ಹಳೆಯ ಕ್ಲಾಸಿಕ್ ಕಾರಿಗೆ ಮರುಜೀವ ತುಂಬಿದ ಅಪ್ಪಟ ಕಾರು ಪ್ರೇಮಿ
ಕಾರೊಂದನ್ನು ಖರೀದಿಸುವುದು ಸುಲಭ ವಿಚಾರ. ಲಕ್ಷಗಟ್ಟಲೆಯಿಂದ ರುಪಾಯಿಗಳಿಂದ ಹಿಡಿದು ಕೋಟಿ ಗಟ್ಟಲೆ ಬೆಲೆ ಬಾಳುವ ವಿವಿಧ ವರ್ಣಗಳ ಅತ್ಯಾಕರ್ಷಕ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾಗಿರುವಾಗ ಹಳೆಯ ಕಾರೊಂದನ್ನು ಖರೀದಿಸಿ ಅದನ್ನು ಪೂರ್ವ ಸ್ಥಿತಿಗೆ ತರಬೇಕಾದರೆ ಅಪ್ಪಟ ಕಾರು ಪ್ರೇಮಿಯೊಬ್ಬರಿಂದ ಮಾತ್ರ ಸಾಧ್ಯ.
ಇದಕ್ಕೊಂದು ಅತ್ಯುತ್ತಮ ಉದಾಹರಣೆ ಕೇರಳದ ಕೊಚ್ಚಿಯಲ್ಲಿರುವ ಜಯದೇವ್ ಗೋಪಕುಮಾರ್. ಹಳೆಯ ಕಾರುಗಳ ಮೇಲೆ ಅತೀವ ಪ್ರೀತಿ ತೋರಿರುವ ಅವರು ಸಂಪೂರ್ಣವಾಗಿ ಕೆಟ್ಟು ಹೋಗಿರುವ 1950ರ ದಶಕದ ಡಾಡ್ಜ್ ಕಿಂಗ್ಸ್ ವೇ ಕಾರನ್ನು ಯಥಾ ಸ್ಥಿತಿಗೆ ತರುವ ಹೆಮ್ಮೆಯ ಮಾಲಿಕರೆನಿಸಿಕೊಂಡಿದ್ದಾರೆ.

ಹಿನ್ನಲೆ...
1955ರಲ್ಲಿ ದಕ್ಷಿಣ ಕೇರಳದ ಚರ್ಚ್ ವೊಂದರಲ್ಲಿ ದಶಕಗಳಷ್ಟು ಕಾಲ ಪ್ರಧಾನ ಪಾದ್ರಿಯವರ ಸೇವೆ ಸಲ್ಲಿಸುತ್ತಿದ್ದ ತಿಳಿ ಹಸಿರು ಬಣ್ಣದ ಡಾಡ್ಜ್ ಕಿಂಗ್ಸ್ ವೇ ಕ್ಲಾಸಿಕ್ ಕಾರು ಬಳಿಕ ವರ್ಷಗಳು ಉರುಳಿದಂತೆ ಚರ್ಚ್ ಹಿಂಬಾಲಕರ ಕೈ ಸೇರಿತ್ತು. ಈ ನಡುವೆ ಡಾಡ್ಜ್ ಕಾರಿಗೆ ನೀಲಿ ಬಣ್ಣವನ್ನು ಬಳಿಯಲಾಗಿತ್ತು. ದೈನಂದಿನ ಬಳಕೆ ಮಾಡಲಾಗುತ್ತಿದ್ದ ಡಾಡ್ಜ್ ಕಾರು ಕ್ರಮೇಣ ನೆನೆಗುದಿಗೆ ಬಿದ್ದಿತ್ತು. ಇದರಿಂದಾಗಿ ವಾರಿಸುದಾರರಿಲ್ಲದೆ ಶಿಥಿಲಾವಸ್ಥೆಗೆ ತಲುಪಿತ್ತು.
ಇಂತಹ ಸಂದರ್ಭದಲ್ಲಿ 2011ರಲ್ಲಿ ಜಯದೇವ್ ಗೋಪಕುಮಾರ್ ಎಂಬ ಕಾರು ಪ್ರೇಮಿ ಮೊದಲ ಬಾರಿಗೆ ಡಾಡ್ಜ್ ಕಾರನ್ನು ಭೇಟಿ ಮಾಡಿದ್ದರು. ಆಗಲೇ ಹಳೆಯ ಕಾರುಗಳ ಮೇಲೆ ಅತೀವ ಆಸಕ್ತಿ ತೋರಿರುವ ಗೋಪಕುಮಾರ್ ಕಣ್ಣುಗಳು ಡಾಡ್ಜ್ ಕಾರ ಮೇಲೆ ಬಿದ್ದಿತ್ತು.

ಇನ್ನೇನು ತಡ ಯಾಕೆ ಎಂಬ ರೀತಿಯಲ್ಲಿ ಡಾಡ್ಜ್ ಕಾರನ್ನು ಯಥಾಸ್ಥಿತಿಗೆ ತರುವ ಪಣತೊಟ್ಟಿರುವ ಗೋಪಕುಮಾರ್ ಬಾಡಿಗೆಗೆ ಟೆಂಪೊವನ್ನು ತರಿಸಿ ರಿಪೇರಿ ಕೆಲಸಕ್ಕಾಗಿ ತಮ್ಮ ಮನೆಗೆ ರವಾನಿಸಿಯೇ ಬಿಟ್ಟರು. ಆಸ್ಪತ್ರೆಯಲ್ಲಿ ಸಾಯಲು ಬಿದ್ದಿರುವ ರೋಗಿಗೆ ಹೇಗೆ ಓಕ್ಸಿಜನ್ ಮಾಸ್ಕ್ ಲಗತ್ತಿಸುತ್ತಾರೆಯೋ ಅದೇ ರೀತಿ ಡಾಡ್ಜ್ ಕಾರಿಗೂ ನುರಿತ ಮೆಕ್ಯಾನಿಕ್ ರಿಂದ ಚಿಕಿತ್ಸೆಯನ್ನು ಆರಂಭಿಸಲಾಯಿತು.

ಎರಡು ವರ್ಷಗಳ ಅವಿರತ ಪ್ರಯತ್ನದ ಬಳಿಕ ಡಾಡ್ಜ್ ಕಾರನ್ನು ಪೂರ್ವ ಸ್ಥಿತಿಗೆ ತರಲಾಯಿತು. ತುಕ್ಕು ಹಿಡಿದು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ ಡಾಡ್ಜ್ ಕಾರು ರಾಣಿಯಂತೆ ಪೂರ್ವ ಸ್ಥಿತಿಯಲ್ಲಿ ಕಂಗೊಳಿಸುವುದನ್ನು ನೋಡಿದ ಸ್ಥಳೀಯರಲ್ಲಿ ಅಚ್ಚರಿ ಕಾದಿತ್ತು. ಡಾಡ್ಜ್ ಯಥಾ ಸ್ಥಿತಿಗೆ ತರಲು ಮೆಕ್ಯಾನಿಕ್ ಮಾಡಿರುವ ಪ್ರಯತ್ನ ನಿಜಕ್ಕೂ ಪ್ರಶಂಸನೀಯ. ಇಲ್ಲಿ ಕೊಟ್ಟಿರುವ ಚಿತ್ರಗಳೇ ಇದನ್ನು ಸಾರುತ್ತಿವೆ.


Click it and Unblock the Notifications
































































































