Ajit Pawar Networth: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನಿಧನ; ಅವರ ಬಳಿ ಒಟ್ಟು ಆಸ್ತಿ ಎಷ್ಟಿತ್ತು ಗೊತ್ತಾ?
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ನಾಯಕ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Maharashtra DCM Ajit Pawar) ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡಿದೆ. ಡಿಜಿಸಿಎ ಆರಂಭಿಕ ವರದಿ ಪ್ರಕಾರ, ಈ ವಿಮಾನ ದುರಂತದಿಂದ ಇದೀಗ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿ ವಿಮಾನದಲ್ಲಿದ್ದ ಯಾರೂ ಬದುಕುಳಿದಿಲ್ಲ ಎಂದು ವರದಿಯಾಗಿದೆ. ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ದುರ್ಮರಣ ಹೊಂದಿದ್ದಾರೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ಜಿಲ್ಲಾ ಪಂಚಾಯತ್ ಚುನಾವಣೆಯ ಪ್ರಚಾರಕ್ಕಾಗಿ ಅಜಿತ್ ಪವಾರ್ ಮುಂಬೈನಿಂದ ಬಾರಾಮತಿಗೆ ಖಾಸಗಿ ವಿಮಾನದಲ್ಲಿ (Plane Crash) ಹೊರಟಿದ್ದರು ಎನ್ನಲಾಗಿದೆ. ಆದರೆ ದುರಾದೃಷ್ಟವಶಾತ್ ವಿಮಾನ ಲ್ಯಾಂಡಿಂಗ್ ವೇಳೆ ಈ ದುರಂತ ಸಂಭವಿಸಿದೆ.

ಜನನ ಮತ್ತು ಶಿಕ್ಷಣ: ಅಜಿತ್ ಪವಾಬರ್ ಅವರು ಜುಲೈ 22, 1959 ರಂದು ಮಹಾರಾಷ್ಟ್ರದ ಅಹಮದ್‌ನಗರ್ ಜಿಲ್ಲೆಯ ದೇವಲಾಲಿ ಪ್ರವರದಲ್ಲಿ ಜನಿಸಿದರು. ಅಜಿತ್ ಪವಾರ್ ಪ್ರಸಿದ್ಧ ರಾಜಕಾರಣಿಯಾಗಿರುವ ಶರದ್ ಪವಾರ್ ಅವರ ಸೋದರಳಿಯನೂ ಹೌದು. ಅಜಿತ್ ಅವರ ತಂದೆ ಅನಂತ್‌ರಾವ್ ಪವಾರ್ ಅವರ ಮರಣದ ನಂತರ ಕುಟುಂಬವನ್ನು ನೋಡಿಕೊಳ್ಳಲು ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟರು. ಮೂಲತಃ ಕೃಷಿ ಹಿನ್ನೆಯಿಂದ ಬಂದವರಾಗಿದ್ದ, ಅಜಿತ್ ಪವಾರ್ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ ತಮ್ಮ ವೃತ್ತಿ ಆರಂಭಿಸಿದರು.
ರಾಜಕೀಯದಲ್ಲಿ ಛಾಪು ಮೂಡಿಸಿದ್ದ ಅಜಿತ್ ಪವಾರ್!
ಅಜಿತ್ ಪವಾರ್ 1991 ರಲ್ಲಿ ಬಾರಾಮತಿಯಿಂದ ಮಹಾರಾಷ್ಟ್ರ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ವಿಶೇಷ ಅಂದರೆ ಅಂದಿನಿಂದ 7 ಬಾರಿ ಸತತವಾಗಿ ಅದೇ ವಿಧಾನಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಅಲ್ಲದೇ ಅದೇ ಸಂದರ್ಭದಲ್ಲಿ ಲೋಕಸಭೆಗೂ ಆಯ್ಕೆಯಾಗಿದ್ದರು. ರಾಜಕೀಯ ವೃತ್ತಿ 2004 ರಿಂದ ಪ್ರಾರಂಭವಾಗಿ, ಜಲಸಂಪನ್ಮೂಲ, ಸಿಂಚಾಯಿ, ಇಂಧನ ಮತ್ತು ಹಣಕಾಸು ಇಲಾಖೆಗಳಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ ಹಿರಿಮೆ ಅಜಿತ್ ಪವಾರ್ ಅವರಿಗಿದೆ. ಇನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ 6 ಬಾರಿ ಸೇವೆ ಸಲ್ಲಿಸಿದ್ದಾರೆ.
ಅಜಿತ್ ಪವಾರ್ ಶ್ರೀಮಂತ ರಾಜಕಾರಣಿಗಳ ಪಟ್ಟಿಗೆ ಸೇರುತ್ತಾರೆ. ಅವರ ಒಟ್ಟು ಆಸ್ತಿಯ ಮೌಲ್ಯ 124 ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗಿದೆ. ಹಾಗಾದರೆ, ಅವರ ಬಳಿ ಏನೇನೆಲ್ಲಾ ಇದೆ ಗೊತ್ತಾ?
ಶ್ರೀಮಂತ ರಾಜಕಾರಣಿ ಅಜಿತ್ ಪವಾರ್!
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅಜಿತ್ ಪವಾರ್ ತಮ್ಮ ಸಂಪತ್ತಿನ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಮೈನೇತಾ.ಕಾಂನಲ್ಲಿ ಲಭ್ಯವಿರುವ ಚುನಾವಣಾ ಅಫಿಡವಿಟ್ ಮಾಹಿತಿಯ ಪ್ರಕಾರ, ಅಜಿತ್ ಪವಾರ್ ಸುಮಾರು ₹124 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದರ ಜೊತೆಗೆ, ಅವರಿಗೆ ₹21.39 ಕೋಟಿ ರೂಪಾಯಿಗಳಷ್ಟು ಲಯಾಬಿಲಿಟಿಯೂ ಇದೆ. 12ನೇ ತರಗತಿ ಉತ್ತೀರ್ಣರಾಗಿರುವ ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ನಾಯಕರಲ್ಲಿ ಒಬ್ಬರು.
ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅಜಿತ್ ಪವಾರ್ ತಮ್ಮ ಆಸ್ತಿ ವಿವರಗಳನ್ನು ನೀಡಿದ್ದು, ಅವರ ಕುಟುಂಬದ ಬಳಿ ಒಟ್ಟು ₹14.12 ಲಕ್ಷ ನಗದು ಇದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ ₹6.81 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಲಾಗಿದೆ ಎನ್ನಲಾಗಿದೆ. ಅಜಿತ್ ಪವಾರ್ ಅವರ ಬ್ಯಾಂಕ್ ಠೇವಣಿ ₹3 ಕೋಟಿ ಇದ್ದರೆ, ಅವರ ಪತ್ನಿ ಸುನೇತ್ರಾ ಪವಾರ್ ಅವರ ಖಾತೆಗಳಲ್ಲೂ ಅಷ್ಟೇ ಮೊತ್ತದ ಹಣ ಠೇವಣಿ ಇಡಲಾಗಿದೆ ಎಂದು ಹೇಳಲಾಗಿದೆ.
ಇದಲ್ಲದೆ, ಎನ್‌ಎಸ್‌ಎಸ್ (NSS) ಮತ್ತು ಅಂಚೆ ಉಳಿತಾಯ (Postal Saving) ಖಾತೆಗಳಲ್ಲಿ ₹1.52 ಕೋಟಿ ರೂಪಾಯಿ ಠೇವಣಿ ಇದೆ. ಆದರೆ, ಅಜಿತ್ ಪವಾರ್ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರು ಎಲ್‌ಐಸಿ (LIC) ಅಥವಾ ಯಾವುದೇ ಜೀವ ವಿಮಾ ಪಾಲಿಸಿಯನ್ನು ಹೊಂದಿಲ್ಲ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್, ಷೇರುಗಳು, ಬಾಂಡ್‌ಗಳು ಮತ್ತು ಡಿಬೆಂಚರ್‌ಗಳಲ್ಲಿ ಗಣನೀಯ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಆಭರಣಗಳ ವಿಷಯಕ್ಕೆ ಬಂದರೆ, ಅಜಿತ್ ಪವಾರ್ ₹38 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಅವರ ಪತ್ನಿ ₹1.19 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹೊಂದಿದ್ದಾರೆ.
ದುಬಾರಿ ವಾಹನಗಳ ಒಡೆಯ ಅಜಿತ್ ಪವಾರ್!
ಅಜಿತ್ ಪವಾರ್ ದುಬಾರಿ ವಾಹನಗಳ ಒಡೆಯರೂ ಹೌದು. ಅವರ ಚುನಾವಣಾ ಅಫಿಡವಿಟ್‌ನಲ್ಲಿ ಘೋಷಿಸಲಾದ ಚರಾಸ್ತಿ ಮತ್ತು ಸ್ಥಿರ ಆಸ್ತಿಗಳಲ್ಲಿ ಅವರ ಬಳಿ ಇರುವ ವಾಹನಗಳ ವಿವರಗಳೂ ಸೇರಿವೆ. ಅವರ ಬೆಲೆಬಾಳುವ ಆಸ್ತಿಗಳಲ್ಲಿ ಟೊಯೋಟಾ ಕ್ಯಾಮ್ರಿ, ಹೋಂಡಾ ಸಿಆರ್‌ವಿ ಮತ್ತು ಟ್ರ್ಯಾಕ್ಟರ್‌ಗಳು ಸೇರಿವೆ. ಈ ಎಲ್ಲಾ ವಾಹನಗಳ ಒಟ್ಟು ಮೌಲ್ಯ ಸುಮಾರು ₹75 ಲಕ್ಷ ಎಂದು ವರದಿ ಮಾಡಲಾಗಿದೆ. ಇನ್ನು ಪತ್ನಿ ಸುನೇತ್ರಾ ಪವಾರ್ ₹10 ಲಕ್ಷ ಮೌಲ್ಯದ ವಾಹನಗಳನ್ನು ಹೊಂದಿದ್ದಾರೆ.
ಇದಲ್ಲದೆ, ಅವರ ಒಟ್ಟು ನಿವ್ವಳ ಮೌಲ್ಯದಲ್ಲಿ ₹10 ಕೋಟಿಗಿಂತ ಹೆಚ್ಚು ಹೆಚ್ಚುವರಿ ಇತರ ಆಸ್ತಿಗಳು ಸೇರಿವೆ. ಅಜಿತ್ ಪವಾರ್ ಅವರ ಸ್ಥಿರಾಸ್ತಿ ವಿವರಗಳು ಅಚ್ಚರಿಗೊಳಿಸುತ್ತವೆ. ಚುನಾವಣಾ ಅಫಿಡವಿಟ್ ಪ್ರಕಾರ, ಅಜಿತ್ ಪವಾರ್ ಮತ್ತು ಅವರ ಪತ್ನಿ ಸುಮಾರು ₹13.21 ಕೋಟಿ ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ₹37 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಅವರ ಹೆಸರಿನಲ್ಲಿ ದಾಖಲಾಗಿದೆ.
ಕಮರ್ಷಿಯಲ್ ಆಸ್ತಿಗಳ ಬಗ್ಗೆ ಹೇಳುವುದಾದರೆ, ಅವರ ಹೆಸರಿನಲ್ಲಿ ಒಂದು ವಾಣಿಜ್ಯ ಕಟ್ಟಡವಿದ್ದು, ಅದರ ಮೌಲ್ಯ ಸುಮಾರು ₹11 ಕೋಟಿಗೂ ಅಧಿಕ. ಇನ್ನು ಮನೆ ಆಸ್ತಿಗಳ ಕಡೆ ಹೇಳುವುದಾದ್ರೆ, ಅಜಿತ್ ಪವಾರ್ ನಾಲ್ಕು ಮನೆಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಎರಡು ಮನೆಗಳು ತಲಾ ₹3 ಕೋಟಿ ಮೌಲ್ಯದ್ದಾಗಿವೆ. ಒಂದು ಮನೆ ₹2 ಕೋಟಿ ಬೆಲೆಬಾಳುತ್ತದೆ ಹಾಗೂ ಇನ್ನೊಂದು ಮನೆ ಸುಮಾರು ₹90 ಲಕ್ಷ ಮೌಲ್ಯದ್ದಾಗಿದೆ. ಇದಲ್ಲದೆ, ಸುನೇತ್ರಾ ಪವಾರ್ ಹೆಸರಿನಲ್ಲಿ ₹22 ಕೋಟಿಗೂ ಹೆಚ್ಚು ಮೌಲ್ಯದ ನಾಲ್ಕು ಮನೆಗಳು ಮತ್ತು ಫ್ಲಾಟ್‌ಗಳು ಇವೆ. ಇಷ್ಟೆಲ್ಲಾ ಆಸ್ತಿಯನ್ನು ಹೊಂದಿದ್ದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವುದು ವಿಷಾದ ಸಂಗತಿ.
Credit: Goodreturns


Click it and Unblock the Notifications








