ದೇಶದ ಬಜೆಟ್ ಮಂಡಿಸುವ 'ಮಹಿಳಾ ಮಣಿ' ನಿರ್ಮಲಾ ಸೀತಾರಾಮನ್ ಆಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

By Pragathi S

ಭಾರತದ ರಾಜಕೀಯ ಇತಿಹಾಸದಲ್ಲಿ ನಿರ್ಮಲಾ ಸೀತಾರಾಮನ್ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯುವಂತಹದ್ದು. ಭಾನುವಾರ 2026 ಫೆಬ್ರವರಿ 1 ರಂದು ಸತತ ಒಂಬತ್ತನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುವ ಮೂಲಕ ಅವರು ಹೊಸ ದಾಖಲೆಯನ್ನು ಬರೆದಿದ್ದಾರೆ. ಕಠಿಣ ನಿರ್ಧಾರಗಳು, ಸ್ಪಷ್ಟ ಆಲೋಚನೆ ಮತ್ತು ದಕ್ಷ ಆಡಳಿತಕ್ಕೆ ಹೆಸರಾದ ಸೀತಾರಾಮನ್ ಅವರು ದೇಶದ ಆರ್ಥಿಕತೆಯ ಚುಕ್ಕಾಣಿ ಹಿಡಿದಿದ್ದಾರೆ. ಆದರೆ, ಕೋಟ್ಯಂತರ ರೂಪಾಯಿಗಳ ದೇಶದ ಬಜೆಟ್ ಮಂಡಿಸುವ ಇವರ ವೈಯಕ್ತಿಕ ಜೀವನ ಮತ್ತು ಆಸ್ತಿ ವಿವರಗಳು ಮಾತ್ರ ಅಚ್ಚರಿ ಮೂಡಿಸುವಷ್ಟು ಸರಳವಾಗಿವೆ.

ಜನನ ಮತ್ತು ಆರಂಭಿಕ ಜೀವನ:

ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 18, 1959 ರಂದು ತಮಿಳುನಾಡಿನ ಮಧುರೈನಲ್ಲಿ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ನಾರಾಯಣನ್ ಸೀತಾರಾಮನ್ ಅವರು ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರು ಮತ್ತು ತಾಯಿ ಸಾವಿತ್ರಿ ಅವರು ಗೃಹಿಣಿಯಾಗಿದ್ದರು. ತಂದೆಯ ಉದ್ಯೋಗದ ಕಾರಣದಿಂದ ಇವರ ಬಾಲ್ಯವು ತಮಿಳುನಾಡಿನ ವಿವಿಧ ಭಾಗಗಳಲ್ಲಿ ಕಳೆಯಿತು.


Nirmala Sitharaman

ಉನ್ನತ ಶಿಕ್ಷಣದ ಪಯಣ:

ನಿರ್ಮಲಾ ಅವರ ಶೈಕ್ಷಣಿಕ ಹಿನ್ನೆಲೆ ಅತ್ಯಂತ ಪ್ರಬಲವಾದುದು. ಅವರು ತಿರುಚ್ಚಿರಾಪಳ್ಳಿಯ ಸೀತಾಲಕ್ಷ್ಮಿ ರಾಮಸ್ವಾಮಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ (ಬಿಎ) ಪೂರೈಸಿದರು. ನಂತರ ಉನ್ನತ ವ್ಯಾಸಂಗಕ್ಕಾಗಿ ದೆಹಲಿಗೆ ತೆರಳಿದ ಅವರು, ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ (ಜೆಎನ್‌ಯು) ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಎಮ್‌ಎ) ಮತ್ತು ಎಂ.ಫಿಲ್ (M.Phil) ಪದವಿಯನ್ನು ಪಡೆದರು. ಅವರ ಈ ಶೈಕ್ಷಣಿಕ ಬುನಾದಿಯೇ ಇಂದು ಅವರು ದೇಶದ ಸಂಕೀರ್ಣ ಆರ್ಥಿಕ ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸಲು ಪ್ರಮುಖ ಕಾರಣವಾಗಿದೆ.

ಆಸ್ತಿ ಮತ್ತು ಸಾಲದ ವಿವರಗಳು:

MyNeta.info ವರದಿಗಳು ಮತ್ತು ಇತ್ತೀಚಿನ ಚುನಾವಣಾ ಅಫಿಡವಿಟ್‌ಗಳ ಪ್ರಕಾರ, ನಿರ್ಮಲಾ ಸೀತಾರಾಮನ್ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು ₹2.75 ಕೋಟಿ (₹2,74,95,222). ಇದೇ ವೇಳೆ ಅವರು ಸುಮಾರು ₹1.11 ಕೋಟಿ (₹1,11,69,292) ಸಾಲವನ್ನು ಹೊಂದಿದ್ದಾರೆ. ಇವರ ಬಳಿ 315 ಗ್ರಾಂ ಚಿನ್ನ ಮತ್ತು ಎರಡು ಕೆಜಿ ಬೆಳ್ಳಿ ಇದೆ. ಅಚ್ಚರಿಯ ವಿಷಯವೆಂದರೆ, ದೇಶದ ಪ್ರಭಾವಿ ಸಚಿವೆಯಾಗಿದ್ದರೂ ಇವರ ಹೆಸರಿನಲ್ಲಿ ಸ್ವಂತ ಕಾರು ಇಲ್ಲ. ಬದಲಾಗಿ, ಹಳೆಯ ಕಾಲದ 'ಬಜಾಜ್ ಚೇತಕ್' ಸ್ಕೂಟರ್ ಇವರ ಹೆಸರಿನಲ್ಲಿದೆ. ಹೈದರಾಬಾದ್ ಸಮೀಪ ಸುಮಾರು ₹16 ಲಕ್ಷ ಮೌಲ್ಯದ ಕೃಷಿಯೇತರ ಜಮೀನನ್ನು ಹೊಂದಿದ್ದು, ಇವರ ಒಟ್ಟು ಸ್ಥಿರ ಆಸ್ತಿಯ ಮೌಲ್ಯ ₹1.87 ಕೋಟಿ ಎಂದು ಅಂದಾಜಿಸಲಾಗಿದೆ. ಇನ್ನು ವಿವಿಧ ಬ್ಯಾಂಕ್‌ಗಳಲ್ಲಿ ₹45 ಲಕ್ಷಕ್ಕೂ ಅಧಿಕ ಠೇವಣಿಗಳನ್ನು ಇರಿಸಿದ್ದಾರೆ.

ಅಧಿಕಾರದ ಆಕರ್ಷಣೆಯಿಂದ ದೂರವಿರುವ ನಿರ್ಮಲಾ ಸೀತಾರಾಮನ್ ಪುತ್ರಿ: ಪತ್ರಕರ್ತೆಯಾಗಿ ಸರಳ ಜೀವನ ನಡೆಸುತ್ತಿರುವ ವಾಂಙ್ಮಯಿ

ವೇತನ ಮತ್ತು ಭತ್ಯೆಗಳು:

ಹಣಕಾಸು ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಇವರು ಸಂಸದರಾಗಿ ಮಾಸಿಕ ₹1 ಲಕ್ಷ ವೇತನವನ್ನು ಪಡೆಯುತ್ತಾರೆ. ಇದರೊಂದಿಗೆ ಅಧಿಕೃತ ಕರ್ತವ್ಯಗಳಿಗಾಗಿ ಪ್ರಯಾಣ ಭತ್ಯೆ ಮತ್ತು ಇತರ ಸೌಲಭ್ಯಗಳು ಲಭ್ಯವಿವೆ. ಇವರ ಜೀವನಶೈಲಿ ಮೊದಲಿನಿಂದಲೂ ಸರಳವಾಗಿರುವುದು ಎಲ್ಲರ ಗಮನ ಸೆಳೆಯುತ್ತದೆ.

ಲಂಡನ್‌ನ ಸೇಲ್ಸ್‌ಗರ್ಲ್‌ನಿಂದ ಹಣಕಾಸು ಸಚಿವೆಯವರೆಗೆ:

ನಿರ್ಮಲಾ ಸೀತಾರಾಮನ್ ಅವರ ವೃತ್ತಿಜೀವನ ಯುವ ಪೀಳಿಗೆಗೆ ಮಾದರಿ. ರಾಜಕೀಯಕ್ಕೆ ಬರುವ ಮುನ್ನ ಇವರು ಲಂಡನ್‌ನ ರೀಜೆಂಟ್ ಸ್ಟ್ರೀಟ್‌ನಲ್ಲಿರುವ 'ಹ್ಯಾಬಿಟಾಟ್' ಎಂಬ ಹೋಮ್ ಡೆಕೋರ್ ಅಂಗಡಿಯಲ್ಲಿ ಸೇಲ್ಸ್‌ಪರ್ಸನ್ ಆಗಿ ಕೆಲಸ ಮಾಡಿದ್ದರು. ನಂತರ ಬ್ರಿಟನ್‌ನ ಅಸೋಸಿಯೇಷನ್ ಆಫ್ ಅಗ್ರಿಕಲ್ಚರಲ್ ಎಂಜಿನಿಯರ್ಸ್‌ನಲ್ಲಿ ಸಹಾಯಕ ಅರ್ಥಶಾಸ್ತ್ರಜ್ಞೆಯಾಗಿ, ಬಳಿಕ ವಿಶ್ವವಿಖ್ಯಾತ ಪಿಡಬ್ಲ್ಯೂಸಿ (PwC) ಸಂಸ್ಥೆಯಲ್ಲಿ ಸಂಶೋಧನಾ ವಿಭಾಗದ ಹಿರಿಯ ವ್ಯವಸ್ಥಾಪಕಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬಿಬಿಸಿ ವರ್ಲ್ಡ್ ಸರ್ವಿಸ್‌ನಲ್ಲೂ ಅವರು ಅಲ್ಪಕಾಲ ಸೇವೆ ಸಲ್ಲಿಸಿದ್ದರು.

ಬಜೆಟ್‌ ದಿನ ಹೀಗಿದ್ದಾರೆ ನಮ್ಮ ಫೈನಾನ್ಸ್ ಮಿನಿಸ್ಟರ್: ನೇರಳೆ ಬಣ್ಣದ ಕಾಂಚೀವರಂ ರೇಷ್ಮೆ ಸೀರೆಗೆ ಚಿನ್ನದ ಬಣ್ಣದ ಕಸೂತಿ ಮೆರುಗು

ರಾಜಕೀಯ ಪಯಣ:

2003 ರಿಂದ 2005 ರವರೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿದ್ದ ಇವರು, 2008 ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. 2014 ರವರೆಗೆ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಇವರು, ನರೇಂದ್ರ ಮೋದಿ ಅವರ ಮೊದಲ ಸಂಪುಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆಯಾಗಿ ನೇಮಕಗೊಂಡರು. 2017 ರಲ್ಲಿ ಭಾರತದ ಎರಡನೇ ಮಹಿಳಾ ರಕ್ಷಣಾ ಸಚಿವೆಯಾಗಿ (ಇಂದಿರಾ ಗಾಂಧಿಯವರ ನಂತರ) ಜವಾಬ್ದಾರಿ ನಿಭಾಯಿಸಿದರು. 2019 ರಲ್ಲಿ ಭಾರತದ ಮೊದಲ ಪೂರ್ಣಕಾಲಿಕ ಮಹಿಳಾ ಹಣಕಾಸು ಸಚಿವೆಯಾಗಿ ಇತಿಹಾಸ ಸೃಷ್ಟಿಸಿದರು. ನಿನ್ನೆ (ಫೆ.01,2026) ಅವರು ಸತತ 9 ಬಜೆಟ್ ಮಂಡಿಸುವ ಮೂಲಕ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟುವ ಹಾದಿಯಲ್ಲಿದ್ದಾರೆ.

Credit: Oneindia

More from DriveSpark

Article Published On: Monday, February 2, 2026, 9:46 [IST]
English summary
Finance Minister Nirmala Sitharaman made history by presenting India’s general budget for the ninth consecutive time on February 1, 2026. Despite managing the nation's trillions, her personal lifestyle remains remarkably simple.
Read more on notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+