ಗಿಲ್ಲಿ ವಿಚಾರದಲ್ಲಿ ಜನಕ್ಕೆ ಅಷ್ಟು ಕ್ರೇಜ್ ಹುಚ್ಚುತನ ಬೇಡ..; ಕಾವ್ಯಾ ಹೀಗಂದಿದ್ಯಾಕೆ?
ಗಿಲ್ಲಿ ಹಾಗೂ ಕಾವ್ಯಾ ಬಿಗ್‌ಬಾಸ್ ಮನೆ ಒಳಗೆ ಹೋದ ದಿನದಿಂದ ವೀಕ್ಷಕರ ಅಚ್ಚುಮೆಚ್ಚು ಅನ್ನಿಸಿಕೊಂಡುಬಿಟ್ರು. ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತು ಶೋ ಆಡಿದ್ದರು. ಇಬ್ಬರೂ ಫಿನಾಲೆವರೆಗೂ ಬಂದಿದ್ದರು. ಅಂತಿಮವಾಗಿ ಗಿಲ್ಲಿ ವಿನ್ನರ್ ಆಗಿ ಟ್ರೋಫಿ ಎತ್ತಿ ಹಿಡಿದ್ರೆ ಕಾವ್ಯಾ 3ನೇ ರನ್ನರ್ ಅಪ್ ಎನಿಸಿಕೊಂಡರು.
ಇಬ್ಬರಿಗೂ ಟಾಪ್ -2 ಹಂತದವರೆಗೆ ಹೋಗುವ ಆಸೆ ಇತ್ತು. ಗಿಲ್ಲಿ ಕನಸು ಅದೇ ಆಗಿತ್ತು. ಈ ಬಗ್ಗೆ ಶೋನಲ್ಲಿ ಹೇಳಿಕೊಂಡಿದ್ದರು. ಒಂದು ಹಂತದಲ್ಲಿ ಗಿಲ್ಲಿಯಿಂದ ದೂರಾಗಿ ಏಕಾಂಗಿ ಆಡಬೇಕು ಎಂದು ಕಾವ್ಯಾ ಬಯಸಿದ್ದರು. ಆದರೆ ಗಿಲ್ಲಿ ಮಾತ್ರ ಆಕೆಯನ್ನು ಬಿಟ್ಟುಕೊಡಲಿಲ್ಲ. ಇಬ್ಬರ ನಡುವೆ ಆತ್ಮೀಯ ಸ್ನೇಹ ಬೆಳೆದಿದೆ. ಹಾಗಾಗಿ ಇಬ್ಬರೂ ಮದುವೆ ಆಗ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಅವರಿಬ್ಬರು ಮದುವೆ ಆಗಬೇಕು ಎಂದು ಕೆಲವರು ಭಾವಿಸುತ್ತಿರುವುದು ಇದೆ. ಆದರೆ ಅಷ್ಟೆಲ್ಲ ಹುಚ್ಚುತನ ಬೇಡ ಎಂದು ಕಾವ್ಯಾ ಹೇಳಿದ್ದಾರೆ.

ಜಂಟಿ ಸ್ಪರ್ಧಿಗಳಾಗಿ ಗಿಲ್ಲಿ ಹಾಗೂ ಕಾವ್ಯಾ ಬಿಗ್‌ಬಾಸ್ ಮನೆ ಒಳಗೆ ಹೋಗಿದ್ದರು. ಅದಕ್ಕೂ ಮುನ್ನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಇಬ್ಬರೂ ಸ್ಪರ್ಧಿಸಿದ್ದರು. ಅಲ್ಲೇ ಪರಿಚಯ ಇತ್ತು. ಆದರೆ ಬಿಗ್‌ಬಾಸ್ ಮನೆಯಲ್ಲಿ ಗಾಢವಾದ ಸ್ನೇಹ ಬೆಳೆಯಿತು. ಕಾವ್ಯಾರನ್ನು ಗಿಲ್ಲಿ ರೇಗಿಸುತ್ತಿದ್ದರು. ಇಬ್ಬರ ಟಾಮ್ & ಜೆರ್ರಿ ಫೈಟ್ ಅಭಿಮಾನಿಗಳ ಮನಗೆದ್ದಿತ್ತು.
ಕಾವು ಕಾವು ಎಂದು ಗಿಲ್ಲಿ ಸುತ್ತಾಡುತ್ತಿದ್ದರು. ಅಣ್ಣ ಎಂದು ಗಿಲ್ಲಿಗೆ ಕಾವ್ಯಾ ರಾಕಿ ಕಟ್ಟಿದ್ದರು. ಆದರೂ ಗಿಲ್ಲಿ ಬಿಡಲಿಲ್ಲ. ಶೋ ಮುಗಿದ ಬಳಿಕ ಇಬ್ಬರ ಮದುವೆ ಬಗ್ಗೆ ನೇರವಾಗಿ ಪ್ರಶ್ನೆಗಳು ಎದುರಾಗುತ್ತಿದೆ. ಗಿಲ್ಲಿ ಯಾವ ಹುಡುಗಿಯನ್ನು ಇಷ್ಟಪಟ್ಟು ಮದುವೆ ಆಗ್ತೀನಿ ಅಂದ್ರು ನಮ್ಮ ಅಭ್ಯಂತರ ಇಲ್ಲ ಎಂದು ಆತನ ತಂದೆ ತಾಯಿ ಹೇಳಿದ್ದಾರೆ. ಇದೀಗ ಗಿಲ್ಲಿ ಹಾಗೂ ಕಾವ್ಯಾ ಅವರನ್ನು ಇದೇ ಪ್ರಶ್ನೆ ಕೇಳಿದ್ದಕ್ಕೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಷ್ಟೆ. ಮದುವೆ ಮಾತು ಇಲ್ಲ ಎನ್ನುತ್ತಿದ್ದಾರೆ.
ಬೇಲೂರಿನ ನಾಗೇಶ್ವರ ದೇವಸ್ಥಾನದಲ್ಲಿ ಗಿಲ್ಲಿ ಹಾಗೂ ಕಾವ್ಯಾ ಅವರಿಗೆ ಬೇಗ ಕಂಕಣ ಭಾಗ್ಯ ಕೂಡಿ ಬರಲಿ ಎಂದು ಅಭಿಮಾನಿಯೊಬ್ಬರು ಪ್ರಾರ್ಥಿಸಿದ್ದರು. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಅಶ್ವವೇಗ ವಾಹಿನಿ ಸಂದರ್ಶನದಲ್ಲಿ ಕಾವ್ಯಾಗೆ ಪ್ರಶ್ನೆ ಎದುರಾಗಿತ್ತು. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಕಾವ್ಯಾ ಪ್ರತಿಕ್ರಿಯಿಸಿ ಗಿಲ್ಲಿ ಜೊತೆ ಮದುವೆ ಆಗುವ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
"ನಾನು ಗಿಲ್ಲಿಯನ್ನು ಆ ದೃಷ್ಟಿಯಲ್ಲಿ ನೋಡೇಯಿಲ್ಲ. ಸ್ನೇಹಿತನಾಗಿ ನಮ್ಮಿಬ್ಬರ ನಡುವೆ ಬಾಂಧವ್ಯ ಮೂಡಿದೆ. ಅದು ಬಿಟ್ಟು ಗಿಲ್ಲಿಯನ್ನು ಮದುವೆ ಆಗಬೇಕು ಎನ್ನುವ ದೃಷ್ಟಿಯಲ್ಲಿ ನೋಡಿಲ್ಲ. ನಾನು ಮಾನಸಿಕವಾಹಿ ಮದುವೆ, ರಿಲೇಷನ್‌ಶಿಪ್ ಅದಕ್ಕೆಲ್ಲಾ ಸಿದ್ಧಳಿಲ್ಲ. ಹಾಗಾಗಿ ಆ ಶುದ್ಧ ಸ್ನೇಹ ಅದೇರೀತಿ ಇರಲಿ. ಈ ವಿಚಾರದಲ್ಲಿ ಜನರಿಗೆ ಅಷ್ಟು ಕ್ರೇಜ್, ಹುಚ್ಚುತನ ಬೇಡ ಅನ್ನಿಸುತ್ತೆ" ಎಂದು ಕಾವ್ಯಾ ಹೇಳಿದ್ದಾರೆ.
ಗಿಲ್ಲಿ ಸಿನಿಮಾ ನಿರ್ದೇಶಕನಾಗಬೇಕು ಎಂದು ಕಾವ್ಯಾ ಕೂಡ ಬಯಸಿದ್ದಾರೆ. ಒಂದು ವೇಳೆ ಅವಕಾಶ ಸಿಕ್ಕರೆ ಆ ಸಿನಿಮಾದಲ್ಲಿ ನಟಿಸುತ್ತೀನಿ ಎಂದು ಹೇಳುತ್ತಿದ್ದಾರೆ. ಕಾವ್ಯಾ ಅವರನ್ನು ಮದುವೆ ಆಗುವ ಬಗ್ಗೆ ಗಿಲ್ಲಿಗೂ ಪಬ್ಲಿಕ್ ನ್ಯೂಸ್ ಸಂದರ್ಶನದಲ್ಲಿ ನೇರವಾಗ ಪ್ರಶ್ನೆ ಎದುರಾಗಿತ್ತು. "ಕೈಯಲ್ಲಿರುವ ಬ್ರೇಸ್‌ಲೈಟ್ ತೆಗೆಯುವುದಿಲ್ಲ. ಆಕೆಯನ್ನು ಮದುವೆ ಆಗಲ್ಲ. ಆಕೆ ಒಳ್ಳೆ ಸ್ನೇಹಿತೆ ಅಷ್ಟೆ. ಸ್ನೇಹಿತರಾಗಿಯೇ ಇರ್ತೀವಿ. ನಾನು ಇನ್ನು ಸಿಂಗಲ್.. ಎರಡ್ಮೂರು ವರ್ಷದಲ್ಲಿ ಮದುಬೆ ಆಗಬೇಕು" ಎಂದು ಗಿಲ್ಲಿ ವಿವರಿಸಿದ್ದಾರೆ.
Credit: Filmibeat


Click it and Unblock the Notifications








