Bigg Boss - Gilli: ಬಿಗ್‌ಬಾಸ್ ಕೊಟ್ಟ 50 ಲಕ್ಷದಲ್ಲಿ ಗಿಲ್ಲಿ ಕೈಗೆ ಎಷ್ಟು ಹಣ ಸಿಗುತ್ತೆ ಗೊತ್ತಾ?
ಅಂತೂ ಇಂತೂ ಬಿಗ್‌ಬಾಸ್ ಕನ್ನಡ ಸೀಸನ್ 12 (Biggboss Kannada Season 12) ಸುಖಾಂತ್ಯ ಪಡೆದುಕೊಂಡಿದೆ. ಡಮಾಲ್ ಡಿಮಿಲ್ ಡಕ್ಕಾ, ಗಿಲ್ಲಿ ಹವಾ ಪಕ್ಕಾ ಅನ್ನೋ ಅಭಿಮಾನಿಗಳ ಕೂಗಾಟ, ಗಿಲ್ಲಿ ಗಿಲ್ಲಿ ಎಂದು ಅಭಿಮಾನಿಗಳು ಜೈಕಾರ ಹಾಕಲು ಶುರು ಮಾಡಿದ್ದಾರೆ. ಅಂತೂ ಅಭಿಮಾನಿಗಳ ಆಸೆಯಂತೆ, ನಿರೀಕ್ಷೆಯಂತೆ ಗಿಲ್ಲಿನಟ (Gilli Nata) ಬಿಗ್‌ಬಾಸ್ ಸೀಸನ್ ಕಪ್ ಗೆದ್ದಾಯ್ತು. ಹಾಗಿದ್ರೆ ಬಿಗ್‌ಬಾಸ್ ಸೀಸನ್ 12 ವಿನ್ನರ್ ಗಿಲ್ಲಿನಟನಿಗೆ ಘೋಷಣೆಯಾದ 50 ಲಕ್ಷ ಹಣದಲ್ಲಿ ಕೈಗೆ ಎಷ್ಟು ಹಣ ಸಿಗುತ್ತೆ ಗೊತ್ತಾ? ಇಲ್ಲಿದೆ ಓದಿ.

ಹಳ್ಳಿ ಹೈದ, ಬಿಗ್‌ಬಾಸ್ ಗೆದ್ದ!
ಬಿಗ್‌ಬಾಸ್ ಕನ್ನಡ ಸೀಸನ್ 12 ಗೆ ಕಾಲಿಟ್ಟಾಗಿನಿಂದ ಗಿಲ್ಲಿ ಅವರ ಹವಾ ಜೋರಾಗಿಯೇ ಇತ್ತು. ಅತ್ತ ಕಾಮಿಡಿ ಮಾಡುತ್ತಲೇ ಫಿನಾಲೆ ತನಕ ಟಕ್ಕರ್ ಕೊಟ್ಟುಕೊಂಡು ಬಂದ ಸ್ಪರ್ಧಿಯೆಂದರೆ ಅದು ಗಿಲ್ಲಿ ಮಾತ್ರ. ಗಿಲ್ಲಿಯವರ ಪಂಚ್ ಡೈಲಾಗ್‌ಗಳೇ ಇಡೀ ಕರ್ನಾಟಕದ ಮನಗೆದ್ದಿತ್ತು. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕಿರುತೆರೆ ಮೂಲಕ ಪಾದಾರ್ಪಣೆ ಮಾಡಿದ್ದ ಗಿಲ್ಲಿನಟ, ಇಂದು ಬಿಗ್‌ಬಾಸ್ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ಬಿಗ್‌ಬಾಸ್ ಸೀಸನ್ 12 ಕಪ್ ಗೆದ್ದಿದ್ದಷ್ಟೇ ಅಲ್ಲದೇ ಕಾರು, ಕಿಚ್ಚ ಸುದೀಪ್ ಕೂಡಾ 10 ಲಕ್ಷ ಹಣ ಉಡುಗೊರೆಯಾಗಿ ನೀಡಿದ್ದಾರೆ.
ವಿನ್ನರ್ ಗಿಲ್ಲಿಗೆ ಏನೆಲ್ಲಾ ಸಿಕ್ಕಿದೆ?
ಬಿಗ್‌ಬಾಸ್ ಸೀಸನ್ 12 ಗೆದ್ದ ಗಿಲ್ಲಿಗೆ 50 ಲಕ್ಷ ಹಣ ಮಾತ್ರವಲ್ಲದೇ, ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಕೂಡಾ ಸಿಕ್ಕಿದೆ. ಅಲ್ಲದೇ ಕಿಚ್ಚ ಸುದೀಪ್ ಅವರು ಕೂಡಾ ವಿನ್ನರ್ ಗಿಲ್ಲಿಗೆ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಹಣ ಘೋಷಣೆ ಮಾಡಿದ್ದಾರೆ. ಬಿಗ್‌ಬಾಸ್ ಕಡೆಯಿಂದ ನೀಡಲಾಗುವ 50 ಲಕ್ಷ ಹಣ ಸಂಪೂರ್ಣವಾಗಿ ವಿನ್ನರ್ ಕೈಗೆ ಸಿಗೋದಿಲ್ಲ. ಹಾಗಿದ್ರೆ ಎಷ್ಟು ಸಿಗುತ್ತೆ ಗೊತ್ತಾ?
50 ಲಕ್ಷದಲ್ಲಿ ಗಿಲ್ಲಿಗೆ ಎಷ್ಟು ಸಿಗುತ್ತೆ?
ಸಾಮಾನ್ಯವಾಗಿ ಹೊಸ ಟ್ಯಾಕ್ಸ್ ನಿಯಮದ ಪ್ರಕಾರ, ವಾರ್ಷಿಕ 12 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇದ್ದರೆ ಆದಾಯ ತೆರಿಗೆ ಫೈಲ್ ಮಾಡ್ಬೇಕು. ಇನ್ನು ಯಾವುದೇ ಮನರಂಜನಾ ಕಾರ್ಯಕ್ರಮಗಳಲ್ಲಿ ಗೆದ್ದ ಹಣಕ್ಕೆ ಟ್ಯಾಕ್ಸ್ ಪಾವತಿ ಮಾಡಬೇಕು. ಅದೇ ರೀತಿ ಇದೀಗ ಗಿಲ್ಲಿನಟ ಕೂಡಾ 50 ಲಕ್ಷ ಹಣ ಗೆದ್ದಿದ್ದಾರೆ. ಆದರೆ ಭಾರತದ ಇನ್‌ಕಮ್ ಟ್ಯಾಕ್ಸ್ ನಿಯಮದ ಪ್ರಕಾರ, ಇಂತಹ ರಿಯಾಲಿಟಿ ಶೋ, ಗೇಮ್ ಶೋಗಳಲ್ಲಿ ಸೆಕ್ಷನ್ 115BB ಅಡಿಯಲ್ಲಿ 30% ಟ್ಯಾಕ್ಸ್ ಕಟ್ಟಬೇಕು.
ಅಂದರೆ ಟಿಡಿಎಸ್ ಆಗಿ, ಶೋ ನಡೆಸುವವರೇ ಕಟ್ ಮಾಡಿ, ಬಾಕಿ ಹಣವನ್ನು ವಿನ್ನರ್‌ಗೆ ನೀಡುತ್ತದೆ. ಆದ್ದರಿಂದ 30% ಟ್ಯಾಕ್ಸ್ ಅಂದರೆ 15 ಲಕ್ಷ ರೂ. ಕಡಿತವಾಗುತ್ತದೆ. ಆ ಪ್ರಕಾರ ವಿನ್ನರ್ ಗಿಲ್ಲಿಗೆ ಸಿಗೋ ಒಟ್ಟು ಹಣ 35 ಲಕ್ಷ ರೂ. ಎಂದು ಹಲವು ವರದಿಗಳಲ್ಲಿ ಹೇಳಲಾಗಿದೆ.
ಇನ್ನು ಬಿಗ್‌ಬಾಸ್ ಕನ್ನಡ ಸೀಸನ್‌ನ ವಿನ್ನರ್ ಗಿಲ್ಲಿನಟ ಆದ್ರೆ, ರನ್ನರ್ ಮಂಗಳೂರಿನ ರಕ್ಷಿತಾ ಶೆಟ್ಟಿಯಾಗಿದ್ದಾರೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
Credit: Goodreturns


Click it and Unblock the Notifications








