ಹೆಣ್ಮಕ್ಕಳಿಗಾಗಿ, ಡ್ರೈವಿಂಗ್ ಸಂದರ್ಭದಲ್ಲಿ ಕೇಶ ರಕ್ಷಣೆ!

By Nagaraja

ದ್ವಿಚಕ್ರ ವಾಹನ ಸವಾರಿ ವೇಳೆ ಹೆಲ್ಮೆಟ್ ಧರಿಸುವುದು ಕಡ್ಡಾಯ. ಆದರೆ ಹೆಲ್ಮೆಟ್ ಧರಿಸುವುದರಿಂದ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತದೆ ಎನ್ನಲಾಗಿದೆ. ನಮ್ಮ ಯುವ ಸಮೂಹದಲ್ಲಿ ಅನೇಕರಿಗೆ ಶಿರಸ್ತ್ರಾಣ ಧರಿಸುವುದೆಂದರೆ ಕಿರಿಕಿರಿ. ಮನರಂಜನೆಗಾಗಿ ಹೊರಗಡೆ ಸುತ್ತಾಟಕ್ಕೆಂದು ಹೊರಟವರು ಬೈಕ್ ಒಂದೆಡೆ ನಿಲ್ಲಿಸಿದರೆ ಹೆಲ್ಮೆಟ್ ಕೈಯಲ್ಲೇ ಹಿಡಿಯಬೇಕೆಂಬುದು ಇನ್ನೊಂದು ಬೇಸರ.

ಏನೇ ಆಗಿದ್ದರೂ ಪ್ರಾಣ ರಕ್ಷಣೆಗೆ ಹೆಲ್ಮೆಟ್ ಕಡ್ಡಾಯ ಎಂಬುದನ್ನು ಮರೆಯದಿರಿ. ಇನ್ನು ದ್ವಿಚಕ್ರ ಸವಾರಿ ವೇಳೆ ಹೆಣ್ಮಕ್ಕಳು ಸಹ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ವೈಜ್ಞಾನಿಕವಾಗಿ ಹೆಲ್ಮೆಟ್ ಧರಿಸುವುದಕ್ಕೂ ಕೂದಲುದುರುವಿಕೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಕಂಡುಬಂದಿದ್ದರೂ ಶಿರಸ್ತ್ರಾಣ ಧರಿಸುವ ಸರಿಯಾದ ಪ್ರವೃತ್ತಿ ಅನುಸರಿಸದಿದ್ದರೆ ಕೂದಲುದುರುವಿಕೆಗೆ ಕಾರಣವಾಗಬಹುದು ಎಂಬುದು ಸಹ ಅಷ್ಟೇ ಸತ್ಯ.

ಹೆಣ್ಣಿನ ಪ್ರತಿಯೊಂದು ಅಂಗಾಂಗದಲ್ಲೂ ಪುರುಷರನ್ನು ಆಕರ್ಷಿಸುವ ಶಕ್ತಿಯಿರುತ್ತದೆ. ಅಲ್ಲದೆ ಹೆಣ್ಣಿನ ಸೌಂದರ್ಯದಲ್ಲಿ ಕೇಶವೂ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಸರಿಯಾದ ರೀತಿಯಲ್ಲಿ ಹೆಲ್ಮೆಟ್ ಧರಿಸುವ ಮೂಲಕ ಕೂದಲಿನ ಸೌಂದರ್ಯ ಕಾಪಾಡುವುದು ಅಷ್ಟೇ ಮುಖ್ಯ.

ಹೆಣ್ಮಕ್ಕಳಿಗಾಗಿ, ಡ್ರೈವಿಂಗ್ ಸಂದರ್ಭದಲ್ಲಿ ಕೇಶ ರಕ್ಷಣೆ!

ಇಂದಿನ ಈ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬನೆಯ ಜೀವನ ನಡೆಸುತ್ತಿದ್ದಾರೆ. ಹಾಗಿರುವಾಗ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವಷ್ಟೇ ಸಮಯ ಕಂಡುಕೊಳ್ಳುವುದು ಕಷ್ಟಕರ. ಹಾಗಿದ್ದರೂ ನಾವಿಲ್ಲಿ ಸೂಚಿಸುವ ಕೆಲವೊಂದು ಪದ್ಧತಿಗಳನ್ನು ಅನುಸರಿಸಿದ್ದಲ್ಲಿ ಹೆಲ್ಮೆಟ್‌ನಿಂದಾಗಿ ಕೂದಲುದುರುವಿಕೆ ಪ್ರಸಂಗವನ್ನು ತಡೆಗಟ್ಟಬಹುದು.

ಗಾಳಿಯನ್ನು ತಡೆಯುತ್ತದೆ

ಗಾಳಿಯನ್ನು ತಡೆಯುತ್ತದೆ

ಯುವ ಸಮೂಹಕ್ಕೆ ಹೆಲ್ಮೆಟ್ ಹೆಸರು ಕೇಳಿದಾಗಲೇ ಮನಸ್ಸಿಗೆ ಕಿರಿಕಿರಿಯುಂಟಾಗುತ್ತದೆ. ಅಂತವರಿಗೆ ಹೆಲ್ಮೆಟ್ ಧರಿಸಿದರೆ ಕೂದಲುದುರುವ ಸಂಭವ ಹೆಚ್ಚೆಂಬ ಮಾನಸಿಕ ಭಯ ಕಾಡುತ್ತಿರುತ್ತದೆ. ಹೆಲ್ಮೆಟ್ ಕೇವಲ ಪ್ರಾಣ ರಕ್ಷಕ ಮಾತ್ರ ಅಂದುಕೊಂಡಿದ್ದರೆ ತಪ್ಪಾದಿತ್ತು. ಯಾಕೆಂದರೆ ಇದು ನಿಮ್ಮ ಸವಾರಿ ವೇಳೆ ಜೋರಾಗಿ ಬೀಸುವ ಗಾಳಿಯು ನಿಮ್ಮ ಕೂದಲಿಗೆ ಬಡಿಯದಂತೆ ತಡೆಯುತ್ತದೆ.

ಗುಣಮಟ್ಟದ ಹೆಲ್ಮೆಟ್ ಧರಿಸಿ

ಗುಣಮಟ್ಟದ ಹೆಲ್ಮೆಟ್ ಧರಿಸಿ

ಮಾರುಕಟ್ಟೆಯಲ್ಲಿ ಅನೇಕ ವಿಧದ ವರ್ಣ ವರ್ಣೀಯ ಹೆಲ್ಮೆಟ್‌ಗಳು ಲಭ್ಯವಿರುತ್ತದೆ. ಹಾಗಾಗಿ ಕಡಿಮೆ ವೆಚ್ಚದ ಹೆಲ್ಮೆಟ್‌ಗೆ ಮೊರೆ ಹೋಗದೆ ಸ್ವಲ್ಪ ಖರ್ಚಾದರೂ ಪರವಾಗಿಲ್ಲ ಗುಣಮಟ್ಟದ ಹೆಲ್ಮೆಟ್ ಧರಿಸಲು ಪ್ರಯತ್ನಿಸಿ...

ನಿರಂತರ ಅಂತರಾಳದಲ್ಲಿ ಸ್ವಚ್ಛತೆ ಕಾಪಾಡಿ

ನಿರಂತರ ಅಂತರಾಳದಲ್ಲಿ ಸ್ವಚ್ಛತೆ ಕಾಪಾಡಿ

ಹಾಗೆಯೇ ನಿಮ್ಮ ಪಯಣದ ಬಳಿಕ ನಿರಂತರ ಅಂತರಾಳದಲ್ಲಿ ಶಿರಸ್ತ್ರಾಣದ ಸ್ವಚ್ಛತೆ ಕಾಪಾಡುವುದು ಅಷ್ಟೇ ಮುಖ್ಯ. ಹೆಲ್ಮೆಟ್ ಒಳಗೆ ಗಾಳಿ ಪ್ರವೇಶಿಸಲು ಸಾಧ್ಯವಾಗದೆ ಬೆವರು ತುಂಬಿಕೊಳ್ಳುವ ಸಾಧ್ಯತೆಯಿದೆ. ಇದು ಕೂದಲನ್ನು ನಿಶ್ಯಕ್ತಿಗೊಳಿಸುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಹೆಲ್ಮೆಟ್ ಸ್ವಚ್ಛತೆಗೆ ಆದ್ಯತೆ ಕೊಡಿ.

ಉದ್ದವಾದ ಕೂದಲನ್ನು ಬಾಚಲು ಮರೆಯದಿರಿ...

ಉದ್ದವಾದ ಕೂದಲನ್ನು ಬಾಚಲು ಮರೆಯದಿರಿ...

ಕೂದಲು ಚೆನ್ನಾಗಿ ಕಾಣಿಸಬೇಕಾದ್ದಲ್ಲಿ ಬಾಚುವ ಕಲೆಯನ್ನು ಕರಗತಮಾಡಿಕೊಳ್ಳಬೇಕು. ಹೆಲ್ಮೆಟ್ ವಿಚಾರದಲ್ಲೂ ಇದು ಅನ್ವಯಿಸುತ್ತದೆ. ಉದ್ದವಾದ ಕೂದಲಿಗೆ ಹೇರ್ ಒಯಿಲ್ ಹಚ್ಚಿ ಹಾಗೆಯೇ ಬಿಟ್ಟುಬಿಡುವುದರಿಂದ ಸವಾರಿ ಸಂದರ್ಭದಲ್ಲಿ ಧೂಳಿನ ಕಣಗಳು ಆವರಿಸುವ ಸಾಧ್ಯತೆಯಿದೆ. ಇದರಿಂದ ನಿಮ್ಮ ಕೂದಲು ಆಕರ್ಷಣೆಯನ್ನು ಕಳೆದುಕೊಳ್ಳಲಿದೆ.

ಸ್ಕಾರ್ಫ್ ಪ್ರಯೋಗ

ಸ್ಕಾರ್ಫ್ ಪ್ರಯೋಗ

ಅದೇ ರೀತಿ ತಲೆಗೆ ಸ್ಕಾರ್ಫ್ ಹಾಗೂ ಕರವಸ್ತ್ರಗಳನ್ನು ಆಳವಡಿಸುವ ಮೂಲಕವೂ ಪಯಣದ ವೇಳೆ ಕೂದಲನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಬಹುದು. ಇದು ನಿಮ್ಮ ಅಂದತೆಯನ್ನು ಹೆಚ್ಚಿಸಲಿದೆ.

ಬಾಚಣಿಗೆ ಜತೆಗಿರಲಿ...

ಬಾಚಣಿಗೆ ಜತೆಗಿರಲಿ...

ಈ ಬಗ್ಗೆ ಪ್ರತ್ಯೇಕವಾಗಿ ಉಲ್ಲೇಖಿಸುವ ಅಗತ್ಯವಿಲ್ಲ. ಯಾಕೆಂದರೆ ಮಹಿಳೆಯರು ಸಾಮಾನ್ಯವಾಗಿ ತಮ್ಮ ಜತೆ ಮೆಕಪ್ ಬಾಕ್ಸ್ ಕೊಂಡೊಯ್ಯುತ್ತಾರೆ. ಹಾಗಾಗಿ ಸವಾರಿ ಬಳಿಕ ಕೂದಲನ್ನು ನಯವಾಗಿ ಬಾಚಲು ಮರೆಯದಿರಿ. ಇದರಿಂದ ಧೂಳಿಕ ಕಣ ಅಂಟಿಕೊಂಡಿದ್ದರೆ ನಿವಾರಿಸಬಹುದು.

ಕಡಿಮೆ ತೂಕದ ಹೆಲ್ಮೆಟ್

ಕಡಿಮೆ ತೂಕದ ಹೆಲ್ಮೆಟ್

ಇನ್ನು ಕಡಿಮೆ ತೂಕದ ಹೆಲ್ಮೆಟ್ ಧರಿಸಿದರೆ ನಿಮ್ಮ ಪ್ರಯಾಣವು ಆರಾಮದಾಯಕವಾಗಿರಲಿದೆ. ಇದು ನಿಮಗುಂಟಾಗುವ ಕಿರಿಕಿರಿಯನ್ನು ತಪ್ಪಿಸಲಿದೆ.

ಹೆಣ್ಮಕ್ಕಳಿಗಾಗಿ, ಡ್ರೈವಿಂಗ್ ಸಂದರ್ಭದಲ್ಲಿ ಕೇಶ ರಕ್ಷಣೆ!

ಒಟ್ಟಿನಲ್ಲಿ ಕೂದಲುದರುವಿಕೆಗೆ ಹೆಲ್ಮೆಟ್ ಪರೋಕ್ಷ ಕಾರಣವಾಗಿದ್ದರೂ ಜೀವರಕ್ಷಣೆಗೆ ಅತಿಮುಖ್ಯ ಎಂಬುದನ್ನು ಮರೆಯದಿರಿ. ಮೇಲೆ ಹೇಳಿದ ಎಲ್ಲ ಸಲಹೆಗಳನ್ನು ಪಾಲಿಸುವ ಮೂಲಕ ಪಯಣ ಸಂದರ್ಭದಲ್ಲೂ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Most Read Articles

Kannada
English summary
Girls generally are so passionate about taking care of their crowning glory-hair, especially those who own a scooter or a bike loathe to wear a helmet, as they feel the head saver could damage their hair drastically. Following are few tips to protect your hair while riding.
Story first published: Wednesday, October 9, 2013, 10:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X