ಹ್ಯಾಂಡ್‌ಬ್ರೇಕ್‌ಗಳ ಬಳಕೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳಿವು

By Manoj Bk

ಕಾರಿನಲ್ಲಿ ಹ್ಯಾಂಡ್‌ಬ್ರೇಕ್ ಅನ್ನು ಯಾವ ಕಾರಣಕ್ಕೆ ಬಳಸಲಾಗುತ್ತದೆ ಎಂದು ಬಹುತೇಕ ಜನರಿಗೆ ತಿಳಿದಿರುತ್ತದೆ. ಕಾರುಗಳನ್ನು ಕಡಿದಾದ ಸ್ಥಳಗಳಲ್ಲಿ ನಿಲ್ಲಿಸಿದಾಗ ಕಾರು ಮುಂದಕ್ಕೆ ಚಲಿಸದಂತೆ ತಡೆಯಲು ಹ್ಯಾಂಡ್‌ಬ್ರೇಕ್ ಅನ್ನು ಬಳಸಲಾಗುತ್ತದೆ. ಕಾರ್ ಡ್ರೈವಿಂಗ್‌ಗೆ ಸಂಪೂರ್ಣವಾಗಿ ಹೊಸಬರಾಗಿರುವವರಿಗೆ ಹ್ಯಾಂಡ್‌ಬ್ರೇಕ್ ಬಗ್ಗೆ ತಿಳಿದಿರುವುದಿಲ್ಲ. ಕೆಲವರಿಗೆ ಹ್ಯಾಂಡ್‌ಬ್ರೇಕ್ ಅನ್ನು ಯಾವಾಗ, ಎಲ್ಲಿ ಬಳಸಬೇಕು ಎಂದು ಗೊತ್ತಿರುವುದಿಲ್ಲ. ಈ ಲೇಖನದಲ್ಲಿ ಹ್ಯಾಂಡ್ ಬ್ರೇಕ್ ಬಗೆಗಿನ ಮೂಲ ಸಂಗತಿಗಳನ್ನು ನೋಡೋಣ.

ಹ್ಯಾಂಡ್‌ಬ್ರೇಕ್‌ಗಳ ಬಳಕೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳಿವು

ಸಾಮಾನ್ಯವಾಗಿ ಕಾರುಗಳು ಎರಡು ಪ್ರಮುಖ ಬ್ರೇಕ್‌ಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ಒಂದು ಬ್ರೇಕ್ ಅನ್ನು ಕಾಲುಗಳಿಂದ ನಿರ್ವಹಿಸಲಾಗುತ್ತದೆ. ಮತ್ತೊಂದು ಬ್ರೇಕ್ ಅನ್ನು ಕೈಯಿಂದ ನಿರ್ವಹಿಸಲಾಗುತ್ತದೆ. ಈ ಬ್ರೇಕ್ ಅನ್ನು ಹ್ಯಾಂಡ್‌ಬ್ರೇಕ್ ಎಂದು ಕರೆಯಲಾಗುತ್ತದೆ. ಬಹುತೇಕ ಕಾರುಗಳಲ್ಲಿ ಚಾಲಕರ ಆಸನದ ಪಕ್ಕದಲ್ಲಿರುವ ಹ್ಯಾಂಡ್‌ಬ್ರೇಕ್‌ಗಳಲ್ಲಿ ಲಿವರ್ ನೀಡಲಾಗಿರುತ್ತದೆ.

ಹ್ಯಾಂಡ್‌ಬ್ರೇಕ್‌ಗಳ ಬಳಕೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳಿವು

ಈ ಲಿವರ್ ಅನ್ನು ಎಳೆಯುವ ಮೂಲಕ ಹ್ಯಾಂಡ್ ಬ್ರೇಕ್ ಅನ್ನು ಹಾಕಬಹುದು. ಕಾಲುಗಳಿಂದ ನಿರ್ವಹಿಸುವ ಬ್ರೇಕ್ ಗಳನ್ನು ಕಾರ್ ಅನ್ನು ನಿಧಾನಗೊಳಿಸಲು ಅಥವಾ ನಿಲ್ಲಿಸಲು ಬಳಸಲಾಗುತ್ತದೆ. ಆದರೆ ಹ್ಯಾಂಡ್ ಬ್ರೇಕ್ ಅನ್ನು ಕಾರ್ ಅನ್ನು ನಿಲ್ಲಿಸಿದ ನಂತರವೇ ಬಳಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಕಾರುಗಳಲ್ಲಿ ಹ್ಯಾಂಡ್‌ಬ್ರೇಕ್ ಲಿವರ್ ಅನ್ನು ಎಳೆಯುವಂತೆ ನೀಡಲಾಗಿರುತ್ತದೆ.

ಹ್ಯಾಂಡ್‌ಬ್ರೇಕ್‌ಗಳ ಬಳಕೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳಿವು

ಆದರೆ ಕೆಲವು ಹೊಸ ಕಾರುಗಳಲ್ಲಿ ಹ್ಯಾಂಡ್‌ಬ್ರೇಕ್ ಅನ್ನು ಸಣ್ಣ ಗುಂಡಿಯನ್ನು ಒತ್ತುವ ಮೂಲಕ ಸಕ್ರಿಯಗೊಳಿಸಬಹುದು. ಈ ಬಟನ್ ಹೆಚ್ಚಾಗಿ ಗೇರ್ ಸ್ಟಿಕ್ ಪಕ್ಕದಲ್ಲಿರುತ್ತದೆ. ಕೆಲವು ಅತ್ಯಾಧುನಿಕ ಕಾರುಗಳಲ್ಲಿ ಆಟೋಮ್ಯಾಟಿಕ್ ಹ್ಯಾಂಡ್‌ಬ್ರೇಕ್ ಅನ್ನು ನೀಡಲಾಗುತ್ತದೆ. ಈ ಕಾರುಗಳಲ್ಲಿ ಕಾರ್ ಅನ್ನು ನಿಲ್ಲಿಸಿದ ತಕ್ಷಣವೇ ಹ್ಯಾಂಡ್ ಬ್ರೇಕ್ ಆಟೋಮ್ಯಾಟಿಕ್ ಆಗಿ ಆನ್ ಆಗುತ್ತದೆ.

ಹ್ಯಾಂಡ್‌ಬ್ರೇಕ್‌ಗಳ ಬಳಕೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳಿವು

ಆಕ್ಸಿಲರೇಟರ್ ಪೆಡಲ್ ಅನ್ನು ಒತ್ತಿದ ನಂತರ ಈ ಹ್ಯಾಂಡ್ ಬ್ರೇಕ್ ಬಿಡುಗಡೆಯಾಗುತ್ತದೆ. ಈ ಫೀಚರ್ ಅನ್ನು ಕೆಲವು ದುಬಾರಿ ಬೆಲೆಯ ಕಾರುಗಳಲ್ಲಿ ಮಾತ್ರ ನೀಡಲಾಗುತ್ತದೆ. ನಾವು ಬಳಸುವ ಬಹುತೇಕ ಕಾರುಗಳು ಲಿವರ್ ಅನ್ನು ಎಳೆಯುವ ಮೂಲಕ ಬಳಸಬಹುದಾದ ಹ್ಯಾಂಡ್ ಬ್ರೇಕ್ ಹೊಂದಿರುತ್ತವೆ. ಈ ಹ್ಯಾಂಡ್‌ಬ್ರೇಕ್‌ಗಳನ್ನು ಪಾರ್ಕಿಂಗ್ ಬ್ರೇಕ್ ಎಂದು ಸಹ ಕರೆಯಲಾಗುತ್ತದೆ.

ಹ್ಯಾಂಡ್‌ಬ್ರೇಕ್‌ಗಳ ಬಳಕೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳಿವು

ಹ್ಯಾಂಡ್‌ಬ್ರೇಕ್ ಅನ್ನು ಏಕೆ ಬಳಸಬೇಕು ಎಂಬುದನ್ನು ನೋಡುವುದಾದರೆ, ಕಾರ್ ಅನ್ನು ನಿಲ್ಲಿಸಿದಾಗ ಮುಂದಕ್ಕೆ ಚಲಿಸದಂತೆ ತಡೆಯಲು ಹ್ಯಾಂಡ್ ಬ್ರೇಕ್ ಗಳನ್ನುವಿನ್ಯಾಸಗೊಳಿಸಲಾಗಿರುತ್ತದೆ. ಕಾರುಗಳನ್ನು, ಗುಡ್ಡಗಾಡು ಪ್ರದೇಶಗಳಲ್ಲಿ ಅಥವಾ ಇಳಿಜಾರು ಪ್ರದೇಶಗಳಲ್ಲಿ ನಿಲ್ಲಿಸಿದಾಗ ಹ್ಯಾಂಡ್ ಬ್ರೇಕ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಹ್ಯಾಂಡ್‌ಬ್ರೇಕ್‌ಗಳ ಬಳಕೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳಿವು

ಬಹುತೇಕ ಕಾರುಗಳಲ್ಲಿ, ಅಂದರೆ, ಲಿವರ್ ಅನ್ನು ಎಳೆಯುವ ಮೂಲಕ ಹ್ಯಾಂಡ್ ಬ್ರೇಕ್ ಅನ್ನು ಸಕ್ರಿಯಗೊಳಿಸುವ ಕಾರುಗಳಲ್ಲಿ, ಹ್ಯಾಂಡ್ ಬ್ರೇಕ್ ಹಾಕಿದಾಗ ಹಿಂಭಾಗದಲ್ಲಿರುವ ಎರಡೂ ವ್ಹೀಲ್ ಗಳು ಲಾಕ್ ಆಗುತ್ತವೆ. ಇದೇ ವೇಳೆ ಎಲೆಕ್ಟ್ರಾನಿಕ್ ಹ್ಯಾಂಡ್‌ಬ್ರೇಕ್ ಪ್ರತಿ ವ್ಹೀಲ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಅಂತಹ ಕಾರುಗಳಲ್ಲಿ ಎಲೆಕ್ಟ್ರಾನಿಕ್ ಹ್ಯಾಂಡ್ ಬ್ರೇಕ್ ಅಳವಡಿಸಿದಾಗ, ಎಲ್ಲಾ ವ್ಹೀಲ್ ಗಳು ಲಾಕ್ ಆಗುತ್ತವೆ.

ಹ್ಯಾಂಡ್‌ಬ್ರೇಕ್‌ಗಳ ಬಳಕೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳಿವು

ಕೆಲವರು ಹ್ಯಾಂಡ್ ಬ್ರೇಕ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಹೊಸದಾಗಿ ಕಾರು ಚಾಲನೆ ಮಾಡುವವರು ಚಾಲನೆ ಮಾಡುವಾಗ ಹ್ಯಾಂಡ್‌ಬ್ರೇಕ್ ಹಾಕುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ. ಡ್ರೈವಿಂಗ್ ಟೆಸ್ಟ್'ಗೆ ಹೋಗುವವರಿಗೆ ಕಾರ್ ಅನ್ನು ನಿಲ್ಲಿಸಿ ಚಾಲನೆ ಮಾಡುವಂತೆ ಹೇಳಲಾಗುತ್ತದೆ. ಪಾರ್ಕಿಂಗ್ ಸೂಚನೆಗಳನ್ನು ಪೂರ್ಣಗೊಳಿಸಿ, ಕಾರ್ ಅನ್ನು ಸಂಪೂರ್ಣವಾಗಿ ನಿಲ್ಲಿಸಿದ ನಂತರವೇ ಹ್ಯಾಂಡ್ ಬ್ರೇಕ್ ಅನ್ನು ಹಾಕಬೇಕು.

ಹ್ಯಾಂಡ್‌ಬ್ರೇಕ್‌ಗಳ ಬಳಕೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳಿವು

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವಾಗ ಹ್ಯಾಂಡ್‌ಬ್ರೇಕ್ ಅನ್ನು ಹಾಕಬಹುದೇ ಎಂಬ ಪ್ರಶ್ನೆ ಹಲವರಿಗೆ ಕಾಡಬಹುದು. ಸಿಗ್ನಲ್'ನಲ್ಲಿ ಸ್ವಲ್ಪ ಹೊತ್ತು ಕಾಯುವಂತಿದ್ದರೆ ಅಥವಾ ಇಳಿಜಾರಾದ ಮೇಲ್ಮೈಯಲ್ಲಿ ನಿಂತಿದ್ದರೆ ಹ್ಯಾಂಡ್ ಬ್ರೇಕ್ ಹಾಕುವುದು ಒಳ್ಳೆಯದು. ಹಾಗೆಯೇ ತುರ್ತು ಸಂದರ್ಭಗಳಲ್ಲಿ ಕಾರ್ ಅನ್ನು ಪಾರ್ಕಿಂಗ್ ಮಾಡುವಾಗ ಹ್ಯಾಂಡ್ ಬ್ರೇಕ್ ಹಾಕುವುದು ಒಳ್ಳೆಯದು.

ಹ್ಯಾಂಡ್‌ಬ್ರೇಕ್‌ಗಳ ಬಳಕೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳಿವು

ಕಾರ್ ಅನ್ನು ಸಂಪೂರ್ಣವಾಗಿ ನಿಲ್ಲಿಸಿದ ನಂತರವೇ ಹ್ಯಾಂಡ್ ಬ್ರೇಕ್ ಹಾಕಬೇಕು. ಯಾವುದೇ ಕಾರಣಕ್ಕೂ ಕಾರು ಚಾಲನೆಯಲ್ಲಿದ್ದಾಗ ಹ್ಯಾಂಡ್ ಬ್ರೇಕ್ ಹಾಕುವುದು ಸರಿಯಲ್ಲ. ಕಾರು ಚಾಲನೆ ಕಲಿಯುವ ಆರಂಭದ ದಿನಗಳಲ್ಲಿ ಹ್ಯಾಂಡ್ ಬ್ರೇಕ್ ಬಳಸಿ ಅಭ್ಯಾಸ ಮಾಡಿಕೊಳ್ಳಿ, ಇದರಿಂದ ಅನುಭವ ಹಾಗೂ ಆತ್ಮವಿಶ್ವಾಸ ಹುಟ್ಟುತ್ತದೆ. ಕಾರ್ ಅನ್ನು ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಿಸುವ ಮುನ್ನ ಹ್ಯಾಂಡ್‌ಬ್ರೇಕ್ ಬಿಡುಗಡೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಹ್ಯಾಂಡ್‌ಬ್ರೇಕ್‌ಗಳ ಬಳಕೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳಿವು

ಕೆಲವರು ಹ್ಯಾಂಡ್ ಬ್ರೇಕ್ ಬಿಡುಗಡೆ ಮಾಡದೆ ಕಾರ್ ಅನ್ನು ಚಾಲನೆ ಮಾಡುತ್ತಾರೆ. ಇದು ವಿವಿಧ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಕಾರಿನ ಹ್ಯಾಂಡ್‌ಬ್ರೇಕ್ ಅನ್ನು ಸಕ್ರಿಯಗೊಳಿಸಿದ್ದರೆ, ಡ್ಯಾಶ್‌ಬೋರ್ಡ್‌ನಲ್ಲಿರುವ ಅಲರ್ಟ್ ಲೈಟ್ ಆನ್ ಆಗುತ್ತದೆ. ಹ್ಯಾಂಡ್‌ಬ್ರೇಕ್‌ ಅಲರ್ಟ್ ಲೈಟ್ ಆನ್ ಆಗಿದ್ದರೆ ಅದನ್ನು ಬಿಡುಗಡೆ ಮಾಡಿ ಕಾರು ಚಾಲನೆ ಮಾಡಿ.

ಹ್ಯಾಂಡ್‌ಬ್ರೇಕ್‌ಗಳ ಬಳಕೆಗೆ ಸಂಬಂಧಿಸಿದ ಪ್ರಮುಖ ಸಂಗತಿಗಳಿವು

ಹ್ಯಾಂಡ್ ಬ್ರೇಕ್ ಬಿಡುಗಡೆ ಮಾಡದೇ ಕಾರು ಚಾಲನೆ ಮಾಡಿದರೆ ಕಡಿಮೆ ವೇಗದಲ್ಲಿ ಹೆಚ್ಚು ಆಕ್ಸಲರೇಟರ್ ಬಳಸಬೇಕಾಗುತ್ತದೆ. ಹ್ಯಾಂಡ್ ಬ್ರೇಕ್ ಬಿಡುಗಡೆ ಮಾಡದೆ ಹೆಚ್ಚು ದೂರ ಕಾರು ಚಾಲನೆ ಮಾಡಿದರೆ ಕಾರಿನಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ ಬ್ರೇಕ್‌ಗಳಲ್ಲಿ ತೊಂದರೆಗಳು ಉಂಟಾಗಿ ರಿಪೇರಿಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಈ ಕಾರಣಕ್ಕೆ ಕಾರ್ ಅನ್ನು ಚಾಲನೆ ಮಾಡುವಾಗ, ಹ್ಯಾಂಡ್ ಬ್ರೇಕ್ ಬಿಡುಗಡೆ ಮಾಡಲು ಮರೆಯದಿರಿ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಬೇಕಾಗುತ್ತದೆ.

Most Read Articles

Kannada
English summary
Important things about using handbrakes in cars details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X