ.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಏರ್ ಬ್ಯಾಗ್ ಅಪಾಯವೇ?

ಅತ್ಯಂತ ವಿರಳ ಪ್ರಕರಣಗಳಲ್ಲಿ ಮಾತ್ರ ಏರ್ ಬ್ಯಾಗ್‌ಗಳು ಪ್ರಯಾಣಿಕರಿಗೆ ಮಾರಕವಾಗಿಯೂ ಪರಿಣಮಿಸಿದೆ. ಇಲ್ಲಿ ಅತ್ಯಂತ ತೀಕ್ಷ್ಣವಾಗಿ ಬಂದಪ್ಪಳಿಸುವ ಏರ್ ಬ್ಯಾಗ್ ಒತ್ತಡವನ್ನು ನಿರ್ವಹಿಸಲು ಪ್ರಯಾಣಿಕರು ವಿಫಲವಾಗುತ್ತಾರೆ. ಇದೇ ಕಾರಣಕ್ಕಾಗಿ ಮಕ್ಕಳನ್ನು ಏರ್ ಬ್ಯಾಗ್‌ನಿಂದ ದೂರವಿಡಲಾಗುತ್ತದೆ. ಇನ್ನು ಸೀಟು ಬೆಲ್ಟ್ ಆಳವಡಿಸದಿದ್ದರೆ ಏರ್ ಬ್ಯಾಗ್ ಕಾರ್ಯ ನಿರ್ವಹಣೆ ವಿಫಲವಾದಿತು.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಸುರಕ್ಷತೆಗಾಗಿ ಏರ್ ಬ್ಯಾಗ್

ಸೇಫ್ಟಿ ಯಾವುದೇ ಅಪಘಾತ ಪ್ರಕರಣಗಳಲ್ಲೂ ತೆರೆದುಕೊಳ್ಳುವ ರೀತಿಯಲ್ಲಿ ಏರ್ ಬ್ಯಾಗ್ ಜೋಡಣೆ ಮಾಡಲಾಗಿರುತ್ತದೆ. ಇನ್ನು ಮಕ್ಕಳ ಸುರಕ್ಷತೆಯ ದೃಷ್ಟಿಕೋನದಲ್ಲಿ ಏರ್ ಬ್ಯಾಗ್ ಆಫ್ ಮಾಡಿಡುವ ಆಯ್ಕೆಯನ್ನು ಒದಗಿಸಲಾಗುತ್ತದೆ.

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಆಧುನಿಕ ಕಾರುಗಳಲ್ಲಿ ಏರ್ ಬ್ಯಾಗ್ ಕಾರ್ಯ ನಿರ್ವಹಿಸಬೇಕಾದರೆ ಕೆಲವೊಂದು ನಿರ್ದಿಷ್ಟ ಮಾನದಂಡಗಳಿರುತ್ತದೆ. ಉದಾಹರಣೆಗೆ ಕಾರಿನ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಸೀಟು ಬೆಲ್ಟ್ ಕಡ್ಡಾಯವಾಗಿ ಧರಿಸಿರಬೇಕು. ಇಲ್ಲದೆ ನಿರ್ದಿಷ್ಟ ತೂಕವನ್ನು ಹೊಂದಿರಬೇಕು. ಇನ್ನು ಸಿಟ್ಟಿಂಗ್ ಸ್ಥಾನಮಾನ (ಮಕ್ಕಳ ವಿಷಯದಲ್ಲಿ ನಿರ್ಣಾಯಕ) ಕೂಡಾ ಪ್ರಮುಖವೆನಿಸುತ್ತದೆ. ಇವೆಲ್ಲವೂ ಸರಿಯಾಗಿ ಇದ್ದಲ್ಲಿ ಮಾತ್ರ ಏರ್ ಬ್ಯಾಗ್ ತೆರೆದುಕೊಳ್ಳಲಿದೆ.

Read more on auto tips airbag
English summary
How does airbags works?.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark