ಬೈಕ್ ಕಳ್ಳತನವಾಗುವುದನ್ನು ತಡೆಯುವ ಸುರಕ್ಷಿತ ವಿಧಾನಗಳಿವು

By Manoj Bk

ಭಾರತದಲ್ಲಿ ದ್ವಿಚಕ್ರ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತದೆ. ಜೊತೆಗೆ ದ್ವಿಚಕ್ರ ವಾಹನ ಕಳ್ಳತನವೂ ಭಾರತದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಯಾರಾದರೂ ಸರಕುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋದರೆ ಅವರ ಬೈಕ್ ಕಳ್ಳತನವಾಗಿರುತ್ತದೆ.

ಬೈಕ್ ಕಳ್ಳತನವಾಗುವುದನ್ನು ತಡೆಯುವ ಸುರಕ್ಷಿತ ವಿಧಾನಗಳಿವು

ಇನ್ನು ಕೆಲವು ಬಾರಿ ಮನೆಯ ಮುಂಭಾಗದಿಂದಲೇ ಬೈಕುಗಳ ಕಳ್ಳತನವಾಗಿರುತ್ತದೆ. ಬೈಕ್ ಕದಿಯಲು ಹೊಸ ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಬೈಕ್ ಕಳ್ಳತನವಾಗುವುದನ್ನು ತಡೆಯಬಹುದು. ಆ ವಿಧಾನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬೈಕ್ ಕಳ್ಳತನವಾಗುವುದನ್ನು ತಡೆಯುವ ಸುರಕ್ಷಿತ ವಿಧಾನಗಳಿವು

1. ಚೈನ್ ಮತ್ತು ಲಾಕ್ ಬಳಸಿ

ಬೈಕ್ ಕಳ್ಳತನವಾಗುವುದನ್ನು ತಡೆಯಲು ಚೈನ್ ಹಾಗೂ ಲಾಕ್'ಗಳನ್ನು ಬಳಸಬೇಕು. ಬೈಕಿನಲ್ಲಿ ಎಲ್ಲಿಗೆ ಹೋದರೂ ಸ್ಟೀಲ್ ಚೈನ್'ಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿ ಲಾಕ್ ಮಾಡುವುದು ಒಳ್ಳೆಯದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬೈಕ್ ಕಳ್ಳತನವಾಗುವುದನ್ನು ತಡೆಯುವ ಸುರಕ್ಷಿತ ವಿಧಾನಗಳಿವು

ಬೈಕ್ ಪಾರ್ಕ್ ಮಾಡಿದ ನಂತರ ಚೈನ್ ಬಳಸಿ ಬೈಕಿನ ವ್ಹೀಲ್'ಗೆ ಕಟ್ಟಿ. ಇದರಿಂದ ಬೈಕಿನ ವ್ಹೀಲ್ ಚೈನ್'ನಲ್ಲಿ ಸಿಲುಕಿಕೊಳ್ಳುತ್ತದೆ. ಚೈನ್ ಬಳಸಿ ಬೈಕಿನ ಎರಡೂ ಬದಿಯ ವ್ಹೀಲ್'ಗಳನ್ನು ಲಾಕ್ ಮಾಡಿದರೆ ಇನ್ನೂ ಒಳ್ಳೆಯದು. ಬೈಕ್‌ ಅನ್ನು ಬೈಕ್ ಕಳ್ಳರಿಂದ ಕಾಪಾಡಿಕೊಳ್ಳಲು ಇದು ಸುರಕ್ಷಿತ ಮಾರ್ಗವಾಗಿದೆ.

ಬೈಕ್ ಕಳ್ಳತನವಾಗುವುದನ್ನು ತಡೆಯುವ ಸುರಕ್ಷಿತ ವಿಧಾನಗಳಿವು

2. ಡಿಸ್ಕ್ ಬ್ರೇಕ್ ಲಾಕ್ ಬಳಕೆ

ಬೈಕಿನಲ್ಲಿ ಡಿಸ್ಕ್ ಬ್ರೇಕ್ ಇದ್ದರೆ ಚೈನ್ ಹಾಗೂ ಲಾಕ್ ಅನ್ನು ಪ್ರತ್ಯೇಕವಾಗಿ ಕೊಂಡೊಯ್ಯುವ ಅಗತ್ಯವಿಲ್ಲ. ಡಿಸ್ಕ್ ಬ್ರೇಕ್‌ಗಳಲ್ಲಿರುವ ಲಾಕ್ ಚಿಕ್ಕದಾಗಿರುವ ಕಾರಣ ಅವುಗಳನ್ನು ಬೈಕಿನ ಸ್ಟೋರೇಜ್ ಸ್ಪೇಸ್'ನಲ್ಲಿ ಸುಲಭವಾಗಿ ಇಡಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬೈಕ್ ಕಳ್ಳತನವಾಗುವುದನ್ನು ತಡೆಯುವ ಸುರಕ್ಷಿತ ವಿಧಾನಗಳಿವು

ಡಿಸ್ಕ್ ಲಾಕ್ ಅನ್ನು ಹೊರತುಪಡಿಸಿ ಯು ಲಾಕ್ ಅಥವಾ ಪ್ಯಾಡ್ ಲಾಕ್'ಗಳನ್ನು ಸಹ ಬಳಸಬಹುದು. ಡಿಸ್ಕ್ ಲಾಕ್ ಬ್ರೇಕ್'ಗಳನ್ನು ಬೈಕಿನ ಎರಡೂ ವ್ಹೀಲ್'ಗಳಿಗೆ ಅಳವಡಿಸಿದರೆ ಬೈಕ್ ಕದಿಯುವುದು ಕಷ್ಟಕರವಾಗುತ್ತದೆ. ಬೈಕ್'ಗಳನ್ನು ರಕ್ಷಿಸಿಕೊಳ್ಳಲು ಡಿಸ್ಕ್ ಲಾಕ್ ಉತ್ತಮ ಆಯ್ಕೆಯಾಗಿದೆ.

ಬೈಕ್ ಕಳ್ಳತನವಾಗುವುದನ್ನು ತಡೆಯುವ ಸುರಕ್ಷಿತ ವಿಧಾನಗಳಿವು

3. ಬೈಕ್ ಅಲಾರ್ಮ್

ಬೈಕುಗಳನ್ನು ಸುರಕ್ಷಿತವಾಗಿಡಲು ತಂತ್ರಜ್ಞಾನಗಳಿಗೇನು ಕೊರತೆಯಿಲ್ಲ. ಬೈಕ್‌ಗಳಲ್ಲಿ ಆ್ಯಂಟಿ ಥೆಫ್ಟ್ ಅಲಾರಂ ಬಳಸಬಹುದು. ಈ ಅಲಾರಂ ವೈರ್'ಲೆಸ್ ಸೆನ್ಸಾರ್'ಗಳ ನೆರವಿನಿಂದ ಕಾರ್ಯನಿರ್ವಹಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬೈಕ್ ಕಳ್ಳತನವಾಗುವುದನ್ನು ತಡೆಯುವ ಸುರಕ್ಷಿತ ವಿಧಾನಗಳಿವು

ಈ ಅಲಾರಂ ಅಳವಡಿಸಿದರೆ ಬೈಕ್‌ನ ಹ್ಯಾಂಡಲ್ ಅನ್ನು ಯಾರಾದರೂ ತೆರೆಯಲು ಅಥವಾ ತಿರುಗಿಸಲು ಪ್ರಯತ್ನಿಸಿದರೆ ತಕ್ಷಣವೇ ಅದರ ಬಗ್ಗೆ ನಿಮಗೆ ಮಾಹಿತಿ ನೀಡುತ್ತದೆ.

ಬೈಕ್ ಕಳ್ಳತನವಾಗುವುದನ್ನು ತಡೆಯುವ ಸುರಕ್ಷಿತ ವಿಧಾನಗಳಿವು

4. ಸುರಕ್ಷಿತವಾದ ಸ್ಥಳದಲ್ಲಿ ಬೈಕ್ ಪಾರ್ಕ್ ಮಾಡಿ

ಹೆಚ್ಚು ಕಾಲ ಬೈಕ್ ಪಾರ್ಕ್ ಮಾಡುವುದಾದರೆ ಸುರಕ್ಷಿತವಾದ ಸ್ಥಳದಲ್ಲಿ ಬೈಕ್ ಪಾರ್ಕ್ ಮಾಡಿ. ಅಂತಹ ಸ್ಥಳ ಲಭ್ಯವಿಲ್ಲದಿದ್ದರೆ ಪೇ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕ್ ಮಾಡುವುದು ಒಳ್ಳೆಯದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬೈಕ್ ಕಳ್ಳತನವಾಗುವುದನ್ನು ತಡೆಯುವ ಸುರಕ್ಷಿತ ವಿಧಾನಗಳಿವು

5. ತಂತ್ರಗಳನ್ನು ಬಳಸಿ

ನಿಮ್ಮ ಬೈಕಿನ ಭಾಗಗಳ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದ್ದರೆ, ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂದು ನಿಮಗೆ ತಿಳಿದಿದ್ದರೆ, ಬೈಕುಗಳನ್ನು ಸುರಕ್ಷಿತವಾಗಿಡಲು ಈ ಟ್ರಿಕ್ ತುಂಬಾ ಉಪಯುಕ್ತವಾಗಿದೆ.

ಬೈಕ್ ಕಳ್ಳತನವಾಗುವುದನ್ನು ತಡೆಯುವ ಸುರಕ್ಷಿತ ವಿಧಾನಗಳಿವು

ಬೈಕ್‌ನಲ್ಲಿರುವ ಎಲೆಕ್ಟ್ರಿಕ್ ಕನೆಕ್ಷನ್ ಅನ್ನು ತೆಗೆದು ಹಾಕಬಹುದು. ಇದರಿಂದ ನಿಮ್ಮನ್ನು ಬಿಟ್ಟು ಬೇರೆಯವರು ನಿಮ್ಮ ಬೈಕ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಬೈಕುಗಳಲ್ಲಿ ಕನೆಕ್ಷನ್ ಡಿಸ್ ಕನೆಕ್ಷನ್ ಸ್ವಿಚ್‌ಗಳನ್ನು ಅಳವಡಿಸಿಕೊಳ್ಳಬಹುದು. ಇವುಗಳನ್ನು ಮೆಕ್ಯಾನಿಕ್ ಮೂಲಕ ಬೈಕಿನೊಳಗೆ ಅಳವಡಿಸಿಕೊಳ್ಳಬಹುದು.

Article Published On: Monday, April 5, 2021, 19:50 [IST]
English summary
Steps to protect bikes from theft. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+