Baba Vanga Gold Prediction: ಚಿನ್ನ, ಬೆಳ್ಳಿದರ ಬಗ್ಗೆ ಬಾಬಾ ವಂಗಾ ಶಾಕಿಂಗ್ ಭವಿಷ್ಯ! ಇಳಿಕೆಯಾಗುತ್ತಾ?
ಬಲ್ಗೇರಿಯಾ ಮೂಲದ ಬಾಬಾ ವಂಗಾ (Baba Vanga) ಸದಾ ಒಂದಲ್ಲೊಂದು ಭವಿಷ್ಯವಾಣಿಗಳಿಂದ ಸುದ್ದಿಯಲ್ಲಿರುತ್ತಾರೆ. ಚಿಕ್ಕವಯಸ್ಸಿನಲ್ಲೇ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದ ಬಾಬಾ ವಂಗಾ, ಭವಿಷ್ಯ ನುಡಿಯುವುದರಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದಾರೆ. "ಬಾಲ್ಕನ್ ನಾಸ್ಟ್ರಾಮಸ್" ಎಂದೇ ಕರೆಯಲ್ಪಡುವ ಬಾಬಾ ವಂಗಾ, ತಮ್ಮ ಜೀವಿತಾವಧಿಯಲ್ಲಿ ಅನೇಕ ಭವಿಷ್ಯಗಳನ್ನು ನುಡಿದಿದ್ದರು ಎನ್ನಲಾಗಿದೆ. ಅದರಲ್ಲಿ ಹಲವಾರು ನಿಜವೂ ಆಗಿದೆಯಂತೆ. ಇದೀಗ ಚಿನ್ನದ ಬೆಲೆಗೆ (Gold Rate) ಸಂಬಂಧಿಸಿದಂತೆ ಬಾಬಾ ವಂಗಾ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು, ಬಾಬಾ ವಂಗಾ ಭವಿಷ್ಯವಾಣಿಗಳು (Baba Vanga Predictions), ಅದರಲ್ಲೂ ಚಿನ್ನ, ಬೆಳ್ಳಿ, ತಾಮ್ರ ಬೆಲೆಗಳ ಕುರಿತಾದ ಭವಿಷ್ಯ ಮತ್ತೆ ಸುದ್ದಿಯಲ್ಲಿದೆ. 'ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್' ಎಂದೇ ಖ್ಯಾತರಾದ ಈ ಬಲ್ಗೇರಿಯನ್ ಬಾಬಾ ವಂಗಾ, ಜಗತ್ತು 2026ರಲ್ಲಿ ತೀವ್ರ ಆರ್ಥಿಕ ಸಮಸ್ಯೆಯನ್ನು ಎದುರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ. ಅಂತಹ ಸಮಯದಲ್ಲಿ ಈ ಲೋಹಗಳು ಹೂಡಿಕೆಗೆ ಪ್ರಮುಖ ಆಯ್ಕೆಗಳಾಗುತ್ತವೆ ಎಂದಿದ್ದರು ಎನ್ನಲಾಗಿದೆ.
ಏನಿದು ಬಾಬಾ ವಂಗಾ ಭವಿಷ್ಯ?
ಬಾಬಾ ವಂಗಾ ಈ ಬಾರಿ ಚಿನ್ನ, ಬೆಳ್ಳಿ ಮತ್ತು ತಾಮ್ರದ ಬೆಲೆ ಏರಿಕೆ ಮತ್ತು ವಿಶ್ವದಾದ್ಯಂತ ಹಣ ಕೊರತೆ ಎದುರಾಗಲಿದೆ ಎಂಬ ಭವಿಷ್ಯ ನುಡಿದಿದ್ದರು ಎಂದು ವರದಿಯಾಗಿದೆ. 2026ಕ್ಕೆ ಸಂಬಂಧಿಸಿದಂತೆ ಬಾಬಾ ವಂಗಾ ನುಡಿದಿದ್ದಾರೆ ಎಂಬ ಭವಿಷ್ಯವಾಣಿಗಳ ಬಗ್ಗೆ ಮಾಹಿತಿ ಕೆಳಗೆ ನೀಡಲಾಗಿದೆ.
ಜಾಗತಿಕ ಹಣದ ಕೊರತೆ ಅಥವಾ ಕ್ಯಾಶ್ ಕ್ರಶ್: ಬ್ಯಾಂಕ್ ನೋಟುಗಳು ಮತ್ತು ಕಾಗದದ ಹಣದ ಮೌಲ್ಯ ಕುಸಿಯಬಹುದು ಎಂದು ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗಿದೆ.
ಚಿನ್ನ, ಬೆಳ್ಳಿ, ತಾಮ್ರ ಸುರಕ್ಷಿತ ಹೂಡಿಕೆಗಳಾಗಿ ಉಳಿಯಲಿದೆ. ಅಲ್ಲದೇ ಈ ವರ್ಷ ಇವುಗಳ ಬೆಲೆಗಳು ಭಾರೀ ಏರಿಕೆ ಕಾಣಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದ ಜನರೂ ಈ ಲೋಹಗಳನ್ನು ಹೂಡಿಕೆಗೆ ಬಳಸುತ್ತಾರೆ ಎಂಬುದು ಬಾಬಾ ವಂಗಾ ಅವರ ಭವಿಷ್ಯವಾಣಿಯಾಗಿದೆ.
ನಿಜವಾಗ್ತಿದ್ಯಾ ಬಾಬಾ ವಂಗಾ ಭವಿಷ್ಯ?
ಕಳೆದ ಕೆಲವು ತಿಂಗಳುಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಏರಿಕೆ ಕಂಡಿತ್ತು. MCX ನಲ್ಲಿ, ಚಿನ್ನ 10 ಗ್ರಾಂಗೆ ₹1.80 ಲಕ್ಷ ತಲುಪಿ, ಕಳೆದ ವರ್ಷ ಸುಮಾರು 70% ಹೆಚ್ಚಾಗಿದೆ ಎಂದು ವರದಿಯಾಗಿತ್ತು. ಬೆಳ್ಳಿ ಕೂಡಾ ಕಳೆದ ತಿಂಗಳು ಪ್ರತಿ ಕಿಲೋಗೆ ₹4 ಲಕ್ಷ ದಾಟಿ, ಹೂಡಿಕೆದಾರರಿಗೆ 160% ಲಾಭ ನೀಡಿದೆ.
ಆದರೆ ಜನವರಿ 30ರಂದು, ಚಿನ್ನ, ಬೆಳ್ಳಿ ದರದ ಇಡೀ ಪರಿಸ್ಥಿತಿಯೇ ಬದಲಾಯಿತು. ಅಂದಿನಿಂದ ಮೂರು ದಿನಗಳ ಕಾಲ, ಎರಡೂ ಲೋಹಗಳ ಬೆಲೆ ತೀವ್ರ ಇಳಿಕೆ ಕಂಡವು. ಇಂದೂ ಕೂಡಾ ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಕುಸಿತವಾಗಿದೆ. ಸದ್ಯಕ್ಕೆ ಬಾಬಾ ವಂಗಾ ಭವಿಷ್ಯವಾಣಿಯಂತೆ ಯಾವುದೇ ಹಣದುಬ್ಬರ, ಹಣದ ಮೌಲ್ಯದಲ್ಲಾಗಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಇನ್ನು ಲೋಹದ ಬೆಲೆ ಕೂಡಾ ಏರಿಳಿತಗಳನ್ನು ಕಾಣುತ್ತಲೇ ಇದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
Credit: Goodreturns


Click it and Unblock the Notifications








