ರಸ್ತೆ ಬದಿಯಲ್ಲಿ ಸಮಾನಾಂತರವಾಗಿ ವಾಹನ ನಿಲ್ಲಿಸುವುದು ಹೇಗೆ?

By Nagaraja

ಮೊದಲ ನೋಟದಲ್ಲಿ ಮೇಲಿನ ವಾಕ್ಯ ಸರಳವಾಗಿ ಅನಿಸಿದರೂ ಅತ್ಯಂತ ಅನುಭವಶಾಲಿ ಚಾಲಕರು ಸಹ ಕೆಲವೊಂದು ಬಾರಿ ಸಮಾನಾಂತರವಾಗಿ ವಾಹನ ನಿಲ್ಲಿಸುವ ಪ್ರಕ್ರಿಯೆಯಲ್ಲಿ (Parallel park) ಎಡವುತ್ತಾರೆ.

ಪ್ರಮುಖವಾಗಿಯೂ ನಗರ ಪ್ರದೇಶದ ವಿಪರೀತ ವಾಹನ ದಟ್ಟಣೆಯಲ್ಲಿ ಇಂತಹ ಸಮಸ್ಯೆ ಎದುರಾಗುತ್ತದೆ. ಈ ನಿಟ್ಟಿನಲ್ಲಿ ನಿರಂತರ ಅಭ್ಯಾಸ ಅತಿ ಅಗತ್ಯ. 'ಸತತ ಪ್ರಯತ್ನವೇ ಸಾಧನೆಯ ರಹಸ್ಯ' ಎಂಬ ವಾಕ್ಯ ಇಲ್ಲಿ ಅಕ್ಷರಶ: ನಿಜ ಅನಿಸುತ್ತದೆ. ಇಂದಿನ ಈ ಲೇಖನದಲ್ಲಿ ರಸ್ತೆ ಬದಿಗಳಲ್ಲಿ ವಾಹನಗಳ ಮಧ್ಯೆ ಸಮಾನಾಂತರವಾಗಿ ಕಾರು ನಿಲ್ಲಿಸುವುದು (ಪಾರ್ಕ್) ಹೇಗೆ ಎಂಬುದನ್ನು ವಿವರವಾಗಿ ಹೇಳಿಕೊಡಲಿದ್ದೇವೆ.

ರಸ್ತೆ ಬದಿಯಲ್ಲಿ ಸಮಾನಾಂತರವಾಗಿ ವಾಹನ ನಿಲ್ಲಿಸುವುದು ಹೇಗೆ?

ಪಟ್ಟಣ ಪ್ರದೇಶಗಳಲ್ಲಿ ಕೆಲವೊಂದು ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷಿದ್ಧ ವಲಯಗಳಿರುತ್ತದೆ. ಅಂತಹ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ವಾಹನ ನಿಲ್ಲಿಸುವ ಗೋಜಿಗೆ ಹೋಗಬಾರದು.

1. ಸೂಕ್ತ ಜಾಗ ಹುಡುಕಿ

1. ಸೂಕ್ತ ಜಾಗ ಹುಡುಕಿ

ಶಾಪಿಂಗ್ ಅಥವಾ ಇತರ ದೈನಂದಿನ ಅಗತ್ಯಗಳಿಗಾಗಿ ಹೊರಗೆ ತೆರಳುವವರು ವಾಹನ ನಿಲ್ಲಿಸುವ ಅಗತ್ಯ ಬಂದಾಗ ಮೊದಲು ಸೂಕ್ತ ಪ್ರದೇಶ ಹುಡುಕುವುದು ಅಗತ್ಯ. ಇದಕ್ಕಾಗಿ ಸಾಧ್ಯವಾದಷ್ಟು ವಾಹನ ದಟ್ಟಣೆ ಕಡಿಮೆಯಿರುವ ಪ್ರದೇಶವನ್ನೇ ಆಯ್ಕೆ ಮಾಡಿದರೆ ನಿಮ್ಮ ಕೆಲಸ ಅರ್ಧ ಮುಗಿದಂತೆ. ಇದಾದ ಬಳಿಕ ನೀವು ವಾಹನ ನಿಲುಗಡೆ ಮಾಡಲು ಇಚ್ಛಿಸುವಿರಿ ಎಂಬುದನ್ನು ಸೂಚಿಸಲು ನಿಲುಗಡೆ ಪ್ರದೇಶದ ಸಮೀಪ ತಲುಪಿದಾಗ ಇಂಡಿಕೇಟರ್ ಆನ್ ಮಾಡಿ ವಾಹನ ನಿಧಾನ ಮಾಡಿ. ನೆನಪಿಡಿ ಎರಡು ಕಾರುಗಳ ಮಧ್ಯೆ ಕಾರು ನಿಲ್ಲಿಸುವಾಗ ಮುಂಭಾಗ ಹಾಗೂ ಹಿಂಭಾಗಗಳಲ್ಲಿ ಕಡಿಮೆ ಪಕ್ಷ ಎರಡು ಅಡಿಗಳ ಅಂತರವನ್ನಾದರೂ ಕಾಯ್ದುಕೊಳ್ಳಿ. ಯಾಕೆ ಹೀಗೆ ಮಾಡಬೇಕು? ಉತ್ತರಕ್ಕಾಗಿ ಮುಂದಿನ ಪುಟಗಳತ್ತ ಕಣ್ಣಾಯಿಸಿರಿ.

2. ಹೊಂದಿಸು

2. ಹೊಂದಿಸು

ವಾಹನ ನಿಲ್ಲಿಸಲು ಸೂಕ್ತ ಪ್ರದೇಶ ಲಭಿಸಿದ ಬಳಿಕ ನಿಮ್ಮ ಕಾರನ್ನು ಬದಿಯಲ್ಲಿ ನಿಂತಿರುವ ಕಾರಿಗೆ ಹೊಂದಿಸುವಂತೆ ನಿಲ್ಲಿಸಿ. ಇಲ್ಲಿ (ಚಿತ್ರದಲ್ಲಿ ತೋರಿಸಿರುವಂತೆಯೇ) ಒಂದು ಕೈಯ ಅಂತರವನ್ನು ಕಾಯ್ದುಕೊಳ್ಳಲು ಮರೆಯದಿರಿ. ಇದು ಸಮೀಪದ ಕಾರಿಗೆ ಸವರದಿರಲು ನೆರವಾಗಲಿದೆ.

3. ನಿಧಾನವಾಗಿ ಹಿಂದಕ್ಕೆ ಪ್ರವೇಶಿಸು

3. ನಿಧಾನವಾಗಿ ಹಿಂದಕ್ಕೆ ಪ್ರವೇಶಿಸು

ಇದೀಗ ನಿಮ್ಮ ರಿವರ್ಸ್ ಪಾರ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಎರಡು ಕಾರುಗಳ ನಡುವೆ ವಾಹನ ನಿಲ್ಲಿಸುವ ಪ್ರಕ್ರಿಯೆಯಲ್ಲಿ ಇದು ಅತ್ಯಂತ ಪ್ರಾಮುಖ್ಯ ಘಟಕವಾಗಿದೆ. ಹಾಗಾಗಿ ಅತ್ಯಂತ ಸೂಕ್ಷ್ಮವಾಗಿ ಇದನ್ನು ನಿರ್ವಹಿಸಿ. ಮೊದಲು ರಿವರ್ಸ್ ಗೇರ್ ಹಾಕಿದ ಬಳಿಕ ಸ್ಟೀರಿಂಗ್ ವೀಲ್ ಎಡಭಾಗಕ್ಕೆ ಸಂಪೂರ್ಣವಾಗಿ ತಿರುಗಿಸಿ (ಮೇಲಿನ ಚಿತ್ರದಲ್ಲಿ ರಸ್ತೆಯ ಬಲಬದಿಗೆ ವಾಹನ ನಿಲ್ಲಿಸುವುದರಿಂದ ಸ್ಟೀರಿಂಗ್ ವೀಲ್ ಸಂಪೂರ್ಣವಾಗಿ ಬಲಬದಿಗೆ ತಿರುಗಿಸಲಾಗಿದೆ). ಬಳಿಕ ನಿಧಾನವಾಗಿ ರಿವರ್ಸ್ ಪ್ರಕ್ರಿಯೆ ಆರಂಭಿಸಿ. ನಿಮ್ಮ ಕಾರು ಅಂದಾಜು 45 ಡಿಗ್ರಿ ಕೋನವನ್ನು ತಲುಪಿದಾಗ ಚುರುಕಾಗಿ ಸ್ಟೀರಿಂಗ್ ವೀಲ್ ನೇರ ಮಾಡಿ.

4. ನಿಧಾನವಾಗಿ ಹಿಂದಕ್ಕೆ ಪ್ರವೇಶಿಸು (ಮುಂದುವರಿಯುವುದು)

4. ನಿಧಾನವಾಗಿ ಹಿಂದಕ್ಕೆ ಪ್ರವೇಶಿಸು (ಮುಂದುವರಿಯುವುದು)

45 ಡಿಗ್ರಿ ಕೋನವನ್ನು ತಲುಪಿದ ಬಳಿಕ ಸ್ಟೀರಿಂಗ್ ವೀಲ್ ನೇರ ಮಾಡುವ ಪ್ರಕ್ರಿಯೆ ಆರಂಭಿಸಿ. ಹಿಂದಕ್ಕೆ ಸರಿಸುವಾಗ ಕನಿಷ್ಠ ಒಂದು ಅಡಿ ಮೊದಲೇ ವಾಹನವನ್ನು ನೇರ ಮಾಡಲು ಪ್ರಯತ್ನಕ್ಕೆ ಆಸ್ಪದ ಕೊಡಿ. ಇಲ್ಲವಾದ್ದಲ್ಲಿ ಸಮೀಪದ ಪ್ರದೇಶಕ್ಕೆ ಸವರಿ ಹೋಗುವ ಸಾಧ್ಯತೆಯಿದೆ.

5. ಕಾರನ್ನು ನೇರ ಮಾಡಿ

5. ಕಾರನ್ನು ನೇರ ಮಾಡಿ

ವಾಹನ ನಿಲುಗಡೆ ಪ್ರಕ್ರಿಯೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರನ್ನು ನೇರ ಮಾಡಿ. (ನಿಮ್ಮ ಕಾರಿನ ಫ್ರಂಟ್ ಬಂಪರ್ ಮುಂಭಾಗದ ಕಾರಿನ ರಿಯರ್ ಬಂಪರ್‌ಗೆ ನೇರವಾಗಿ ಹೊಂದಿಕೆಯಾಗುವ ರೀತಿಯಲ್ಲಿ). ಈ ಸಂದರ್ಭದಲ್ಲಿ ಇಕ್ಕಟ್ಟಾದ ಪ್ರದೇಶವಿದ್ದಲ್ಲಿ ಕಾರು ಸವರದಂತೆ ಗಮನವಹಿಸಿ. ಸಲಹೆ - ನಿಮ್ಮ ಕಾರಿನ ಎಡಭಾಗದಲ್ಲಿರುವ ರಿಯರ್ ವ್ಯೂ ಮಿರರ್ ಕೆಳಮುಖವಾಗಿ ಸರಿಸಿದ್ದಲ್ಲಿ ಇಕ್ಕಟ್ಟಾದ ಪ್ರದೇಶದಲ್ಲಿ ಸ್ಪಷ್ಟ ಗೋಚರ ಲಭ್ಯವಾಗಲಿದೆ.

6. ಅಂತಿಮ ಪ್ರಕ್ರಿಯೆ

6. ಅಂತಿಮ ಪ್ರಕ್ರಿಯೆ

ಬಹುಶ: ಎರಡು ಕಾರುಗಳ ನಡುವೆ ವಾಹನ ನಿಲ್ಲಿಸುವ ಅತ್ಯಂತ ಸರಳ ವಿಧಾನ ಕೂಡಾ ಇದಾಗಿರಬಹುದು. ಕಾರನ್ನು ನೇರ ಮಾಡುವಾಗ ಮುಂಭಾಗ ಹಾಗೂ ಹಿಂಭಾಗ ವಾಹನಗಿಂತಲೂ ಕನಿಷ್ಠ ಎರಡು ಅಡಿ ಅಂತರವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ. ಇದು ತಿರುಗಿ ಹೋಗುವ ಸಂದರ್ಭದಲ್ಲಿ ಯಾವುದೇ ತೊಂದರೆಗಳಿಲ್ಲದೆ ಹೋಗಲು ಸಹಕಾರಿಯಾಗಲಿದೆ. ಅಂತಿಮವಾಗಿ ರಸ್ತೆಯಿಂದಲೂ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳಲಾಗಿದೆ ಎಂಬುದನ್ನು ಖಾತ್ರಿಪಡಿಸಿ.

ರಸ್ತೆ ಬದಿಯಲ್ಲಿ ಸಮಾನಾಂತರವಾಗಿ ವಾಹನ ನಿಲ್ಲಿಸುವುದು ಹೇಗೆ?

ಈ ಲೇಖನ ನಿಮ್ಮ ನೆರವಿಗೆ ಬರಲಿದೆ ಎಂಬುದ ವಿಶ್ವಾಸ ನಮ್ಮದ್ದು. ಎರಡು ವಾಹನಗಳ ಮಧ್ಯ ಸಮಾನಾಂತರವಾಗಿ ವಾಹನ ನಿಲ್ಲಿಸುವುದಕ್ಕೆ ಸಾಕಷ್ಟು ಅಭ್ಯಾಸದ ಅಗತ್ಯವಿರುವುದರಿಂದ ಹೊಸ ಕಾರು ಚಾಲಕರು ಮೊದಲು ವಿಶಾಲವಾದ ಮೈದಾನ ಅಥವಾ ನಿರ್ಜನ ರಸ್ತೆ ಪ್ರದೇಶಗಳಲ್ಲಿ ಅಭ್ಯಾಸಿಸಿ. ಬಳಿಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಬಳಿಕ ಇಕ್ಕಟ್ಟಿನ ರಸ್ತೆ ಪ್ರದೇಶಕ್ಕೆ ಇಳಿಯಬಹುದಾಗಿದೆ.


More from DriveSpark

Article Published On: Thursday, July 3, 2014, 11:07 [IST]
English summary
We bring you a crash course in parallel parking that will help you deal with parking your car in this manner. So read on and build up that all-important confidence.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+