ನಿಮ್ಮ ಕಾರಲ್ಲಿರುವ 'ಬ್ಲೈಂಡ್ ಸ್ಪಾಟ್' ಕನ್ನಡಿಗಳು ಅಸುರಕ್ಷಿತ ಏಕೆ?

Written By:

ಸಾಮಾನ್ಯವಾಗಿ ಬ್ಲೈಂಡ್ ಸ್ಪಾಟ್ ಕನ್ನಡಿಗಳನ್ನು 'ಕನ್ವೆಕ್ಸ್ ಮಿರರ್' ಅಥವಾ 'ಫಿಶ್ ಐ' ಗಳೆಂದು ಸಂಭೋದಿಸಲಾಗುತ್ತದೆ. ಕಾರಿನ ಹೊರಗಿನ ಕನ್ನಡಿಯೊಳಗೆ ಆಳವಡಿಸಲಾಗುವ ಇಂತಹ ಕನ್ವೆಕ್ಸ್ ಮಿರರ್ ಗಳು ಚಾಲನೆ ವೇಳೆ ಸಂಕುಚಿತ ನೋಟವನ್ನು ಪ್ರದಾನ ಮಾಡಲಿದ್ದು, ಹಿಂಬದಿಯ ವಿಶಾಲವಾದ ಪ್ರದೇಶವು ಕನ್ನಡಿಯಲ್ಲಿ ಚೊಕ್ಕದಾಗಿ ಗೋಚರಿಸಲಿದೆ.

Also Read : ಕಾರಿಗೆ ಸಡನ್ ಬೆಂಕಿಗೆ 10 ಕಾರಣಗಳು

ಇದರ ಪರಿಣಾಮ ಬ್ಲೈಂಡ್ ಸ್ಪಾಟ್ ಸಾಧ್ಯತೆಯನ್ನು ಕಡಿಮೆಯಾಗಲಿದ್ದು, ಮತ್ತಷ್ಟು ದೂರದ ಪ್ರದೇಶಕ್ಕೆ ಗೋಚರತೆಯು ಲಭ್ಯವಾಗಲಿದೆ. ಹೊರಗಿನ ರಿಯರ್ ವ್ಯೂ ಮಿರರ್ ನಲ್ಲಿ ಆಳವಡಿಸಲಾಗುವ ಕನ್ವೆಕ್ಸ್ ಮಿರರ್ ಗಳು ವೃತ್ತಾಕಾರವನ್ನು ಹೊಂದಿರುತ್ತದೆ (ಸ್ಪಷ್ಟತೆಗಾಗಿ ಕೆಳಗಡೆ ಕೊಡಲಾಗಿರುವ ಚಿತ್ರ ವೀಕ್ಷಿಸಿ). ಆದರೆ ಇಂತಹ ಬ್ಲೈಂಡ್ ಸ್ಪಾಟ್ ಮಿರರ್ ಗಳು ಸುರಕ್ಷತೆಯನ್ನು ಒದಗಿಸುವ ಬದಲು ಕೆಲವೊಂದು ಬಾರಿ ಹೆಚ್ಚಿನ ಅಸುರಕ್ಷತೆಗೆ ಕಾರಣವಾಗುತ್ತದೆ. ಸಮಗ್ರ ಸಲಹೆಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

01. ಗೊಂದಲ ಸೃಷ್ಟಿ ಮಾಡು

01. ಗೊಂದಲ ಸೃಷ್ಟಿ ಮಾಡು

ಮೊದ ಮೊದಲು ಕನ್ವೆಕ್ಸ್ ಮಿರರ್ ಬಳಕೆ ಮಾಡುವ ಚಾಲಕರಲ್ಲಿ ಹೆಚ್ಚಿನ ಗೊಂದಲತೆ ಸೃಷ್ಟಿ ಮಾಡುವ ಸಾಧ್ಯತೆಯಿದೆ. ಯಾಕೆಂದರೆ ಹಿಂಬದಿಯ ದೃಶ್ಯಗಳು ಎರಡೆರಡು ಕಡೆ ಗಾಜಿನಲ್ಲಿ ಕಾಣಿಸುವುದರಿಂದ ಚಾಲಕರು ಗಲಿಬಿಲಿಗೊಳಗಾಗುವ ಸಾಧ್ಯತೆಯಿದೆ. ಹಾಗಾಗಿ ಇದರ ನಿಖರ ಬಳಕೆಗಾಗಿ ಅಭ್ಯಾಸದ ಅಗತ್ಯವೂ ಇರುತ್ತದೆ.

02. ಕನ್ನಡಿಯ ಅಂಚಿನಲ್ಲಿ ಪ್ರತಿಬಿಂಬ

02. ಕನ್ನಡಿಯ ಅಂಚಿನಲ್ಲಿ ಪ್ರತಿಬಿಂಬ

ಕನ್ನಡಿಯ ಅಂಚಿನಲ್ಲಿ ಪ್ರತಿಬಿಂಬ ಲಗ್ಗತ್ತಿಸಿರುವುದರಿಂದ ಅದರತ್ತ ಚಾಲಕರು ದಿಟ್ಟಿಸಿ ನೋಡುವ ಅವಶ್ಯಕತೆಯಿರುತ್ತದೆ. ಇದು ಚಾಲನೆ ವೇಳೆ ಏಕಾಗ್ರತೆಗೆ ಭಂಗವನ್ನುಂಟು ಮಾಡುವ ಭೀತಿಯಿದೆ.

03. ಪ್ರತಿಬಿಂಬಕ್ಕೆ ನಿರ್ಬಂಧ

03. ಪ್ರತಿಬಿಂಬಕ್ಕೆ ನಿರ್ಬಂಧ

ಮಾರುಕಟ್ಟೆಯಲ್ಲಿ ದೊರಕುವ ಬ್ಲೈಂಡ್ ಸ್ಪಾಟ್ ಮಿರರ್ ಗಳಲ್ಲಿ ಕಂಡುಬಂದಿರುವ ಮಗದೊಂದು ಸಮಸ್ಯೆ ಏನೆಂದರೆ ಇದು ಕಾರಿನ ಹೊರಗಡೆ ಆಳವಡಿಸಲಾಗಿರುವ ಗಾಜಿನ ನೈಜ ವಿನ್ಯಾಸದ ಮೇಲೆ ನೇರ ಪರಿಣಾಮ ಬೀರಲಿದ್ದು, ಕನ್ನಡಿಯ ಅಂಚಿನ ಅಮೂಲ್ಯ ಪ್ರತಿಬಿಂಬವನ್ನು ತಡೆಯಲಿದೆ.

04. ಬೆಳಕಿನಿಂದಲೇ ಕುರುಡು

04. ಬೆಳಕಿನಿಂದಲೇ ಕುರುಡು

ಆಧುನಿಕ ಸೈಡ್ ವ್ಯೂ ಮಿರರ್ ಗಳಲ್ಲಿ ಬೆಳಕು ಪ್ರತಿಫಲಿಸುವುದನ್ನು ತಡೆಯುವ ಶಕ್ತಿಯಿರುತ್ತದೆ. ಇನ್ನೊಂದೆಡೆ ಬ್ಲೈಂಡ್ ಸ್ಪಾಟ್ ಮಿರರ್ ಗಳಲ್ಲಿ, ಪ್ರಜ್ವಲಿಸುವ ಬೆಳಕನ್ನು ಹೀರಿಕೊಳ್ಳುವ ವ್ಯವಸ್ಥೆಯಿರುವುದಿಲ್ಲ. ಇದರಿಂದ ಚಾಲಕರಿಗೆ ನೆರವಾಗುವ ಬದಲು ರಾತ್ರಿ ಪಯಣಗಳಲ್ಲಿ ಹೆಚ್ಚಿನ ಸಮಸ್ಯೆ ಸೃಷ್ಟಿ ಮಾಡಲಿದೆ.

05. ಅಂಟಿಸುವುದು ಹಾನಿಕಾರಕ, ತೆಗೆಯುವುದು ಕಷ್ಟ

05. ಅಂಟಿಸುವುದು ಹಾನಿಕಾರಕ, ತೆಗೆಯುವುದು ಕಷ್ಟ

ಔಟ್ ಸೈಡ್ ರಿಯರ್ ವ್ಯೂ ಮಿರರ್ ಮೇಲೆ ಬ್ಲೈಂಡ್ ಸ್ಪಾಟ್ ಕನ್ನಡಿಗಳನ್ನು ಅಂಟಿಸುವುದರಿಂದ ನೈಜ ಗಾಜಿನ ವಿನ್ಯಾಸಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಮತ್ತೆ ಇನ್ನು ಬೇಡವೆನಿಸಿದಾಗ ಇದನ್ನು ತೆಗೆದು ಹಾಕುವುದು ಮತ್ತಷ್ಟು ಕಷ್ಟಕರವಾಗಲಿದೆ.

06. ಆಕರ್ಷಕವಲ್ಲದ ನೋಟ

06. ಆಕರ್ಷಕವಲ್ಲದ ನೋಟ

ಇದು ಅಷ್ಟೊಂದು ದೊಡ್ಡ ಸಮಸ್ಯೆಯಿಲ್ಲದಿದ್ದರೂ ಕಾರಿನ ನೈಜ ಸೌಂದರ್ಯವನ್ನು ಕೆಡಿಸುತ್ತದೆ ಎಂಬುದು ನಮ್ಮ ಅಭಿಮತವಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳೇನು? ಕಾಮೆಂಟಿಸಿ.

ಅಂತಿಮ ತೀರ್ಪು

ಅಂತಿಮ ತೀರ್ಪು

ಒಟ್ಟಾರೆಯಾಗಿ ಕಾಗದದ ಮೇಲೆ ಬ್ಲೈಂಡ್ ಸ್ಪಾಟ್ ಮಿರರ್ ಗಳು ಅನೇಕ ಭರವಸೆಗಳನ್ನು ಕೊಡಬಹುದು. ಆದರೆ ನೈಜ ರಸ್ತೆ ಪರಿಸ್ಥಿತಿಯಲ್ಲಿ ಹೆದ್ದಾರಿ ಹಾಗೂ ನಗರದಲ್ಲಿ ನಿಮ್ಮ ಸುರಕ್ಷಿತ ಚಾಲನೆಗೆ ಹಾನಿಕರವಾಗುವ ಭೀತಿಯಿದೆ. ಅಲ್ಲದೆ ಭಾರತದಂತಹ ರಸ್ತೆ ಪರಿಸ್ಥಿತಿಯಲ್ಲಿ ಇದನ್ನು ಆಳವಡಿಸುವ ಮೊದಲು ಎರಡೆರಡು ಬಾರಿ ಯೋಚಿಸಿದರೆ ಒಳಿತು.

ಇವನ್ನೂ ಓದಿ

ಲಾಂಛನ ಹಂಚಿಕೆ ಲಾಭವೇನು ನಷ್ಟಗಳೇನು ?

English summary
Let's take a look at why you should think twice about installing these blind spot mirrors on your car.
Story first published: Monday, July 13, 2015, 11:52 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark