ಎಸ್ಎಂಎಸ್ ಮಾಡಿದ 5 ಸಾವಿರ ಜನರ ದುರಂತ ಸಾವು
2009ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಇಂತಹ ಅಪಘಾತಗಳು ಟ್ರಕ್ ಮತ್ತು ಬೃಹತ್ ವಾಹನಗಳಲ್ಲಿ ಮಾತ್ರ ಹೆಚ್ಚಾಗಿತ್ತು. ಆದರೆ ಇತ್ತೀಚೆಗೆ ಹೆಚ್ಚಾಗಿ ಕಾರು ಇನ್ನಿತರ ಪ್ರಯಾಣಿಕ ವಾಹನಗಳಲ್ಲಿ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿ ಸಾವನ್ನಪ್ಪುವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ.
"ವಾಹನ ಚಾಲನೆ ಮಾಡುವಾಗ ಮೊಬೈಲ್ ಸಂದೇಶ ಕಳುಹಿಸಿದರೆ ರಸ್ತೆಯ ಮೇಲಿನ ನಿಗಾ ತಪ್ಪುತ್ತದೆ. ಒಂದೆರಡು ಸೆಕುಂಡುಗಳ ಇಂತಹ ಅಜಾಗರೂಕತೆಯಿಂದ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ" ಎಂದು ಜರ್ನಲ್ ಸಿಕ್ಯೂ ಸಂಶೋಧಕ ಯುವಿದ್ ಹೇಳುತ್ತಾರೆ.
ಅಂಕಿಅಂಶಗಳು ತಿಳಿಸುವ ಪ್ರಕಾರ ಪ್ರತಿದಿನ 4 ರಸ್ತೆ ಅಪಘಾತಗಳಲ್ಲಿ ಒಂದು ಅಪಘಾತವು ಮೊಬೈಲ್ ಫೋನ್ ಬಳಕೆಯಿಂದಾಗುತ್ತದೆ. ವಾಹನ ಚಲಾಯಿಸುವಾಗ ಮೊಬೈಲ್ ನತ್ತ ಮುಖ ಮಾಡಿ ರಸ್ತೆಯ ಮೇಲಿನ ಗಮನವನ್ನು ಒಂದು ಕ್ಷಣ ಕಳೆದುಕೊಂಡು ಭೀಕರ ಅಪಘಾತಗಳಿಗೆ ಈಡಾಗುತ್ತಾರೆ.
ಮೊಬೈಲ್ ಪೋನ್ ನಿಂದ ಆಗುವ ವಾಹನ ಅಪಘಾತಗಳನ್ನು ತಪ್ಪಿಸಲು ಕೆಲವು ಸಲಹೆಗಳು ಇಲ್ಲಿವೆ.
* ಕಾರನ್ನು ಸ್ಟಾರ್ಟ್ ಮಾಡುವ ಮುನ್ನ ಒಮ್ಮೆ ಮೊಬೈಲ್ ಫೋನ್ ನೋಡಿ. ಈ ಸಮಯಕ್ಕೆ ಯಾವುದೇ ನಿರೀಕ್ಷಿತ ಕರೆ ಬರಲಿದೆಯೇ? ಅಥವಾ ನೀವು ಕಳುಹಿಸಿದ ಸಂದೇಶಕ್ಕೆ ಮಾರುತ್ತರ ಬರಲಿದೆಯೇ ಅಂತ. ಹಾಗಿದ್ದಲ್ಲಿ ಆ ಕರೆ ಸ್ವೀಕರಿಸಿ ಅಥವಾ ಆ ಸಂದೇಶಕ್ಕೆ ಮಾರುತ್ತರ ಬರೆದು ನಂತರ ಕಾರು ಸ್ಟಾರ್ಟ್ ಮಾಡಿರಿ.
* ಡ್ರೈವಿಂಗ್ ಮಾಡುತ್ತಿರುವಾಗ ಕರೆ ಬಂದರೆ ವಾಹನ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಕರೆ ಸ್ವೀಕರಿಸಿ. ಚಾಲನೆ ಮಾಡುವಾಗ ಯಾರ ಕರೆ ಎಂದು ನೋಡಲೂ ಹೋಗದಿರಿ. ಅಪಘಾತ ನಡೆಯಲು ಕೆಲವೇ ಸೆಕೆಂಡ್ ಸಾಕು.
* ವಾಹನದಲ್ಲಿ ಮೊಬೈಲ್ ಸಾಧನವನ್ನು ಕೈಗೆಟುಕುವ ಸ್ಥಳದಲ್ಲಿ ಇಡಿ. ವಾಹನ ಸೈಡಿಗೆ ಹಾಕಿದ್ಮೇಲೆ ಮೊಬೈಲ್ ನೋಡಿ
* ವಾಹನ ಚಲಾಯಿಸುತ್ತಿರುವಾಗ ಮೊಬೈಲ್ ಸಂದೇಶಗಳನ್ನು ಓದಬೇಡಿ ಮತ್ತು ಬರೆಯಬೇಡಿ. ಅಷ್ಟು ಅಗತ್ಯವಿದ್ದರೆ ವಾಹನ ಬದಿಗೆ ನಿಲ್ಲಿಸಿ ಮೆಸೆಜ್ ಮಾಡಿ.
* ಎಲ್ಲಕ್ಕಿಂತ ಅತ್ಯುತ್ತಮ ಮಾರ್ಗವೆಂದರೆ ವಾಹನ ಚಲಾಯಿಸುವಾಗ ಮೊಬೈಲ್ ಸ್ವಿಚ್ ಆಫ್ ಮಾಡುವುದು.
ವಾಹನ ಚಾಲನೆ ಮಾಡುವಾಗ ಒಂದು ಕರೆ ಸ್ವೀಕರಿಸದೆ ಇದ್ದರೆ ನಿಮಗೆ ಕೋಟಿ ರುಪಾಯಿ ನಷ್ಟವಾದರೂ ಆಗಬಹುದು. ಆದರೆ ನಿಮ್ಮ ಪ್ರಾಣ ನಷ್ಟವಾಗಬಾರದು ಅಲ್ವ? ಹೀಗಾಗಿ ವಾಹನ ಚಾಲೂ ಇರುವಾಗ ಮೊಬೈಲ್ ಬಳಕೆ ಮಾಡದಿರಿ.


Click it and Unblock the Notifications









