Gold Price: ಚಿನ್ನದ ಬೆಲೆ 2026ರಲ್ಲಿ ಇನ್ನಷ್ಟು ಏರಿಕೆ ಆಗುತ್ತಾ? ಹೂಡಿಕೆದಾರರ ಕುತೂಹಲ ಕೆರಳಿಸಿದ ಬಾಬಾ ವಂಗಾ ಭವಿಷ್ಯ

By Shankrappa Parangi

ನವದೆಹಲಿ: ದೇಶದಲ್ಲಿ ದಶಕಗಳಿಂದಲೂ ಚಿನ್ನವು (Gold Price) ಆರ್ಥಿಕ ಭದ್ರತೆ ಒದಗಿಸಬಲ್ಲ ಶಕ್ತಿಯಾಗಿದೆ. ಜಗತ್ತಿನಲ್ಲಿ ಎಲ್ಲಿಯಾದರೂ ಅನಿಶ್ಚಿತತೆ ಉಂಟಾದಾದರೆ ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನ ಮೇಲೆ ಹೂಡಿಕೆಗೆ ಮುಂದಾಗುತ್ತಾರೆ. ಅದು ಎಂತಹ ಸಂದರ್ಭದಲ್ಲೂ ಸುರಕ್ಷಿತವಾಗಿರುತ್ತದೆ, ಮೌಲ್ಯ ಕಳೆದುಕೊಳ್ಳುವುದಿಲ್ಲ ಎಂಬ ನಂಬಿಕೆ. ಸದ್ಯ ಈಗಲೇ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಹೊಸ ಗರಿಷ್ಠ ಮಟ್ಟ ತಲುಪುತ್ತಿದ್ದಂತೆ ಚಿನ್ನ ಬೆಲೆ ಏರಿಕೆ, ಇಳಿಕೆ, ಹೂಡಿಕೆ ಕುರಿತು ಚರ್ಚೆಗಳು ಜೋರಾಗಿವೆ.

2026 ರಲ್ಲಿ ಚಿನ್ನದ ಬೆಲೆಗಳು ಮತ್ತಷ್ಟು ಏರಿಕೆಯಾಗುತ್ತವೆಯೇ ಎಂಬ ಮುನ್ಸೂಚನೆಗಳ ಬಗ್ಗೆ ಹುಡುಕಾಟ ನಡೆಸಲಾಗಿದೆ. ಅದರಲ್ಲಿ ದೇಶ, ವಿಪತ್ತು, ಸಾವು, ನೋವುಗಳ ಬಗ್ಗೆ ಭವಿಷ್ಯ ನುಡಿಯುವ ಬಾಬಾ ವಂಗಾ ಅವರ ಚಿನ್ನದ ಮೇಲಿನ ಭವಿಷ್ಯವಾಣಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದು ಹೂಡಿಕೆದಾರರಲ್ಲಿ ಆಸಕ್ತಿ ಮತ್ತು ಅನುಮಾನಗಳು ಹುಟ್ಟಲು ಕಾರಣವಾಗಿದೆ.


Gold Price Outlook 2026 Market Trends Economic Shifts and the Viral Baba Vanga Predictions

ಜಾಗತಿಕ ಆರ್ಥಿಕತೆಯ ಒತ್ತಡ ಉಲ್ಭಣಿಸುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ವಾತಾವರಣ, ರಾಜಕೀಯ ಉದ್ವಿಗ್ನತೆಗಳು, ಆರ್ಥಿಕ ಅಸ್ಥಿರತೆ, ಹಣಕಾಸು ಅನಿಶ್ಚಿತತೆ ಮತ್ತು ರೂಪಾಯಿ ಮತ್ತು ಡಾಲರ್ ಮೌಲ್ಯಗಳ ಏರಿಳಿತಗಳು ಚಿನ್ನ ಮಾರುಕಟ್ಟೆಯ ಮೇಲೆ, ಬಂಗಾರ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿವೆ. ಇಂತಹ ವೇಳೆ ಅಪಾಯ ಕಡಿಮೆ ಮಾಡಿಕೊಳ್ಳಲು ಹೂಡಿಕೆದಾರರು ಚಿನ್ನದತ್ತ ಮುಖ ಮಾಡುವುದು ಸಹಜ. ಈ ಕಾರಣದಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆ ಆಗಿದೆ. ಚಿನ್ನದ ದರವು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.

Gold Price Pridiction 2026: ಈ ಕಾರಣಗಳಿಂದ 10 ಗ್ರಾಂ ಚಿನ್ನದ ದರ ₹2,10,000ಕ್ಕೆ ಏರಿಕೆ ಸಾಧ್ಯತೆ

ಚಿನ್ನದ ಬೆಲೆ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ?

ಬಲ್ಗೇರಿಯಾದ ಬಾಬಾ ವಂಗಾ ಅವರು ಅನೇಕ ಭವಿಷ್ಯವಾಣಿಗಳಲ್ಲಿ ಕೆಲವು ನಿಜವಾಗಿವೆ ಎಂದು ನಂಬಲಾಗುತ್ತದೆ. ಹೀಗಾಗಿಯೇ ಅನೇಕ ಸಂದರ್ಭಗಳಲ್ಲಿ ಅವರ ಅನುಯಾಯಿಗಳು ಬಾಬಾ ವಂಗಾರ ಮುನ್ಸೂಚನೆಯನ್ನು ಪ್ರಕಟಿಸುತ್ತಾರೆ. ಅವರ ಹೆಸರು ಕೇಳುತ್ತಿದ್ದಂತೆ ಭವಿಷ್ಯದ ಬಗ್ಗೆ ತಿಳಿಯುವ ಕುತೂಹಲ ಹೆಚ್ಚಾಗುತ್ತದೆ. ಈ ವರ್ಷ 2026 ರಲ್ಲಿ ಜಾಗತಿಕ ಆರ್ಥಿಕತೆಯು ತೀವ್ರ ಒತ್ತಡ ಎದುರಿಸಲಿದೆ. ಅದರ ಪ್ರಭಾವದಿಂದಾಗಿ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ ಎಂದು ಬಾಬಾ ವಂಗಾ ಅವರು ಹೇಳಿದ್ದರು. ಹೀಗಿದ್ದರೂ ಇದೆಲ್ಲವು ಅಧಿಕೃತ ಆರ್ಥಿಕ ಮುನ್ಸೂಚನೆಗಳಲ್ಲ ಎಂಬುದನ್ನು ಹೂಡಿಕೆದಾರರು ಗಮನದಲ್ಲಿಟ್ಟುಕೊಳ್ಳಬೇಕಿದೆ.

ಚಿನ್ನದ ದರ ಏರಿಕೆಗಳು, ಅದು ಬೀರುವ ಪರಿಣಾಮಗಳು ವದಂತಿಗಳಲ್ಲ. ಬಂಗಾದ ದರ ಏರಿಕೆಯು ಆರ್ಥಿಕ ಪರಿಸ್ಥಿತಿಯ ಸೂಚಕವಾಗಿದೆ. ಅಮೆರಿಕಾ ಫೆಡರಲ್ ರಿಸರ್ವ್‌ನ ಬಡ್ಡಿದರ ನೀತಿ, ಕೇಂದ್ರ ಬ್ಯಾಂಕ್‌ಗಳು ಹೆಚ್ಚಾಗಿ ಚಿನ್ನ-ಬೆಳ್ಳಿ ಖರೀದಿಸುತ್ತಿರುವುದು, ಹಣದುಬ್ಬರ ಮಟ್ಟ ಇವೆಲ್ಲವು ಚಿನ್ನದ ದರ ನಿರ್ಧರಿಸುತ್ತವೆ. ಹೀಗಾದಾಗ ಬೆಲೆ ಹೆಚ್ಚಾಗುತ್ತಾ ಹೋಗುತ್ತದೆ, ಮತ್ತೆ ಕುಸಿಯುತ್ತದೆ. ಕಳೆದ ಕೆಲವು ತಿಂಗಳಿನಿಂದ ಚಿನ್ನದ ಮೌಲ್ಯ ಏರಿಕೆ ಆಗುತ್ತಲೇ ಇದ್ದು, ಅದು ಯಾವಾಗ ಇಳಿಕೆ ಆಗುತ್ತದೆ. ಅದರ ಏರಿಕೆ ಕ್ರಮ ಇನ್ನೂ ಎಲ್ಲಿಯವರೆಗೂ ಮುಂದುವರಿಯುತ್ತದೆ ಎಂಬುದನ್ನು ಊಹಿಸಲಾಗುತ್ತಿದೆ.

ಹೂಡಿಕೆದಾರರು ಏನು ಮಾಡಬೇಕು?

ಚಿನ್ನದ ದರಗಳು ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈ ವೇಳೆ ಹೂಡಿಕೆದಾರರು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ ಎಂದು ಹಣಕಾಸು ತಜ್ಞರು ಸಲಹೆ ನೀಡಿದ್ದಾರೆ. ಏಕಕಾಲದಲ್ಲಿ ಭಾರೀ ಹೂಡಿಕೆ ಮಾಡುವುದು ಅಥವಾ ಸಂಪೂರ್ಣವಾಗಿ ದೂರ ಉಳಿಯುವುದು ಸರಿಯಲ್ಲ. ದೀರ್ಘಕಾಲೀನ ಗುರಿಯೊಂದಿಗೆ ಚಿನ್ನವನ್ನು ಪೋರ್ಟ್ಫೋಲಿಯೊದ ಜೊತೆಗೆ ಉಳಿದುಕೊಳ್ಳಬೇಕು. ವದಂತಿಗೆ ಕಿವಿ ಕೊಡದೇ ಅಂಕಿ ಅಂಶಗಳು ಮತ್ತು ಆರ್ಥಿಕ ಪ್ರವೃತ್ತಿಗಳನ್ನು ಗಮನಿಸಿ, ಜಾಗತಿಕ ಮಾರುಕಟ್ಟೆ ಅವಲೋಕಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ತಜ್ಞರು ಎಚ್ಚರಿಸಿದ್ದಾರೆ.

Silver Price: ಬೆಳ್ಳಿ ದರ ₹3 ಲಕ್ಷ ದಾಟಿ ದಾಖಲೆ ಸೃಷ್ಟಿ, ಒಂದೇ ದಿನಕ್ಕೆ ಹೆಚ್ಚಾಗಿದ್ದೆಷ್ಟು?

ಚಿನ್ನದ ಕುರಿತು 2026 ಮುನ್ಸೂಚನೆಗಳು ಆಸಕ್ತಿದಾಯಕವಾಗಿವೆ. ಆದರೆ ಹೂಡಿಕೆದಾರರು ಭಯ ಬಿದ್ದು ಮನಬಂದಂತೆ ಚಿನ್ನದ ಹೂಡಿಕೆ ಮುಂದಾಗುವುದು, ಅಥವಾ ಮಾರಾಟ ಮಾಡುವ ಬಗ್ಗೆ ಗೊಂದಲಕ್ಕೀಡಾಗಬಾರದು. ಚಿನ್ನ ಯಾವಾಗಲೂ ರಕ್ಷಣಾತ್ಮಕವಾಗಿದೆ. ಅದನ್ನು ನಂಬಿಕೊಂಡು ಮುಂದಿನ ಹೆಜ್ಜೆಯನ್ನು ಬುದ್ಧಿವಂತಿಕೆಯಿಂದ ಇಡಬೇಕಿದೆ.

Credit: Oneindia

More from DriveSpark

Article Published On: Monday, January 26, 2026, 7:00 [IST]
English summary
Gold surges amid global tension and viral rumors; experts advise data-driven investing over speculative fears, Viral Baba Vanga gold rate predictions 2026,
Read more on notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+