ನಕಲಿ ಬಿಡಿಭಾಗಗಳ ಬಳಕೆಯಿಂದ ಉಂಟಾಗುವ ತೊಂದರೆಗಳಿವು

By Manoj Bk

ಕಾರುಗಳ ಬಿಡಿಭಾಗಗಳನ್ನು ಖರೀದಿಸುವಾಗ ಹೆಚ್ಚು ಜಾಗರೂಕತೆ ವಹಿಸಬೇಕು. ಇಲ್ಲದಿದ್ದರೆ ನಕಲಿ ಬಿಡಿ ಭಾಗಗಳನ್ನು ಖರೀದಿಸಬೇಕಾಗುತ್ತದೆ. ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಕಾರು ತಯಾರಕ ಕಂಪನಿಗಳ ಅನುಮತಿಯಿಲ್ಲದೆ ತಯಾರಿಸಲಾಗುತ್ತದೆ. ಈಗಿನ ಸನ್ನಿವೇಶದಲ್ಲಿ ಅಸಲಿ ಹಾಗೂ ನಕಲಿ ಬಿಡಿ ಭಾಗಗಳ ನಡುವೆ ವ್ಯತ್ಯಾಸ ಕಂಡು ಹಿಡಿಯುವುದು ಕಷ್ಟ.

ನಕಲಿ ಬಿಡಿಭಾಗಗಳಿಂದ ಉಂಟಾಗುವ ತೊಂದರೆಗಳಿವು

ಅಷ್ಟರ ಮಟ್ಟಿಗೆ ನಿಜವಾದ ಬಿಡಿ ಭಾಗಗಳು, ನಕಲಿ ಬಿಡಿ ಭಾಗಗಳು ಒಂದೇ ರೀತಿ ಇರುತ್ತವೆ. ನಕಲಿ ಬಿಡಿಭಾಗಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಈ ಕಾರಣಕ್ಕೆ ಬಹುತೇಕ ಜನರು ಅವುಗಳನ್ನು ಖರೀದಿಸುತ್ತಾರೆ. ಆದರೆ ನಕಲಿ ಬಿಡಿಭಾಗಗಳು ಅಸಲಿ ಬಿಡಿಭಾಗಗಳಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ನಕಲಿ ಬಿಡಿಭಾಗಗಳು ಕಾರುಗಳಿಗೆ ಹಾಗೂ ಅವುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತವೆ. ನಕಲಿ ಬಿಡಿಭಾಗಗಳಿಂದ ಆಗುವ ತೊಂದರೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ನಕಲಿ ಬಿಡಿಭಾಗಗಳಿಂದ ಉಂಟಾಗುವ ತೊಂದರೆಗಳಿವು

ಸುರಕ್ಷತೆ

ನಕಲಿ ಬಿಡಿಭಾಗಗಳ ಬಳಕೆಯಿಂದ ಸುರಕ್ಷತೆಗೆ ತೊಂದರೆ ಉಂಟಾಗಬಹುದು. ಕಡಿಮೆ ಬೆಲೆಗೆ ಮಾರಾಟವಾಗುವ ನಕಲಿ ಬ್ರೇಕ್‌ಗಳು ಸರಿಯಾದ ಸಮಯಕ್ಕೆ ಕಾರನ್ನು ನಿಲ್ಲಿಸದೇ ಇರಬಹುದು. ಅಥವಾ ರಸ್ತೆ ಉಬ್ಬು, ಗುಂಡಿ ಬಿದ್ದ ರಸ್ತೆಯಲ್ಲಿ ಒಮ್ಮೆ ಪ್ರಯಾಣಿಸಿದ ನಂತರ ಹಾಳಾಗಬಹುದು.

ನಕಲಿ ಬಿಡಿಭಾಗಗಳಿಂದ ಉಂಟಾಗುವ ತೊಂದರೆಗಳಿವು

ಹಾಗೆಯೇ ಕಾರುಗಳಲ್ಲಿ ಬಳಸಲಾಗುವ ನಕಲಿ ವಿದ್ಯುತ್ ಬಿಡಿ ಭಾಗಗಳು ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಬಹುದು. ಈ ಕಾರಣಕ್ಕಾಗಿ ನಕಲಿ ಬಿಡಿಭಾಗಗಳನ್ನು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಕಡಿಮೆ ಬೆಲೆಗೆ ಮಾರಾಟವಾಗುವ ನಕಲಿ ಬಿಡಿಭಾಗಗಳನ್ನು ಖರೀದಿಸುವುದು ಪ್ರಯಾಣಿಕರ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.

ನಕಲಿ ಬಿಡಿಭಾಗಗಳಿಂದ ಉಂಟಾಗುವ ತೊಂದರೆಗಳಿವು

ರಸ್ತೆ ಅಪಘಾತಗಳು

ಭಾರತದಲ್ಲಿ ಸಂಭವಿಸುವ 10 ಕಾರು ಅಪಘಾತಗಳಲ್ಲಿ 2 ಅಪಘಾತಗಳಿಗೆ ನಕಲಿ ಬಿಡಿಭಾಗಗಳು ಕಾರಣವೆಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಈ ಅಂಕಿ ಅಂಶಗಳು ಆಘಾತವನ್ನುಂಟು ಮಾಡಬಹುದಾದರೂ ನಕಲಿ ಬಿಡಿಭಾಗಗಳು ಸರಿಯಾಗಿ ಕೆಲಸ ಮಾಡದಿದ್ದರೆ ಅವುಗಳಿಂದ ಉಂಟಾಗುವ ಪರಿಣಾಮಗಳು ವಿನಾಶಕಾರಿಯಾಗಬಹುದು.

ನಕಲಿ ಬಿಡಿಭಾಗಗಳಿಂದ ಉಂಟಾಗುವ ತೊಂದರೆಗಳಿವು

ಎಂಜಿನ್ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ

ನಕಲಿ ಬಿಡಿ ಭಾಗಗಳು ಎಂಜಿನ್ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುವ ಸಾಧ್ಯತೆಗಳಿರುತ್ತವೆ. ಇವುಗಳು ಕಾರಿನ ಹೊರಸೂಸುವಿಕೆಯನ್ನು ಹೆಚ್ಚಿಸುತ್ತವೆ. ಕೆಲವು ನಕಲಿ ಬಿಡಿ ಭಾಗಗಳು ಸರ್ಕಾರವು ನಿಗದಿಪಡಿಸಿರುವ ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿಲ್ಲದಿರಬಹುದು. ನಕಲಿ ಬಿಡಿಭಾಗಗಳು ಕೇವಲ ನಮಗಷ್ಟೇ ಅಲ್ಲದೇ ಪರಿಸರದ ಮೇಲೂ ಗಂಭೀರ ಪರಿಣಾಮ ಬೀರುತ್ತವೆ.

ನಕಲಿ ಬಿಡಿಭಾಗಗಳಿಂದ ಉಂಟಾಗುವ ತೊಂದರೆಗಳಿವು

ಹೆಚ್ಚು ವೆಚ್ಚ

ನಕಲಿ ಬಿಡಿ ಭಾಗಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುವುದರಿಂದ ಅವುಗಳನ್ನು ಖರೀದಿಸುವವರು ಹಣವನ್ನು ಉಳಿಸಿದ್ದಾರೆ ಎಂಬುದು ತಪ್ಪು ಅಭಿಪ್ರಾಯ. ನಕಲಿ ಬಿಡಿ ಭಾಗಗಳಿಂದ ದೀರ್ಘಾವಧಿಯಲ್ಲಿ ಹೆಚ್ಚು ಪರಿಣಾಮ ಅನುಭವಿಸಬೇಕಾಗುತ್ತದೆ. ನಕಲಿ ಬಿಡಿ ಭಾಗಗಳನ್ನು ಆಗಾಗ್ಗೆ ದುರಸ್ತಿ ಮಾಡಿಸಬೇಕಾಗುತ್ತದೆ ಹಾಗೂ ಬದಲಾಯಿಸಬೇಕಾಗುತ್ತದೆ.

ನಕಲಿ ಬಿಡಿಭಾಗಗಳಿಂದ ಉಂಟಾಗುವ ತೊಂದರೆಗಳಿವು

ಈ ಕಾರಣಕ್ಕೆ ನಕಲಿ ಬಿಡಿಭಾಗಗಳಿಂದ ಹಣ ಉಳಿತಾಯವಾಗಿದೆ ಎಂದು ಭಾವಿಸುವವರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಕೊಳ್ಳಿ. ನಕಲಿ ಬಿಡಿ ಭಾಗಗಳು ತಕ್ಷಣಕ್ಕೆ ಹಣ ಉಳಿಸಬಹುದಾದರೂ ಅವುಗಳಿಂದ ಭವಿಷ್ಯದಲ್ಲಿ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ.

ನಕಲಿ ಬಿಡಿಭಾಗಗಳಿಂದ ಉಂಟಾಗುವ ತೊಂದರೆಗಳಿವು

ವಾರಂಟಿ

ವಾರಂಟಿ ಎನ್ನುವುದು ಒಂದು ನಿರ್ದಿಷ್ಟ ಅವಧಿಯೊಳಗೆ ಕಾರಿನ ಬಿಡಿ ಭಾಗಗಳನ್ನು ಸರಿಪಡಿಸಲು ಅಥವಾ ಬದಲಾಯಿಸಲು ಕಾರು ತಯಾರಕರು ಗ್ರಾಹಕರು ನೀಡುವ ಭರವಸೆಯಾಗಿದೆ. ಆದರೆ ನಕಲಿ ಬಿಡಿಭಾಗಗಳನ್ನು ಬಳಸುವುದರಿಂದ ವಾರಂಟಿಗೆ ಧಕ್ಕೆಯಾಗುವ ಸಾಧ್ಯತೆಗಳಿರುತ್ತವೆ. ಜನರು ಅಸಲಿ ಬಿಡಿಭಾಗಗಳನ್ನು ಖರೀದಿಸಲು ಇದು ಒಂದು ಕಾರಣವಾಗಿದೆ.

ನಕಲಿ ಬಿಡಿಭಾಗಗಳಿಂದ ಉಂಟಾಗುವ ತೊಂದರೆಗಳಿವು

ಕಳಪೆ ಗುಣಮಟ್ಟ

ನಕಲಿ ಬಿಡಿಭಾಗಗಳನ್ನು ತಯಾರಿಸುವ ಕಂಪನಿಗಳು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತವೆ. ಅದಕ್ಕಾಗಿಯೇ ಅವುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತವೆ. ಗುಣಮಟ್ಟ ತೀರಾ ಕಳಪೆಯಾಗಿರುವ ಕಾರಣ ನಕಲಿ ಬಿಡಿಭಾಗಗಳ ಜೀವಿತಾವಧಿಯೂ ಕಡಿಮೆ. ಅವುಗಳು ಹೆಚ್ಚು ಕಾಲ ಕೆಲಸ ಮಾಡುವುದಿಲ್ಲ.

ನಕಲಿ ಬಿಡಿಭಾಗಗಳಿಂದ ಉಂಟಾಗುವ ತೊಂದರೆಗಳಿವು

ಇತರೆ ವಾಹನಗಳಿಗೂ ಅಪಾಯ

ನಕಲಿ ಬಿಡಿ ಭಾಗಗಳು ನಿಮಗೆ, ನಿಮ್ಮ ಕಾರಿಗೆ ಮಾತ್ರವಲ್ಲದೆ ನಿಮ್ಮೊಂದಿಗೆ ರಸ್ತೆಯಲ್ಲಿ ಪ್ರಯಾಣಿಸುವ ಇತರರಿಗೂ ಹಾನಿಯನ್ನುಂಟು ಮಾಡಬಹುದು. ನೀವು ಬಳಸುವ ನಕಲಿ ಬ್ರೇಕ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅದರಿಂದ ನಿಮ್ಮ ಕಾರು ಇತರರಿಗೆ ಅಪಾಯವನ್ನುಂಟು ಮಾಡುತ್ತದೆ.

ನಕಲಿ ಬಿಡಿಭಾಗಗಳಿಂದ ಉಂಟಾಗುವ ತೊಂದರೆಗಳಿವು

ವಾಹನಗಳು ಈಗ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿವೆ. ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲು ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಪರಿಣಾಮವಾಗಿ ಎಂಟ್ರಿ ಲೆವೆಲ್ ಕಾರುಗಳಲ್ಲಿಯೂ ಸಹ ಎಬಿಎಸ್, ಏರ್‌ಬ್ಯಾಗ್‌, ಹೈ-ಸ್ಪೀಡ್ ಅಲಾರ್ಮ್‌, ಇಬಿಡಿ, ಪಾರ್ಕಿಂಗ್ ಸೆನ್ಸಾರ್‌ಗಳು, ಸೀಟ್ ಬೆಲ್ಟ್ ರಿಮ್ಯಾಂಡರ್, ಸೀಟ್ ಬೆಲ್ಟ್ ಅಲಾರಂಗಳನ್ನು ನೀಡಲಾಗುತ್ತಿದೆ.

ನಕಲಿ ಬಿಡಿಭಾಗಗಳಿಂದ ಉಂಟಾಗುವ ತೊಂದರೆಗಳಿವು

ಈ ಫೀಚರ್ ಗಳು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುತ್ತವೆ. ಆದರೆ ಈ ಯಾವುದೇ ಸುರಕ್ಷತಾ ಫೀಚರ್ ಗಳನ್ನು ಹೊಂದಿರದ ಹಲವು ಕಾರುಗಳು ಇನ್ನೂ ಬಳಕೆಯಲ್ಲಿವೆ. ಹೆಚ್ಚಿನ ಅಪಘಾತಗಳು ಯಾಂತ್ರಿಕ ದೋಷದಿಂದ ಉಂಟಾಗುತ್ತವೆ. ಆದ್ದರಿಂದ ಹಾನಿಗೊಳಗಾದ ಅಥವಾ ಸವೆದ ಭಾಗಗಳನ್ನು ತಕ್ಷಣ ಬದಲಾಯಿಸುವುದು ಹಳೆಯ ವಾಹನಗಳನ್ನು ಸುರಕ್ಷಿತ ವಾಹನಗಳಾಗಿ ಪರಿವರ್ತಿಸುವ ಮೊದಲ ಹಂತವಾಗಿದೆ.ನಿರ್ದಿಷ್ಟವಾಗಿ ಹೇಳುವುದಾದರೆ ಬ್ರೇಕ್ ಪ್ಯಾಡ್ ಅನ್ನು ಸರಿಯಾದ ಸಮಯಕ್ಕೆ ಬದಲಿಸುವುದು ಒಳ್ಳೆಯದು. ಈಗ ಅಳವಡಿಸಿರುವ ಮೆಟಲ್ ಬ್ರೇಕ್ ಪ್ಯಾಡ್‌ಗಳ ಬದಲು ಸೆರಾಮಿಕ್ ಪ್ಯಾಡ್‌ಗಳನ್ನು ಬಳಸುವುದು ಉತ್ತಮ.

ಸೆರಾಮಿಕ್ ಸ್ಟ್ರಿಪ್‌ಗಳು ದೀರ್ಘ ಕಾಲದವರೆಗೂ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿವೆ. ಅವುಗಳು ಸುಲಭವಾಗಿ ಸವೆಯುವುದಿಲ್ಲ. ಇವು ಕಡಿಮೆ ಶಾಖ ವಾಹಕವಾಗಿಯೂ ಕಾರ್ಯನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಆಟೋ ಮೊಬೈಲ್ ತಜ್ಞರು ಇವುಗಳನ್ನು ಶಿಫಾರಸು ಮಾಡುತ್ತಾರೆ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Problems from using duplicate spare parts details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X