ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಅತ್ಯವಶ್ಯಕ 10 ಸಲಹೆಗಳು
ಬೇಸಿಗೆ ಕಾಲದಲ್ಲಿ ಬೈಕ್ ಸವಾರಿ ಮಾಡುವವರು ಅತಿ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇಲ್ಲಿ ವಿಶೇಷಯಾಗಿಯೂ ದೀರ್ಘ ದೂರ ಪಯಣ ಹಮ್ಮಿಕೊಳ್ಳುವವರು ಕೆಲವೊಂದು ಸುರಕ್ಷಾ ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ.
Also Read: ಮೊಲದ ಬಾರಿಗೆ ಬೈಕ್ ಓಡಿಸುವುದು ಹೇಗೆ?
ನಾವಿಂದು ಹೇಳಿಕೊಡುವ ಅಂಶಗಳತ್ತ ಗಮನ ಕೊಟ್ಟರೆ ನಿಮ್ಮ ಸಂಚಾರವನ್ನು ಆನಂದದಾಯಕವಾಗಿಸಬಹುದಾಗಿದೆ. ಹಾಗಿದ್ದರೆ ನೀವೇನು ಮಾಡಬೇಕು? ಬನ್ನಿ ನೋಡೋಣ...

01. ಬೇಕಾದಷ್ಟು ಕುಡಿಯುವ ನೀರು
ಬೇಸಿಗೆ ಕಾಲದಲ್ಲಿ ಬಾಯಾರಿಕೆಯಾಗುವುದು ಸಹಜ. ಇನ್ನು ದೂರ ಪ್ರಯಾಣದ ವೇಳೆ ಬಾಟಲಿಯಲ್ಲಿ ಬೇಕಾದಷ್ಟು ನೀರನ್ನು ಕೊಂಡು ಹೋಗುವುದು ಉತ್ತಮ. ಬೈಕ್ ಸವಾರರಿಗಾಗಿ ವಿಶೇಷ ರೀತಿಯ ಹೈಡ್ರೋ ಬ್ಯಾಕ್ ಪ್ಯಾಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದನ್ನು ಧರಿಸಿದ್ದಲ್ಲಿ ಸುಲಭವಾಗ ನೀರಿನ ದಾಹ ನೀಗಿಸಬಹುದಾಗಿದೆ. ಅಲ್ಲದೆ ಪದೇ ಪದೇ ನೀರು ಕುಡಿಯಲು ಬೈಕ್ ನಿಲ್ಲಿಸಬೇಕಾದ ಅಗತ್ಯವಿರುವುದಿಲ್ಲ.

02. ಎಳನೀರು
ಎಳನೀರು ಅಮೃತಪಾನಕ್ಕೆ ಸಮಾನವಾಗಿದೆ. ಕೇವಲ ಬೇಸಿಗೆ ಮಾತ್ರವಲ್ಲದೆ ಯಾವ ಕಾಲಘಟ್ಟದಲ್ಲೂ ನಿಮ್ಮ ದೇಹವನ್ನು ತಂಪಾಗಿಸಿ ಚೈತನ್ಯ ತುಂಬುವಷ್ಟು ಶಕ್ತಿ ಇದಕ್ಕಿದೆ. ಹಾಗಾಗಿ ದೂರ ಪ್ರಯಾಣ ತೆರಳುವಾಗ ಹೈವೇ ಬದಿಗಳಲ್ಲಿ ಕಂಡುಬರುವ ಎಳನೀರು ಸ್ಟಾಲ್ ಗಳಲ್ಲಿ ಒಂದೆರಡು ನಿಮಷ ಬ್ರೇಕ್ ತೆಗೆದುಕೊಳ್ಳಲು ಮರೆಯದಿರಿ. ಇದು ನಿರಂತದ ಪಣಯದಲ್ಲಿ ಸುಸ್ತಾಗದಂತೆ ನೋಡಿಕೊಳ್ಳಲಿದೆ.

03. ಬಹು ಪದರುಗಳ ಬಟ್ಟೆ
ಬಹು ಪದರುಗಳ ಜಾಕೆಟ್ ಧರಿಸುವುದು ನಿಮಗೆ ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳಲು ಸಹಕಾರಿಯಾಗಲಿದೆ. ನೀವು ಸವಾರಿಯನ್ನು ಬೇಗನೇ ಆರಂಭಿಸುವುದಾದ್ದಲ್ಲಿ ಸಾಮಾನ್ಯವಾಗಿ ಬೆಳಗ್ಗಿನ ಜಾವದಲ್ಲಿ ತಂಪು ಜಾಸ್ತಿಯಾಗಿರುವುದರಿಂದ ಬಹು ಪದರಿನ ಜಾಕೆಟ್ ನೆರವಿಗೆ ಬರಲಿದೆ. ಇದನ್ನು ಸೂರ್ಯನ ತಾಪ ಏರಿದಂತೆ ಪದರನ್ನು ಒಂದೊಂದಾಗಿ ತೆಗೆಯಬಹುದು.

04. ಬೇಸಿಗೆ ಕಾಲದ ಜಾಕೆಟ್
ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸ ಬೇಸಿಗೆಯಲ್ಲಿ ಧರಿಸಬೇಕಾದ ಸುರಕ್ಷಿತ ಜಾಕೆಟ್ ಗಳ ಲಭ್ಯವಿರುತ್ತದೆ. ಇದು ಚೆನ್ನಾಗಿ ಗಾಳಿ ಒಳಕ್ಕೆ ಪ್ರವೇಶಿಸಲು ವೆಂಟ್ಸ್ ಗಳಿದ್ದು, ನಿಮ್ಮನ್ನು ತಂಪಾಗಿಸಲಿದೆ.

05. ಸಾಹಸ ಬೇಡ
ಯಾವುದೇ ಕಾರಣಕ್ಕೂ ದೂರ ಪ್ರಯಾಣದ ವೇಳೆ ಸಾಮಾನ್ಯ ಬಟ್ಟೆ ಧರಿಸಿ ಸಂಚಾರ ನಡೆಸುವುದು ಬೇಡ. ಅಲ್ಲದೆ ಬಿಸಿ ಗಾಳಿ ಹಾಗೂ ಶಾಖಾ ನೇರವಾಗಿ ಅಪ್ಪಳಿಸುವುದರಿಂದ ರಕ್ಷಣೆಯನ್ನು ನೀಡುತ್ತದೆ.

06. ಉರಿ ಬಿಸಿಲಿನಲ್ಲಿ ಪಯಣ ಬೇಡ
ಬೇಸಿಗೆಯಲ್ಲಿ ಬೆಳಗ್ಗಿನ ಜಾವ ಆದಷ್ಟು ಬೇಗ ಪ್ರಯಾಣ ಆರಂಭಿಸುವುದು ಹೆಚ್ಚು ಸೂಕ್ತ. ಅಲ್ಲದೆ ಮಧ್ಯಾಹ್ನದ ಹೊತ್ತಿನಲ್ಲಿ ಉರಿ ಬಿಸಿಲಿನಲ್ಲಿ (ಅಪರಾಹ್ನ 12ರಿಂದ 2 ಗಂಟೆಯ ವರೆಗೆ) ಸವಾರಿ ಮಾಡುವ ಸಾಹಸ ಬೇಡ. ಸಂಪೂರ್ಣ ದೈಹಿಕ ಸಾಮರ್ಥ್ಯ ಇರದ ಹೊರತು ಚಾಲನೆ ದುಸ್ಸಾಹಸಕ್ಕೆ ಮುಂದಾದ್ದಲ್ಲಿ ತಲೆ ಸುತ್ತುವ ಭೀತಿಯೂ ಕಾಡಬಹುದು.

07. ನಿರಂತರ ಅಂತರಾಳದಲ್ಲಿ ವಿಶ್ರಾಂತಿ
ನಿರಂತರ ಅಂತರಾಳದಲ್ಲಿ ವಿಶ್ರಾಂತಿ ಪಡೆಯಲು ಮರೆಯದಿರಿ. ಯಾವಾಗ ವಿಶ್ರಾಂತಿ ಅಗತ್ಯವಿದೆಯೋ ಎಂದು ಅನಿಸಿದಾಗ ಆದಷ್ಟು ಬೇಗ ವಿರಾಮ ಪಡೆಯಲು ಹಿಂಜಯದಿರಿ. ಕೇವಲ ವಾಹನ ಓಡಿಸುವವನ ಪಾಲಿಗೆ ಮಾತ್ರವಲ್ಲ. ದೀರ್ಘ ದೂರದ ಪಯಣದಲ್ಲಿ ವಾಹನ ಎಂಜಿನ್ ಗಳಿಗೂ ವಿರಾಮದ ಅಗತ್ಯವಿರುತ್ತದೆ.

08. ಫುಲ್ ಫೇಸ್ ಹೆಲ್ಮೆಟ್
ಬೈಕ್ ರೈಡಿಂಗ್ ನಲ್ಲಿ ಅತಿ ಮುಖ್ಯ ಘಟಕ ಹೆಲ್ಮೆಟ್ ಎಂಬುದು ನಿಮಗೆ ತಿಳಿದೇ ಇದೆ. ಹಾಗಂತ ಮಾರುಕಟ್ಟೆಯಲ್ಲಿ ದೊರಕುವ ಕಡಿಮೆ ಬೆಲೆಯ ಹೆಲ್ಮೆಟ್ ಗಳನ್ನ ಆಯ್ಕೆ ಮಾಡದಿರಿ. ಐಎಸ್‌ಐ ಮಾನ್ಯತಾ ಪಡೆದ ಅದರಲ್ಲೂ ತಲೆಗೆ ಸರಿಯಾಗಿ ಹೊಂದಿಕೆಯಾಗುವ ಫುಲ್ ಫೇಸ್ ಹೆಲ್ಮೆಟ್ ಧರಿಸುವುದು ಅತ್ಯಗತ್ಯ.

09. ಚಕ್ರಗಳನ್ನು ಪರಿಶೀಲಿಸಿ
ಆಗಲೇ ತುಂಬಾ ಸಮಯದಿಂದ ಬೈಕ್ ಸವಾರಿಯನ್ನು ಮಾಡುತ್ತಿದ್ದಲ್ಲಿ ಅದರ ಚಕ್ರಗಳನ್ನು ಪರಿಶೀಲಿಸಲು ಮರೆಯದಿರಿ. ನಮ್ಮ ದೇಹಕ್ಕೆ ಪ್ರತಿಯೊಂದು ಅವಯವಗಳ ಸರಿಯಾದ ಕಾರ್ಯ ನಿರ್ವಹಣೆ ಹೇಗೆ ಅಗತ್ಯವೋ ಅದೇ ರೀತಿ ಬೈಕ್ ಗಳಲ್ಲೂ ಚಕ್ರಗಳ ನಿರ್ವಹಣೆ ಅತಿ ಮುಖ್ಯವೆನಿಸುತ್ತದೆ.

10. ರಸ್ತೆ
ನಿಮಗೆ ಪರಿಚಯವಿಲ್ಲದ ರಸ್ತೆಯಲ್ಲಿ ತೆರಳುವಾಗ ವೇಗದಲ್ಲಿ ಸ್ವಲ್ಪ ಮಿತಿಯಿರಲಿ. ಕಡಿದಾದ ತಿರುವು ಅಥವಾ ಘಾಟಿ ರಸ್ತೆಯಲ್ಲಿ ಸ್ವಲ್ಪ ಎಚ್ಚರ ವಹಿಸುವುದು ಒಳಿತು. ಇನ್ನು ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ರಸ್ತೆಯ ಡಾಮರು ಕರಗುವ ಸಾಧ್ಯತೆಯಿರುತ್ತದೆ. ಈ ಬಗ್ಗೆಯೂ ಜಾಗರೂಕರಾಗಿರಿ. ಹ್ಯಾಪಿ ರೈಡಿಂಗ್!

ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

ದಿ ಗ್ರೇಟ್ ಹಿಮಾಲಯನ್ ರೈಡ್ 21 ಅಮೂಲ್ಯ ಟಿಪ್ಸ್
ದೈನಂದಿನ ಬೈಕ್ ಸವಾರರಿಗೆ 5 ಸೂತ್ರ ವಾಕ್ಯಗಳು


Click it and Unblock the Notifications








