ಟೈರ್ ಮೇಲಿನ ಪ್ರತಿ ಅಕ್ಷರಕ್ಕಿದೆ ನಿಗೂಢ ಅರ್ಥ... ವಾಹನ ಮಾಲೀಕರೇ ಕಂಡಿತ ನಿಮಗೂ ತಿಳಿದಿರಲಿ

ಮನುಷ್ಯನಿಗೆ ಓಡಾಡಲು ಕಾಲುಗಳು ಎಷ್ಟು ಮುಖ್ಯವೋ ವಾಹನಗಳಿಗೂ ಟೈರ್‌ಗಳು ಅಷ್ಟೇ ಮುಖ್ಯ. ಹಲವರಿಗೆ ಟೈರ್‌ಗಳು ಎಂದರೆ ವಾಹನದಲ್ಲಿನ ಒಂದು ಭಾಗವಷ್ಟೇ ಎಂದು ಭಾವಿಸುತ್ತಾರೆ. ಆದರೆ ನಿಜ ಹೇಳಬೇಕೆಂದರೆ ಟೈರ್‌ಗಳ ಹಿಂದಿನ ವಿಜ್ಞಾನವೇ ಬೇರೆ ಇದೆ. ಒಂದು ಟೈರ್‌ನ ನಿರ್ಮಾಣ, ಗುಣಮಟ್ಟ, ಯಾವ ವಾಹನಕ್ಕೆ ಬಳಸಬಹುದು ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ.

ಪ್ರತಿಯೊಬ್ಬರು ಟೈರ್‌ನಲ್ಲಿ ಕಾಣಸಿಗುವ ಕೆಲ ಅಕ್ಷರಗಳನ್ನು ನೋಡಿರುತ್ತೀರ. ಅವು ಬ್ರಾಂಡ್ ಹೆಸರೋ ಅಥವಾ ಏನೋ ಮಾಹಿತಿ ಇರಬಹುದು ಎಂದು ಭಾವಿಸಿ ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಟೈರ್‌ನ ಸೈಡ್‌ವಾಲ್ ಸಾಕಷ್ಟು ಮಾಹಿತಿಯನ್ನು ಹೊಂದಿರುತ್ತದೆ. ಅವುಗಳಲ್ಲಿ ಕೆಲವು ನಿಮಗೆ ಬೇಕಾಗುವ ಮಾಹಿತಿಯನ್ನು ಕೂಡ ನೀಡುತ್ತವೆ. ಈ ನಿಗೂಢ ಮಾಹಿತಿಯನ್ನು ಅರ್ಥ ಮಾಡಿಕೊಂಡರೆ ಟೈರ್ ಬಗ್ಗೆ ಎಲ್ಲಾ ಮಾಹಿತಿ ನಿಮಗೆ ತಿಳಿದಂತೆ.

letters on the tire

ಟೈರ್ ಎಷ್ಟು ಲೋಡ್ ಅನ್ನು ಹೊತ್ತೊಯ್ಯಬಹುದು, ಅದರ ಗಾತ್ರ, ವಯಸ್ಸು ಮತ್ತು ವೇಗದ ರೇಟಿಂಗ್‌ನಿಂದ ಹಿಡಿದು ಪ್ಲೈಸ್ ಅನ್ನು ಹೇಗೆ ಜೋಡಿಸಲಾಗಿದೆ ಎಂಬುದರವರೆಗೆ ಎಲ್ಲವನ್ನೂ ನೀವು ತಿಳಿಯಬಹುದು. ನೀವು ಹೊಸ ಟೈರ್‌ಗಳನ್ನು ಖರೀದಿಸುವಾಗ ಟೈರ್‌ಗಳನ್ನು ನಿಮ್ಮ ಕಾರಿನ ಅವಶ್ಯಕತೆಗೆ ತಕ್ಕಂತೆ ತಯಾರಿಸಲಾಗಿದೆಯೇ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಹಾಗಾಗಿ ಟೈರ್ ಮೇಲಿನ ಅಕ್ಷರಗಳ ಅರ್ಥವನ್ನು ವಿವರವಾಗಿ ತಿಳಿಯೋಣ.

ಸಣ್ಣ ಟ್ರಕ್ ಅಥವಾ ಪ್ಯಾಸೆಂಜರ್: ಟೈರ್ ಗಾತ್ರದ ಕುರಿತು ನಿಮ್ಮ ಟೈರ್‌ನ ಸೈಡ್‌ವಾಲ್‌ನಲ್ಲಿ (ಟೈರ್‌ನ ಬದಿ) ಕಾಣಬಹುದು. ಇದರಲ್ಲಿ ಮೊದಲಿಗೆ P ಅಥವಾ LT ಅಕ್ಷರಗಳೊಂದಿಗೆ ಪ್ರಾರಂಭವಾಗುತ್ತದೆ. ಪಿ ಎಂದರೆ ಮೆಟ್ರಿಕ್ ಅಥವಾ ಪ್ರಯಾಣಿಕ ಎಂದರ್ಥ. P ಯಿಂದ ಪ್ರಾರಂಭವಾಗುವ ಅಕ್ಷರಗಳಿರುವ ಟೈರ್‌ಗಳನ್ನು ಪ್ರಯಾಣಿಕ ವಾಹನಗಳಲ್ಲಿ ಮಾತ್ರ ಬಳಸಲು ತಯಾರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.

letters on the tire

LT ಎಂದರೆ 'ಲೈಟ್ ಟ್ರಕ್' ಎಂದರ್ಥ. ಉದಾಹರಣೆಗೆ ಟೈರ್ ಮೇಲೆ P215/65R15 ಎಂಬ ಅಕ್ಷರಗಳಿವೆ ಎಂದು ಭಾವಿಸೋಣ ಇದರಲ್ಲಿ ದೊಡ್ಡಕ್ಷರ P ಇದ್ದರೇ, ಈ ಟೈರ್ ಪ್ರಯಾಣಿಕ ವಾಹನಕ್ಕೆ ಮಾತ್ರ ಸೂಕ್ತ ಎಂದು ಸೂಚಿಸುತ್ತದೆ. ದೊಡ್ಡಕ್ಷರ P ಇರುವ ಟೈರ್‌ಗಳನ್ನು ಜನರನ್ನು ಸಾಗಿಸುವ ವಾಹನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚು ಭಾರವಾದ ಸರಕುಗಳನ್ನು ಸಾಗಿಸುವ ಟ್ರಕ್‌ಗೆ ಈ ಟೈರ್‌ಗಳನ್ನು ಬಳಸಬಾರದು.

ಸೈಡ್‌ವಾಲ್‌ನ (ಟೈರ್‌ನ ಬದಿ) ಅಗಲ: P ಹಾಗೂ LT ಅಕ್ಷರಗಳ ನಂತರ ಸೈಡ್‌ವಾಲ್‌ನಲ್ಲಿ ಟೈರ್ ಆಯಾಮಗಳನ್ನು ನಾವು ಗುರುತಿಸಬಹುದು. ಉದಾಹರಣೆಗೆ P215/65R15 ನಲ್ಲಿ P ನಂತರದ ಮೊದಲ 3 ಅಂಕಿಗಳು ಟೈರ್ ಬದಿಗಳ ಅಗಲದ ಬಗ್ಗೆ ಹೇಳುತ್ತವೆ. ಅಗಲವನ್ನು ಸಾಮಾನ್ಯವಾಗಿ ಮಿಲಿಮೀಟರ್‌ಗಳಲ್ಲಿ ನೀಡಲಾಗುತ್ತದೆ. P215/65R15 ಇದರಲ್ಲಿ ಟೈರ್ ಸೈಡ್‌ವಾಲ್ 215 ಮಿ.ಮೀ ಅಗಲವಿದೆ ಎಂದರ್ಥ.

letters on the tire

ಪ್ರೊಫೈಲ್ ಅಥವಾ ಸೈಡ್‌ವಾಲ್ ಎತ್ತರ: ಸೈಡ್‌ ವಾಲ್ ಎತ್ತರವನ್ನು ರಿಮ್‌ನಿಂದ ಆರಂಭಿಸಿ ಚಕ್ರದ ಹೊರಮೈಯಲ್ಲಿರುವವರೆಗೆ ಅಳೆಯಲಾಗುತ್ತದೆ. ಟೈರ್ ನ ಸೈಡ್‌ವಾಲ್‌ನಲ್ಲಿ ಇದನ್ನು ಸೈಡ್‌ವಾಲ್ ಅಗಲದ ಶೇಕಡಾ ಪ್ರಮಾಣದಲ್ಲಿ ತೋರಿಸಲಾಗುತ್ತದೆ. ಅಂದರೆ P215/65R15 ನಲ್ಲಿ ಎತ್ತರವು 215mm ಇದ್ದು, ಅಗಲವು ಎತ್ತರದ ಶೇ65 ರಷ್ಟಿದೆ ಎಂದು ಅರ್ಥ, ಅಲ್ಲಿಗೆ ಇದು 139.75mm ಅಗಲವಿರುತ್ತದೆ.

ಟೈರ್ ನಿರ್ಮಾಣ: ಟೈರ್ ಅನ್ನು ಹೇಗೆ ನಿರ್ಮಿಸಲಾಗಿದೆ ಎಂಬುದನ್ನು R, B ಅಥವಾ D ಯಿಂದ ತೋರಿಸಲಾಗುತ್ತದೆ. ಇಲ್ಲಿ, P215/65R15 R ಎಂಬುದನ್ನು ನಾವು ನೋಡಬಹುದು. R ಎಂದರೆ ರೇಡಿಯಲ್ ಎಂದರ್ಥ ರೇಡಿಯಲ್-ಪ್ಲೈ ಟೈರ್‌ನಲ್ಲಿ ಪ್ಲೈಸ್ ಅನ್ನು ಅಡ್ಡಲಾಗಿ ಜೋಡಿಸಲಾಗಿರುತ್ತದೆ. ತ್ರೆಡ್‌ಗಳನ್ನು ಟೈರ್ ತಿರುಗುವಿಕೆಯ ದಿಕ್ಕಿಗೆ ಲಂಬವಾಗಿ ಹಾಕಲಾಗುತ್ತದೆ.

ನಾವು ನೋಡುವ ಹೆಚ್ಚಿನ ಟೈರ್‌ಗಳು ರೇಡಿಯಲ್ ನಿರ್ಮಾಣವನ್ನು ಹೊಂದಿರುತ್ತವೆ. ಪಕ್ಷಪಾತ ಅಥವಾ ಕರ್ಣೀಯ (ಬೈಯಾಸ್ ಅಥವಾ ಡೈಯಾಗ್ನಲ್) ನಿರ್ಮಾಣದೊಂದಿಗೆ ಟೈರ್‌ಗಳ ಮೇಲೆ ಹಲವು ಪ್ರಯೋಜನಗಳನ್ನು ಪಡಿಯುತ್ತವೆ. ರೇಡಿಯಲ್-ಪ್ಲೈ ಟೈರ್ ಉತ್ತಮ ಡ್ರೈವ್ ಗುಣಮಟ್ಟ ಮತ್ತು ಹೆಚ್ಚು ಮೈಲೇಜ್‌ಗೆ ಸಹಕರಿಸುತ್ತವೆ. ಇದಲ್ಲದೆ, ರೇಡಿಯಲ್ ಟೈರುಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ ಎಂದು ಹೇಳಲಾಗುತ್ತದೆ.

More from DriveSpark

Article Published On: Friday, May 12, 2023, 14:56 [IST]
English summary
Letters on the tire interesting info must know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+