Gold Price Today: ಸಂಕ್ರಾಂತಿ ದಿನವೇ ಪಾತಾಳಕ್ಕಿಳಿದ ಬಂಗಾರದ ಬೆಲೆ! ಎಷ್ಟಿದೆ ಗೊತ್ತಾ ದರ?
ಹೊಸ ವರ್ಷ (New Year) ಆರಂಭವಾದಾಗಿನಿಂದ ಚಿನ್ನದ ಬೆಲೆ ಇಳಿಕೆಯಾಗಿದ್ದಕ್ಕಿಂತ, ಏರಿಕೆಯಾಗಿದ್ದೇ ಜಾಸ್ತಿ. ಆದ್ರೆ ಬಹು ದಿನಗಳ ಬಳಿಕ ಇದೀಗ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಚಿನ್ನದ ಮೇಲೆ ಹೂಡಿಕೆ ಮಾಡ್ಬೇಕು ಅನ್ನೋ ಪ್ಲಾನ್‌ನಲ್ಲಿದ್ದವರಿಗೆ ಇದು ಶುಭಸುದ್ದಿ ಅಂತಾನೇ ಹೇಳ್ಬಹುದು. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ (Gold Rate India) ಎಷ್ಟಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಂದು ಇಳಿಕೆ ಕಂಡಿದೆ. 24K ಚಿನ್ನದ 1 ಗ್ರಾಂ ಬೆಲೆ ಇಂದು 14,318 ರೂ. ಆಗಿದ್ದು, ನಿನ್ನೆ 14,400 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂನಲ್ಲಿ ₹82 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,14,544 ರೂ. ಆಗಿದ್ದು, ನಿನ್ನೆ 1,15,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹656 ರೂ. ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,43,180 ರೂ. ಆಗಿದ್ದು, ನಿನ್ನೆ 1,44,000 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹820 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹13,31,800 ರೂ. ಆಗಿದ್ದು, ನಿನ್ನೆ 14,40,000 ರೂ. ಇತ್ತು. ಒಟ್ಟು ₹8,200 ರೂ. ಕುಸಿತವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ಇಂದು ₹13,125 ರೂ. ಆಗಿದ್ದು, ನಿನ್ನೆ 13,200 ರೂ. ಇತ್ತು. ನಿನ್ನೆಗಿಂತ ಇಂದು ₹75 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,05,000 ರೂ. ಆಗಿದ್ದು, ನಿನ್ನೆ 1,05,600 ರೂ. ಇತ್ತು. ನಿನ್ನೆಗಿಂತ ಇಂದು ₹600 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,31,250 ರೂ. ಆಗಿದ್ದು, ನಿನ್ನೆ 1,32,000 ರೂ. ಇತ್ತು. ನಿನ್ನೆಗಿಂತ ಇಂದು ₹750 ರೂ. ಕುಸಿತವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 13,12,500 ರೂ. ಆಗಿದ್ದು, ನಿನ್ನೆ 13,20,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 7,500 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18 ಕ್ಯಾರಟ್ ಚಿನ್ನದ ಇಂದು 1 ಗ್ರಾಂ ಬೆಲೆ ₹10,739 ರೂ. ಆಗಿದ್ದು, ನಿನ್ನೆ 10,800 ರೂ. ಇತ್ತು. ನಿನ್ನೆಗಿಂತ ಇಂದು 61 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹85,912 ರೂ. ಆಗಿದ್ದು, ನಿನ್ನೆ 86,400 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 488 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,07,390 ರೂ. ಆಗಿದ್ದು, ನಿನ್ನೆ 1,08,000 ರೂ. ಆಗಿತ್ತು. ನಿನ್ನೆಗಿಂತ ಇಂದು 610 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 10,73,900 ರೂ. ಆಗಿದ್ದು, ನಿನ್ನೆ 10,80,000 ರೂ. ಇತ್ತು. ಒಟ್ಟು ನಿನ್ನೆಗಿಂತ ಇಂದು ಒಟ್ಟು 6,100 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 14,498, 22K ರೂ. 13,290, 18K ರೂ. 11,090
ಮುಂಬೈ: 24K ರೂ. 14,333, 22K ರೂ. 13,125, 18K ರೂ. 10,739
ದೆಹಲಿ: 24K ರೂ. 13,815, 22K ರೂ. 13,140, 18K ರೂ. 10,754
ಕೋಲ್ಕತ್ತಾ: 24K ರೂ. 14,318, 22K ರೂ. 13,125, 18K ರೂ. 10,739
ಬೆಂಗಳೂರು: 24K ರೂ. 14,318, 22K ರೂ. 13,125, 18K ರೂ. 10,739
ಹೈದರಾಬಾದ್: 24K ರೂ. 14,318, 22K ರೂ. 13,125, 18K ರೂ. 10,739
ಕೇರಳ: 24K ರೂ. 14,318, 22K ರೂ. 13,125, 18K ರೂ. 10,739
ಪುಣೆ: 24K ರೂ. 14,318, 22K ರೂ. 13,125, 18K ರೂ. 10,739
ವಡೋದರಾ: 24K ರೂ. 14,323, 22K ರೂ. 13,130, 18K ರೂ. 10,744
ಅಹಮದಾಬಾದ್: 24K ರೂ. 14,323, 22K ರೂ. 13,130, 18K ರೂ. 10,744
ಇಂದಿನ ಬೆಳ್ಳಿ ಬೆಲೆ:
ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ಬೆಲೆ ಭಾರೀ ಏರಿಕೆಯಾಗಿದೆ. ನಿನ್ನೆಗಿಂತ ಇಂದು ಭಾರತದಲ್ಲಿ ಬೆಳ್ಳಿ ದರ ಏರಿಕೆ ಕಂಡಿದ್ದು, 1 ಗ್ರಾಂ ಬೆಳ್ಳಿ ದರ ಇಂದು ₹295 ರೂ. ಆಗಿದ್ದು, ನಿನ್ನೆ ₹290 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹5 ರೂ. ಮತ್ತೆ ಏರಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹2,360, 10 ಗ್ರಾಂ ಬೆಳ್ಳಿ ಬೆಲೆ 2,950 ರೂ., 100 ಬೆಳ್ಳಿ ದರ ₹29,500 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,95,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ವರದಿ ಪ್ರಕಾರ, ಜನವರಿ 15 ರಂದು ಸತತ ಮೂರು ಅವಧಿಗಳಲ್ಲಿ ದಾಖಲೆ ಮಟ್ಟದಲ್ಲಿ ಬೆಲೆ ಏರಿಕೆ ಕಂಡ ನಂತರ ಹೂಡಿಕೆದಾರರು ಲಾಭವನ್ನು ಪಡೆದುಕೊಂಡಿದ್ದರು. ಆದ್ರೆ ಇದೀಗ ಗುರುವಾರ ಬೆಲೆ ಕುಸಿತ ಕಂಡಿದೆ. ಇರಾನ್ ವಿರುದ್ಧ ಅಮೆರಿಕದ ನಿಲುವು, ಭೌಗೋಳಿಕ ಉದ್ವಿಗ್ನತೆ ನಡುವೆ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡಿದೆ. GMT 0137 ವೇಳೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.6% ದಷ್ಟು ಇಳಿಕೆ ಕಂಡು $4,594.66ಕ್ಕೆ ತಲುಪಿದೆ.
Credit: Goodreturns


Click it and Unblock the Notifications








