ಉಪಾಸನಾ ರಾಮ್‌ಚರಣ್ ಡೆಲಿವರಿ ಡೇಟ್ ಫಿಕ್ಸ್; ಮೆಗಾ ಅಭಿಮಾನಿಗಳಲ್ಲಿ ಸಂಭ್ರಮ!

By Narayana M

ತೆಲುಗು ನಟ ರಾಮ್‌ಚರಣ್ ಹಾಗೂ ಉಪಾಸನಾ ದಂಪತಿ ತಮ್ಮ ಮನೆಗೆ ಮತ್ತೆ ಹೊಸ ಅತಿಥಿಗಳನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಉಪಾಸನಾ ಅವಳಿ ಮಕ್ಕಳ ಗರ್ಭಿಣಿಯಾಗಿದ್ದು ಇನ್ನೆರಡು 2 ದಿನಗಳಲ್ಲಿ ಹೆರಿಗೆ ಆಗಲಿದೆ ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ನಡೀತಿದೆ. ಇದು ಮೆಗಾ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಎರಡೂವರೆ ವರ್ಷಗಳ ಹಿಂದೆ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ಕ್ಲಿಂಕಾರ ಎಂದು ನಾಮಕರಣ ಮಾಡಿದ್ದಾರೆ. ಆದರೆ ಈವರೆಗೆ ಮಗಳ ಫೋಟೊವನ್ನು ರಿವೀಲ್ ಮಾಡಿಲ್ಲ. ಕೆಲವೇ ತಿಂಗಳ ಹಿಂದೆ ಉಪಾಸನಾ ಮತ್ತೆ ಗರ್ಭಿಣಿ ಆಗಿದ್ದಾರೆ. ಈ ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಬಳಿಕ ಈ ವಿಚಾರವನ್ನು ದಂಪತಿ ಬಹಿರಂಗಪಡಿಸಿದ್ದರು. ಜನವರಿ 31ರಂದು ಉಪಾಸನಾಗೆ ಡೆಲಿವರಿ ಡೇಟ್ ಕೊಟ್ಟಿರುವುದಾಗಿ ವರದಿಯಾಗಿದೆ. ಮೆಗಾ ವಾರಸ್ದಾರರು ಬರ್ತಾರೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.


January 31 Delivery Buzz Ram Charan Upasana Await Twins Mega Family Celebrates

ಕೆಲ ದಿನಗಳ ಹಿಂದೆ 'ಬ್ರಹ್ಮಾಆನಂದಂ' ಸಿನಿಮಾ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಲಿಂಗ ತಾರತಮ್ಯದ ಬಗ್ಗೆ ನಟ ಚಿರಂಜೀವಿ ಆಡಿದ್ದ ಮಾತುಗಳು ವೈರಲ್ ಆಗಿತ್ತು. ನಮ್ಮ ಮನೆಯ ತುಂಬಾ ಹೆಣ್ಣುಮಕ್ಕಳು. ನಮ್ಮ ವಂಶವನ್ನು ಉದ್ಧಾರ ಮಾಡಲು ಮನೆಗೊಬ್ಬ ಮೊಮ್ಮಗ ಬೇಕಿತ್ತು ಎಂದು ಚಿರಂಜೀವಿ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ. ಚಿರಂಜೀವಿ ರೀತಿಯ ಜನಪ್ರಿಯ ನಟರೊಬ್ಬರು ಇಂತಹ ಹೇಳಿಕೆ ನೀಡುವುದು ತಪ್ಪಾಗುತ್ತದೆ ಎಂದು ಕೆಲವರ ಬೇಸರ ವ್ಯಕ್ತಪಡಿಸಿದ್ದರು. ಅವರು ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ, ಅದು ಬಿಟ್ಟು ತಪ್ಪಾಗಿ ಏನು ಹೇಳಿಲ್ಲ ಎಂದು ಕೆಲವರು ಚಿರು ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ವೇದಿಕೆಯಲ್ಲಿ ಮೊಮ್ಮಗಳ ಜೊತೆ ಚಿರಂಜೀವಿ ಇರುವ ಫೋಟೊ ಪ್ರದರ್ಶಿಸಲಾಯಿತು. ಇದನ್ನು ನೋಡಿ ಅವರು ಮಾತನಾಡಿದ್ದರು. "ನಾನು ಮನೆಯಲ್ಲಿ ಮೊಮ್ಮಕ್ಕಳ ಜೊತೆ ಇರುವಾಗ ಒಂದು ಲೇಡಿಸ್ ಹಾಸ್ಟೆಲ್ ವಾರ್ಡನ್ ತರ ಭಾಸವಾಗುತ್ತದೆ, ಸುತ್ತಾ ಹೆಣ್ಣು ಮಕ್ಕಳೇ. ಚರಣ್ ಈ ಬಾರಿ ಒಂದು ಗಂಡು ಮಗು ಬೇಕು ಕಣೋ, ನಮ್ಮ ಲೆಗಸಿ ಮುಂದುವರೆಯಬೇಕು. ಕ್ಲಿಂಕಾರ ಅಂದ್ರೆ ಬಹಳ ಮುದ್ದು, ಆದರೆ ಚರಣ್‌ಗೆ ಮತ್ತೊಂದು ಹೆಣ್ಣು ಆಗುತ್ತಾ ಎಂದು ಭಯ ಕಾಡುತ್ತಿದೆ" ಎಂದು ನಕ್ಕು ಸುಮ್ಮನಾಗಿದ್ದಾರೆ.

ಅಪೋಲೊ ಸಮೂಹದ ಸ್ಥಾಪಕ ಡಾ. ಪ್ರತಾಪ್ ಸಿ. ರೆಡ್ಡಿ ಅವರ ಮೊಮ್ಮಗಳು ಉಪಾಸನಾ. ಆಕೆ ಕೂಡ ಉದ್ಯಮ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ. ಅಪೋಲೊ ಹಾಸ್ಪಿಟಲ್ಸ್ ಗ್ರೂಪ್‌ನ ಉಪಾಧ್ಯಕ್ಷೆ ಮತ್ತು ಅಪೋಲೊ ಲೈಫ್‌ನ ಎಂಡಿ ಆಗಿ ಗುರ್ತಿಸಿಕೊಂಡಿದ್ದಾರೆ. ಮದುವೆಯಾಗಿ 10 ವರ್ಷಗಳ ಬಳಿಕ ದಂಪತಿ ಮೊದಲ ಮಗುವಿಗೆ ಪ್ಲ್ಯಾನ್ ಮಾಡಿಕೊಂಡಿದ್ದರು. ಈ ಬಗ್ಗೆ ಉಪಾಸನಾ ಬಹಿರಂಗವಾಗಿ ಮಾತನಾಡಿದ್ದರು.

ಮದುವೆ, ಮಕ್ಕಳು ಎಂದು ಆತುರ ಪಡುವುದು ಬೇಡ ಮೊದಲು ಕರಿಯರ್ ಕಡೆ ಗಮನ ಹರಿಸಿ ಎಂದು ಕೆಲ ದಿನಗಳ ಉಪಾಸನಾ ಸಂದೇಶ ನೀಡಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೆದಿತ್ತು. ಹೈದರಾಬಾದ್ ಐಐಟಿ ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಾ ಈ ಹೇಳಿಕೆ ಕೊಟ್ಟಿದ್ದರು. "ಮೊದಲು ನಿಮ್ಮ ಕಾಲಮೇಲೆ ನೀವು ನಿಲ್ಲಬೇಕು, ಆ ಬಳಿಕ ಮಕ್ಕಳನ್ನು ಹೆರುವ ಬಗ್ಗೆ ಚಿಂತೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಅಲ್ಲಿಯವರೆಗೆ ನಿಮ್ಮ ಅಂಡಾಣು ಫ್ರೀಜ್(ಅಂಡಾಣು ಮೊಟ್ಟೆ ಶೇಖರಣೆ) ಮಾಡಿಸಿ" ಎಂದು ಉಪಾಸನಾ ತಮ್ಮದೇ ಉದಾಹರಣೆ ನೀಡಿ ಆಕೆ ಸಲಹೆ ಕೊಟ್ಟಿದ್ದರು. ಇದು ಚರ್ಚೆ ಹುಟ್ಟು ಹಾಕಿತ್ತು.

Credit: Filmibeat

More from DriveSpark

Article Published On: Thursday, January 29, 2026, 11:33 [IST]
Read more on notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+