Gold Rate Jan 15: ಸಂಕ್ರಾಂತಿ ಸಂಭ್ರಮ - ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ಬೆಲೆ ಭರ್ಜರಿ ಹೆಚ್ಚಳ

By Hitesh Y

ಸಂಕ್ರಾಂತಿಯ ಸಂಭ್ರಮದ ಬೆನ್ನಲ್ಲೇ ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಚಿನ್ನದ 18 ಕ್ಯಾರೆಟ್, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಭಾರೀ ಹೆಚ್ಚಳವಾಗಿದೆ. ಚಿನ್ನದ ಬೆಲೆಯು ಕಳೆದ ಒಂದು ವಾರದಿಂದಲೂ ನಿರಂತರವಾಗಿ ಹೆಚ್ಚಳವಾಗುತ್ತಿತ್ತು. ಆದರೆ ಇದೀಗ ಸಂಕ್ರಾಂತಿ ಸಂಭ್ರಮದ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ಹೊಸ ದಾಖಲೆ ಬರೆದಿದೆ. ಜನವರಿ 15ರಂದು ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಎಷ್ಟಿದೆ ಎನ್ನುವ ವಿವರ ನೋಡೋಣ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಎರಡನೇ ಹಂತದ ಸುಂಕ ವಿಧಿಸುವುದಕ್ಕೆ ಸಿದ್ಧವಾಗಿರುವುದು ಹಾಗೂ ಗ್ರೀನ್‌ ಲ್ಯಾಂಡ್‌ ವಶಪಡಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಇದರೊಂದಿಗೆ ಮಧ್ಯಪ್ರಾಚ್ಯದಲ್ಲೂ ಪರಿಸ್ಥಿತಿ ಹಾಳಾಗುತ್ತಿದೆ. ಇರಾನ್‌ನಲ್ಲಿ ಹಿಂಸಾಚಾರ ಭುಗಿಲೆದಿದ್ದು, ಯಾವುದೇ ಕ್ಷಣದಲ್ಲಾದರೂ ಯುದ್ಧ ನಡೆಯುವ ಭೀತಿ ಇದೆ. ಈ ನಡುವೆ ಚಿನ್ನದ ಬೆಲೆಯು ಅಚ್ಚರಿಯಂತೆ ಕಡಿಮೆಯಾಗಿದೆ.


Gold Rate Jan 15 Sankranti Cheer for Buyers as Gold Prices Fall Silver Rates Surge

24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲಿ ಜನವರಿ 15ರಂದು ಭರ್ಜರಿ ಇಳಿಕೆಯಾಗಿದೆ. 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 14,318 ರೂಪಾಯಿ ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,43,180 ರೂಪಾಯಿ ಆಗಿದೆ. ಜನವರಿ 14ಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಚಿನ್ನದ ಬೆಲೆಯು 82 ರೂಪಾಯಿ ಹಾಗೂ 10 ಗ್ರಾಂನ ಚಿನ್ನದ ಬೆಲೆಯು 820 ರೂಪಾಯಿ ಕಡಿಮೆಯಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 13,125 ರೂಪಾಯಿ ಹಾಗೂ 10 ಗ್ರಾಂನ ಚಿನ್ನದ ಬೆಲೆಯು 1,31,250 ರೂಪಾಯಿ ಆಗಿದೆ. ಒಂದು ಗ್ರಾಂ ಚಿನ್ನದ ಬೆಲೆಯು 75 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 750 ರೂಪಾಯಿ ಕಡಿಮೆಯಾಗಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 10,739 ರೂಪಾಯಿ ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,07,390 ರೂಪಾಯಿ ಆಗಿದೆ. ಬುಧವಾರಕ್ಕೆ ಹೋಲಿಕೆ ಮಾಡಿದರೆ 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 61 ರೂಪಾಯಿ ಕಡಿಮೆಯಾಗಿದೆ. ಅಲ್ಲದೇ 10 ಗ್ರಾಂ ಚಿನ್ನದ ಬೆಲೆಯು 610 ರೂಪಾಯಿ ಕಡಿಮೆಯಾಗಿದೆ.

ಬೆಳ್ಳಿ ಬೆಲೆ

ಇನ್ನು ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದ್ದರೂ, ಬೆಳ್ಳಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂಗೆ 295 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 5 ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯು ಪ್ರತಿ ಕೆ.ಜಿಗೆ 2,95,000 ಸಾವಿರ ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಬೆಳ್ಳಿ ಬೆಲೆಯು ಬರೋಬ್ಬರಿ 5,000 ಸಾವಿರ ರೂಪಾಯಿ ಹೆಚ್ಚಳವಾಗಿದೆ.

Credit: Oneindia

More from DriveSpark

Article Published On: Thursday, January 15, 2026, 11:18 [IST]
English summary
Gold Rate Jan 15: Sankranti Cheer for Buyers as Gold Prices Fall, Silver Rates Surge.
Read more on notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+