ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಕೆಲಸಗಳಿವು..

ಕಳೆದ ಕೆಲವು ವರ್ಷಗಳಿಂದ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಕಾರುಗಳಲ್ಲಿ ಯಾವುದು ಅತ್ಯುತ್ತಮ ಎಂಬುದರ ಬಗ್ಗೆ ನಿರಂತರ ಚರ್ಚೆಗಳು ಜಾರಿಯಲ್ಲಿದೆ. ಈ ಸಂಬಂಧ ವಾಹನ ತಜ್ಞರು ತಾಂತ್ರಿಕ ಮಾಹಿತಿಗಳನ್ನು ಬಹಿರಂಗಪಡಿಸಿದರೆ ಗ್ರಾಹಕರು ತಮ್ಮ ಬಯಕೆಗಳಿಗೆ ಅನುಗುಣವಾಗಿ ಕಾರುಗಳನ್ನು ಆರಿಸುತ್ತಾರೆ.

ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಕೆಲಸಗಳಿವು..

ಆಟೋಮ್ಯಾಟಿಕ್ ಸುಲಭ ಚಾಲನೆಯನ್ನು ನೀಡುವುದಾದ್ದಲ್ಲಿ ಮ್ಯಾನುವಲ್ ಕಾರು ನೈಜ ಚಾಲನಾ ಇಷ್ಟಪಡುವವರಿಗೆ ಸೂಕ್ತವೆನಿಸಲಿದೆ. ಪ್ರಸ್ತುತ ಲೇಖನದಲ್ಲಿ ಮ್ಯಾನುವಲ್ ಕಾರನ್ನು ಓಡಿಸುವಾಗ ಚಾಲಕರು ಗಮನದಲ್ಲಿಟ್ಟುಕೊಳ್ಳಬೇಕಾದ ಅಥವಾ ಮಾಡಬಾರದ ಐದು ಪ್ರಮುಖ ಅಂಶಗಳ ಬಗ್ಗೆ ನಾವು ವಿವರವಾಗಿ ತಿಳಿಸಲಿದ್ದೇವೆ.

ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಕೆಲಸಗಳಿವು..

01. ಸ್ಟೀರಿಂಗ್ ಮೇಲೆ ಕೈಯಿರಲಿ

ಬಹುತೇಕ ಮಂದಿ ಅದರಲ್ಲೂ ಆಧುನಿಕ ಯುವ ಉತ್ಸಾಹಿ ಸವಾರರು ತಮ್ಮ ಬಲಗೈಯನ್ನು ಸ್ಟೀರಿಂಗ್ ವೀಲ್ ಮೇಲೂ, ಎಡಗೈಯನ್ನು ಗೇರ್ ನಾಬ್ ಮೇಲೆ ಇಟ್ಟುಕೊಂಡು ವಾಹನ ಚಾಲನೆ ಮಾಡುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿರುತ್ತಾರೆ. ಇದರಿಂದ ಕೈಗಳಿಗೆ ನಿರಾಳತೆ ಅನುಭವವಾದರೂ ಗೇರ್ ಬಾಕ್ಸ್ ಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಕೆಲಸಗಳಿವು..

ಹಾಗೊಂದು ವೇಳೆ ಗೇರ್ ನಾಬ್ ಮೇಲೆ ಒತ್ತಡದಿಂದ ಕೈಯಿಟ್ಟುಕೊಂಡಿದ್ದಲ್ಲಿ ನಿಮ್ಮ ತಿಳುವಳಿಕೆಯಿಲ್ಲದೆ ಗೇರ್ ಬದಲಾವಣೆಯಾಗುವ ಸಂಭವವಿದೆ. ಇದರಿಂದಾಗಿ ಕ್ರಮೇಣ ಗೇರ್ ಬಾಕ್ಸ್ ಗೆ ಪೆಟ್ಟಾಗುವ ಭೀತಿಯಿರುತ್ತದೆ. ಇದರಿಂದಾಗಿ ವಾಹನ ಚಾಲನೆ ವೇಳೆ '9 ರಿಂದ 3' ಗಡಿಯಾರದ ಮುಳ್ಳು ಸೂಚಿಸುವಂತೆ ಚಾಲನೆ ಅಭ್ಯಸಿಸಿಕೊಳ್ಳುವುದು ಉತ್ತಮ.

ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಕೆಲಸಗಳಿವು..

02. ಎಡಗಾಲು ಕ್ಲಚ್ ನಿಂದ ದೂರವಿರಲಿ

ಗೇರ್ ಬಳಕೆ ಮಾಡುವಾಗ ಮಾತ್ರ ಕ್ಲಚ್ ಅವಶ್ಯಕತೆಯಿದೆ ಎಂಬುದನ್ನು ಮರೆಯಬಾರದು. ಸಾಮಾನ್ಯವಾಗಿ ವಾಹನ ಚಾಲಕರು ಕ್ಲಚ್ ಪೆಡಲ್ ಮೇಲೆ ಕಾಲಿಟ್ಟುಕೊಂಡೇ ವಾಹನ ಚಾಲನೆ ಮಾಡುತ್ತಾರೆ. ಇದು ತಾವು ಮಾಡುತ್ತಿರುವ ಅತಿ ದೊಡ್ಡ ಎಡವಟ್ಟಾಗಿದ್ದು, ಯಾವತ್ತೂ ಇಂತಹ ಕೆಟ್ಟ ಅಭ್ಯಾಸಕ್ಕೆ ಮುಂದಾಗಬಾರದು. ಇದರಿಂದ ಕ್ಲಚ್ ಪೆಡಲ್ ಗೆ ಪೆಟ್ಟಾಗುವ ಭೀತಿಯಿದೆ. ಇದನ್ನು ತಪ್ಪಿಸಲು ಡೆಡ್ ಪೆಡಲ್ ಮೇಲೆ ಕಾಲಿರಿಸಬಹುದಾಗಿದೆ.

ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಕೆಲಸಗಳಿವು..

03. ಸಮಯೋಚಿತವಾಗಿ ಹ್ಯಾಂಡ್ ಬ್ರೇಕ್ ಬಳಕೆ

ಎತ್ತರದ ಪ್ರದೇಶಗಳಲ್ಲಿ ಕಾರು ಮೇಲ್ಮುಖವಾಗಿ ಪದೇ ಪದೇ ನಿಂತು ನಿಂತು ಸಂಚರಿಸುವಾಗ ವಾಹನ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಚಾಲಕರು ಕ್ಲಚ್ ಪೆಡಲನ್ನು ಅರ್ಧದಷ್ಟು ತುಳಿಯುತ್ತಾರೆ.

ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಕೆಲಸಗಳಿವು..

ಇದೇ ಸಂದರ್ಭದಲ್ಲಿ ಗಾಡಿ ಮುಂದಕ್ಕೆ ಚಲಿಸುವುದಕ್ಕಾಗಿ ಆಕ್ಸಿಲೇಟರ್ ಕೊಡುವ ಪ್ರಯತ್ನ ಮಾಡುತ್ತಾರೆ. ಹೀಗೆ ಮಾಡಿದ್ದಲ್ಲಿ ಕ್ಲಚ್ ಪ್ಲೇಟ್ ಗೆ ಹಾನಿಯುಂಟಾಗುವ ಸಂಭವವಿದೆ. ಇದರ ಬದಲು ಸಮಯೋಚಿತವಾಗಿ ಹ್ಯಾಂಡ್ ಬ್ರೇಕ್ ಬಳಕೆ ಮಾಡುವುದು ಉಚಿತ.

MOST READ:ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಕೆಲಸಗಳಿವು..

04. ಗೇರ್ ಬಳಕೆ

ಇಳಿಜಾರಿನಲ್ಲಿ ಸಂಚರಿಸುವಾಗ ಪೆಟ್ರೋಲ್ ಉಳಿತಾಯಕ್ಕಾಗಿ ವಾಹನ ನ್ಯೂಟ್ರಲ್ ನಲ್ಲಿಡುವುದು ಉತ್ತಮ ಎಂಬ ಭಾವನೆಯಿದೆ. ಆದರೆ ಇಂತಹ ಪ್ರವೃತ್ತಿ ತಪ್ಪಾಗಿದ್ದು, ಕೆಳಮಟ್ಟದ ಗೇರ್ ನಲ್ಲಿ ಇಳಿಮುಖವಾಗಿ ಸಂಚರಿಸುವುದು ಹೆಚ್ಚು ಸೂಕ್ತ.

ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಕೆಲಸಗಳಿವು..

05. ಆರ್ ಪಿಎಂ ಬಳಕೆ

ಇದು ಸ್ವಲ್ಪ ತಾಂತ್ರಿಕ ವಿಷಯವಾಗಿದ್ದು, ಮಾಲಿಕ ಮ್ಯಾನುವಲ್ ಬುಕ್ ನಲ್ಲಿ ಕೊಟ್ಟಿರುವಂತೆಯೇ ಆರ್ ಪಿಎಂ ಬಳಕೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಉತ್ತಮ. ಇದರಿಂದಾಗಿ ಹೆಚ್ಚು ಇಂಧನ ಕ್ಷಮತೆ ಪಡೆಯಲು ನೆರವಾಗಲಿದೆ. ಅಷ್ಟೇ ಅಲ್ಲದೆ ಎಂಜಿನ್ ಹೆಚ್ಚು ಬಾಳ್ವಿಕೆ ಬರಲಿದೆ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

Most Read Articles

Kannada
Read more on auto tips tips cars
English summary
Things not to do manual gear car.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more