ಮುಳ್ಳುಚುಚ್ಚಿದರೆ ಠುಸ್ಸ್!! ಇಲ್ಲಿವೆ ಟೈರ್ ಟಿಪ್ಸ್

ಸುರಕ್ಷತೆಯ ಪ್ರಯಾಣದಲ್ಲಿ ಟೈರ್ ಪ್ರಮುಖ ಪಾತ್ರ ವಹಿಸುತ್ತದೆ. ಟೈರ್ ನಲ್ಲಿರುವ ರಬ್ಬರ್ ಸೂಕ್ಷ್ಮವಾಗಿರುವುದರಿಂದ ಯಾವಾಗ ಡ್ಯಾಮೇಜ್ ಆಗುತ್ತೆ ಎಂದು ಹೇಳಲಾಗುವುದಿಲ್ಲ. ಟೈರ್ ಬಾಳಿಕೆ ಹೆಚ್ಚು ದಿನಾ ಇರುವುದಿಲ್ಲ. ವ್ಯಾಲಿಡಿಟಿ ಮುಗಿದಿದೆ ಎಂದು ತಿಳಿದಾಗ ತಕ್ಷಣ ಬದಲಾಯಿಸಬೇಕು. ಟೈರ್ ಆಯಸ್ಸು ತಿಳಿದುಕೊಳ್ಳುವ ಕೆಲವು ಸೂಚನೆಗಳು ಈ ಕೆಳಗಿವೆ.
ಟೈರ್ ಸುರಕ್ಷತೆ: ಗಮನಿಸಬೇಕಾದ ಅಂಶಗಳು
* ಟೈರ್ ಟ್ರೀಡ್ ಡೆಪ್ತ್: ಅಂದ್ರೆ ಟೈರ್ ಗುಂಡಿಗಳು. ರಸ್ತೆಯಲ್ಲಿ ಹಿಡಿತ ಸಿಗುವ ಉದ್ದೇಶದಿಂದ ಟೈರ್ ಗಳಲ್ಲಿ ಕಡಿಮೆಯೆಂದರೂ 1.6 ಮಿ.ಮೀ. ಆಳದ ಟ್ರೀಡ್ ಗುರುತುಗಳಿರಬೇಕಾಗುತ್ತದೆ. ಕೆಲವೊಮ್ಮೆ ಇದರಲ್ಲಿ ಗಾಜು ಇತ್ಯಾದಿ ವಸ್ತುಗಳು ಸೇರಿ ಟೈರ್ ಪಂಕ್ಚರ್ ಆಗುತ್ತದೆ. ಕಠಿಣ ರಸ್ತೆಗಳಲ್ಲಿ ಪ್ರಯಾಣಿಸಬೇಕಾದ ಸಂದರ್ಭದಲ್ಲಿ ಟೈರ್ ಟ್ರೀಡ್ ಆಳ ಕನಿಷ್ಠ ಮೂರು ಮಿ.ಮೀ. ಆದರೂ ಇರಬೇಕು. ಟೈರ್ ಟ್ರೀಡ್ ಸಂಪೂರ್ಣವಾಗಿ ಸವೆಯುವ ಮುನ್ನ ಟೈರ್ ಬದಲಾಯಿಸುವುದು ಉತ್ತಮ.
* ಈಗ ಹೊಸ ಟೈರ್ ಗಳು ಟ್ರೀಡ್ ಇಂಡಿಕೇಟರ್ ಹೊಂದಿರುತ್ತವೆ. ಟೈರ್ ಹೊಸದಾಗಿರುವಾಗ ಬಿಳಿಬಣ್ಣದ ರಬ್ಬರ್ ಗೆರೆಗಳು ಕಾಣುವುದಿಲ್ಲ. ಸವೆದಂತೆ ಆ ಇಂಡಿಕೇಟರ್ ಕಾಣುತ್ತದೆ. ಆ ಸಮಯದಲ್ಲಿ ಟೈರ್ ಬದಲಾಯಿಸುವುದು ಸೂಕ್ತ.
* ಟೈರ್ ಗಳಲ್ಲಿ ಬಿರುಕುಬಿಟ್ಟಿರುತ್ತದೆ. ಸಣ್ಣಮಟ್ಟಿನ ಬಿರುಕುಗಳನ್ನು ಕೆಲವು ದಿನ ಕಡೆಗಣಿಸಬಹುದು. ಆದರೆ ದೊಡ್ಡದಾಗಿ ಬಿರುಕುಬಿಟ್ಟಿದರೆ ಪ್ರಯಾಣ ಒಳ್ಳೆಯದ್ದಲ್ಲ. ದೂರಪ್ರಯಾಣದ ಸಂದರ್ಭದಲ್ಲಿ ಸಣ್ಣಬಿರುಕುಗಳನ್ನೂ ಕಡೆಗಣಿಸಬೇಡಿರಿ.
* ನಿಮ್ಮ ಕಾರಿನ ಟೈರಿನಲ್ಲಿ ಕೆಲವು ಬೊಬ್ಬೆಗಳು ಅಥವಾ ಮೊಡವೆಗಳು(?) ಕಂಡು ಬರಬಹುದು. ಇದು ಕೂಡ ಟೈರ್ ಆಯಸ್ಸು ಮುಗಿಯುತ್ತಿರುವ ಸೂಚನೆ. ಇಂತಹ ಬೊಬ್ಬೆಗಳೆದ್ದ ಸಮಯದಲ್ಲಿ ದೂರಪ್ರಯಾಣ ಕೈಗೊಳ್ಳಬೇಡಿ. ಹತ್ತಿರದ ಸರ್ವಿಸ್ ಸ್ಟೇಷನ್ ಗೆ ಹೋಗಿ ಇದನ್ನು ಸರಿಪಡಿಸಿಕೊಳ್ಳಿ.
* ಕಾರು ಚಾಲನೆ ಮಾಡುತ್ತಿರುವಾಗ ಟೈರ್ ವೈಬ್ರೆಟ್ ಆದ ಹಾಗೆ ಅನಿಸಬಹುದು. ಟೈರ್ ಜೋಡಣೆ ಸರಿಯಾಗಿಲ್ಲವೆಂದು ಆ ಸಂದರ್ಭದಲ್ಲಿ ತಿಳಿದುಕೊಳ್ಳಿ. ವೈಬ್ರಟನ್ನು ಕಡೆಗಣಿಸಬೇಡಿ. ಅದು ಕಾರು ಟೈರ್ ಪಂಕ್ಚರ್ ಆಗಿರೋ ಸೂಚನೆಯೂ ಆಗಿರಬಹುದು.
* ಹಳೆಯ ಟೈರನ್ನು ಮತ್ತೆ ರಿಟ್ರೇಡ್(ಮರು ನಿರ್ಮಾಣ) ಮಾಡಿ ಬಳಸುವುದನ್ನು ಅವಾಯ್ಡ್ ಮಾಡಿ.


Click it and Unblock the Notifications








