ಮಾರುತಿ ಸ್ವಿಫ್ಟ್‌ಗೆ ಈ ಮಾಡಿಫೈ ಮಾಡಿದರೆ ಸಾಕು: ಈ ಅಲಾಯ್ ವ್ಹೀಲ್ ಹಾಕಿದರೆ, ಹಿಡಿಯುವವರೇ ಇಲ್ಲ!
ಮಾರುತಿ ಸುಜುಕಿ ಸ್ವಿಫ್ಟ್ ಎಂಬುದು ಒಂದು ಖಾಲಿ ಕ್ಯಾನ್‌ವಾಸ್ ಇದ್ದಂತೆ. ನಿಮಗೆ ಈ ವಾಹನವನ್ನು ನಿಮಗೆ ಬೇಕಾದ ರೀತಿಯಲ್ಲಿ ಮಾಡಿಫೈ ಮಾಡಬಹುದು. ಆಶ್ಚರ್ಯವೆಂದರೆ ಈ ಕಾರನ್ನು ಯಾವ ರೀತಿಯಲ್ಲಿ ಮಾಡಿಫೈ ಮಾಡಿದರೂ ಅದು ಅದ್ಭುತವಾಗಿಯೇ ಕಾಣುತ್ತದೆ. ಹೊಸ ಸ್ವಿಫ್ಟ್ ಅದ್ಭುತವಾಗಿ ಕಾಣಲು ಪ್ರಮುಖ ಟಿಪ್ಸ್ ಇಲ್ಲಿದೆ.
ನಿಮಗೆಲ್ಲಾ ತಿಳಿದಿರುವಂತೆ ಒಂದು ಕಾರು ಅಥವಾ ಇನ್ನಾವುದೇ ವಾಹನ ಅದ್ಭುತವಾಗಿ, ಅಕರ್ಷಕ ನೋಟ ಹೊಂದಲು ಆ ವಾಹನದ ಚಕ್ರಗಳು ಪ್ರಮುಖ ಕೊಡುಗೆಯನ್ನು ನೀಡುತ್ತವೆ. ಹಾಗಾಗಿಯೇ ನಮ್ಮ ನಡುವೆ ಸಾಕಷ್ಟು ಮಂದಿ, ಕಾರುಗಳನ್ನು ಖರೀದಿಸದ ಕೂಡಲೇ ಅದಕ್ಕೆ ದೊಡ್ಡದಾದ ಅಲಾಯ್ ವ್ಹೀಲ್‌ಗಳನ್ನು ಹಾಕಿಸುತ್ತಾರೆ. ಹೀಗೆ ವ್ಹೀಲ್‌ಗಳನ್ನು ಬದಲಾಯಿಸುವಾಗ ಸರ್ಕಾರದ ನಿಯಮಗಳನ್ನು ಅನುಸರಿಸಿ ಬದಲಾಯಿಸುವುದು ಉತ್ತಮ.

ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ಹೊಸ ಸ್ವಿಫ್ಟ್ (2024 Maruti Suzuki Swift) ಕಾರಿಗೆ ಅಲಾಯ್ ವ್ಹೀಲ್‌ಗಳು ಬಂದಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದೆ. ಇದು ಆಫ್ಟರ್ ಮಾರ್ಕೆಟ್ ಮಾಡಿಫೈ ವಸ್ತುವಾಗಿದ್ದು, ಕಂಪನಿ ಕಡೆಯಿಂದ ಲಭ್ಯವಾಗುವುದಿಲ್ಲ. ಸ್ವಿಫ್ಟ್‌ಗೆ ಇದೀಗ 17, 18 ಮತ್ತು 20 ಇಂಚ್‌ಗಳ ಅಲಾಯ್ ವ್ಹೀಲ್‌ಗಳು ಲಭ್ಯವಿದ್ದು, ಈ ವ್ಹೀಲ್ ಸಹಾಯದಿಂದ ಕಾರಿನ ಲುಕ್ ಅನ್ನು ನೆಕ್ಸ್ಟ್ ಲೆವೆಲ್‌ಗೆ ತೆಗದುಕೊಂಡು ಹೋಗಬಹುದು.
ಪಂಜಾವ್ ಲೂಧಿಯಾನದ ವೆಲೋಸಿಟಿ ಟೈರ್ಸ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಅಲಾಯ್ ವ್ಹೀಲ್‌ಗಳನ್ನು ಅಳವಡಿಸಿರುವ ಸ್ವಿಫ್ಟ್ ಕಾರಿನ ವಿಡಿಯೋ ವೈರಲ್ ಆಗುತ್ತಿದೆ. ಆಕರ್ಷಕ ಡಿಸೈನ್ ವಿನ್ಯಾಸದಿಂದ ಕೂಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಸ್ವಿಫ್ಟ್‌ಗೆ ಅಲಾಯ್ ವ್ಹೀಲ್‌ಗಳು ಮಾತ್ರವಲ್ಲದೇ, ಇನ್ನೂ ಹಲವಾರು ಆಸೆಸರೀಸ್‌ಗಳು ಲಭ್ಯವಿದ್ದು ಬೇಕಾದ ರೀತಿಯಲ್ಲಿ ಮಾಡಿಫೈ ಮಾಡಬಹುದಾಗಿದೆ.

ಇನ್ನು ಮಾರುಕಟ್ಟೆಗೆ ಬಂದಿರುವ 2024 ಸ್ವಿಫ್ಟ್ ಬಗ್ಗೆ ನೋಡುವುದಾದರೆ, ಈ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.49 ಲಕ್ಷದಿಂದ ರೂ.9.64 ಲಕ್ಷವಾಗಿದೆ. ಈ ಹೊಸ ಸ್ವಿಫ್ಟ್ ಕಾರಿನ ವಿನ್ಯಾಸ, ಒಳಭಾಗ ಮತ್ತು ತಾಂತ್ರಿಕ ವಿಷಯದಲ್ಲಿ ಗಮನಾರ್ಹ ಬದಲಾವಣೆಗಳೊಂದಿಗೆ ಇದು ಬಂದಿದೆ.
ಹೊಸ ಸ್ವಿಫ್ಟ್ ಸಿಜ್ಲಿಂಗ್ ರೆಡ್, ಲುಸ್ಟರ್ ಬ್ಲೂ, ನಾವೆಲ್ ಆರೆಂಜ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಮತ್ತು ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಆರು ಮೊನೊಟೋನ್ ಪೇಂಟ್ ಸ್ಕೀಮ್‌ಗಳಲ್ಲಿ ಲಬ್ಯವಿದೆ. ಇನ್ನು ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಸಿಜ್ಲಿಂಗ್ ರೆಡ್, ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಲುಸ್ಟರ್ ಬ್ಲೂ ಮತ್ತು ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳನ್ನು ಹೊಂದಿವೆ.
ನ್ಯೂ ಜನರೇಷನ್ ಮಾರುತಿ ಸುಜುಕಿ ಸ್ವಿಫ್ ಕಾರಿನಲ್ಲಿ ಹೊಸದಾಗಿ ಕೆಲವು ಸುರಕ್ಷತಾ ಫೀಚರ್ಸ್ ಗಳನ್ನು ಸೇರಿಸಿದೆ. ಈ ಹೊಸ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ISOFIX ಆಂಕರ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳು, EBD ಜೊತೆಗೆ ABS, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ESC ಅನ್ನು ಒಳಗೊಂಡಿದೆ.
2024ರ ಮಾರುತಿ ಸುಜುಕಿ ಸ್ವಿಫ್ಟ್‌ಗೆ ದೊಡ್ಡ ಬದಲಾವಣೆಯನ್ನು ಬಾನೆಟ್ ಅಡಿಯಲ್ಲಿ ಮಾಡಲಾಗಿದೆ. ಸ್ವಿಫ್ಟ್ ಸುಜುಕಿಯ K-ಸರಣಿ ಎಂಜಿನ್‌ಗಳನ್ನು ಕೈಬಿಟ್ಟು Z ಸೀರಿಸ್ ಎಂಜಿನ್ ನೀಡಲಾಗಿದೆ. ಈ 2024ರ ಸ್ವಿಫ್ಟ್ ಕಾರಿನಲ್ಲಿ ಹೊಸ Z-ಸೀರಿಸ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಿದೆ. ಈ ಎಂಜಿನ್ 5,700rpm ನಲ್ಲಿ 80.46bhp ಮತ್ತು 4,300rpm ನಲ್ಲಿ 111.7Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








