ಡ್ರೈವಿಂಗ್‌ನಲ್ಲಿ ಪುರುಷರಿಗಿಂತ ಮಹಿಳೆಯರೇ ಬೆಸ್ಟ್: ಐದು ನಿದರ್ಶನ

ವಾಹನ ಚಾಲನೆ ವಿಷಯಕ್ಕೆ ಬಂದರೆ ಮಹಿಳೆಯರಿಗಿಂತ ಪುರುಷರು ಪರಿಣತರು, ಚಾಣಾಕ್ಷ್ಯರು ಎನ್ನುವ ಮಾತಿದೆ. ಇದರರ್ಥ ಮಹಿಳೆಯರು ಡ್ರೈವಿಂಗ್‌ನಲ್ಲಿ ಅಷ್ಟೇನೂ ಪರಿಣತರಲ್ಲವೆಂದಾಗಿದೆ. ಈ ಮಾತನ್ನು ಹೆಚ್ಚಿನವರು ಒಪ್ಪಬಹುದು. ಒಪ್ಪದಿರಲೂಬಹುದು. ಆದರೆ ಈ ಕೆಳಗಿನ ಮಾಹಿತಿಗಳನ್ನು ನೋಡಿದರೆ ಪುರುಷರಿಗಿಂತ ಡ್ರೈವಿಂಗ್‌ನಲ್ಲಿ ಮಹಿಳೆಯರೇ ಬೆಸ್ಟ್ ಎನ್ನುವ ಮಾತನ್ನು ನೀವೂ ಒಪ್ಪಿಕೊಳ್ಳಬಹುದು.

ವಾಹನ ಚಾಲನೆ ಪರಿಣತಿ ವಿಷಯದಲ್ಲಿ ಲಿಂಗತಾರತಮ್ಯ ಸಲ್ಲದು. ಯಾರೇ ಆಗಲಿ, ವಾಹನ ಚಾಲನೆ ಸಮರ್ಥವಾಗಿ ಕಲಿತರೆ ಅತ್ಯುತ್ತಮ ಚಾಲಕರಾಗಬಹುದು. ಅತ್ಯುತ್ತಮ ಚಾಲಕರಾಗಲು ಬೇಕಾದ್ದು ಅಲಾರ್ಟ್ ಆಗಿರೋ ಮನಸ್ಸು, ಪರಿಣತಿ, ಸಮಯಪ್ರಜ್ಞೆ, ಎಚ್ಚರಿಕೆ ಇತ್ಯಾದಿ ಅಂಶಗಳು. ಅತ್ಯುತ್ತಮ ಚಾಲಕ ನೀವಾಗಲು ನಾವು ಈಗಾಗಲೇ ಸಲಹೆ ನೀಡಿದ್ದೇವೆ.

ಸಿಟಿ ರಸ್ತೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಅತ್ಯುತ್ತಮ ಚಾಲಕಿಯರು ಎಂದು ಹೇಳಬಹುದು. ಯಾಕೆಂದರೆ ಅವರು ಪುರುಷರಂತೆ ಎದುರಿನಲ್ಲಿರುವ ಎಲ್ಲಾ ವಾಹನಗಳನ್ನು ಓವರ್‌ಟೇಕ್ ಮಾಡುವುದಿಲ್ಲ. ಕಡಿಮೆ ಶಕ್ತಿಸಾಮರ್ಥ್ಯದ ಕಾರೊಂದು ಓವರ್‌ಟೇಕ್ ಮಾಡಿದರೆ ಮಹಿಳೆಯರಿಗೆ ಡಿಸ್ಟರ್ಬ್ ಆಗೋಲ್ಲ. ಪುರುಷರಾದರೆ ಆ ಕಾರನ್ನು ಓವರ್‌ಟೇಕ್ ಮಾಡಲು ಇಚ್ಚಿಸುತ್ತಾರೆ. ಇದರಿಂದ ಆ ರಸ್ತೆಯಲ್ಲಿ ಅನಗತ್ಯ ರೇಸ್ ಉಂಟಾಗುತ್ತದೆ. ಅಪಘಾತವೂ ಸಂಭವಿಸಬಹುದು.

ಮಹಿಳೆಯರು ಗಂಭೀರವಾಗಿ ವಾಹನ ಚಾಲನೆ ಮಾಡುತ್ತಾರೆ. ಸಂಚಾರಿ ನೀತಿನಿಯಮಗಳನ್ನು ಅವರು ಕಲಿತಿರುವಂತೆ ಚಾಚುತಪ್ಪದೇ ಪಾಲಿಸುತ್ತಾರೆ. ಹೀಗಾಗಿ ಹೆಚ್ಚಿನ ಸಂದರ್ಭದಲ್ಲಿ ಇವರು ಸುರಕ್ಷಿತವಾಗಿ ಸವಾರಿ ಮಾಡುತ್ತಾರೆ. ರಸ್ತೆಯಲ್ಲಿ ಮಹಿಳೆಯರಿಂದ ಉಂಟಾದ ಅಪಘಾತಗಳ ಪ್ರಮಾಣ ತೀರಾ ಕಡಿಮೆ ಎಂದು ಸಮೀಕ್ಷೆಗಳು ಕೂಡ ಜಾಹೀರು ಪಡಿಸಿವೆ. ರಸ್ತೆಯಲ್ಲಿ ಅನಗತ್ಯ ರಿಸ್ಕ್ ತೆಗೆದುಕೊಳ್ಳಲು ಮಹಿಳೆಯರು ಇಚ್ಚಿಸುವುದಿಲ್ಲ.

ವಾಹನ ಚಾಲನೆ ಮಾಡುವಾಗ ಮಹಿಳೆಯರು ಹೆಚ್ಚು ರಿಲಾಕ್ಸ್ ಆಗಿರುತ್ತಾರೆ. ಹೆವಿ ಟ್ರಾಫಿಕ್‌ನಲ್ಲೂ ಅವರು ನೆಮ್ಮದಿಕೆಡಿಸಿಕೊಳ್ಳುವುದಿಲ್ಲ. ಈ ಸಂದರ್ಭದಲ್ಲೂ ಉಡಾಫೆಯಿಂದ ಅವರು ಡ್ರೈವಿಂಗ್ ಮಾಡುವುದಿಲ್ಲ. ಡ್ರೈವಿಂಗ್ ಮಾಡುವ ಪ್ರತಿಕ್ಷಣದಲ್ಲೂ ಎಚ್ಚರಿಕೆಯಿಂದ ವರ್ತಿಸುತ್ತಾರೆ. ಇದರಿಂದಾಗಿ ಪ್ರಯಾಣ ಕೊಂಚ ವಿಳಂಬವಾದರೂ ಸುರಕ್ಷಿತವಾಗಿರುತ್ತದೆ. ಪುರುಷರಾದರೆ ಟ್ರಾಫಿಕ್‌ನ ಎಡೆ ಸಿಕ್ಕಲ್ಲಿ ವಾಹನ ನುಗ್ಗಿಸುತ್ತ ಅವಾಂತರ ಸೃಷ್ಟಿಸಿಬಿಡುತ್ತಾರೆ.

ಕಾರೆಂದರೆ ತಮ್ಮ ವ್ಯಕ್ತಿತ್ವ ಸೂಚಕವೆಂದು ಮಹಿಳೆಯರು ಹೆಚ್ಚಾಗಿ ಭಾವಿಸುವುದಿಲ್ಲ. ಆದರೆ ಪುರುಷರು ಹಾಗಲ್ಲ. ನಾವು ಯಾರೆಂಬುದು ಅವರು ಕಾರುಗಳ ಮೂಲಕ ತೋರಿಸುತ್ತಾರೆ. ರಾಷ್ ಡ್ರೈವಿಂಗ್‌ಗೆ ಇದೂ ಕೂಡ ಕಾರಣ. ಆದರೆ ಮಹಿಳೆಯರಿಗೆ ಅಂತಹ ಹಮ್ಮುಬಿಮ್ಮು ಬೇಕಿಲ್ಲ. ಅವರಿಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಲು ಮಾತ್ರ ಕಾರು ಸಾಕು. ಇದರಿಂದ ಅವರ ಪ್ರಯಾಣ ಹೆಚ್ಚು ನಿರಾಂತಕವಾಗಿರುತ್ತದೆ.

ಮಹಿಳೆಯರು ಪುರುಷರ ಹಾಗೆ ಕುಡಿದು ವಾಹನ ಚಾಲನೆ ಮಾಡುವುದು ಕಡಿಮೆ. ಇದಕ್ಕೆ ಅಪವಾದವಾಗಿ ಬೆಂಗಳೂರಿನಲ್ಲಿ ಆಗಾಗ ಕುಡಿದು ಗಲಾಟೆ ಮಾಡುವ ಚಾಲಕಿಯರೂ ಸುದ್ದಿಯಾಗುತ್ತಾರೆ. ಆದರೆ ಪುರುಷರು ಹೆಚ್ಚಾಗಿ ಕುಡಿದು ಡ್ರೈವಿಂಗ್ ಮಾಡುತ್ತಾರೆ. ಕುಡಿದು ಪ್ರಯಾಣಿಸಿದರೆ ಎಷ್ಟು ದಂಡ ಮತ್ತು ಶಿಕ್ಷೆಯೆಂಬ ಮಾಹಿತಿ ನಿಮಗೆ ಗೊತ್ತಿರಬಹುದು.

ಪುರುಷರಿಗೆ ಹೋಲಿಸಿದರೆ ಮಹಿಳಾ ಚಾಲಕಿಯರೇ ಎಷ್ಟೋ ಪಾಲು ಬೆಟರು ಎಂದು ಹೇಳಲು ಸದ್ಯ ಈ ಐದು ನಿದರ್ಶನಗಳು ಸಾಕಲ್ಲವೇ?

More from DriveSpark

Article Published On: Tuesday, April 10, 2012, 10:32 [IST]
English summary
There are some activities that have been considered gender specific. Many say men are more skillful when it comes to driving and are most suitable for it. Which in other words women are not. But if you can consider the below points, you might as well agree that women are better drivers than men.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+