ಶತಕ ಬಾರಿಸಿದ ವೈಭವ್‌ಗೆ ಸಿಕ್ತು ಕಲ್ಲು ಬಂಡೆಯಂತಿರುವ Tata Curvv ಕಾರು.. ಆದ್ರೆ ಓಡಿಸುವಂತಿಲ್ಲ, ಯಾಕೆ?

ಐಪಿಎಲ್ (IPL) ಟ್ವೆಂಟಿ - 20 ಟೂರ್ನಿಯ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಆದರೆ, 'ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್' ಪ್ರಶಸ್ತಿಯೂ ರಾಜಸ್ಥಾನ್ ರಾಯಲ್ಸ್ (RR) ತಂಡದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Suryavanshi) ಪಾಲಾಗಿದೆ. ಈ ಮೂಲಕ ಅವರಿಗೆ ಬಲಿಷ್ಠವಾದ 'ಟಾಟಾ ಕರ್ವ್' ಕಾರು ಬಹುಮಾನವಾಗಿ ಒಲಿದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ವೈಭವ್ ಸೂರ್ಯವಂಶಿ ಈ ಋತುವಿನಲ್ಲಿ ಒಟ್ಟು 7 ಪಂದ್ಯಗಳನ್ನು ಆಡಿದ್ದಾರೆ. 206ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬಿಸಿದ್ದು, 252 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಶತಕ ಹಾಗೂ ಅರ್ಧಶತಕ ಸೇರಿದೆ. ಅವರ ಈ ಅತ್ಯದ್ಭುತ ಆಟಕ್ಕೆ ಇಂತಹದೊಂದು ದೊಡ್ಡ ಗೌರವ ಸಂದಿದೆ.

14 Year Old Cricketer Vaibhav Suryavanshi awarded Tata Curvv Suv But Can Not Drive Here The Reason

'ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್' ಪ್ರಶಸ್ತಿಯ ಭಾಗವಾಗಿ ವೈಭವ್ ಸೂರ್ಯವಂಶಿಗೆ ಟಾಟಾ ಕರ್ವ್ (Tata Curvv) ಕಾರನ್ನು ಪ್ರಶಸ್ತಿಯಾಗಿ ನೀಡಲಾಗಿದೆ. ಆದರೆ, ಈ ಕಾರನ್ನು ಅವರಿಗೆ ಓಡಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ವೈಭವ್ ಸೂರ್ಯವಂಶಿ ವಯಸ್ಸು ಕೇವಲ 14 ವರ್ಷ ಅಷ್ಟೇ.. ಭಾರತದಲ್ಲಿ ಚಾಲನಾ ಪರವಾನಗಿ ನೀಡುವ ಕನಿಷ್ಠ ವಯಸ್ಸನ್ನು 18 ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಈ ಕಾರಣಕ್ಕೆ ಅವರಿಗೆ ಕಾರನ್ನು ಓಡಿಸಲು ಆಗುವುದಿಲ್ಲ.

ಸದ್ಯ ವೈಭವ್‌ಗೆ ಹೊಚ್ಚ ಹೊಸ 'ಟಾಟಾ ಕರ್ವ್ ಇವಿ'ಯನ್ನು ಬಹುಮಾನವಾಗಿ ನೀಡಲಾಗಿದೆ ಎಂಬ ವಿವರಗಳು ಲಭ್ಯವಾಗಿವೆ. ಈ ಕಾರು ಎಲೆಕ್ಟ್ರಿಕ್ ಚಾಲಿತ ರೂಪದಲ್ಲಿ ಮಾತ್ರವಲ್ಲದೆ, ಇಂಧನ (ಪೆಟ್ರೋಲ್/ ಡೀಸೆಲ್) ಚಾಲಿತ ಆಯ್ಕೆಯಲ್ಲಿಯೂ ಗ್ರಾಹಕರ ಖರೀದಿಗೆ ಸಿಗುತ್ತದೆ. ಜೊತೆಗೆ ಕೈಗೆಟುಕುವ ಬೆಲೆಯನ್ನು ಒಳಗೊಂಡಿದೆ.

14 Year Old Cricketer Vaibhav Suryavanshi awarded Tata Curvv Suv But Can Not Drive Here The Reason

ಟಾಟಾ ಕರ್ವ್ ಇವಿ ವಿಶೇಷತೆಗಳೇನು..

ಇದೊಂದು ಎಲೆಕ್ಟ್ರಿಕ್ ಕೊಪೆ ಎಸ್‍ಯುವಿಯಾಗಿದೆ. ರೂ.17 ಲಕ್ಷದಿಂದ ರೂ.22 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಪಡೆದಿದೆ. ಈ ಕಾರು ಹೆಚ್ಚು ಬಲಿಷ್ಠವಾದ 45 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 55 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. 430 ರಿಂದ 502 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

ಇದರಲ್ಲಿ 5 ಆಸನಗಳಿವೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 500 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಪನೊರೊಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

14 Year Old Cricketer Vaibhav Suryavanshi awarded Tata Curvv Suv But Can Not Drive Here The Reason

ಇಂಧನ ಚಾಲಿತ ಟಾಟಾ ಕರ್ವ್ ಕಾರು ಹೇಗಿದೆ..

ಈ ಕಾರು ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ ಕನಿಷ್ಠ ರೂ.10 ಲಕ್ಷ ಹಾಗೂ ಗರಿಷ್ಠ ರೂ.19.52 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 17.62 ರಿಂದ 19.5 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 6, 2025, 13:26 [IST]
English summary
14 year old cricketer vaibhav suryavanshi awarded tata curvv suv but can not drive here the reason
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+