Bengaluru Railways: ಬೆಂಗಳೂರು ರೈಲು ಪ್ರಯಾಣಿಕರಿಗೆ ಬಂಪರ್ ಸುದ್ದಿ! ರೈಲ್ವೇ ಸಚಿವರಿಂದ ಮಹತ್ವದ ಘೋಷಣೆ
ಬೆಂಗಳೂರು: ಭಾರತೀಯ ರೈಲ್ವೇ ಇಲಾಖೆ (Indian Railways) ಪ್ರಯಾಣಿಕರ ಅನುಕೂಲಕ್ಕಾಗಿ ಸದಾ ಏನಾದರೊಂದು ಕ್ರಮಗಳನ್ನು ಕೈಗೊಳ್ಳುತ್ತಿರುತ್ತದೆ. ಆದರೆ ಕರ್ನಾಟಕದಲ್ಲಿ ರೈಲ್ವೇ (Karnataka Railways) ಸೇವೆಗೆ ಸಂಬಂಧಿಸಿ ಹಲವು ಬೇಡಿಕೆಗಳಿವೆ. ಅದರಲ್ಲಿ ಬೆಂಗಳೂರಿನ ನಾಯಂಡಹಳ್ಳಿ ರೈಲ್ವೇ ನಿಲ್ದಾಣದಲ್ಲಿ (Nayandahalli Railway Station) ಬಹುವರ್ಷಗಳ ಬೇಡಿಕೆಗೆ ಇದೀಗ ಕೊನೆಗೂ ಸರ್ಕಾರ ಅಸ್ತು ಎಂದಿದೆ. ಇದೀಗ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ (V.Somanna) ಅವರು ಮಂಗಳವಾರ (ಫೆ.17, 2026) ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.

ಹೌದು, ಬೆಂಗಳೂರಿನ ನಾಯಂಡಹಳ್ಳಿ ರೈಲ್ವೇ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಬಹುಕಾಲದ ಬೇಡಿಕೆ ಕೊನೆಗೂ ಈಡೇರಿದೆ. ಈ ಬಗ್ಗೆ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮಂಗಳವಾರ (ಫೆ.17, 2026) ಈ ನಿಲುಗಡೆಗೆ ಅಧಿಕೃತ ಚಾಲನೆ ನೀಡಿದರು. ಈ ಮೂಲಕ ಪಶ್ಚಿಮ ಬೆಂಗಳೂರು ಭಾಗದ ನಿವಾಸಿಗಳಿಗೆ ಮತ್ತು ಸುತ್ತಮುತ್ತಲ ಪ್ರದೇಶಗಳಾದ ನಾಗರಬಾವಿ, ಆರ್.ಆರ್.ನಗರ, ಚಂದ್ರಲೇಔಟ್, ವಿಜಯನಗರ ಮುಂತಾದವುಗಳ ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಲಿದೆ.
ನಾಲ್ಕು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಹಸಿರು ನಿಶಾನೆ:
ಹೌದು, ಇನ್ಮೇಲೆ ಬೆಂಗಳೂರಿನ ನಾಯಂಡಹಳ್ಳಿ ರೈಲ್ವೇ ಸ್ಟೇಷನ್‌ನಲ್ಲಿ ಜನರಲ್ ರೈಲು ಮಾತ್ರವಲ್ಲದೇ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳು ಸಹ ನಿಲುಗಡೆ ಹೊಂದಿರುತ್ತದೆ. ಇದುವರೆಗೆ ನಾಯಂಡಹಳ್ಳಿ ನಿಲ್ದಾಣದಲ್ಲಿ ಕೇವಲ ಪ್ಯಾಸೆಂಜರ್ ರೈಲುಗಳು ಮಾತ್ರ ನಿಲ್ಲುತ್ತಿದ್ದವು. ಇದರಿಂದ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿತ್ತು. ಆದ್ರೆ ಬಹು ವರ್ಷಗಳಿಂದ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗಾಗಿ ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು. ಇದೀಗ ಕೊನೆಗೂ ಪ್ರಯಾಣಿಕರ ಬೇಡಿಕೆ ಈಡೇರಿದೆ. ಆ ಪ್ರಕಾರ ಇನ್ಮೇಲೆ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆ ಹೊಂದಿದೆ.
ಇನ್ನು ಈ ನಾಯಂಡಹಳ್ಳಿ ರೈಲ್ವೇ ನಿಲ್ದಾಣವು ಬೆಂಗಳೂರಿನ ನೈಋತ್ಯ ಭಾಗದಲ್ಲಿದೆ. ಹಲಬು ವಸತಿ ಮತ್ತು ಐಟಿ ಕಂಪನಿಗಳ ನಡುವಿನಲ್ಲಿರುವ ಇದು, ಪ್ರಯಾಣಿಕರ ಬೇಡಿಕೆಯ ರೈಲು ನಿಲ್ದಾಣವಾಗಿದೆ. ಆದರೆ ಹಲವು ವರ್ಷಗಳಿಂದ ಈ ರೈಲ್ವೇ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆ ಹೊಂದಿಲ್ಲ. ಈ ಪರಿಣಾಮ ಪ್ರಯಾಣಿಕರು ಕೂಡಾ ಎಕ್ಸ್‌ಪ್ರೆಸ್ ರೈಲು ಹತ್ತಬೇಕೆಂದರೆ ಕೆಎಸ್‌ಆರ್ ಬೆಂಗಳೂರು ಅಥವಾ ಕೆಂಪೇಗೌಡ ಸ್ಟೇಷನ್‌ಗಳಿಗೆ ಹೋಗಬೇಕಿತ್ತು. ಇದರಿಂದ ಸಮಯ, ವೆಚ್ಚ ಮತ್ತು ಪ್ರಯಾಣವೂ ದೂರವಾಗುತ್ತಿತ್ತು. ಆದ್ದರಿಂದ ಪ್ರಯಾಣಿಕರು ಈ ಸಮಸ್ಯೆಯನ್ನು ಸರ್ಕಾರದ ಮುಂದಿಟ್ಟಿದ್ದರು.
ಇದೀಗ ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೇ ಸಚಿವಾಲಯ ಮತ್ತು ದಕ್ಷಿಣ ಪಶ್ಚಿಮ ರೈಲ್ವೇ (SWR) ಕೊನೆಗೂ ಒಪ್ಪಿಗೆ ನೀಡಿದೆ, ಈ ಮೂಲಕ ನಾಲ್ಕು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಾಯೋಗಿಕ ನಿಲುಗಡೆ ನೀಡುವಂತೆ ಸೂಚನೆ ನೀಡಲಾಗಿದೆ.
ನಿಲುಗಡೆ ಹೊಂದಿರುವ 4 ಎಕ್ಸ್‌ಪ್ರೆಸ್ ರೈಲುಗಳಿವು:
- ಚಾಮುಂಡಿ ಎಕ್ಸ್‌ಪ್ರೆಸ್ (16215/16216): ಮೈಸೂರು-ಕೆಎಸ್‌ಆರ್ ಬೆಂಗಳೂರು ನಡುವೆ ಈ ರೈಲು ಸಂಚರಿಸುತ್ತದೆ.
- ಬಸವ ಎಕ್ಸ್‌ಪ್ರೆಸ್ (17307/17308): ಇದು ಮೈಸೂರಿನಿಂದ ಬಾಗಲಕೋಟೆ ನಡುವಿನ ರೈಲು. ಉತ್ತರ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ.
- ತೂತುಕುಡಿ-ಮೈಸೂರು ಎಕ್ಸ್‌ಪ್ರೆಸ್ (16235/16236): ತಮಿಳುನಾಡಿನ ತೂತುಕುಡಿಯಿಂದ ಮೈಸೂರಿಗೆ ಪ್ರಯಾಣ ಬೆಳೆಸುತ್ತದೆ.
- ಗೋಲ್ ಗುಂಬಜ್ ಎಕ್ಸ್‌ಪ್ರೆಸ್ (16535/16536): ಮೈಸೂರು-ಪಂಢರಪುರ ನಡುವೆ ಸಂಪರ್ಕಿಸುತ್ತದೆ. ಈ ರೈಲು ಮಹಾರಾಷ್ಟ್ರಕ್ಕೂ ಸಂಚಾರ ಮಾಡುತ್ತದೆ.
Credit: Goodreturns


Click it and Unblock the Notifications








