ಭಾರತದಲ್ಲಿರುವ ಈ ಟ್ರಾಫಿಕ್ ಅಪರಾಧಗಳ ಬಗ್ಗೆ ನಿಮಗೆಷ್ಟು ಗೊತ್ತು.?
ಹೆಲ್ಮೆಟ್ ರಹಿತ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವುದು, ಸಿಗ್ನಲ್ ಜಂಪ್, ನೋ ಪಾರ್ಕಿಂಗ್‍ನಲ್ಲಿ ವಾಹನ ನಿಲುಗಡೆ, ಒನ್ ವೇ ನಲ್ಲಿ ವಾಹನ ಚಾಲನೆ, ಹೀಗೆ ಹಲವಾರು ಟ್ರಾಫಿಕ್ ನಿಯಮಗಳ ಬಗ್ಗೆ ನಿಮಗೆ ತಿಳಿದೆ ಇದೆ ಆದ್ರೆ ಗಾಡಿಯಲ್ಲಿ ಫರ್ಸ್ಟ್ ಏಡ್ ಕಿಟ್, ಕಾರಿನಲ್ಲಿ ಧೂಮಪಾನ ಮಾಡುವುದು ಸ್ನೇಹಿತರ ಕಾರು ಓಡಿಸುವುದು ತಪ್ಪೆಂದು ನಿಮಗೆ ತಿಳಿದಿದೆಯೆ.?

ನಮ್ಮ ಭಾರತದಲ್ಲಿನ ಹಲವಾರು ವಾಹನ ಚಾಲಕರು ತಾವು ಮಾಡುತ್ತಿರುವುದು ಟ್ರಾಫಿಕ್ ನಿಯಮಗಳ ಉಲ್ಲಂಘನೆ ಎಂದು ತಿಳಿದಿದ್ದರೂ ಸಹ ಪದೇ ಪದೇ ಉಲ್ಲಂಘಿಸಿತ್ತಾರೆ. ಆದರೆ ನಿಮಗೆ ಮತ್ತೆ ಹಲವರಿಗೆ ತಿಳಿಯದಿರುವ ಕೆಲವು ಮುಖ್ಯ ಸಂಚಾರಿ ಅಪರಾಧಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಿದ್ದೇವೆ.

ಪಾರ್ಕಿಂಗ್ ಮಾಡಿದ ವಾಹನಕ್ಕೆ ಅಡ್ಡವಾಗಿ ವಾಹನ ನಿಲುಗಡೆ
ಈ ರೀತಿಯ ದೃಶ್ಯವನ್ನು ನಾವು ದಿನನಿತ್ಯವೂ ಕಾಣುತ್ತೇವೆ ಅಷ್ಟೆ ಅಲ್ಲದೇ ನಮಗೂ ಸಹ ಇಂತಹ ಸಂಧರ್ಭಗಳು ಎದುರಾಗಿರುತ್ತದೆ. ಪಾರ್ಕಿಂಗ್ ಲಾಟ್‍ನಲ್ಲಿ ನಾವು ಸರಿಯಾಗಿ ಪಾರ್ಕಿಂಗ್ ಮಾಡಿದ್ದರೂ ಸಹ ನಮ್ಮ ವಾಹನವನ್ನು ಹೊರ ತೆಗೆಯದ ಹಾಗೆ ಮತ್ತೊಂದು ಕಾರನ್ನು ಅಡ್ಡವಾಗಿ ನಿಲುಗಡೆ ಮಾಡಿರುತ್ತಾರೆ. ನಿಜಕ್ಕೆ ಇದೊಂದು ಟ್ರಾಫಿಕ್ ಅಪರಾದವಂತೆ. ಇದನ್ನು ನೀವು ಕಂಡಲ್ಲಿ ನೀವು ಪೊಲೀಸರನ್ನು ಕರೆದು ನಿಮ್ಮ ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿದ ವಾಹನ ಸವಾರನ ಮೇಲೆ ರೂ.100 ದಂಡವನ್ನು ಸಹ ಆತನಿಗೆ ನೀಡಲಾಗುವುದು.

ಪ್ರಥಮ ಚಿಕಿತ್ಸೆಯ ಕಿಟ್ ಇಲ್ಲದಿರುವುದು
ಈ ರೂಲ್ಸ್ ಚೆನ್ನೈ ಮತ್ತು ಕೊಲ್ಕತ್ತಾ ನಗರದಲ್ಲಿ ಕಾಣಬಹುದಾಗಿದ್ದು, ನಿಮ್ಮ ಕಾರು ಅಥವಾ ದೊಡ್ಡ ಪ್ರಮಾಣದ ವಾಹನಗಳಲ್ಲಿ ಕಡ್ಡಾಯವಾಗಿ ಫಸ್ಟ್ ಏಡ್ ಕಿಟ್ ಅನ್ನು ಇರಿಸಿಕೊಳ್ಳಬೇಕಾಗಿದೆ. ಇದನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತವರಿಗೆ ರೂ. 500 ದಂಡ ಅಥವಾ ಮೂರು ತಿಂಗಳು ಜೈಲು ವಾಸ ಅನುಭವಿಸಬೇಕಾಗಿರುತ್ತದೆ. ಮತ್ತಂದು ಆಶ್ಚರ್ಯ ಏನೆಂದರೆ ದ್ವಿಚಕ್ರ ವಾಹನಗಳಲ್ಲಿಯೂ ಸಹ ಫಸ್ಟ್ ಏಡ್ ಕಿಟ್ ಇರಬೇಕಂತೆ..!

ಕಾರು ಚಾಲನೆ ವೇಳೆ ಧೂಮಪಾನ ಮಾಡುವುದು
ಹೌದು, ಕಾರಿನೊಳಗೆ ಧೂಮಪಾನ ಮಾಡುವುದು ಕೂಡಾ ಒಂದು ಅಪರಾಧ. ಇದು ಪ್ರಸ್ಥುತ ಡಿಲ್ಲಿ ಮತ್ತು ಎನ್‍ಸಿಎರ್ ಪ್ರಾಂತ್ಯದಲ್ಲಿ ಜಾದಿ ಮಾಡಲಾಗಿದೆ. ಪಬ್ಲಿಕ್ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಲಾದ ಕಾರಿನಲ್ಲಿಯು ಸಹ ಕೂತು ಧೂಮಪಾನ ಮಾದುವಂತಿಲ್ಲ. ಹೀಗೆ ಮಾಡಿದ್ದಲ್ಲಿ, ಅವರಿಗೆ ರೂ.100 ದಂಡವನ್ನು ವಿಧಿಸಲಾಗುವುದು. ಈ ರೂಲ್ ಅನ್ನು ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವುದನ್ನು ನಿಲ್ಲಿಸಲು ಜಾರಿ ಮಾಡಲಾಗಿದೆಯಂತೆ.

ಬೇರೆಯವರ ಕಾರು ಡ್ರೈವ್ ಮಾಡುವುದು
ನೀವು ಚೆನ್ನೈ ನಗರದಲ್ಲಿದರೆ ಅಲ್ಲಿ ನಿಮ್ಮ ಕಾರನ್ನು ಮಾತ್ರ ಓಡಿಸಬೇಕು, ಆದರೆ ನಿಮ್ಮ ಸ್ನೇಹಿತನ ಕಾರು ಡ್ರೈವ್ ಮಾಡುವಾಗ ಸಿಕ್ಕಿಂಕೊಂಡರೆ ರೂ. 500 ದಂಡವನ್ನು ತೆರಬೇಕಾಗುವುದು. ಇಷ್ಟೆ ಅಲ್ಲದೇ ಕೆಲವು ಬಾರಿ ಮೂರು ತಿಂಗಳ ಜೈಲು ವಾಸವನ್ನು ಸಹ ನೀಡಲಾಗುತ್ತದೆಯಂತೆ. ಈ ರೂಲ್ ಅನ್ನು ಕಾರು ಕಳುವಿನ ಬಗ್ಗೆ ಹೆಚ್ಚು ಗಮನ ಹರಿಸಲು ಜಾರಿ ಮಾಡಲಾಗಿದೆಯಂತೆ.

ಕಾರಿನಲ್ಲಿ ಟಿವಿ
ಇತ್ತೀಚೆಗೆ ಬರಿತ್ತಿರುವ ಎಲ್ಲಾ ಕಾರುಗಳಲ್ಲಿಯು ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗುತ್ತಿದೆ. ಆದರೆ ಇನ್ನು ಕೆಲವರು ಆಫ್ಟರ್ ಮಾರ್ಕೆಟ್ ಸಿಸ್ಟಂಗಳನ್ನು ಅಳವಡಿಸಿಕೊಂಡು ಡ್ರೈವಿಂಗ್ ವೇಳೆ ವಿಡೀಯೋ ನೋಡುತ್ತಾರಂತೆ. ಹೀಗೆ ಮಾಡುತ್ತಿರುವ ವೇಳೆ ನೀವು ಸಿಕ್ಕಿಕೊಂಡರೆ ರೂ.100 ದಂಡ ನೀಡಬೇಕಿದ್ದು, ಈ ರೂಲ್ ಅನ್ನು ಕೇವಲ ಮುಂಬೈ ನಗರದಲ್ಲಿ ಮಾತ್ರ ಕಾಣಬಹುದಾಗಿದೆ.

ಕಾರನ್ನು ಐಡಲ್‍ನಲ್ಲಿರಿಸುವುದು
ಮುಂಬೈ ನಗರದಲ್ಲಿ ನಿಮ್ಮ ಕಾರನ್ನು ಐಡಲ್ ಆಗಿರಿಸಿದರೆ ನಿಮಗೆ ರೂ.100 ದಂಡ ವಿಧಿಸಲಾಗುತ್ತದೆ. ಹೀಗಾಗಿ ನೀವು ಟ್ರಾಫಿಕ್ ಸಿಗ್ನಲ್‍ನಲ್ಲಗಲಿ ಅಥವಾ ರಸ್ತೆಯ ಪಕ್ಕದಲ್ಲಿ ಪಾರ್ಕಿಂಗ್ ಮಾಡಿದ್ದರೂ ಸಹ ನಿಮ್ಮ ಕಾರಿನ ಎಂಜಿನ್ ಆನ್ ಆಗಿಯೆ ಇದ್ದರೆ ದಂಡ ತೆರಬೇಕಾಗುತ್ತದೆ. ಈ ರೂಲ್ ಅನ್ನು ಚಾಲಕರು ಇಂಧನವನ್ನು ಉಳಿಸಲು ಕಲಿಯಬೇಕೆಂಬ ಕಾರಣದಿಂದ ಜಾರಿ ಮಾಡಲಾಗಿದೆ.

ಪರಿಚಯವಿಲ್ಲದವರಿಗೆ ಲಿಫ್ಟ್ ನೀಡುವುದು
ನಮ್ಮ ಭಾರತದಲ್ಲಿ ಪರಿಚಯವಿಲ್ಲದವರಿಗೆ ಲಿಫ್ಟ್ ನೀಡುವುದು ದೊಡ್ಡ ಅಪರಾಧವೆಂದು ಹಲವರಿಗೆ ತಿಳಿದಿಲ್ಲ. ಅಕಸ್ಮಾತ್ ಆಗಿ ಅಪರಿಚಯಸ್ತರಿಗೆ ನೀವು ಲಿಫ್ಟ್ ನೀಡಿದ್ದೇ ಆದಲ್ಲಿ, ಟ್ಯಾಕ್ಸಿ ಯಾಗಿ ನಿಮ್ಮ ವಾಹನವನ್ನು ಬಳಸುತ್ತಿರುವಿರಿ ಎಂದು ಸೀಜ್ ಮಾಡಲಾಗುತ್ತದೆ. ಇದನ್ನು ಸ್ವಂತ ಕಾರನ್ನು ವ್ಯಾಪಾರಕ್ಕಾಗಿ ಬಳಸಬಾರದು ಮತ್ತು ದರೋಡೆಯನ್ನು ನಿಲ್ಲಿಸಲು ಈ ರೂಲ್ಸ್ ತರಲಾಗಿದೆ.

ಬಸ್ ನಿಲ್ದಾಣದಲ್ಲಿ ಕಾರ್ ಪಾರ್ಕಿಂಗ್
ಕೊಲ್ಕತ್ತಾದಲ್ಲಿ, ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸೌಲಭ್ಯದ ಪ್ರದೇಶದಲ್ಲಿ ನಿಮ್ಮ ಕಾರನ್ನು ನಿಲ್ಲಿಸಿದ್ದೇಯಾದಲ್ಲಿ ರೂ 100 ದಂಡವನ್ನು ನೀಡಬೇಕಾಗಿರುತ್ತದೆ.

ಕಾರಿನಲ್ಲಿ ಹಾರ್ನ್ ಇರಬೇಕು
ನಿಮ್ಮ ಕಾರಿನಲ್ಲಿ ಹಾರ್ನ್ ಇಲ್ಲವಾದರೂ ಸಹ ರೂ.100 ದಂಡವನ್ನು ನೀಡಬೇಕಾಗಿರುತ್ತದೆ. ವಾಹನ ಚಾಲನೆಯ ವೇಳೆ ಹಾರ್ನ್ ಮುಖ್ಯ ಪಾತ್ರವನ್ನು ತೆಗೆದುಕೊಳ್ಳುತ್ತದೆ, ಏಕೆಂದ್ರೆ ನಿಮ್ಮ ವಾಹನ ಮುಂದೆ ಅಥವಾ ದಾರಿ ಕೇಳಲು ಹಾರ್ನ್ ಬಹು ಮುಖ್ಯವಾಗಿರುತ್ತದೆ.


Click it and Unblock the Notifications








