ಕಾರು ಓಡಿಸುವಲ್ಲಿ ಎಷ್ಟೇ ಪಂಟರಾಗಿರಲಿ ಈ 'ಡಿ' ಬಗ್ಗೆ ಮಾತ್ರ ತಿಳಿದಿರೋದಿಲ್ಲ... ಅಷ್ಟೊಂದು ವಿಷಯವಿದೆಯೇ?

ದೇಶದಲ್ಲಿ ಪ್ರತಿಯೊಬ್ಬರಿಗೂ ಕಾರು ಓಡಿಸುವ ಕನಸು, ಹಲವರು ಡ್ರೈವಿಂಗ್‌ನಲ್ಲಿ ಪಂಟರಾಗಿರುತ್ತಾರೆ. ಇವರೆಲ್ಲರೂ ಕಾರು ಓಡಿಸುವುದನ್ನು ಕಲಿಯುವಾಗ ಎಬಿಸಿ ನಿಯಮವನ್ನು ಕಲಿತಿರುತ್ತಾರೆ. ಆದ್ರೆ ಈ 'ಡಿ' ಬಗ್ಗೆ ಮಾತ್ರ ಬಹುತೇಕರಿಗೆ ತಿಳಿದಿರೋದಿಲ್ಲ. ಈ 'ಡಿ' ಎಂದರೇನು, ಉಪಯೋಗವೇನು ಎಂಬುದನ್ನು ಇಲ್ಲಿ ತಿಳಿಯೋಣ.

15-20 ವರ್ಷಗಳ ಹಿಂದೆ ಕಾರು ಎಂದರೇ ಅದು ಶ್ರೀಮಂತರಿಗೆ ಮಾತ್ರ ಎಂಬಂತೆ ಇತ್ತು. ಆದ್ರೆ ಈಗ ಕಾಲ ಬದಲಾಗಿದೆ, ತಯಾರಕರು ಕೈಗೆಟುಕುವ ಬೆಲೆಗೆ ಕಾರುಗಳನ್ನು ಪರಿಚಯಿಸುತ್ತಿರುವುದರಿಂದ ಪ್ರತಿಯೊಂದು ಕುಟುಂಬವು ಕಾರನ್ನು ಖರೀದಿಸುವ ಶಕ್ತಿಯಿದೆ. ಕಳೆದ 10 ವರ್ಷಗಳಲ್ಲಿ ಭಾರತೀಯ ಆಟೋ ಉದ್ಯಮ ದೈತ್ಯ ಮರವಾಗಿ ಬೆಳೆದು ನಿಂತಿದೆ.

know about this D

ಪ್ರತಿಯೊಬ್ಬರು ಕಾರು ಓಡಿಸುತ್ತಿದ್ದಾರೆ, ಇವರೆಲ್ಲರೂ ಎಬಿಸಿ ನಂತರ ಡಿ ಎಂಬ ನಿಯಮವೂ ಇದೆಯೆಂಬುದನ್ನು ಮರೆತಿದ್ದಾರೆ. ಇದರ ಬಳಕೆ ಕಡಿಮೆ ಎಂಬ ಕಾರಣಕ್ಕೆ ಅನೇಕರು ಇದರ ಬಗ್ಗೆ ಹೇಳುವುದಿಲ್ಲ. ಆದರೆ ಇದನ್ನು ತಿಳಿದುಕೊಂಡರೆ ದೂರದ ಪ್ರಯಾಣ ಮಾಡುವವರಿಗೆ ಹೆಚ್ಚಿನ ಸಹಾಯವಾಗುತ್ತದೆ. ಮೊದಲಿಗೆ ತಿಳಿಯದವರಿಗೆ ಎಬಿಸಿ ಎಂಬುದರ ಬಗ್ಗೆ ತಿಳಿಸೋಣ. ಎಬಿಸಿ ಎಂದರೆ ಆಕ್ಸಿಲರೇಟರ್, ಬ್ರೇಕ್, ಕ್ಲಚ್ ಎಂದು ಅರ್ಥ.

ಕಾರು ಮುನ್ನಡೆಯಲು ಆಕ್ಸಿಲೇಟರ್, ಕಾರನ್ನು ನಿಲ್ಲಿಸಲು ಬ್ರೇಕ್, ಗೇರ್ ಬದಲಾಯಿಸಲು ಕ್ಲಚ್ ಅನ್ನು ಬಳಸಲಾಗುತ್ತದೆ. ಈ AB ಗಳನ್ನು ನಾವು ನಮ್ಮ ಬಲಗಾಲಿನಿಂದ ನಿರ್ವಹಿಸಬಹುದು. ಹಾಗೆಯೇ ಎಡ ಪಾದವು ಕ್ಲಚ್ (ಸಿ) ಅನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. D ಎಂಬುದು ಡೆಡ್ ಪೆಡಲ್ ಎಂದು ಕರೆಯಲ್ಪಡುವ ಸಾಧನವಾಗಿದ್ದು, ಕ್ಲಚ್ ಪೆಡಲ್ ಬಳಿ ಇರುತ್ತದೆ.

know about this D

ಸಾಮಾನ್ಯವಾಗಿ ಚಾಲನೆ ಮಾಡುವಾಗ ಬಲಗಾಲು ಹೆಚ್ಚಿನ ಕೆಲಸವನ್ನು ಮಾಡುತ್ತದೆ. ಅಂದರೆ ಬಲಗಾಲು ಆಕ್ಸಿಲೇಟರ್ ಮತ್ತು ಬ್ರೇಕ್ ಎರಡನ್ನೂ ನಿಭಾಯಿಸುವುದರಿಂದ, ಎಡ ಪಾದವು ಕಡಿಮೆ ಕೆಲಸವನ್ನು ಹೊಂದಿರುತ್ತದೆ. ನಗರದ ಟ್ರಾಫಿಕ್‌ನಲ್ಲಿ ಪ್ರಯಾಣಿಸುವಾಗ ಮಾತ್ರ ಎಡಗಾಲಿಗೆ ತುಸು ಹೆಚ್ಚು ಕೆಲಸವಿರುತ್ತದೆ. ದೂರದ ಪ್ರಯಾಣ ಮಾಡುವಾಗ ಎಡಗಾಲನ್ನು ಹೆಚ್ಚು ಬಳಸುವ ಅಗತ್ಯವಿಲ್ಲ.

ಟಾಪ್ ಗೇರ್‌ಗೆ ಹೋದರೆ ಎಡಗಾಲು ವಿಶ್ರಾಂತಿ ಪಡೆಯುತ್ತದೆ. ಆದರೆ ಅನೇಕರು ಆ ಕಾಲನ್ನು ಕ್ಲಚ್ ಮೇಲೆಯೇ ಇಟ್ಟು ಓಡಿಸುತ್ತಾರೆ. ಅವಶ್ಯಕತೆ ಇಲ್ಲದಿದ್ದರೂ ಕ್ಲಚ್ ಮೇಲೆ ಕಾಲನ್ನಿಟ್ಟು ಓಡಿಸುವುದು ಕೆಟ್ಟ ಅಭ್ಯಾಸ. ಇದು ವಾಹನದ ಪರ್ಫಾಮೆನ್ಸ್ ಅನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಕೆಲವು ಕಾರುಗಳು ಕ್ಲಚ್ ಬಳಿ ಡೆಡ್ ಪೆಡಲ್ ಅನ್ನು ಹೊಂದಿರುತ್ತವೆ.

know about this D

ಕ್ಲಚ್ ಬಳಕೆಯಲ್ಲಿಲ್ಲದಿದ್ದಾಗ, ಕಾಲನ್ನು ಅದರ ಮೇಲಿಟ್ಟು ವಿಶ್ರಾಂತಿ ಪಡೆಯಬಹುದು. ಇದು ವಾಹನಕ್ಕಾಗಲಿ ಪ್ರಯಾಣಕ್ಕಾಗಲಿ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಕಾಲಿಗೆ ಒಂದು ಆಸರೆ ಎಂದು ಹೇಳಬಹುದು. ಇದು ಅನೇಕರಿಗೆ ತಿಳಿದೇ ಇಲ್ಲ. ಕೆಲವರು ಇದನ್ನು ಪ್ಲಾಸ್ಟಿಕ್ ಭಾಗ ಎಂದು ಭಾವಿಸುತ್ತಾರೆ. ಹಾಗಾಗಿ ನೀವು ಈ ರೀತಿಯ ಕಾರಿನಲ್ಲಿ ದೂರದ ಪ್ರಯಾಣ ಮಾಡುತ್ತಿದ್ದರೆ, ಈ ಡೆತ್ ಪೆಡಲ್ ಬಳಸಿ.

ಮೇಲೆ ತಿಳಿಸಿದಂತೆ ಕ್ಲಚ್ ಅನ್ನು ಅನಾವಶ್ಯಕವಾಗಿ ಬಳಸುವುದು ನಿಮ್ಮ ಕಾರಿಗೆ ಒಳ್ಳೆಯದಲ್ಲ ಎಂಬುದನ್ನು ನೆನಪಿನಲ್ಲಿಡಿ. ಈ ಡೆತ್ ಪೆಡಲ್ ಬಗ್ಗೆ ಈಗಾಗಲೇ ತಿಳಿದಿರುವವರು ತಿಳಿಯದವರಿಗೆ ತಿಳಿಸಿ. ಒಂದು ವೇಳೆ ಈ ಲೇಖನದಲ್ಲಿ ಡಿ ಬಗ್ಗೆ ತಿಳಿದವರು ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಮಾಹಿತಿ ಇಷ್ಟವಾದಲ್ಲಿ ಲೈಕ್ ಹಾಗೂ ಶೇರ್ ಮಾಡಿ.

More from DriveSpark

Article Published On: Tuesday, May 9, 2023, 17:30 [IST]
English summary
What is dead pedal what are its uses
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+