Bengaluru-Mantralaya Tour: ಬೆಂಗಳೂರಿನಿಂದ ಮಂತ್ರಾಲಯ ಹೋಗೋರಿಗೆ ಗುಡ್‌ ನ್ಯೂಸ್‌! ಸರ್ಕಾರದಿಂದ ಟೂರ್‌ ಪ್ಯಾಕೇಜ್‌

By Prajwal B

ದೇಶದ ಮೂಲೆ ಮೂಲೆಗಳಿಂದ ಅದೆಷ್ಟೋ ಭಕ್ತರು ಮಂತ್ರಾಲಯ, ತಿರುಪತಿ (Mantralaya-Tirupati) ಹೀಗೆ ತೀರ್ಥಕ್ಷೇತ್ರಗಳಿಗೆ ಪ್ರಯಾಣ ಬೆಳೆಸುತ್ತಾರೆ. ಅದರಲ್ಲೂ ಮಂತ್ರಾಲಯ ಕಡೆಗೆ ಬಹಳಷ್ಟು ಮಂದಿ ತಿಂಗಳಿಗೊಮ್ಮೆಯಾದ್ರೂ ಮಂತ್ರಾಲಕ್ಕೆ ಹೋಗುತ್ತಾರೆ. ಇದೀಗ ಮಂತ್ರಾಲಯಕ್ಕೆ ಹೋಗೋರಿಗೆ ಗುಡ್‌ ನ್ಯೂಸ್‌ ಒಂದಿದೆ. ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗೋರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಬಿಡುಗಡೆ ಮಾಡಿದೆ. ರಾಘವೇಂದ್ರ ಸ್ವಾಮಿ ಕರ್ನಾಟಕದ ಜನರ ಆರಾಧ್ಯ ದೇವರು. ಈ ದೇವಾಲಯ ಆಂಧ್ರಪ್ರದೇಶದ ಗಡಿಭಾಗದಲ್ಲಿದೆ.

Bengaluru to Mantralaya Tour Package From KSTDC

ಅದರಲ್ಲೂ ಕರ್ನಾಟಕದಿಂದ ಅತೀ ಹೆಚ್ಚು ಭಕ್ತರು ರಾಘವೇಂದ್ರಸ್ವಾಮಿ ದರ್ಶನ ಪಡೆಯಲು ಮಂತ್ರಾಲಯ ಹೋಗುತ್ತಾರೆ. ಕರ್ನಾಟಕ ಮಾತ್ರವಲ್ಲದೇ ರಾಯರ ದರ್ಶನಕ್ಕೆ ಲಕ್ಷಾಂತರ ಮಂದಿ ಬರುತ್ತಾರೆ. ಅದೇ ಕಾರಣದಿಂದ ಇದೀಗ ಕೆಎಸ್‌ಟಿಡಿಸಿ ವಿಶೇಷ ಪ್ಯಾಕೇಜ್‌ ಘೋಷಿಸಿದೆ.

ಪ್ಯಾಕೇಜ್‌ ವಿವರಗಳು:

  • ಪ್ಯಾಕೇಜ್ ಹೆಸರು: ಮಂತ್ರಾಲಯ ಟೂರ್‌ ಪ್ಯಾಕೇಜ್‌
  • ಪ್ರಯಾಣದ ಅವಧಿ: 2 ದಿನಗಳು (1 ರಾತ್ರಿ ಪ್ರಯಾಣ ಸೇರಿದಂತೆ)
  • ಪ್ರಾರಂಭ ಸ್ಥಳ: ಕೆಎಸ್‌ಟಿಡಿಸಿ ಬುಕಿಂಗ್‌ ಕೌಂಟರ್‌, ಬಿಎಂಟಿಸಿ ಬಸ್‌ ಸ್ಟ್ಯಾಂಡ್‌, ಯಶವಂತಪುರ, ಬೆಂಗಳೂರು
  • ಪ್ರಯಾಣ ಸಮಯ: ರಾತ್ರಿ 8 ಗಂಟೆಗೆ ಆರಂಭ (ಮರುದಿನ ಬೆಳಿಗ್ಗೆ ಮಂತ್ರಾಲಯ ತಲುಪಿದೆ)
  • ಪ್ರತೀ ಬುಧವಾರ ಮತ್ತು ಶುಕ್ರವಾರ ಈ ಪ್ಯಾಕೇಜ್‌ ಇರುತ್ತದೆ.

ಪ್ರಯಾಣದ ವಿವರ:
ರಾಘವೇಂದ್ರ ಸ್ವಾಮಿ ದರ್ಶನ ಪಡೆಯೋರಿಗೆ, ಅದರಲ್ಲೂ ಬೆಂಗಳೂರಿನಿಂದ ಮಂತ್ರಾಲಯ ಹೋಗುವವರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಈ ಬಸ್‌ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಮಂತ್ರಾಲಯಕ್ಕೆ ತಲುಪಲಿದೆ. ಮಂತ್ರಾಲಯ ಜೊತೆಗೆ ಪಂಚಮುಖಿ ಆಂಜನೇಯ ದೇವಸ್ಥಾನ ಕೂಡಾ ದರ್ಶನ ಮಾಡುವ ಅವಕಾಶವಿದೆ. ಸಾಮಾನ್ಯ ಜನರಿಗೂ ಅನುಕೂಲವಾಗುವಂತೆ ಈ ದರ್ಶನ ಪ್ಯಾಕೇಜ್‌ ಅನ್ನು ಘೋಷಣೆ ಮಾಡಲಿದೆ.

ಪ್ಯಾಕೇಜ್‌ ದರ ಹೇಗಿದೆ?
ಈ ಪ್ಯಾಕೇಜ್‌ನಲ್ಲಿ ಪ್ರಯಾಣಿಸುವ ಭಕ್ತರು, ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು. ಆ ಮೂಲಕ 2,780 ರೂ. ಆಗಿರುತ್ತದೆ. ಜೊತೆಗೆ ಸೌಲಭ್ಯ ಕೂಡಾ ಇದೆ. ಬುಕ್‌ ಮಾಡಿ, 48 ಗಂಟೆಗಳ ಮೊದಲು ಟಿಕೆಟ್‌ ರದ್ದು ಮಾಡಿದ್ರೆ, 10% ಕಡಿತಗೊಳಿಸಲಾಗುತ್ತದೆ. 24 ಗಂಟೆಗಳು ಮೊದಲು ಟಿಕೆಟ್‌ ರದ್ದು ಮಾಡಿದ್ರೆ 25% ಕಡಿತಗೊಳಿಸಲಾಗುತ್ತದೆ. 24 ಗಂಟೆಗಳ ಒಳಗೆ ರದ್ದು ಮಾಡಿದ್ರೆ ಯಾವುದೇ ಮರುಪಾವತಿ ಇರುವುದಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವೆಬ್‌ಸೈಟ್‌ ಓಪನ್‌ ಮಾಡಿ ಮಾಹಿತಿ ಪಡೆಯಬಹುದು.

ಇನ್ನು ಮರುದಿನ ಬೆಳಿಗ್ಗೆ 4:30 ಗಂಟೆಯಿಂದ 6ರವರೆಗೆ ಪ್ರಯಾನಿಕರಿಗೆ ರೆಡಿಯಾಗಲು ಅವಕಾಶ ಇರುತ್ತದೆ. ನಂತರ 6:30 ರಿಂದ 10 ಗಂಟೆ ಹೊತ್ತಿಗೆ ಮಠದಲ್ಲಿ ರಾಯರ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತದೆ. ನಂತರ ಬೆಳಿಗ್ಗೆ ಬೆಳಗ್ಗೆ 11 ರಿಂದ 12 ಗಂಟೆಯವರೆಗೆ ಪಂಚಮುಖಿ ಆಂಜನೇಯ ದೇವರ ದರ್ಶನಕ್ಕಾಗಿ ಬಸ್‌ ಅಲ್ಲಿಗೆ ಹೋಗುತ್ತದೆ. ಆ ನಂತರ ಮಧ್ಯಾಹ್ನದ ವೇಳೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಅದನ್ನು ಮುಗಿಸಿಕೊಂಡು ಬಸ್‌ ಹೊರಟು ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ಮರಳಿ ಬೆಂಗಳೂರಿಗೆ ಬಂದು ಕೆಎಸ್‌ಟಿಡಿಸಿ ಬಸ್‌ ಬರಲಿದೆ.

Credit: Goodreturns

More from DriveSpark

Article Published On: Tuesday, January 20, 2026, 16:10 [IST]
Read more on notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+