ಇಬ್ಬರ ಮದುವೆ ಚರ್ಚೆ; ಕಾವ್ಯಾಗಿಂತ ನನಗೆ ಜಾಸ್ತಿ ಮುಯ್ಯಿ ಹಣ ಬೀಳುತ್ತೆ ಎಂದ ಗಿಲ್ಲಿ ನಟ

By Narayana M

ಬಿಗ್‌ಬಾಸ್ ಮನೆಯಲ್ಲಿ ಒಟ್ಟಾಗಿ ಗುರ್ತಿಸಿಕೊಂಡು ವೀಕ್ಷಕರ ಮನಗದ್ದ ಗಿಲ್ಲಿ ಹಾಗೂ ಕಾವ್ಯಾ ಅಭಿಮಾನಿಗಳ ಫೇವರಿಟ್ ಜೋಡಿ. ಇಬ್ಬರ ನಡುವೆ ಆತ್ಮೀಯ ಸ್ನೇಹವಿದೆ. ಇಬ್ಬರೂ ಮದುವೆ ಆಗಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಈ ಬಗ್ಗೆ ನೇರವಾಗಿ ಪ್ರಶ್ನೆ ಎದುರಾದಾಗ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಇದೀಗ ಹಂತಿ ಉತ್ಸವದ ವೇದಿಕೆಯಲ್ಲಿ ಕೂಡ ಈ ವಿಚಾರ ಚರ್ಚೆಯಾಗಿದೆ.

ಈ ಬಾರಿ ಹಂಪಿ ಉತ್ಸವ ಬಹಳ ಅದ್ಧೂರಿಯಾಗಿ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಬಿಗ್‌ಬಾಸ್ ಸ್ಪರ್ಧಿಗಳಾದ ಗಿಲ್ಲಿ ಹಾಗೂ ಕಾವ್ಯಾ ಅತಿಥಿಗಳಾಗಿ ಹೋಗಿ ಬಂದಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೆ ಗಿಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಭೆ ಸಮಾರಂಭಗಳಲ್ಲಿ ಮುಖ್ಯ ಅತಿಥಿಯಾಗಿ ಮಿಂಚುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಕಾವ್ಯಾ ಜೊತೆಗೂ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಹಂಪಿ ಉತ್ಸವದಲ್ಲಿ ಮತ್ತೆ ಈ ಜೋಡಿ ಗಮನ ಸೆಳೆದಿದೆ.


Gilli Kavya Marriage Buzz Resurfaces at Hampi Utsav Bigg Boss Duo Clarify They Are Just Friends

ನಿರಂಜನ್ ನಿರೂಪಣೆಯಲ್ಲಿ ಹಂಪಿ ಉತ್ಸವ ಕಾರ್ಯಕ್ರಮ ನಡೆದಿದೆ. ಈ ವೇಳೆ ವೇದಿಕೆಯಲ್ಲಿ ಗಿಲ್ಲಿ ಹಾಗೂ ಕಾವ್ಯಾ ಇಬ್ಬರನ್ನು ನಿರಂಜನ್ ಮಾತನಾಡಿಸಿದ್ದಾರೆ. ಇಬ್ಬರೂ ಮದುವೆ ಆಗಬೇಕೆಂದು ಅಭಿಮಾನಿಗಳು ಬಯಸುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮತ್ತೊಮ್ಮೆ ಗಿಲ್ಲಿ ತಮ್ಮ ಕಾಮಿಡಿ ಟೈಮಿಂಗ್ ಮೂಲಕ ನೆರೆದವರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ನಿರಂಜನ್: ಈ ಜೋಡಿ ಎಷ್ಟು ಜನಕ್ಕೆ ಇಷ್ಟ?

ಗಿಲ್ಲಿ: ಸುಮ್ನಿರಣ್ಣ.. ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೇ ಮದುವೆ ಮಾಡಿಸ್ತೀವಿ.. ಅದು ಇದು ಅಂತೆಲ್ಲಾ ಹಬ್ಬಿಸಿಬಿಟ್ಟಿದ್ರು..

ನಿರಂಜನ್: ಬಿಗ್‌ಬಾಸ್ ಮನೆಯಿಂದ ಹೊರಬಂದಾಗ ಇಬ್ಬರ ಕಟೌಟ್ ಹಾಕಿದ್ರು.. ಹೆಣ್ಣಿನ ಕಡೆ, ಗಂಡಿನ ಕಡೆ ಅಂತ.. ಏನಿದು ವಿಷ್ಯ?

ನಿರಂಜನ್: ಗಂಡಿನ ಕಡೆ ಎಷ್ಟು ಜನ? ಹೆಣ್ಣಿನ ಕಡೆ ಎಷ್ಟು ಜನ?(ಗಂಡಿನ ಕಡೆ ಎಷ್ಟು ಜನ ಎಂದಾಗ ದೊಡ್ಡ ಸಂಖ್ಯೆಯಲ್ಲಿ ಜನ ಕಿರುಚಿದ್ದಾರೆ)

ಗಿಲ್ಲಿ: ಈ ಸದ್ದು ಕೇಳಿದ್ರೆ, ನನಗೆ ಮುಯ್ಯಿ ಚೆನ್ನಾಗಿ ಬೀಳುತ್ತೆ.

ನಿರಂಜನ್: ಏನಿದು ಮದುವೆ ವಿಷ್ಯ..

ಗಿಲ್ಲಿ: ಏನಿಲ್ಲ ಅಣ್ಣ, ಸ್ನೇಹಿತರು. ಸ್ನೇಹಿತರಾಗಿ ಇದ್ದೀವಿ. ಜನ ಪ್ರೀತಿ ಕೊಡ್ತಿದ್ದಾರೆ ಕೊಡಲಿ.

ನಿರಂಜನ್: ಈ ಪ್ರೀತಿಗೆ ಏನಂತೀರಾ?

ಕಾವ್ಯಾ: ನಮ್ಮಿಬ್ಬರದ್ದು ಒಳ್ಳೆ ಸ್ನೇಹ, ಗೆಳೆತನ ಅಷ್ಟೆ.

ಗಿಲ್ಲಿ: ಒಂದೊಳ್ಳೆ ಗೆಳೆತನದ ಪ್ರೀತಿ ಅಷ್ಟೆ ಅಣ್ಣ.

ಬಿಗ್‌ಬಾಸ್‌ ಕನ್ನಡ ಸೀಸನ್-12ರಲ್ಲಿ 112 ದಿನಗಳ ಕಾಲ ದೊಡ್ಮನೆ ಒಳಗಿದ್ದ ಕಾವ್ಯಾ ಹಾಗೂ ಗಿಲ್ಲಿ ಫಿನಾಲೆವರೆಗೂ ಹೋಗಿದ್ದರು. ಗಿಲ್ಲಿ ಶೋ ವಿನ್ನರ್ ಆಗಿದ್ದರು. ಕಾವ್ಯಾ 3ನೇ ರನ್ನರ್ ಅಪ್ ಆಗಿದ್ದರು. ರಕ್ಷಿತಾ ರನ್ನರ್ ಆಗಿದ್ದರೆ ಅಶ್ವಿನಿ ಗೌಡ 2ನೇ ರನ್ನರ್ ಅಪ್ ಆಗಿದ್ದರು.

ಜಂಟಿ ಸ್ಪರ್ಧಿಗಳಾಗಿ ಕೈ ಕೈ ಹಿಡಿದು ಗಿಲ್ಲಿ ಹಾಗೂ ಕಾವ್ಯಾ ಮನೆ ಒಳಗೆ ಹೋಗಿದ್ದರು. ಕಾವು ಕಾವು ಎಂದು ಕಾವ್ಯಾ ಹಿಂದೆ ಗಿಲ್ಲಿ ಹೋಗುತ್ತಿದ್ದರು. ಕೊನೆಯವರೆಗೂ ಆಕೆಯನ್ನು ಬಿಟ್ಟುಕೊಡಲಿಲ್ಲ. ಗಿಲ್ಲಿ ಇಲ್ಲದೇ ಕಾವ್ಯಾ ಜೀರೋ ಎನ್ನುವ ಚರ್ಚೆ ನಡೀತು. ಒಂದು ಹಂತದಲ್ಲಿ ಆತನಿಂದ ದೂರಾಗಿ ಆಡಲು ಕಾವ್ಯಾ ಯತ್ನಿಸಿದ್ದರು. ಅದು ಸಾಧ್ಯವಾಗಲಿಲ್ಲ. ಕೊನೆಗೆ ಒಟ್ಟಾಗಿಯೇ ಫಿನಾಲೆ ಪ್ರವೇಶಿಸಿದ್ದರು.

ಬಿಗ್‌ಬಾಸ್ ಶೋ ಮುಗಿದ ಬಳಿಕ ಕೂಡ ಇಬ್ಬರ ಸ್ನೇಹ ಮುಂದುವರೆದಿದೆ. ಗಿಲ್ಲಿ ಸಿನಿಮಾ ನಿರ್ದೇಶನ ಮಾಡುವ ಕನಸು ಕಾಣುತ್ತಿದ್ದಾರೆ. ಗಿಲ್ಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸುವುದಾಗಿ ಕಾವ್ಯಾ ಹೇಳಿದ್ದಾರೆ. ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಶೀಘ್ರದಲ್ಲೇ ಗಿಲ್ಲಿ ಮುಂದಿನ ನಡೆ ಬಗ್ಗೆ ಮಾಹಿತಿ ಸಿಗಲಿದೆ.

Credit: Filmibeat

More from DriveSpark

Article Published On: Sunday, February 15, 2026, 11:00 [IST]
Read more on notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+