Gold-Silver Rate: ಒಂದೇ ದಿನ ಚಿನ್ನ-ಬೆಳ್ಳಿ ದರ ಭಾರೀ ಇಳಿಕೆ! ಕೊನೆಗೂ ಗುಡ್‌ ನ್ಯೂಸ್‌

By Prajwal B

ಭಾರತೀಯರು ಚಿನ್ನ ಪ್ರಿಯರು. ಅದರಲ್ಲೂ ಬೆಂಗಳೂರು ಸೇರಿ, ಭಾರತದಾದ್ಯಂತ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಅದರಲ್ಲೂ ಇತ್ತೀಚೆಗಂತೂ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಿದೆ. ಇಂದು ಕಮ್ಮಿಯಾಗುತ್ತೆ ಎಂದು ನಿರೀಕ್ಷೆಯಲ್ಲಿದ್ದವರಿಗೂ, ಕೊನೆಗೂ ಸಿಹಿತಿಂಡಿ ಸಿಕ್ಕಂತಾಗಿದೆ. ಭಾರೀ ದಿನಗಳಿಂದ ಏರಿಕೆಯ ಹಾದಿ ಹಿಡಿದಿದ್ದ ಭಾರತದಲ್ಲಿ ಚಿನ್ನದ ಬೆಲೆ, ಇಂದು ದಿಢೀರ್‌ ಕುಸಿತ ಕಂಡಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

Gold - Silver Rate India

ಭಾರತದಲ್ಲಿ 24K ಚಿನ್ನದ ಬೆಲೆ:
ಭಾರತದಲ್ಲಿ ಇಂದು ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿದೆ. ಅಂದರೆ 24K ಚಿನ್ನದ 1 ಗ್ರಾಂ ಬೆಲೆ ಇಂದು ₹15,431 ರೂ. ಆಗಿದ್ದು, ನಿನ್ನೆ ₹15,660 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಪ್ರತೀ ಗ್ರಾಂನಲ್ಲಿ ₹229 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ದರ ಇಂದು ₹1,23,448 ರೂ. ಆಗಿದ್ದು, ನಿನ್ನೆ ₹1,25,280 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,832 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,54,310 ರೂ. ಆಗಿದ್ದು, ನಿನ್ನೆ ₹1,56,600 ರೂ. ಇತ್ತು. ನಿನ್ನೆಗಿಂತ ಇಂದು 2,290 ರೂ. ಕುಸಿತ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ದರ 15,43,100 ರೂ. ಆಗಿದ್ದು, ನಿನ್ನೆ 15,66,000 ರೂ. ಇತ್ತು. ಒಂದೇ ದಿನದಲ್ಲಿ 22,900 ರೂ. ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು ₹14,145 ರೂ. ಆಗಿದ್ದು, ನಿನ್ನೆ ₹14,355 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹210 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ದರ ಇಂದು 1,13,160 ರೂ. ಆಗಿದ್ದು, ನಿನ್ನೆ 1,14,840 ರೂ. ಇತ್ತು. ನಿನ್ನೆಗಿಂತ ಇಂದು 1,680 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,41,450 ರೂ. ಆಗಿದ್ದು, ನಿನ್ನೆ ₹1,43,550 ರೂ. ಇತ್ತು. ಒಟ್ಟು 2,100 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹14,14,500 ರೂ. ಆಗಿದ್ದು, ನಿನ್ನೆ ₹14,35,500 ರೂ. ಇತ್ತು. ಒಂದೇ ದಿನದಲ್ಲಿ ₹21,000 ರೂ. ಇಳಿಕೆಯಾಗಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:
ಸಾಮಾನ್ಯವಾಗಿ 24K, 22K ಚಿನ್ನಕ್ಕೆ ಹೋಲಿಸಿದ್ರೆ 18K ಚಿನ್ನ ಕಡಿಮೆ ಇರುತ್ತದೆ. ಇಂದು 18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,573 ರೂ. ಆಗಿದ್ದು, ನಿನ್ನೆ ₹11,745 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 172 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು ₹92,584 ರೂ. ಆಗಿದ್ದು, ನಿನ್ನೆ ₹93,960 ಇತ್ತು. ನಿನ್ನೆಗಿಂತ ಇಂದು 1,376 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ 1,15,730 ರೂ. ಆಗಿದ್ದು, ನಿನ್ನೆ 1,17,450 ರೂ. ಇತ್ತು. ಒಟ್ಟು 17,200 ರೂ. ಕುಸಿತ ಕಂಡಿದೆ.

ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಭಾರತದಲ್ಲಿ ಇಂದು ಬೆಳ್ಳಿ ಬೆಲೆ ಕೊಂಚ ಮಟ್ಟಿಗೆ ಕುಸಿತದತ್ತ ಸಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ ₹325 ರೂ. ಇದೆ. ಆದ್ರೆ ನಿನ್ನೆ ₹330 ರೂ. ಇತ್ತು. ನಿನ್ನೆಗಿಂತ ಇಂದು ₹5 ರೂ. ಕಡಿಮೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹2,600 ರೂ. ಆಗಿದ್ದು, ನಿನ್ನೆ ₹2,640 ರೂ. ಇತ್ತು. ನಿನ್ನೆಗಿಂತ ಇಂದು ₹40 ರೂ. ವ್ಯತ್ಯಾಸವಾಗಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹3,250 ರೂ., 100 ಗ್ರಾಂ ಬೆಳ್ಳಿ ಬೆಲೆ 32,500 ರೂ., 1000 ಗ್ರಾಂ ಬೆಳ್ಳಿ ದರ 3,25,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ಜನವರಿ 22, 2026 ರ ರಾಯಿಟರ್ಸ್‌ ವರದಿ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗ್ರೀನ್‌ ಲ್ಯಾಂಡ್‌ ಅನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಹಿಂದೆ ಸರಿದ ನಂತರ, ಸುಂಕ ಬೆದರಿಕೆಗಳಿಂದ ಹಿಂದೆ ಸರಿದ ನಂತರ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳ ಬೆಲೆ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದೆ.

ಸ್ಪಾಟ್‌ ಚಿನ್ನದ ದರ ಪ್ರತೀ ಔನ್ಸ್‌ಗೆ $4,793.63 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ ಇಂದು 1% ಕುಸಿತವಾಗಿದೆ.

Credit: Goodreturns

More from DriveSpark

Article Published On: Thursday, January 22, 2026, 10:59 [IST]
Read more on notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+