ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ಪ್ರತಿಯೊಬ್ಬರಿಗೂ ಮಳೆಯಲ್ಲಿ ನೆನೆಯುತ್ತಾ ವಾಹನ ಚಾಲನೆ ಮಾಡುವುದು ಅಂದ್ರೆ ಒಂದು ಥರಾ ಖುಷಿ. ಆದರೂ ಮಳೆಗಾಲದಲ್ಲಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡುವುದೇ ತುಂಬಾ ಕಷ್ಟ. ಮಳೆ ಬಂತೆದಂರೆ ಸಾಕು ರಸ್ತೆಯೆಲ್ಲ ನೀರು, ಕೆಸರಾಗಿ ಮಾರ್ಪಡುತ್ತದೆ.

By Manoj B.k

ಪ್ರತಿಯೊಬ್ಬರಿಗೂ ಮಳೆಯಲ್ಲಿ ನೆನೆಯುತ್ತಾ ವಾಹನ ಚಾಲನೆ ಮಾಡುವುದು ಅಂದ್ರೆ ಒಂದು ಥರಾ ಖುಷಿ. ಆದರೂ ಮಳೆಗಾಲದಲ್ಲಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡುವುದೇ ತುಂಬಾ ಕಷ್ಟ. ಮಳೆ ಬಂತೆದಂರೆ ಸಾಕು ರಸ್ತೆಯೆಲ್ಲ ನೀರು, ಕೆಸರಾಗಿ ಮಾರ್ಪಡುತ್ತದೆ. ಅಷ್ಟಕ್ಕೂ ಮಳೆ ಬಂದ ಮೇಲೆ ಕಾರು ಸವಾರಿಯಂತೂ ಸಾಹಸ ಮಾಡಿದ್ದಂತೆ ಎಂಬುವುದನ್ನು ಮರೆಯುವಂತಿಲ್ಲ.

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ಅಂದ ಹಾಗೆ, ಮಳೆಗಾಲದಲ್ಲಿ ವಾಹನ ಸಂಚಾರ ಎಷ್ಟು ಆನಂದದಾಯಕವೋ ಅಷ್ಟೇ ಸವಾಲಿನಿಂದ ಕೂಡಿರುತ್ತದೆ. ಹಾಗಾಗಿ ನಿಮ್ಮ ಸುರಕ್ಷತೆಗಾಗಿ, ಮಳೆಗಾಲದಲ್ಲಿ ಡ್ರೈವಿಂಗ್ ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸಿದರೆ ಒಳಿತು. ಈ ಹಿನ್ನೆಲೆ ಮಳೆಗಾಲದಲ್ಲಿ ಸುರಕ್ಷಿತ ಚಾಲನೆಗಾಗಿ ಡ್ರೈವ್ ಸ್ಪಾರ್ಕ್ 10 ಸಲಹೆಗಳು ನೀಡುತ್ತಿದ್ದು, ಪ್ರತಿಯೊಬ್ಬರು ಈ ಸಲಹೆಗಳನ್ನು ತಪ್ಪದೇ ಪಾಲಿಸಿ ಆಗಬಹುದಾದ ಅನಾಹುತಗಳಿಗೆ ಬ್ರೇಕ್ ಹಾಕಿ.

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ಯಾವುದೇ ಸಮಯದಲ್ಲಾದರೂ ವಾಹನ ಚಾಲನೆಗೂ ಮುನ್ನ ಮುನ್ನೆಚ್ಚರಿಕೆ ವಹಿಸಲೇಬೇಕು. ಅದರಲ್ಲೂ ವಿಶೇಷವಾಗಿ ಮಳೆಗಾಲದಲ್ಲಿ ನೀವು ಸ್ವಲ್ಪನೇ ಅಚಾತುರ್ಯ ತೋರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಕಾರು, ಬೈಕು ಚಾಲನೆಗೂ ಮುನ್ನ ಕೆಲವೊಂದು ಸರಳ ಟಿಪ್ಸ್‌ಗಳನ್ನು ಅನುಸರಿಸಿದರೆ ನಿಮ್ಮ ಪ್ರಯಾಣ ಸುಖಕರವಾಗಿರುತ್ತದೆ.

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ನಿಧಾನವಾಗಿ ಚಲಿಸಿ...

ನಿಧಾನವೇ ಪ್ರಧಾನ ಎಂಬ ಗಾದೆ ಎಲ್ಲ ಕಾಲಕ್ಕೂ ಅನ್ವಯ. ಹೀಗಾಗಿ ಅವಸರವೇ ಅಘಾತಕ್ಕೆ ಕಾರಣ ಎಂಬ ವಾಹನ ವೇದ ವ್ಯಾಕವನ್ನು ಮರೆಯದಿರಿ.

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ಮುಂದಿರುವ ವಾಹನವನ್ನು ಹಿಂಬಾಲಿಸಿ

ಜೋರಾಗಿ ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಮುಂದಿರುವ ವಾಹನವನ್ನು ಓವರ್ ಟೇಕ್ ಮಾಡುವ ಗೋಜಿಗೆ ಹೋಗದಿರಿ. ಅಲ್ಲದೆ ಮುಂದಿನ ವಾಹನದೊಂದಿಗೆ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳಿ. ಇದರಿಂದ ಬ್ರೇಕ್ ಒತ್ತುವಷ್ಟು ಸದಾವಕಾಶ ನಿಮಗೆ ದೊರಕಲಿದೆ.

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ಮಳೆಗಾಲದಲ್ಲಿ ಕಾರು ಚಾಲನೆ

ಮಳೆಗಾಲದಲ್ಲಿ ಡ್ರೈವಿಂಗ್ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿಯೂ ರಾತ್ರಿ ವೇಳೆ ಕಾರು ಚಲಾಯಿಸುತ್ತಿರುವಾಗ ಬಹುತೇಕ ಮಾರ್ಗ ಮಧ್ಯೆ ಸಂಚರಿಸುತ್ತಿರುವುದಾಗಿ ಖಾತ್ರಿಪಡಿಸಿ. ಇದರರ್ಥ ಲೇನ್ ನಿಯಮ ಉಲ್ಲಂಘಿಸಬೇಕೇಂದಲ್ಲ. ಬದಲಾಗಿ ಬದಿಗೆ ಸರಿಯುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ಕ್ರೂಸ್ ಕಂಟ್ರೋಲ್

ಇಂದಿನ ಎಲ್ಲ ಆಧುನಿಕ ಕಾರುಗಳಲ್ಲಿ ಕ್ರೂಸ್ ಕಂಟ್ರೋಲ್‌ಗಳಿರುತ್ತದೆ. ಆದರೆ ಮಳೆಗಾಲದಲ್ಲಿ ಇದರ ಬಳಕೆ ಸೂಕ್ತವಲ್ಲ. ಯಾಕೆಂದರೆ ಸಡನ್ ಬ್ರೇಕ್ ಹಾಕಿದ ಸಂದರ್ಭದಲ್ಲಿ ಕಾರು ಸ್ಕಿಡ್ ಆಗುವ ಸಂಭವವಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ಬ್ರೇಕ್ ಪರೀಕ್ಷೆ

ಇನ್ನು ಮಳೆಗಾಲ ಆರಂಭಕ್ಕೂ ಮುನ್ನ ಹಾಗೆಯೇ ಮಳೆಗಾಲ ಸಂದರ್ಭದಲ್ಲಿ ಬ್ರೇಕ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಆಗಾಗ ಪರೀಕ್ಷೆ ಮಾಡಿಸಿಕೊಳ್ಳಲು ಮರೆಯದಿರಿ. ನಿಧಾನವಾಗಿಯೇ ಬ್ರೇಕ್‌ಗಳನ್ನು ಹಾಕಿ. ಯಾಕೆಂದರೆ ರಸ್ತೆಗಳಲ್ಲಿ ತುಂಬಾ ನೀರು ತುಂಬಿಕೊಂಡಿರುವಾಗ ಬ್ರೇಕ್ ರಬ್ಬರ್‌ಗಳು ಒದ್ದೆಯಾಗುತ್ತದೆ. ಇದೂ ಬ್ರೇಕ್ ಮೇಲೆ ಪರಿಣಾಮ ಬೀರಲಿದ್ದು, ನಿಮ್ಮ ನಿಯಂತ್ರಣಕ್ಕೆ ಬರಲಿದೆ ಎಂಬುದರಲ್ಲಿ ಯಾವುದೇ ಗ್ಯಾರಂಟಿ ಇಲ್ಲ.

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ರಾತ್ರಿ ಪಯಣ ಬೇಡ

ಈ ಮೊದಲೇ ತಿಳಿಸಿರುವಂತೆಯೇ ರಾತ್ರಿ ಅವಧಿಯಲ್ಲಿ ಬೈಕ್ ಅಥವಾ ಕಾರಿನಲ್ಲಿನ ಪ್ರಯಾಣವನ್ನು ಸಾಧ್ಯವಾದಷ್ಟು ತಡೆಗಟ್ಟಿರಿ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ಗೌರವ ನೀಡಿ ಗೌರವ ಗಳಿಸಿ

ಇತರ ಹಗುರ ಹಾಗೂ ಘನ ವಾಹನಗಳಿಗೆ ಗೌರವ ನೀಡುತ್ತಾ ಡ್ರೈವಿಂಗ್ ಮುಂದುವರಿಯಿರಿ. ಇದರಿಂದ ಸಾಧ್ಯವಾದಷ್ಟು ಅಪಾಯವನ್ನು ದೂರವಿರಿಸಬಹುದು.

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ಕೆಸರು ರಸ್ತೆಯಲ್ಲಿ ಪಯಣ ಬೇಡ

ಗ್ರಾಮೀಣ ಪ್ರದೇಶದಲ್ಲಿ ಕೆಸರಿನಿಂದ ಆವೃತ್ತವಾದ ಆಫ್ ರೋಡ್‌ಗಳು ಹೆಚ್ಚಾಗಿ ಕಾಣಸಿಗುತ್ತದೆ. ಇಂತಹ ಪಯಣವನ್ನು ಸಾಧ್ಯವಾದಷ್ಟು ತಪ್ಪಿಸಿದರೆ ಒಳಿತು.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ವೈಪರ್, ಚಕ್ರ ಪರೀಕ್ಷೆ

ಮಳೆಗಾಲದಲ್ಲಿ ಡ್ರೈವಿಂಗ್ ಮಾಡುವ ಮುನ್ನ ವೈಪರ್ ಸಮರ್ಪಕವಾಗಿದೆಯೇ ಪರಿಶೀಲಿಸಿರಿ. ಹಾಗೆಯೇ ಟೈರ್‌ಗಳು ಸರಿಯಾದ ಟ್ರೆಡ್ ಡೆಪ್ತ್ ಹೊಂದಿದೆಯಾ ಎಂಬುವುದನ್ನು ಪರೀಕ್ಷಿಸಿ..

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ಈಗ ನಿಮ್ಮ ಅಮೂಲ್ಯ ಸಲಹೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

ಹ್ಯಾಪಿ ಜರ್ನಿ..

More from DriveSpark

Article Published On: Tuesday, June 26, 2018, 11:59 [IST]
English summary
Things that you dont do while driving in flooded road. Read in Kannada.
Read more on auto tips driving tips
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+