ಕಪಿಲ್ ಗೆ ಇಷ್ಟದ ಬೈಕ್ ರಾಯಲ್ ಎನ್ ಫೀಲ್ಡ್

ವಿಶೇಷವೆಂದರೆ ಕಪಿಲ್ ಸಿಬಲ್ ರಾಯಲ್ ಎನ್ ಫೀಲ್ಡ್ ಬೈಕ್ ಕೂಡ ಹೊಂದಿದ್ದಾರೆ. ರಾಯಲ್ ಎನ್ ಫೀಲ್ಡ್ ಐಕಾನಿಕ್ ಬೈಕನ್ನು ಕಪಿಲ್ ಸಿಬಲ್ ಹೊಂದಿರುವ ನೆಪದಲ್ಲಿ ಎನ್ ಫೀಲ್ಡ್ ಕುರಿತು ಕೊಂಚ ಮಾಹಿತಿ ಪಡೆಯೋಣ.
ಎನ್ ಫೀಲ್ಡ್ ಬೈಕ್ ಎಲ್ಲರಿಗೂ ಇಷ್ಟ. ಅದರ ರಾಜಗಾಂಭೀರ್ಯ, ವಿನ್ಯಾಸ, ಬೃಹತ್ ಆಕೃತ್ತಿ, ಬುಡುಬುಡು ಸದ್ದು ಇಷ್ಟಪಡದವರು ಇರಲಿಕ್ಕಿಲ್ಲ. ಈಗ ಭಾರತದಲ್ಲಿ ಹಲವು ಆವೃತ್ತಿಗಳ ರಾಯಲ್ ಎನ್ ಫೀಲ್ಡ್ ಬೈಕ್ ಗಳು ದೊರಕುತ್ತವೆ. ಸಂತೋಷದ ಸಂಗತಿಯೆಂದರೆ ಅತ್ಯಧಿಕ ಸಿಸಿಯ ಕೆಲವು ರಾಯಲ್ ಬೈಕ್ ಗಳು ಶೀಘ್ರದಲ್ಲಿ ರಸ್ತೆಗಿಳಿಯಲಿವೆ.
ಸಣ್ಣ ಪ್ಲಾಷ್ ಬ್ಯಾಕ್: ಅದು 1955ರ ಸಮಯ. ಭಾರತ ಸರಕಾರ ಪೊಲೀಸ್ ಮತ್ತು ಸೇನಾ ಅವಶ್ಯಕತೆಗಾಗಿ ಸೂಕ್ತ ಬೈಕ್ ಹುಡುಕಾಟದಲ್ಲಿತ್ತು. ಸರಕಾರಕ್ಕೆ ಇಂಗ್ಲೆಂಡ್ ನ ಎನ್ ಫೀಲ್ಡ್ ಇಷ್ಟವಾಯಿತು. ಗಡಿಯಲ್ಲಿ ಸೈನಿಕರು ಪಹರೆ ಕಾಯಲು, ಪೊಲೀಸರ ಗಸ್ತಿಗೆ ಇದಕ್ಕಿಂತ ಉತ್ತಮ ಗಾಂಭೀರ್ಯದ ಬೈಕ್ ಸಿಗಲಿಕ್ಕಿಲ್ಲ.
ಹೀಗೆ ಸರಕಾರ ಸುಮಾರು 800 ಬುಲೆಟ್ ಬೈಕ್ ಗಳನ್ನು ಆಮದು ಮಾಡಿಕೊಂಡಿತ್ತು. ಹೀಗೆ ಬುಲೆಟ್ ಭಾರತಕ್ಕೆ ಪ್ರವೇಶಿಸಿತ್ತು. ಆದರೆ ಇಲ್ಲಿನ ಸೇನಾ, ಪೊಲೀಸ್ ಅವಶ್ಯಕತೆಗೆ ಅಷ್ಟು ಕಡಿಮೆ ಪ್ರಮಾಣದ ಬೈಕ್ ಎಲ್ಲಿ ಸಾಕಾಗುತ್ತದೆ? ಅದಕ್ಕೆ ಸರಕಾರ ಮತ್ತೆ ಆರ್ಡರ್ ಮಾಡಿತ್ತು.
ಆದರೆ ಹೀಗೆ ಆಮದು ಮಾಡಿಕೊಳ್ಳುವುದಕ್ಕಿಂತ ನಿಮ್ಮ ದೇಶದಲ್ಲಿಯೇ ಬೈಕ್ ಉತ್ಪಾದನೆ ಮಾಡುತ್ತೇವೆ ಎಂದು ಕಂಪನಿ ಹೇಳಿತು. ಭಾರತ ಸರಕಾರ ಅದಕ್ಕೆ ಅಸ್ತು ಎಂದಿತ್ತು. ಮದ್ರಾಸ್ ಮೋಟರ್ ಸಹಭಾಗಿತ್ವದಲ್ಲಿ ಭಾರತದಲ್ಲಿ ರಾಯಲ್ ಎನ್ ಫೀಲ್ಡ್ ಉತ್ಪಾದನೆ ಸುರುವಾಯಿತು. ಆಮೇಲೆ ರಾಯಲ್ ಎನ್ ಫೀಲ್ಡ್ ದೇಶದಲ್ಲಿ ತುಸು ಗಾಂಭೀರ್ಯ ಕಳೆದುಕೊಳ್ಳದೇ ಸವಾರಿ ಮುಂದುವರೆಸಿದೆ.
ಈಗ ದೇಶದ ರಸ್ತೆಯಲ್ಲಿ 500 ಸಿಸಿ ರಾಯಲ್ ಎನ್ ಫೀಲ್ಡ್ ಬೈಕ್ ಗಳೂ ದೊರಕುತ್ತವೆ. ಇದೀಗ ಕಂಪನಿಯು 750 ಸಿಸಿ ಮತ್ತು 1000 ಸಿಸಿ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನು ಇಲ್ಲಿ ಪರಿಚಯಿಸುವ ಕುರಿತು ಆಲೋಚಿಸುತ್ತಿದೆ. ಸೂಪರ್ ಬೈಕ್ ಸ್ಥಾನವನ್ನು ಸೂಪರ್ ಬುಲೆಟ್ ತುಂಬವುದೇ ಕಾದು ನೋಡಬೇಕಿದೆ.
ಎಸ್ಎಂ ಕೃಷ್ಣಾ ಬೈಕ್ ಸವಾರಿ ಮಾಡುತ್ತಾರ? ಮುಂದೆ ನೋಡಿ


Click it and Unblock the Notifications








