ವಿಶ್ವದ 10 ಅತ್ಯುತ್ತಮ ವಿಮಾನ ನಿಲ್ದಾಣಗಳು

By Nagaraja

ಬಹುತೇಕ ಎಲ್ಲರೂ ಪ್ರವಾಸವನ್ನು ಇಷ್ಟಪಡುತ್ತಾರೆ. ಅಂದರೆ ಸುರಕ್ಷಿತವಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶವನ್ನು ತಲುಪಲು ಇಷ್ಟಪಡುತ್ತಾರೆ ಎಂಬುದನ್ನು ಇದು ಸಾರುತ್ತದೆ. ಇತ್ತೀಚೆಗಷ್ಟೇ ಸಂಭವಿಸಿದ ಮಲೇಷ್ಯಾ ವಿಮಾನ ದುರಂತ ಪ್ರಕರಣವನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದು.

ಏನಿದು ಬ್ಲ್ಯಾಕ್ ಬಾಕ್ಸ್? ಇದರ ಬಣ್ಣ ಯಾವುದು? ಮುಂದಕ್ಕೆ ಓದಿ

ತಂತ್ರಜ್ಞಾನವು ಎಷ್ಟು ಮುಂದುವರಿದರೂ ಕನಿಷ್ಠ ಪಕ್ಷ ವಿಮಾನದ ಅವಶೇಷ ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ. ಹಾಗಿರುವಾಗ ನಿಮ್ಮ ಸುರಕ್ಷಿತ ಪಯಾಣದಲ್ಲಿ ವಿಮಾನ ನಿಲ್ದಾಣಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ಇನ್ನು ಸ್ವಲ್ಪ ಹಿಂದೆ ಸಾಗಿದರೆ ಟೇಬಲ್ ಶೈಲಿಯ ವಿಮಾನ ನಿಲ್ದಾಣ ಮಂಗಳೂರು ವಿಮಾನ ದುರಂತದಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಬೋಯಿಂಗ್ ಮೀರಿಸಿದ ಏರ್‌ಬಸ್

ಇಲ್ಲಿ 2014ನೇ ಸಾಲಿನ ವಿಶ್ವದ ಹತ್ತು ಸರ್ವಶ್ರೇಷ್ಠ ವಿಮಾನ ನಿಲ್ದಾಣಗಳ ಬಗ್ಗೆ ಮಾಹಿತಿ ಕೊಡಲಾಗಿದೆ. ವಿಮಾನೋದ್ಯಮದಲ್ಲಿ ಸ್ಕೈಟ್ರಾಕ್ಸ್ ವಲ್ಡ್ ಏರ್‌ಪೋರ್ಟ್ ಅವಾರ್ಡ್ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ವಾರ್ಷಿಕ ಜಾಗತಿಕ ವಿಮಾನ ನಿಲ್ದಾಣ ಗ್ರಾಹಕ ತೃಪ್ತಿ ಸಮೀಕ್ಷೆಯ ಆಧಾರದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಇದರಲ್ಲಿ ಚೆಕ್ ಇನ್, ಆಗಮನ, ವರ್ಗಾವಣೆ, ಶಾಪಿಂಗ್, ಭದ್ರತೆ ಮತ್ತು ವಲಸೆ, ನಿರ್ಗಮನ ಸೇರಿದಂತೆ ವಿಮಾನ ನಿಲ್ದಾಣ ಸೇವೆ ಮತ್ತು ಉತ್ಪನ್ನಗಳೆಂಬ 39 ಪ್ರಮುಖ ಘಟಕಗಳು ಪ್ರಶಸ್ತಿಯನ್ನು ನಿರ್ಣಯಿಸುತ್ತದೆ.

1. ಸಿಂಗಾಪುರ ಚಾಂಗಿ ವಿಮಾನ ನಿಲ್ದಾಣ

1. ಸಿಂಗಾಪುರ ಚಾಂಗಿ ವಿಮಾನ ನಿಲ್ದಾಣ

ವಿಶ್ವದ ಅತ್ಯುತ್ತಮ ವಿಮಾನ ನಿಲ್ಧಾಣಗಳ ಪೈಕಿ ಸಿಂಗಾಪುರ ಚಾಂಗಿ ಅಗ್ರಸ್ಥಾನ ಪಡೆದುಕೊಂಡಿದೆ. 1981ನೇ ಇಸವಿಯಿಂದ ಇದುವರೆಗೆ 450ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ದಕ್ಷಿಣ ಪೂರ್ವ ಏಷ್ಯಾದ ಈ ವಿಮಾನ ನಿಲ್ದಾಣನಿಂದ ವಾರದಲ್ಲಿ 6,400ರಷ್ಟು ವಿಮಾನಗಳು ಹಾರಾಟ ನಡೆಸುತ್ತಿವೆ. ಈ ಮೂಲಕ 60 ದೇಶಗಳ 250 ನಗರಗಳಿಗೆ ಸಂಪರ್ಕ ಬೆಳೆಸಿವೆ.

ವಿಶ್ವದ 10 ಅತ್ಯುತ್ತಮ ವಿಮಾನ ನಿಲ್ದಾಣಗಳು

ಈ ಪೈಕಿ 2012ನೇ ಸಾಲಿನಲ್ಲಿ 30 ಶ್ರೇಷ್ಠ ಪ್ರಶಸ್ತಿಗಳನ್ನು ಸಿಂಗಾಪುರ ಚಾಂಗಿ ವಿಮಾನ ನಿಲ್ದಾಣ ತಮ್ಮದಾಗಿಸಿಕೊಂಡಿದೆ. ಇಲ್ಲಿ ಪ್ರವಾಸಿಗರ ಮನರಂಜನೆಗಾಗಿ ಅತಿ ಹೆಚ್ಚಿನ ಮಹತ್ವ ಕೊಡಲಾಗುತ್ತಿದ್ದು, ಆರ್ಟ್ ಸ್ಟೇಷನ್, 3ಡಿ ಅನುಭವ, ಸಿನೆಮಾ ಮಂದಿರ, ಒಳಾಂಗಣ ಕ್ರೀಡಾಂಗಣ, ಉಚಿತ ವಿಡಿಯೋ ಗೇಮ್, ಸಂಗೀತ, ಗಾರ್ಡನ್ ಹಾಗೂ ಸ್ನಾನಗೃಹಗಳ ವ್ಯವಸ್ಥೆಯಿದೆ.

ವಿಶ್ವದ 10 ಅತ್ಯುತ್ತಮ ವಿಮಾನ ನಿಲ್ದಾಣಗಳು

ಇದು ಐದನೇ ಬಾರಿ ಚಾಂಗಿ ವಿಮಾನ ನಿಲ್ದಾಣ ಇಂತಹದೊಂದು ಗೌರವಕ್ಕೆ ಪಾತ್ರವಾಗುತ್ತಿದೆ. ಅಂದ ಹಾಗೆ ಸಿಂಗಾಪುರ ಚಾಂಗಿ ವಿಮಾನ ನಿಲ್ದಾಣದ ಕೋಡ್ 'ಎಸ್‌ಐಎನ್' ಆಗಿದೆ.

2. ಇಂಚಿಯಾನ್ (Incheon) ಅಂತರಾಷ್ಟ್ರೀಯ ವಿಮಾನ ನಿಲ್ದಾಣ

2. ಇಂಚಿಯಾನ್ (Incheon) ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಸ್ಥಿತಗೊಂಡಿರುವ ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಜಗತ್ತಿನ ಅತ್ಯಂತ ಬಿಡುವಿಲ್ಲದ ಏರ್‌ಪೋರ್ಟ್‌ಗಳಲ್ಲಿ ಒಂದಾಗಿದೆ. ಇಲ್ಲಿ ನಿದ್ರಾಸನ ಕೊಠಡಿ, ಐಸ್ ಸ್ಕೇಟಿಂಗ್ ರಿಂಕ್, ಒಳಾಂಗಣ ಗಾರ್ಡನ್, ಕ್ಯಾಸಿನೊ, ಮ್ಯೂಸಿಯಂ ಹಾಗೂ ಶಾಪಿಂಗ್ ಮಾಲ್‌ಗಳಿವೆ.

ಕೋಡ್ - ಐಸಿಎನ್
3. ಮ್ಯೂನಿಚ್ ವಿಮಾನ ನಿಲ್ದಾಣ

3. ಮ್ಯೂನಿಚ್ ವಿಮಾನ ನಿಲ್ದಾಣ

ಪ್ರಯಾಣಿಕ ದಟ್ಟಣೆ ವಿಚಾರದಲ್ಲಿ ಜರ್ಮನಿಯ ಎರಡನೇ ಬಿಡುವಿಲ್ಲದ ವಿಮಾನ ನಿಲ್ದಾಣವಾಗಿರುವ ಮ್ಯೂನಿಚ್ ಜಾಗತಿಕವಾಗಿ 12ನೇ ಬಿಡುವಿಲ್ಲದ ಏರ್‌ಪೋರ್ಟ್ ಆಗಿದೆ. ಸಾಮಾನ್ಯವಾಗಿ ಜರ್ಮನಿಯಲ್ಲಿ ಶೀತಕಾಲಘಟ್ಟದಲ್ಲಿ ಆಕಾಶದಲ್ಲಿ ದಟ್ಟ ಹೊಗೆ ಆವರಿಸುವುದರಿಂದ ಸಹಜವಾಗಿಯೇ ವಿಮಾನ ಪಯಣ ವಿಳಂಬವಾಗುತ್ತದೆ. ಈ ಸಂದರ್ಭದಲ್ಲಿ ಯಾತ್ರಿಕರಿಗಾಗಿ ಶಾಪಿಂಗ್ ಮಾಲ್, ತಂಗುದಾಣ, ಸಿನಿಮಾ, ಐತಿಹಾಸಿಕ ವಿಮಾನಗಳ ಪ್ರದರ್ಶನ ಮುಂತಾದ ಸೇವೆಗಳನ್ನು ಇಲ್ಲಿ ಒದಗಿಸಲಾಗುತ್ತದೆ.

ಕೋಡ್ - ಎಂಯುಸಿ

4. ಹಾಂಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

4. ಹಾಂಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಚೆಕ್ ಲ್ಯಾಪ್ ಕಾಕ್ (Chek Lap Kok) ದ್ವೀಪದಲ್ಲಿ ಸ್ಥಿತಗೊಂಡಿರುವ ಹಾಂಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಏಷ್ಯಾದ ಅತ್ಯಂತ ಚಟುವಣಿಕೆ ನಿರತ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇಲ್ಲಿ ಎವಿಯೇಷನ್ ಡಿಸ್ಕವರಿ ಸೆಂಟರ್ ಜತೆಗೆ ಫುಟ್ಬಾಲ್, ಬಾಸ್ಕೆಟ್‌ಬಾಲ್, ಬಾಕ್ಸಿಂಗ್, ಸ್ಕೇಯಿಂಗ್, ಶೂಟಿಂಗ್ ಮತ್ತು ಕಾರು ರೇಸಿಂಗ್ ಮಜಾ ಸವಿಯಬಹುದಾಗಿದೆ.

ಕೋಡ್ ಎಚ್‌ಕೆಜಿ

5. ಆರ್ಮ್‌ಸ್ಟರ್‌ಡ್ಯಾಮ್ ವಿಮಾನ ನಿಲ್ದಾಣ

5. ಆರ್ಮ್‌ಸ್ಟರ್‌ಡ್ಯಾಮ್ ವಿಮಾನ ನಿಲ್ದಾಣ

ಹಾಲೆಂಡ್‌ನ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವ ಆರ್ಮ್‌ಸ್ಟರ್‌ಡ್ಯಾಮ್ ವಿಮಾನ ನಿಲ್ದಾಣ (Schiphol), ಯುರೋಪ್‌ನ ಬಿಡುವಿಲ್ಲದ ಏರ್‌ಪೋರ್ಟ್‌ಗಳಲ್ಲಿ ಒಂದಾಗಿದೆ. ಇಲ್ಲಿ ಮಕ್ಕಳಿಗಾಗಿ ಆಟದ ಸ್ಥಳ, ಸಂಗ್ರಹಾಲಯ ಹಾಗೂ ಜಗತ್ತಿನ ಮೊದಲ ಏರ್‌ಪೋರ್ಟ್ ಲೈಬ್ರರಿ ಸೌಲಭ್ಯಗಳಿವೆ.

ಕೋಡ್ - ಎಎಂಎಸ್

6. ಟೋಕಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

6. ಟೋಕಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಹನೆಡಾ (Haneda) ಏರ್‌ಪೋರ್ಟ್ ಎಂದೇ ಚಿರಪರಿಚಿತವಾಗಿರುವ ಟೋಕಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸತತ ಎರಡು ಬಾರಿಗೆ 'ಅತ್ಯಂತ ಸಕಾಲ ವ್ಯವಹಾರದ ವಿಮಾನ ನಿಲ್ದಾಣ' ಎಂಬ ಕೀರ್ತಿಗೆ ಪಾತ್ರವಾಗಿತ್ತು. ಇಲ್ಲಿನ ಶೇಕಡಾ 94.3ರಷ್ಟು ನಿರ್ಗಮನ ಹಾಗೂ ಶೇಕಡಾ 88.6ರಷ್ಟು ಆಗಮನ ವಿಮಾನಗಳು ಸರಿಯಾದ ಸಮಯವನ್ನು ಪಾಲಿಸುತ್ತಿದೆ.

ಕೋಡ್- ಎಚ್‌ಎನ್‌ಡಿ

7. ಬೀಂಜಿಂಗ್ ಕ್ಯಾಪಿಟಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

7. ಬೀಂಜಿಂಗ್ ಕ್ಯಾಪಿಟಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಚೀನಾದ ಘನತೆಯನ್ನು ಎತ್ತಿ ಹಿಡಿಯುವ ಬೀಂಜಿಂಗ್ ಕ್ಯಾಪಿಟಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಚಿತ ವೈಫೈ, ಮೊಬೈಲ್ ಚಾರ್ಜಿಂಗ್ ಸೇವೆಗಳು ಲಭ್ಯವಿದೆ. ಇದು ಏರ್‌ಪೋರ್ಟ್ ಟರ್ಮಿನಲ್ ಗಾತ್ರದ ವಿಚಾರದಲ್ಲಿ ದುಬೈ ಅಂತಾರಷ್ಟ್ರೀಯ ವಿಮಾನ ನಿಲ್ದಾಣ ಬಳಿಕದ ಸ್ಥಾನ ಪಡೆದುಕೊಂಡಿದೆ.

ಕೋಡ್ - ಪಿಇಕೆ

8. ಜ್ಯೂರಿಕ್ ವಿಮಾನ ನಿಲ್ದಾಣ

8. ಜ್ಯೂರಿಕ್ ವಿಮಾನ ನಿಲ್ದಾಣ

ಸ್ವಿಜರ್ಲೆಂಡ್‌ನ ಅತಿದೊಡ್ಡ ವಿಮಾನ ನಿಲ್ದಾಣವಾಗಿರುವ ಜ್ಯೂರಿಕ್, ತನ್ನ ರಾಷ್ಟ್ರವನ್ನು ಪ್ರತಿನಿಧಿಸುತ್ತದೆ ಅಂದರೆ ತಪ್ಪಾಗಲಾರದು. ಇದು ಶುದ್ಧ, ಉತ್ತಮವಾಗಿ ನಿರ್ವಹಿಸಲ್ಪಟ್ಟ ಹಾಗೂ ಪ್ರಜ್ಞಾಪೂರ್ವಕ ಚಿಂತನೆಯ ವಿಮಾನ ನಿಲ್ದಾಣವಾಗಿದೆ. ಇಲ್ಲೂ ಆಹಾರ ಹಾಗೂ ಶಾಂಪಿಂಗ್ ವ್ಯವಸ್ಥೆ ಇದೆ.

ಕೋಡ್ - ಝಡ್‌ಆರ್‌ಎಚ್

9. ವಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

9. ವಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಕೆನಡಾ 'ಸಿ ಐಲ್ಯಾಂಡ್‌'ನಲ್ಲಿ ಸ್ಥಿತಗೊಂಡಿರುವ ವಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಟೊರಂಟೊ ಪೀಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಕ ದೇಶದ ಅತ್ಯಂತ ಚಟುವಣಿಕೆ ನಿರತ ಎರಡನೇ ವಿಮಾನ ನಿಲ್ದಾಣ ಎನಿಸಿಕೊಂಡಿದೆ. ಅಷ್ಟೇ ಅಲ್ಲದೆ ಸ್ಕೈಟ್ರಾಕ್‌ನಿಂದ ಸತತವಾಗಿ ಐದು ವರ್ಷ ಪರ್ಯಂತ (2007ರಿಂದ 2013) ಅತ್ಯುತ್ತಮ ಉತ್ತರ ಅಮೆರಿಕ ವಿಮಾನ ನಿಲ್ದಾಣವೆಂಬ ಪ್ರಶಸ್ತಿಗೂ ಭಾಜನವಾಗಿದೆ.

ಕೋಡ್ - ವೈವಿಆರ್

10. ಲಂಡನ್ ಹೀಥ್ರೂ ವಿಮಾನ ನಿಲ್ದಾಣ

10. ಲಂಡನ್ ಹೀಥ್ರೂ ವಿಮಾನ ನಿಲ್ದಾಣ

ಲಂಡನ್ ವಿಮಾನ ನಿಲ್ದಾಣವೆಂದೇ ಪ್ರಸಿದ್ಧಿ ಪಡೆದಿರುವ ಲಂಡನ್ ಹೀಥ್ರೂ ವಿಮಾನ ನಿಲ್ದಾಣ, ಬ್ರಿಟನ್‌ನ ಅತ್ಯಂತ ಚಟುವಣಿಕೆ ನಿರತ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇಲ್ಲಿ ಒಟ್ಟು 90 ಏರ್‌ಲೈನ್ಸ್‌ಗಳು ಸೇವೆ ನಡೆಸುತ್ತಿದ್ದು, 170 ಪ್ರದೇಶಗಳಿಗೆ ತಮ್ಮ ಪಯಣ ಹಮ್ಮಿಕೊಂಡಿದೆ.

ಕೋಡ್ - ಎಲ್‌ಎಚ್‌ಆರ್

ವಿಶ್ವದ 10 ಅತ್ಯುತ್ತಮ ವಿಮಾನ ನಿಲ್ದಾಣಗಳು

ಅಷ್ಟಕ್ಕೂ ನೀವು ವಿಮಾನ ಯಾತ್ರೆ ಕೈಗೊಂಡಿದ್ದೀರಾ? ನಿಮ್ಮ ಪ್ರಕಾರ ನೀವು ಕಣ್ಣಾರೆ ವೀಕ್ಷಿಸಿರುವುದರ ಪೈಕಿ ಜಗತ್ತಿನ ಅತ್ಯಂತ ಸುಂದರ ವಿಮಾನ ನಿಲ್ದಾಣ ಯಾವುದು? ಸದ್ಯ ಈ ಪಟ್ಟಿ ಭಾರತ ಯಾವಾಗ ಗುರುತಿಸಿಕೊಳ್ಳಲಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

Most Read Articles

Kannada
English summary
Singapore Changi Airport has once again been named the World's Best Airport at the 2014 Skytrax World Airport Awards. It is the fifth time Changi Airport has achieved this accolade and the very first time in Changi Airport’s history to win it twice in a row.
Story first published: Thursday, April 3, 2014, 11:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X