ಈ 6 ಆಕ್ಸೆಸರಿ ಮೂಲಕ ನಿಮ್ಮ ಕಾರು ಪಯಣವನ್ನು ಸುರಕ್ಷಿತವಾಗಿಸಿರಿ!
ತಮ್ಮ ಪಯಣವನ್ನು ಆದಷ್ಟು ಸುರಕ್ಷಿತವಾಗಿಸಬೇಕಾಗಿರುವುದು ಪ್ರತಿಯೊಬ್ಬ ಕಾರು ಮಾಲಿಕನ ಕರ್ತವ್ಯವಾಗಿದೆ. ಹಾಗಾಗಿ ನಿಮ್ಮ ಬೇಸಿಕ್ ಕಾರಿನಲ್ಲಿ ಇಂತಹ ಸೌಲಭ್ಯಗಳನ್ನು ಆದಷ್ಟು ಬೇಗನೇ ಆಳವಡಿಸಿಕೊಳ್ಳುವುದು ಉತ್ತಮ.
ಈ ನಿಟ್ಟಿನಲ್ಲಿ ನಿಮ್ಮ ಪಯಣವನ್ನು ಮತ್ತಷ್ಟು ಸುರಕ್ಷಿತ ಹಾಗೂ ಆನಂದಮಯವಾಗಿಸಲು ನಾವಿಲ್ಲಿ ಆರು ಕಾರು ಆಕ್ಸೆಸರಿಗಳನ್ನು ಹೇಳಿಕೊಡಲಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

ರಿವರ್ಸ್ ಪಾರ್ಕಿಂಗ್ ಸೆನ್ಸಾರ್
ನೀವು ರಿವರ್ಸ್ ಗೇರ್ ಆಳವಡಿಸಿದಾಗ ಇದು ಸ್ವಯಂಚಾಲಿತವಾಗಿ ಕೆಲಸ ಆರಂಭಿಸಲಿದೆ. ಕಾರಿನ ಹಿಂಬದಿಯಲ್ಲಿರುವ ಚಿಕ್ಕ ಸೆನ್ಸಾರ್ ಗಳು ಅಲ್ಟ್ರಾಸೋನಿಕ್ ರೇಡಿಯೊ ವೇವ್ ನಲ್ಲಿ ಕಾರ್ಯ ನಿರ್ವಹಿಸಿದ್ದು, ಯಾವುದೇ ರೀತಿಯ ತಡೆ ಎದುರಾದ್ದಲ್ಲಿ ಎಚ್ಚರಿಸಲಿದೆ.

ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ
ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವು ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಆಳವಡಿಸಲಾದ ಎಲ್ ಸಿಡಿ ಪರದೆ ಮೇಲೆ ಸ್ಪಷ್ಟವಾದ ಗೋಚರತೆಯನ್ನು ನೀಡಲಿದೆ. ಬಹುತೇಕ ಎಲ್ಲ ಆಧುನಿಕ ಕಾರುಗಳಲ್ಲಿ ಇಂತಹ ಸೇವೆಗಳು ಲಭ್ಯವಿದೆ. ಇದು ಕಾರಿನ ಹಿಂಬದಿಯಲ್ಲಿ ಆಳವಡಿಸಲಾದ ಲೆನ್ಸ್ ಗಳ (ಟೈಲ್ ಗೇಟ್ ಅಥವಾ ಬಂಪರ್ ನಲ್ಲಿ) ಮೂಲಕ ಪ್ರತ್ಯಕ್ಷ ದರ್ಶನವನ್ನು ಸೀಟಿನಲ್ಲೇ ಕುಳಿತುಕೊಂಡು ನೋಡಬಹುದಾಗಿದೆ.

ಪ್ರತಿಫಲಿತ ಟೇಪ್
ಕಾರಿನಲ್ಲಿ ಕೆಂಪು ಬಣ್ಣದ ತ್ರಿಕೋಣಾಕೃತಿಯ ಪ್ರತಿಫಲಿಸುವ ಟೇಪ್ ಲಗತ್ತಿಸುವ ಮೂಲಕ ರಾತ್ರಿ ಪಯಣವನ್ನು ಮತ್ತಷ್ಟು ಸುರಕ್ಷಿತವಾಗಿಸಲಿದೆ. ಇದು ದೂರದಿಂದಲೇ ವಾಹನ ಪ್ರತಿಬಿಂಬಿಸುವಂತೆ ಮಾಡಲಿದ್ದು, ಹಿಂಬದಿಯ ಬರುವ ವಾಹನಗಳು ಎಚ್ಚೆತ್ತುಕೊಳ್ಳಲಿದೆ.

ಲೈಫ್ ಹ್ಯಾಮರ್
ಲೈಫ್ ಹ್ಯಾಮರ್ ಗಳು ಎಮರ್ಜನ್ಸಿ ಹ್ಯಾಮೆರ್ ಗಳೆಂದು ಕರೆಯಲ್ಪಡುತ್ತಿದ್ದು, ಅಪಘಾತದಂತಹ ತುರ್ತು ಪರಿಸ್ಥಿತಿಯಲ್ಲಿ ಕಾರಿನಿಂದ ಹೊರಬರಲು ನೆರವಾಗಲಿದೆ. ಲೈಫ್ ಹ್ಯಾಮರ್ ನೆರವಿನಿಂದ ಕಾರಿನ ಗಾಜು ಒಡೆಯಲು ಅಥವಾ ಸೀಟು ಬೆಲ್ಟ್ ಮುರಿಯಲು ನೆರವಾಗಲಿದೆ.

ಕನ್ವೆಕ್ಸ್ ಮಿರರ್
ಹೊರಗಿನ ಕನ್ವೆಕ್ಸ್ ಮಿರರ್ ಗಳು ನಿಮಗೆ ಕನ್ನಡಿಯೊಳಗೆ ನಿಮಗೆ ಸಂಕುಚಿತ ನೋಟವನ್ನು ಪ್ರದಾನ ಮಾಡಲಿದ್ದು, ಇದರಿಂದ ಹಿಂಬದಿಯ ವಿಶಾಲವಾದ ಪ್ರದೇಶವು ಕನ್ನಡಿಯಲ್ಲಿ ಸಣ್ಣದಾಗಿ ಗೋಚರಿಸಲಿದೆ. ಪರಿಣಾಮ ಬ್ಲೈಂಡ್ ಸ್ಪಾಟ್ ಸಾಧ್ಯತೆಯನ್ನು ಕಡಿಮೆ ಮಾಡಲಿದ್ದು, ಮತ್ತಷ್ಟು ದೂರದ ಪ್ರದೇಶದ ಗೋಚರತೆಯು ಲಭ್ಯವಾಗಲಿದೆ.

ಎಲ್ ಇಡಿ ಆಕ್ಸಿಲರಿ ಲ್ಯಾಂಪ್
ಮಾರುಕಟ್ಟೆಯಲ್ಲಿ ಹಲವು ಶ್ರೇಣಿಯ ಎಲ್ ಇಡಿ ಆಕ್ಸಿಲರಿ ಲ್ಯಾಂಪ್ ಲಭ್ಯವಿದ್ದು, ಕಾರಿನ ನೋಟವನ್ನು ಹೆಚ್ಚಿಸುವುದರಿಂದ ಹೆಚ್ಚಿನ ಸುರಕ್ಷತೆಯನ್ನು ಪ್ರದಾನ ಮಾಡಲಿದೆ. ಇದು ಬೇಗನೇ ಪ್ರತಿಫಲಿಸುವುದರಿಂದ ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ನೆರವಾಗಲಿದೆ.


Click it and Unblock the Notifications








