ಮಾಜಿ ಮುಖ್ಯಮಂತ್ರಿಗೂ ಮೋಡಿ ಮಾಡಿದ ಹೊಸ ಮಹೀಂದ್ರಾ ಥಾರ್

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಅಕ್ಟೋಬರ್ 2ರಂದು ತನ್ನ ಹೊಸ ಥಾರ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತು. ಭಾರತೀಯ ಗ್ರಾಹಕರು ಈ ಎಸ್‌ಯುವಿಯ ಬಿಡುಗಡೆಯನ್ನು ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದರು.

ಮಾಜಿ ಮುಖ್ಯಮಂತ್ರಿಗೂ ಮೋಡಿ ಮಾಡಿದ ಹೊಸ ಮಹೀಂದ್ರಾ ಥಾರ್

ಹಳೆಯ ತಲೆಮಾರಿನ ಥಾರ್ ಎಸ್‌ಯುವಿಗೆ ಹೋಲಿಸಿದರೆ, ಹೊಸ ತಲೆಮಾರಿನ ಥಾರ್ ಎಸ್‌ಯುವಿ ಹಲವು ಪಟ್ಟು ಉತ್ತಮವಾಗಿದೆ. ಪರ್ಫಾಮೆನ್ಸ್, ವಿನ್ಯಾಸ ಹಾಗೂ ತಂತ್ರಜ್ಞಾನ ಸೇರಿದಂತೆ ಎಲ್ಲಾ ಅಂಶಗಳಲ್ಲಿ ಥಾರ್ ಎಸ್‌ಯುವಿಯನ್ನು ಅಪ್ ಡೇಟ್ ಮಾಡಲಾಗಿದೆ. ಹೊಸ ಥಾರ್ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.9.80 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ರೂ.13.75 ಲಕ್ಷಗಳಾಗಿದೆ.

ಮಾಜಿ ಮುಖ್ಯಮಂತ್ರಿಗೂ ಮೋಡಿ ಮಾಡಿದ ಹೊಸ ಮಹೀಂದ್ರಾ ಥಾರ್

ಮಹೀಂದ್ರಾ ಕಂಪನಿಯು ಥಾರ್ ಎಸ್‌ಯುವಿಯ ಬೆಲೆಯನ್ನು ಫೀಚರ್ ಗಳಿಗೆ ತಕ್ಕಂತೆ ನಿಗದಿಪಡಿಸಿದೆ ಎಂದು ಹೇಳಬಹುದು. ಹೊಸ ಥಾರ್ ಎಸ್‌ಯುವಿಯನ್ನು ಮಹೀಂದ್ರಾ ಕಂಪನಿಯ ಹೊಸ ಪ್ಲಾಟ್‌ಫಾರಂನ ಮೇಲೆ ನಿರ್ಮಿಸಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮಾಜಿ ಮುಖ್ಯಮಂತ್ರಿಗೂ ಮೋಡಿ ಮಾಡಿದ ಹೊಸ ಮಹೀಂದ್ರಾ ಥಾರ್

ಅನೇಕ ಸೆಲೆಬ್ರಿಟಿಗಳು ಹೊಸ ಥಾರ್ ಎಸ್‌ಯುವಿಯನ್ನು ಖರೀದಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಹ ಹೊಸ ಥಾರ್ ಎಸ್‌ಯುವಿಯನ್ನು ಚಾಲನೆ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿಗೂ ಮೋಡಿ ಮಾಡಿದ ಹೊಸ ಮಹೀಂದ್ರಾ ಥಾರ್

ಥಾರ್ ಎಸ್‌ಯುವಿಯ ಸಾಮರ್ಥ್ಯವು ಅವರನ್ನು ಆಕರ್ಷಿಸಿದೆ. ಈ ಎಸ್‌ಯುವಿಯ ಚಾಲನಾ ಅನುಭವವನ್ನು ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಶೇರ್ ಮಾಡಿದ್ದಾರೆ. ಒಮರ್ ಅಬ್ದುಲ್ಲಾ ಥಾರ್ ಎಸ್‌ಯುವಿಯನ್ನು ಚಾಲನೆ ಮಾಡುತ್ತಿದ್ದ ವೇಳೆಯಲ್ಲಿ ಅವರ ತಂದೆ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಸಹ ಜೊತೆಗಿದ್ದರು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮಾಜಿ ಮುಖ್ಯಮಂತ್ರಿಗೂ ಮೋಡಿ ಮಾಡಿದ ಹೊಸ ಮಹೀಂದ್ರಾ ಥಾರ್

ಹೊಸ ಥಾರ್ ಎಸ್‌ಯುವಿಯ ಬಿಡುಗಡೆ ಸಮಾರಂಭಕ್ಕೆ ಅವರಿಬ್ಬರನ್ನೂ ಮಹೀಂದ್ರಾ ಕಂಪನಿಯ ಡೀಲರ್ ಗಳು ಆಹ್ವಾನಿಸಿದ್ದರು. ಬಿಡುಗಡೆಯ ಕಾರ್ಯಕ್ರಮದ ನಂತರ ಇಬ್ಬರೂ ಹೊಸ ಎಸ್‌ಯುವಿಯನ್ನು ಚಾಲನೆ ಮಾಡಿ ಖುಷಿ ಪಟ್ಟಿದ್ದಾರೆ.

ಮಾಜಿ ಮುಖ್ಯಮಂತ್ರಿಗೂ ಮೋಡಿ ಮಾಡಿದ ಹೊಸ ಮಹೀಂದ್ರಾ ಥಾರ್

ಸ್ವಲ್ಪವೇ ದೂರ ಚಲಿಸಿದರೂ ಹೊಸ ತಲೆಮಾರಿನ ಥಾರ್ ಎಸ್‌ಯುವಿ ಒಮರ್ ಅಬ್ದುಲ್ಲಾ ಅವರ ಗಮನ ಸೆಳೆದಿದೆ. ಈ ಬಗ್ಗೆ ಸ್ವತಃ ಒಮರ್ ಅಬ್ದುಲ್ಲಾ ಅವರೇ ಟ್ವೀಟ್ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೇ ಈ ರೀತಿಯ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದಕ್ಕಾಗಿ ಮಹೀಂದ್ರಾ ಕಂಪನಿಯನ್ನು ಶ್ಲಾಘಿಸಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮಾಜಿ ಮುಖ್ಯಮಂತ್ರಿಗೂ ಮೋಡಿ ಮಾಡಿದ ಹೊಸ ಮಹೀಂದ್ರಾ ಥಾರ್

ಹಳೆಯ ಮಾದರಿಗೆ ಹೋಲಿಸಿದರೆ, ಹೊಸ ತಲೆಮಾರಿನ ಥಾರ್ ಎಸ್‌ಯುವಿಯು ವಿಶಾಲವಾಗಿದ್ದು, ಉದ್ದವಾಗಿದೆ. ಹಾಗೆಯೇ ಹೆಚ್ಚಿನ ಸೌಲಭ್ಯಗಳನ್ನು ಹೊಂದಿದೆ. ಹೊಸ ಪೀಳಿಗೆಯ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಎಎಕ್ಸ್, ಎಎಕ್ಸ್ (ಒ) ಹಾಗೂ ಎಲ್‌ಎಕ್ಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಮಾಜಿ ಮುಖ್ಯಮಂತ್ರಿಗೂ ಮೋಡಿ ಮಾಡಿದ ಹೊಸ ಮಹೀಂದ್ರಾ ಥಾರ್

ಈ ಎಸ್‌ಯುವಿಯ ಇಂಟಿರಿಯರ್ ನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಸ್ಪೀಕರ್‌ ಹಾಗೂ ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಗಳನ್ನು ನೀಡಲಾಗಿದೆ. ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮಾಜಿ ಮುಖ್ಯಮಂತ್ರಿಗೂ ಮೋಡಿ ಮಾಡಿದ ಹೊಸ ಮಹೀಂದ್ರಾ ಥಾರ್

ಪೆಟ್ರೋಲ್ ಮಾದರಿಯಲ್ಲಿ 2.0-ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 150 ಬಿಹೆಚ್‌ಪಿ ಪವರ್ ಹಾಗೂ 320 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಡೀಸೆಲ್ ಮಾದರಿಯು 2.2 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 132 ಬಿಹೆಚ್‌ಪಿ ಪವರ್ ಹಾಗೂ 300 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಾಜಿ ಮುಖ್ಯಮಂತ್ರಿಗೂ ಮೋಡಿ ಮಾಡಿದ ಹೊಸ ಮಹೀಂದ್ರಾ ಥಾರ್

ಮಹೀಂದ್ರಾ ಥಾರ್ ಎಸ್‌ಯುವಿಯು ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ. ಈ ಎಸ್‌ಯುವಿಯು ವಿಶೇಷವಾಗಿ ಆಫ್ ರೋಡ್ ಉತ್ಸಾಹಿಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಮುಂಬರುವ ದಿನಗಳಲ್ಲಿ ಆಫ್-ರೋಡ್ ಉತ್ಸಾಹಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಸಹ ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಖರೀದಿಸುವ ನಿರೀಕ್ಷೆಗಳಿವೆ.

Most Read Articles
 

Kannada
English summary
2020 Mahindra Thar SUV impresses former Jammu Kashmir CM Omar Abdullah. Read in Kannada.
Story first published: Tuesday, October 6, 2020, 12:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X