ಬಿಎಂಟಿಸಿ ಬಸ್‌ನಲ್ಲಿ ಮರೆತುಬಿಟ್ಟ ಚಿನ್ನದ ಸರಗಳಿದ್ದ ಬ್ಯಾಗ್ ಹಿಂತಿರುಗಿಸಿದ ಸಿಬ್ಬಂದಿಗೆ ಸಲಾಂ ಎಂದ ಮಹಿಳೆ: ವಿಡಿಯೋ ವೈರಲ್
BMTC: ಈಗಿನ ಕಾಲದಲ್ಲಿ ಒಂದು ರೂಪಾಯಿ ಸಿಕ್ಕರೂ ಬಿಡುವುದಿಲ್ಲ. ಅದರಲ್ಲೂ ಹೆಚ್ಚಿನ ಪ್ರಮಾಣದ ಹಣ, ಚಿನ್ನ ಸಿಕ್ಕರಂತೂ ಅದನ್ನು ಯಾರಿಗೆ ಕಾಣದಂತೆ ತಮ್ಮ ಜೇಬಿಗಿಳಿಸಿರುವ ಘಟನೆಗಳು ನಡೆದಿವೆ. ಇಂತಹದ್ದರ ನಡುವೆ ಬಿಎಂಟಿಸಿ ಬಸ್‌ವೊಂದರಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಮರೆತು ಬಿಟ್ಟುಹೋಗಿದ್ದ ಚಿನ್ನದ ಸರಗಳಿದ್ದ ಬ್ಯಾಗ್ ಅನ್ನು ಹಿಂತಿರುಗಿಸಿ ಚಾಲಕ, ನಿರ್ವಾಹಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಮಾಕರ ಬಳಿ ಸುಲಿಗೆ ಮಾಡುವುದನ್ನು ಕೇಳಿಯೇ ಇರುತ್ತೇವೆ. ಮತ್ತೊಂದೆಡೆ, ಸಿಕ್ಕ ವಸ್ತುಗಳನ್ನು ಮಾಲೀಕರಿಗೆ ಹಿಂತಿರುಗಿಸಿದ ಅಪರೂಪದ ಘಟನೆಗಳು ಕೂಡ ನಡೆದಿವೆ. ಹಾಗೆಯೇ ಇದೀಗ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರಬ್ಬರು ಬಿಟ್ಟು ಹೋಗಿದ್ದ ಚಿನ್ನದ ಸರಗಳಿದ್ದ ಬ್ಯಾಗ್ ಹಿಂತಿರುಗಿಸಿದ ಚಾಲಕ ಹಾಗೂ ಕಂಡಕ್ಟರ್‌ಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.

ಹೌದು.. ಬೆಂಗಳೂರಿನಂತಹ ನಗರದಲ್ಲಿ ಯಾವುದಾದರೂ ವಸ್ತುಗಳು ಕಳೆದುಹೋದರೆ, ಅದು ಮತ್ತೆ ಸಿಗುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ. ಇಂತಹದ್ದರ ನಡುವೆಯೂ ಈ ಕಾಲದಲ್ಲಿ ಮಾನವೀಯತೆ ಮೆರೆಯುವವರು ಇದ್ದಾರೆ ಎನ್ನುವುದಕ್ಕೆ ಈ ಬಿಎಂಟಿಸಿ ಸಿಬ್ಬಂದಿಯೇ ಸಾಕ್ಷಿ. ಮಹಿಳೆಯು ತಮ್ಮ ಬ್ಯಾಗ್ ಅನ್ನು KA57F-1591 ನಂಬರ್‌ನ ಬಸ್‌ನಲ್ಲಿ ಮರೆತು ಬಿಟ್ಟುಹೋಗಿದ್ದರು.
ಸಾರ್ವಜನಿಕರಿಂದ ಮೆಚ್ಚುಗೆಗಳ ಸುರಿಮಳೆ: ಬಳಿಕ, ಬಿಎಂಟಿಸಿ ಬಸ್ ಕಂಡಕ್ಟರ್ ಆ ಮಹಿಳೆಯ ಕರೆಸಿ ಬ್ಯಾಗ್ ಅನ್ನು ಹಿಂತಿರುಗಿಸಿ, ಮಾನವೀಯತೆ ಮೆರೆದಿದ್ದಾರೆ. ಬ್ಯಾಗ್ ನೋಡುತ್ತಿದ್ದಂತೆ ಮಹಿಳೆ ಭಾವುಕರಾಗಿ, ಅದರಲ್ಲಿದ್ದ ಬೆಲೆ ಬಾಳುವ ಆಭರಣ ಹುಡುಕಿ, ಅದನ್ನು ನೋಡಿ ಕಣ್ಣೀರಿಟ್ಟಿದ್ದಾರೆ. ಬಳಿಕ ಸಿಬ್ಬಂದಿಯ ಪ್ರಾಮಾಣಿಕತೆಗೆ ಧನ್ಯವಾದ ತಿಳಿಸಿದ್ದಾರೆ. ಆಗ ಅವರನ್ನು ಸಿಬ್ಬಂದಿ ಸಮಾಧಾನಪಡಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.
ಪ್ರಾಮಾಣಿಕತೆ ಮೆರೆದ ಬಿಎಂಟಿಸಿ ಸಿಬ್ಬಂದಿ: ಬೆಂಗಳೂರು ನಗರದ ಬಿಎಂಟಿಸಿ ಬಸ್‌ನಲ್ಲಿ ಅಪರೂಪದ ಮಾನವೀಯತೆ ಘಟನೆ ನಡೆದಿದೆ. ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಚಿನ್ನದ ಸರಗಳಿರುವ ಬ್ಯಾಗ್ ಅನ್ನು KA57F-1591 ಸಂಖ್ಯೆಯ ಬಸ್‌ನಲ್ಲಿ ಮರೆತು ಬಿಟ್ಟುಹೋಗಿದ್ದರು. ಸಾಮಾನ್ಯವಾಗಿ ನಗರದಲ್ಲಿ ವಸ್ತುಗಳು ಮರಳಿ ಸಿಗುವುದಿಲ್ಲ. ಆದರೆ, ಈ ಬಸ್ ಚಾಲಕ ಮತ್ತು ಕಂಡಕ್ಟರ್ ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಬಿಎಂಟಿಸಿ ಬಸ್ ಸಿಬ್ಬಂದಿ ಬ್ಯಾಗ್ ಕಂಡು ಮಹಿಳೆಯನ್ನು ಸಂಪರ್ಕಿಸಿ, ಅದನ್ನು ಸುರಕ್ಷಿತವಾಗಿ ಹಿಂತಿರುಗಿಸಿದ್ದಾರೆ. ಬ್ಯಾಗ್ ನೋಡಿದ ಮಹಿಳೆ ಭಾವುಕರಾಗಿ ಕಣ್ಣೀರು ಹಾಕಿ ಧನ್ಯವಾದ ಸೂಚಿಸಿದ್ದಾರೆ. ಈ ಘಟನೆ ಸಮಾಜದಲ್ಲಿ ಮಾನವೀಯತೆ ಮತ್ತು ಪ್ರಾಮಾಣಿಕತೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ.
Credit: Oneindia


Click it and Unblock the Notifications








