ಫಾಸ್ಟ್‌ಟ್ಯಾಗ್‌‍‍ಗಳನ್ನು ಕಾರುಗಳಲ್ಲಿ ಅಂಟಿಸುವುದು ಹೇಗೆ?

ಕಳೆದ ಕೆಲವು ತಿಂಗಳುಗಳಿಂದ ಹೈವೇಗಳ ಟೋಲ್‍‍ನಲ್ಲಿ ಬಳಸುವ ಫಾಸ್ಟ್‌ಟ್ಯಾಗ್‌‍‍ಗಳ ಬಗೆಯೇ ಹೆಚ್ಚು ಸುದ್ದಿಯಾಗುತ್ತಿದೆ. ಡಿಸೆಂಬರ್ 1ರಿಂದ ಆರಂಭವಾಗ ಬೇಕಿದ್ದ ಫಾಸ್ಟ್‌ಟ್ಯಾಗ್‌‍‍ಗಳನ್ನು ಡಿಸೆಂಬರ್ 15ಕ್ಕೆ ಮುಂದೂಡಲಾಗಿತ್ತು.

ಫಾಸ್ಟ್‌ಟ್ಯಾಗ್‌‍‍ಗಳನ್ನು ಕಾರುಗಳಲ್ಲಿ ಅಂಟಿಸುವುದು ಹೇಗೆ?

ಈಗ ಜನವರಿ 15ರಿಂದ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಸೂಚಿಸಿ ಮತ್ತೊಮ್ಮೆ ಮುಂದೂಡಲಾಗಿದೆ. ಫಾಸ್ಟ್‌ಟ್ಯಾಗ್‌‍‍ಗಳನ್ನು ಖರೀದಿಸುವುದು ಎಷ್ಟು ಸುಲಭವೋ, ಅವುಗಳನ್ನು ವಾಹನಗಳಲ್ಲಿ ಅಂಟಿಸುವುದು ಕೂಡ ಅಷ್ಟೇ ಸುಲಭ. ಇದಕ್ಕೆ ಗಣಿತದ ಯಾವುದೇ ಸೂತ್ರ ಬೇಕಾಗಿಲ್ಲ.

ಫಾಸ್ಟ್‌ಟ್ಯಾಗ್‌‍‍ಗಳನ್ನು ಕಾರುಗಳಲ್ಲಿ ಅಂಟಿಸುವುದು ಹೇಗೆ?

ವಾಹನಗಳಿಗೆ ಇವುಗಳನ್ನು ಅಂಟಿಸುವಾಗ ಕೆಲವು ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ಸಾಕು. ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬಹುದು. ಫಾಸ್ಟ್‌ಟ್ಯಾಗ್‌‍‍ಗಳನ್ನು ಖರೀದಿಸಿದರೆ ಹೋಂ ಡೆಲಿವರಿ ಮಾಡಲಾಗುತ್ತದೆ.

ಫಾಸ್ಟ್‌ಟ್ಯಾಗ್‌‍‍ಗಳನ್ನು ಕಾರುಗಳಲ್ಲಿ ಅಂಟಿಸುವುದು ಹೇಗೆ?

ಡೆಲಿವರಿ ಮಾಡಿದ ನಂತರ ಫಾಸ್ಟ್‌ಟ್ಯಾಗ್‌ ಇರುವ ಕವರ್ ಓಪನ್ ಆಗಿದೆಯೇ ಅಥವಾ ಫಾಸ್ಟ್‌ಟ್ಯಾಗ್‌ ಡ್ಯಾಮೇಜ್ ಆಗಿದೆಯೇ ಎಂಬುದನ್ನು ಪರೀಕ್ಷಿಸಿ ಕೊಳ್ಳಿ. ಫಾಸ್ಟ್‌ಟ್ಯಾಗ್‌ ಸ್ಟಿಕ್ಕರ್ ಅನ್ನು ಹೊರತೆಗೆಯುವಾಗ ಹುಷಾರಾಗಿ ಹೊರಕ್ಕೆ ತೆಗೆಯಿರಿ.

ಫಾಸ್ಟ್‌ಟ್ಯಾಗ್‌‍‍ಗಳನ್ನು ಕಾರುಗಳಲ್ಲಿ ಅಂಟಿಸುವುದು ಹೇಗೆ?

ಫಾಸ್ಟ್‌ಟ್ಯಾಗ್‌‍‍ಗಳನ್ನು ಖರೀದಿಸುವಾಗ ಬ್ಯಾಂಕ್ ನೀಡಿರುವ ಅಧಿಕೃತ ವೆಬ್‍‍ಸೈಟಿನಲ್ಲಿ ಮಾತ್ರವೇ ವ್ಯವಹರಿಸಿರಿ. ಈ ಫಾಸ್ಟ್‌ಟ್ಯಾಗ್‌‍‍ಗಳನ್ನು ಕಾರಿನ ಮುಂಭಾಗದಲ್ಲಿರುವ ಗ್ಲಾಸುಗಳಿಗೆ ಅಂಟಿಸಿರಿ. ಅಂದರೆ ಗ್ಲಾಸಿನ ಒಳಗಿಂದ ಮುಂಭಾಗಕ್ಕೆ ಅಂಟಿಸಬೇಕು.

ಫಾಸ್ಟ್‌ಟ್ಯಾಗ್‌‍‍ಗಳನ್ನು ಕಾರುಗಳಲ್ಲಿ ಅಂಟಿಸುವುದು ಹೇಗೆ?

ಫಾಸ್ಟ್‌ಟ್ಯಾಗ್‌ ಸ್ಟಿಕ್ಕರ್ ತೆಗೆಯುವಾಗ ಹಾಳಾಗದಂತೆ ಎಚ್ಚರ ವಹಿಸಿ. ಸ್ಟಿಕ್ಕರ್ ಹಾಳಾದರೆ ಅದರಲ್ಲಿರುವ ಕೋಡ್ ಸಹ ಹಾಳಾಗುವ ಸಾಧ್ಯತೆಗಳಿರುತ್ತವೆ. ಅಂಟಿಸುವ ವೇಳೆ ಸ್ಟಿಕ್ಕರ್‍‍ನಲ್ಲಿರುವ ಕೋಡ್ ಸಂಪೂರ್ಣವಾಗಿ ಹಾಳಾಗುವ ಸಾಧ್ಯತೆಗಳಿರುತ್ತವೆ.

ಫಾಸ್ಟ್‌ಟ್ಯಾಗ್‌‍‍ಗಳನ್ನು ಕಾರುಗಳಲ್ಲಿ ಅಂಟಿಸುವುದು ಹೇಗೆ?

ಫಾಸ್ಟ್‌ಟ್ಯಾಗ್‌ ಮಾರಾಟ ಮಾಡುವ ಕಂಪನಿಯು ಈ ಬಗ್ಗೆ ಸಲಹೆಗಳನ್ನು ನೀಡಿರುತ್ತದೆ. ಆದರೂ ಫಾಸ್ಟ್‌ಟ್ಯಾಗ್‌ ಸ್ಟಿಕ್ಕರ್‍‍ಗಳನ್ನು ಖರೀದಿಸುವ ಜನರು ಈ ಸಲಹೆಗಳನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸುತ್ತಾರೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಫಾಸ್ಟ್‌ಟ್ಯಾಗ್‌‍‍ಗಳನ್ನು ಕಾರುಗಳಲ್ಲಿ ಅಂಟಿಸುವುದು ಹೇಗೆ?

ಮುಂಭಾಗದ ಗ್ಲಾಸಿನ ಮೇಲೆ ಸ್ಟಿಕ್ಕರ್ ಅನ್ನು ಅಂಟಿಸುವ ಮುನ್ನ ಗ್ಲಾಸುಗಳನ್ನು ಸರಿಯಾಗಿ ಒರೆಸಿರಿ. ಗ್ಲಾಸಿನ ಮೇಲೆ ತೇವವಿದ್ದರೆ ಫಾಸ್ಟ್‌ಟ್ಯಾಗ್‌ ಸ್ಟಿಕ್ಕರ್‍‍ಗಳನ್ನು ಅಂಟಿಸಬೇಡಿ. ಫಾಸ್ಟ್‌ಟ್ಯಾಗ್‌ ಸ್ಟಿಕ್ಕರ್‍‍‍ಗಳು ಆದಷ್ಟು ನೇರವಾಗಿರಲಿ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಫಾಸ್ಟ್‌ಟ್ಯಾಗ್‌‍‍ಗಳನ್ನು ಕಾರುಗಳಲ್ಲಿ ಅಂಟಿಸುವುದು ಹೇಗೆ?

ಮಡುಚಿದಂತೆ ಈ ಸ್ಟಿಕ್ಕರ್‍‍ಗಳನ್ನು ಅಂಟಿಸಬೇಡಿ. ಯಾವುದೇ ಕಾರಣಕ್ಕೂ ಈ ಸ್ಟಿಕ್ಕರ್ ಅನ್ನು ಎರಡು ಭಾಗ ಮಾಡಿ ಅಂಟಿಸಬೇಡಿ. ಇದರಿಂದಾಗಿ ಈ ಸ್ಟಿಕ್ಕರ್‍‍ನಲ್ಲಿರುವ ಕೋಡ್ ಹಾಳಾಗುವ ಸಾಧ್ಯತೆಗಳಿರುತ್ತವೆ.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಫಾಸ್ಟ್‌ಟ್ಯಾಗ್‌‍‍ಗಳನ್ನು ಕಾರುಗಳಲ್ಲಿ ಅಂಟಿಸುವುದು ಹೇಗೆ?

ಒಮ್ಮೆ ಅಂಟಿಸಿದ ನಂತರ ಅದನ್ನು ತೆಗೆಯಲು ಹೋಗಬೇಡಿ. ಇದರಿಂದಾಗಿ ಸ್ಟಿಕ್ಕರ್ ಪೂರ್ತಿಯಾಗಿ ಕಿತ್ತು ಹೋಗುವ ಸಾಧ್ಯತೆಗಳಿರುತ್ತವೆ. ಸ್ವಲ್ಪ ಕಿತ್ತು ಹೋದರೂ ಟೋಲ್‍‍ನಲ್ಲಿ ಫಾಸ್ಟ್‌ಟ್ಯಾಗ್‌ ಕೆಲಸ ಮಾಡದಿರುವ ಸಾಧ್ಯತೆಗಳಿವೆ.

ಫಾಸ್ಟ್‌ಟ್ಯಾಗ್‌‍‍ಗಳನ್ನು ಕಾರುಗಳಲ್ಲಿ ಅಂಟಿಸುವುದು ಹೇಗೆ?

ನೀವು ಖರೀದಿಸಿದಾಗ ನಿಮಗೆ ಹಾಳಾಗಿರುವ ಫಾಸ್ಟ್‌ಟ್ಯಾಗ್‌‍‍ಗಳನ್ನು ನೀಡಿದರೆ, ತಕ್ಷಣವೇ ಸಂಬಂಧಪಟ್ಟ ಬ್ಯಾಂಕ್ ಅಥವಾ ನೀವು ಯಾರಿಂದ ಖರೀದಿಸಿದ್ದಿರೋ ಅವರಿಗೆ ಹಿಂದಿರುಗಿಸಿ, ಸರಿಯಾದ ಸ್ಟಿಕ್ಕರ್ ಅನ್ನು ಪಡೆಯಿರಿ.

ಫಾಸ್ಟ್‌ಟ್ಯಾಗ್‌‍‍ಗಳನ್ನು ಕಾರುಗಳಲ್ಲಿ ಅಂಟಿಸುವುದು ಹೇಗೆ?

ಹಾಳಾಗಿರುವುದನ್ನು ಪರೀಕ್ಷಿಸದೇ ಕಾರಿಗೆ ಅಂಟಿಸಿ ಟೋಲ್‍‍ನಲ್ಲಿ ಕೆಲಸ ಮಾಡದಿದ್ದರೆ, ಹೊಸ ಸ್ಟಿಕ್ಕರ್ ಅನ್ನು ಖರೀದಿಸಬೇಕಾಗುತ್ತದೆ. ಹಾಳಾಗಿರುವ ಸ್ಟಿಕ್ಕರ್ ಅನ್ನು ಬದಲಿಸಲು ರೂ.100 ನೀಡಬೇಕಾಗುತ್ತದೆ. ಈ ಮೊದಲೇ ಫಾಸ್ಟ್‌ಟ್ಯಾಗ್‌ ಸ್ಟಿಕ್ಕರ್ ಖರೀದಿಸಿರುವ ಕಾರಣಕ್ಕೆ ಎರಡನೇಯ ಸ್ಟಿಕ್ಕರ್ ಅನ್ನು ಅದೇ ಅಕೌಂಟಿನಲ್ಲಿ ನೀಡಲಾಗುತ್ತದೆ.

Most Read Articles

Kannada
English summary
How to paste fastag sticker in cars - Read in Kannada
Story first published: Friday, December 27, 2019, 16:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X