ಅಂತಾರಾಷ್ಟ್ರೀಯ ಚಾಲನಾ ಪರವಾನಿಗೆ ಪಡೆಯೋದು ಹೇಗೆ?

International Driving licence Procedure
ಕರ್ನಾಟಕ ಬಿಟ್ಟು ಹೊರರಾಜ್ಯಗಳಿಗೆ, ಹೊರ ದೇಶಗಳಿಗೆ ಪ್ರಯಾಣಿಸುವ ಅನಿವಾರ್ಯತೆ ಹಲವರಿಗಿರುತ್ತದೆ. ಹೊರರಾಜ್ಯಗಳಲ್ಲಿ ವಾಹನ ಚಾಲನೆ ಮಾಡಲು ಆಲ್ ಇಂಡಿಯಾ ಪಡೆಯಬಹುದು. ಆದರೆ ವಿದೇಶಗಳಲ್ಲಿ ವಾಹನ ಚಾಲನೆ ಮಾಡುವರು ಅಂತಾರಾಷ್ಟ್ರೀಯ ಚಾಲನೆ ಪರವಾನಿಗೆ ಪಡೆಯಬೇಕು. ಐಡಿಪಿ ಅಥವಾ ಇಂಟರ್ ನ್ಯಾಷನಲ್ ಡ್ರೈವಿಂಗ್ ಪರ್ಮಿಟ್ ಪಡೆಯುವುದು ಕಷ್ಟದ ಕೆಲಸವೇನಲ್ಲ.

* ಕಮರ್ಷಿಯಲ್ ಮೋಟರ್ ವೆಹಿಕಲ್ 4-ಎ ಅಪ್ಲಿಕೇಷನ್ ಪಡೆಯಬೇಕು. ಇದನ್ನು ಹತ್ತಿರದ ಆರ್ ಟಿಒ ಕಚೇರಿಯಿಂದ ಪಡೆದುಕೊಳ್ಳಬಹುದು ಅಥವಾ ವೆಬ್ ಸೈಟಿನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

* ಐಡಿಪಿ ಅಥವಾ ಇಂಟರ್ ನ್ಯಾಷನಲ್ ಡ್ರೈವಿಂಗ್ ಪರ್ಮಿಟ್ ಶುಲ್ಕ 500 ರುಪಾಯಿ ಪಾವತಿಸಬಹುದು.( ಆರ್ ಟಿಒ ಕ್ಯಾಷ್ ಕೌಂಟರಿನಲ್ಲಿ ಪಾವತಿಸಬಹುದು).

* ಒರಿಜಿನಲ್ ಡ್ರೈವಿಂಗ್ ಲೈಸನ್ಸ್, ಪಾಸ್ ಪೋರ್ಟ್, ವಿಸಾ, ಏರ್ ಟಿಕೇಟ್. ಇವೆಲ್ಲದರ ಒಂದು ನೆರಳಚ್ಚು ಪ್ರತಿ ಜೊತೆಗಿರಲಿ.

* ಅಪ್ಲಿಕೇಷನ್ ಜೊತೆಗೆ ಸಿಎಂವಿ 1 ಮತ್ತು ಸಿಎಂವಿ1ಎ ಫಾರ್ಮ್ ನಲ್ಲಿ ಮೆಡಿಕಲ್ ಸರ್ಟಿಫಿಕೆಟ್ ನೀಡಬೇಕು.

* ಪಾಸ್ ಪೋರ್ಟ್ ಗಾತ್ರದ ಇತ್ತೀಚಿನ ಮೂರು ಭಾವಚಿತ್ರಗಳು

* ಅಂತಾರಾಷ್ಟ್ರೀಯ ಡ್ರೈವಿಂಗ್ ಪರ್ಮಿಟ್ ಪಡೆಯುವ ವ್ಯಕ್ತಿಯೇ ಆರ್ ಟಿಒನಲ್ಲಿ ಹಾಜರಿರಬೇಕು.

* ಅರ್ಜಿ ಸಲ್ಲಿಸುವ ವ್ಯಕ್ತಿ ಭಾರತೀಯ ಪ್ರಜೆಯಾಗಿರಬೇಕು.

* ಡ್ರೈವಿಂಗ್ ಲೈಸನ್ಸ್ ಪಡೆದು ಮೂರುತಿಂಗಳೊಳಗಾಗಿದ್ದರೆ ಅರ್ಜಿದಾರನು ಮತ್ತೊಮ್ಮೆ ಡ್ರೈವಿಂಗ್ ಟೆಸ್ಟ್ ಮಾಡಿಸಿಕೊಳ್ಳಬೇಕು.

* ನಿಮ್ಮ ವಾಸಸ್ಥಳದ ವ್ಯಾಪ್ತಿಯ(ಡಿಎಲ್ ನೀಡಿದ ವಿಳಾಸ)ಲ್ಲಿನ ಆರ್ ಟಿಒ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸನ್ಸಿಗೆ ಅರ್ಜಿ ಸಲ್ಲಿಸಬೇಕು.

* ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸನ್ಸ್ ವ್ಯಾಲಿಡಿಟಿ ಒಂದು ವರ್ಷ.

ವಿಶೇಷ ಸೂಚನೆ: ಡ್ರೈವಿಂಗ್ ಲೈಸನ್ಸ್ ಬೇರೆ ರಾಜ್ಯ ಅಥವಾ ಪ್ರದೇಶಗಳಲ್ಲಿ ಪಡೆದಿದ್ದರೆ ಅರ್ಜಿದಾರನು ವಿಳಾಸ ಬದಲಾವಣೆ ಅರ್ಜಿ ಸಲ್ಲಿಸಬೇಕು. ಉದಾಹರಣೆಗೆ ಕರ್ನಾಟಕ ರಾಜ್ಯದೊಳಗೆ ವಿಳಾಸ ಬದಲಾಯಿಸಲು ತೆಗೆದುಕೊಳ್ಳುವ ಸಮಯ ಮೂರು ದಿನವಾಗಿದೆ. ಬೇರೆ ರಾಜ್ಯಗಳಿಗೆ ವಿಳಾಸ ಬದಲಾಯಿಸಲು ಸುಮಾರು 21 ದಿನ ಬೇಕಾಗುತ್ತದೆ. ಹೀಗಾಗಿ ಅರ್ಜಿದಾರನು ವಿದೇಶ ಪ್ರಯಾಣಕ್ಕೆ ಮುಂಚಿತವಾಗಿ ಸಮಯವನ್ನು ಪರಿಗಣಿಸಬೇಕು. ವಿಳಾಸ ಬದಲಾವಣೆ ಇತ್ಯಾದಿ ಸಮಸ್ಯೆಗಳಿರುವಾಗ ವಿದೇಶ ಪ್ರಯಾಣಕ್ಕೆ ಒಂದೆರಡು ದಿನವಿರುವಾಗ ಬಂದು ಅವಸರದಿಂದ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸನ್ಸ್ ಪಡೆಯಲು ಸಾಧ್ಯವಿಲ್ಲ. (ಆಧಾರ: ಕರ್ನಾಟಕ ಆರ್ ಟಿಒ)

ದಿನಕ್ಕೊಂದು ಸಲಹೆ

More from DriveSpark

Article Published On: Saturday, February 18, 2012, 10:13 [IST]
English summary
Procedure for obtaining International driving licence. Applicaiton Form CMV 4-A. IDP Fee of Rs. 500/. Original Valid Driving Licence + Passport + Visa + Air Ticket ( with one set xerox copies). Medical Certificate in form CMV 1 & CMV 1A. Three Recent passport size photographs.Candidate shall appear in person.Applicant shall appear for re-test if the Driving Licence issued is within three months.The address in the Driving licence should fall under the jurisdiction of the Regional Transport office to where the application for IDP is being made.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+