Vande Bharat Express: ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಹಬ್, ರೈಲುಗಳು ವೇಳಾಪಟ್ಟಿ
ಬೆಂಗಳೂರು: ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ವಂದೇ ಭಾರತ್ ರೈಲುಗಳ (Vande Bharat Express Train) ಹಬ್ ಆಗಿ ಬೆಂಗಳೂರು ಸ್ಥಾನ ಕಾಯ್ದುಕೊಳ್ಳಲಿದೆ. ಏಕೆಂದರೆ ಇಲ್ಲಿದಂತೆ ವಿವಿಧ ಮಾರ್ಗಗಳಲ್ಲಿ ಹಲವು ರೈಲುಗಳು ಸಂಚಾರ ನಡೆಸುತ್ತವೆ. ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ತೆಲಂಗಾಣ ಮತ್ತು ರಾಜ್ಯದ ಪ್ರಮುಖ ನಗರಗಳಿಗೆ ಬೆಂಗಳೂರಿನಿಂದ ಏಳು ವಂದೇ ಭಾರತ್ ಅರೆ-ಹೈ-ಸ್ಪೀಡ್ ರೈಲುಗಳು ಸಂಪರ್ಕ ಸಾಧಿಸುತ್ತವೆ.
ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ವಂದೇ ಭಾರತ್ ರೈಲುಗಳು ದೇಶವ್ಯಾಪಿ ಸುಮಾರು 150ಕ್ಕೂ ಅಧಿಕ ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ. ಈ ರೈಲುಗಳ ಮುಂದುವರಿದ ಸ್ಲೀಪರ್ ವಂದೇ ಭಾರತ್ ರೈಲು (Vande Bharat Sleeper Train) ಇದೇ ಜನವರಿ 17ರಂದು ತನ್ನ ಕಾರ್ಯಾಚರಣೆ ಆರಂಭಿಸಲಿದೆ. ವಂದೇ ಭಾರತ್ ರೈಲುಗಳು ಬೆಂಗಳೂರಿನಿಂದ ಕರ್ನಾಟಕ ಹಾಗೂ ಸುತ್ತಮುತ್ತಲಿನ ನಗರಗಳಿಗೆ ಸಂಪರ್ಕ ಕಲ್ಪಿಸುವ ಕಾರಣ ಇದು ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಆ ವಿಡಿಯೋ ವೈರಲ್ ಆಗುತ್ತಿದೆ. ಯಾವೆಲ್ಲ ರೈಲುಗಳು ಬೆಂಗಳೂರಿನಿಂದ ಹೊಡುತ್ತವೆ ಎಂಬ ವಿವರ ಮುಂದಿದೆ.

IRCTC: ರೈಲು ಟಿಕೆಟ್ ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ: ಉಚಿತ ದಿನಾಂಕ ಬದಲಾವಣೆ ನಿಯಮ ಜಾರಿ
ಬೆಂಗಳೂರು ವಂದೇ ಭಾರತ್ ರೈಲುಗಳು
1. ಬೆಂಗಳೂರು-ಮಧುರೈ ವಂದೇ ಭಾರತ್ ರೈಲು: ಬೆಂಗಳೂರು ಕಂಟೋನ್ಮೆಂಟ್‌ನಿಂದ ಮಧ್ಯಾಹ್ನ 1.30ಕ್ಕೆ ಸಂಚಾರ ಆರಂಭಿಸುತ್ತದೆ. ಸೇಲಂ, ನಾಮಕ್ಕಲ್, ಕರೂರ್, ತಿರುಚಿರಾಪಳ್ಳಿ ಮತ್ತು ದಿಂಡಿಗಲ್ ಮೂಲಕ ಸಾಗುತ್ತದೆ. ರಾತ್ರಿ 8.40 ಗಂಟೆಗೆ ಮಧುರೈ ತಲುಪುತ್ತದೆ. ಒಟ್ಟು ಸುಮಾರು 580 ಕಿ.ಮೀ ದೂರವನ್ನು 08 ಗಂಟೆಗಳಲ್ಲಿ ಕ್ರಮಿಸುತ್ತದೆ.
2. ಕೊಯಮತ್ತೂರು ವಂದೇ ಭಾರತ್ ರೈಲು: ಈ ರೈಲು ಬೆಂಗಳೂರಿನ ಕಂಟೋನ್ಮೆಂಟ್‌ನಿಂದ ಮಧ್ಯಾಹ್ನ 2.20ಗಂಟೆಗೆ ಸಂಚಾರ ಆರಂಭಿಸಿ, ಹೊಸೂರು, ಧರ್ಮಪುರಿ, ಸೇಲಂ, ಈರೋಡ್ ಮತ್ತು ತಿರುಪ್ಪೂರು ಮೂಲಕ ಸಾಗಿ ರಾತ್ರಿ 8:40ಗಂಟೆಗೆ ಕೊಯಿಮತ್ತೂರು ನಿಲ್ದಾಣ ತಲುಪುತ್ತದೆ. 380 ಕಿ.ಮೀ. ದೂರವನ್ನು ಸುಮಾರು 06.20 ಗಂಟೆಗಳಲ್ಲಿ ತಲುಪುತ್ತದೆ.
3. ಕೇರಳ & ಹೈದರಾಬಾದ್ ವಂದೇ ಭಾರತ್ ರೈಲು: ಈ ರೈಲು ಕೇರಳದೊಂದಿಗೆ ಬೆಂಗಳೂರಿನ ಸಂಪರ್ಕವನ್ನು ಬಲಪಡಿಸುತ್ತದೆ. ಎರ್ನಾಕುಲಂ ವಂದೇ ಭಾರತ್ ರೈಲು ಕೆಎಸ್ಆರ್ ಬೆಂಗಳೂರಿನಿಂದ ಬೆಳಗ್ಗೆ 5.10ಗಂಟೆ ಹೊರಡುತ್ತದೆ. ಸೇಲಂ, ಈರೋಡ್, ತಿರುಪ್ಪೂರು, ಕೊಯಮತ್ತೂರು, ಪಾಲಕ್ಕಾಡ್ ಮತ್ತು ತ್ರಿಶೂರ್ ಮೂಲಕ ಸಾಗಿ ಮಧ್ಯಾಹ್ನ 1.50 ಕ್ಕೆ ಎರ್ನಾಕುಲಂಗೆ ತಲುಪುತ್ತದೆ. 638 ಕಿ.ಮೀ ದೂರವನ್ನು 8.40 ಗಂಟೆಗಳಲ್ಲಿ ಕ್ರಮಿಸುತ್ತದೆ.
4. ಧಾರವಾಡ ವಂದೇ ಭಾರತ್ ರೈಲು: ಈ ರೈಲು ಕೆಎಸ್ಆರ್ ಬೆಂಗಳೂರಿನಿಂದ ಬೆಳಗ್ಗೆ 6 ಗಂಟೆಗೆ ಹೊರಡುತ್ತದೆ. ಯಶವಂತಪುರ, ತುಮಕೂರು, ದಾವಣಗೆರೆ, ಹಾವೇರಿ ಮತ್ತು ಹುಬ್ಬಳ್ಳಿ ಮೂಲಕ ತೆರಳಿ ಮಧ್ಯಾಹ್ನ 12.25 ಕ್ಕೆ ಗಮ್ಯ ಸ್ಥಾನ ತಲುಪುತ್ತದೆ. ಈ 500 ಕಿಮೀ ಪ್ರಯಾಣಕ್ಕೆ ರೈಲು 6.25 ಸಮಯ ಪಡೆಯುತ್ತದೆ.
5. ಬೆಳಗಾವಿ ವಂದೇ ಭಾರತ್ ರೈಲು: ಬೆಂಗಳೂರು ಕೆಎಸ್‌ಆರ್ ನಿಲ್ದಾಣದಿಂದ ಮಧ್ಯಾಹ್ನ 2.20ಗಂಟೆಗೆ ಪ್ರಯಾಣ ಆರಂಭಿಸುತ್ತದೆ. ಯಶವಂತಪುರ, ತುಮಕೂರು, ದಾವಣಗೆರೆ, ಹಾವೇರಿ ಮತ್ತು ಹುಬ್ಬಳ್ಳಿ ಮಾರ್ಗವಾಗಿ ಸಾಗುತ್ತದೆ. ರಾತ್ರಿ 10.40 ಗಂಟೆಗೆ ಬೆಳಗಾವಿ ತಲುಪುತ್ತದೆ. ಒಟ್ಟು 610 ಕಿ.ಮೀ. ದೂರವನ್ನು 08.20 ಗಂಟೆಗಳ ಸಮಯದಲ್ಲಿ ಕ್ರಮಿಸಲಿದೆ.
6. ಕಲಬುರಗಿ ವಂದೇ ಭಾರತ್ ರೈಲು: ಇದು ಬೆಂಗಳೂರಿನ ಎಸ್‌ಎಂವಿಟಿಯಿಂದ ಬೆಳಗ್ಗೆ 5.15 ಗಂಟೆಗೆ ಹೊರಟು ಯಲಹಂಕಾ, ಅನಂತಪುರ, ಗುಂಟಕಲ್, ಮಂತ್ರಾಲಯ, ರಾಯಚೂರು, ಯಾದಗಿರಿಯನ್ನು ದಾಟಿ ಮಧ್ಯಾಹ್ನ 1.45 ಕ್ಕೆ ಕಲಬುರಗಿ ಸೇರುತ್ತದೆ. ಎಂಟೂವರೆ ಗಂಟೆಗಳಲ್ಲಿ 550 ಕಿ.ಮೀ. ದೂರ ಪ್ರಯಾಣ ಮಾಡುತ್ತದೆ.
7. ಕಾಚಿಗುಡ ವಂದೇ ಭಾರತ್ ರೈಲು: ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಮಧ್ಯಾಹ್ನ 2.45ಕ್ಕೆ ಹೊರಟು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯ, ಧರ್ಮಾವರಂ, ಅನಂತಪುರ ಮೂಲಕ ಸಂಚರಿಸಿ ಕರ್ನೂಲು, ಮಹೆಬೂಬ್‌ನಗರ ಮಾರ್ಗವಾಗಿ ಸಂಚರಿಸುತ್ತದೆ. ರಾತ್ರಿ 11.15ಗಂಟೆಗೆ ಕಾಚಿಗುಡ ನಿಲ್ದಾಣ ತಲುಪುತ್ತದೆ. ಎಂಟೂವರೆ ಗಂಟೆಯಲ್ಲಿ ಈ ರೈಲು 610 ಕಿ.ಮೀ. ದೂರ ಕ್ರಮಿಸುತ್ತದೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ.
Credit: Oneindia


Click it and Unblock the Notifications








