ಹಡಗುಗಳಿಗೆ ಸಂಬಂಧಪಟ್ಟ 25 ಆಶ್ಚರ್ಯಕರ ಸತ್ಯಗಳು!
ಹಡಗು ಉದ್ಯಮ ಮಾನವ ಸಮೂಹದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅವುಗಳಲ್ಲೂ ವಿಹಾರ ಯಾತ್ರೆ ಆಧುನಿಕ ಜೀವನದಲ್ಲಿ ಹೆಚ್ಚೆಚ್ಚು ಆಕರ್ಷಣೆಗೆ ಪಾತ್ರವಾಗುತ್ತಿದೆ. ಪ್ರತಿಯೊಂದು ದೇಶವು ಬಹು ದೊಡ್ಡ ಹಣಕಾಸು ವಿಭಾಗವನ್ನು ಹಡಗುಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಬಳಕೆ ಮಾಡುತ್ತಿದೆ.
ಎಲ್ಲ ಸಮಸ್ಯೆಗಳನ್ನು ಬದಿಗೆ ಸರಿಸಿ ಸಮುದ್ರದ ಮಧ್ಯೆ ಸ್ವಚ್ಛಂದವಾಗಿ ವಿಹರಿಸುವ ಹಡಗುಗಳಲ್ಲಿ ಪ್ರಯಾಣಿಸುವ ಸಿಗುವ ಖುಷಿಯೇ ಬೇರೆ. ಜೀವನದಲ್ಲಿ ಒಂದು ಬಾರಿಯಾದರೂ ಹಡಗಿನಲ್ಲಿ ಸಂಚರಿಸಬೇಕೆಂಬ ಕನಸು ಹಲವರದ್ದಾಗಿದೆ. ಹಾಗಿರಬೇಕೆಂದರೆ ಹಡಗು ಯಾನದ ಬಗ್ಗೆ 25 ಆಶ್ಚರ್ಯಕರ ಸತ್ಯಗಳನ್ನು ನಾವಿಲ್ಲಿ ಬಹಿರಂಗಪಡಿಸಲಿದ್ದೇವೆ.

25. ನೆಟ್ ವರ್ಕ್ ಇಲ್ಲ
ಅಧ್ಯಯನ ವರದಿಯೊಂದರ ಪ್ರಕಾರ ತೆರೆದ ಸಮುದ್ರದಲ್ಲಿ ಪದೇ ಪದೇ ನೆಟ್ ವರ್ಕ್ ಕೈಕೊಡುತ್ತಿರುತ್ತದೆ. ಸರಾಸರಿ ಮೂವರು ಹಡಗು ಸಿಬ್ಬಂದಿಗಳ ಪೈಕಿ ಇಬ್ಬರ ಮೊಬೈಲ್ ಗಳಲ್ಲಿ ಯಾವುದೇ ಸಂಪರ್ಕವಿರುವುದಿಲ್ಲ. ಅಲ್ಲದೆ 10 ಮಂದಿಯಲ್ಲಿ ಕನಿಷ್ಠ ಓರ್ವ ನಿಗೆ ಮಾತ್ರ ಇಂಟರ್ ನೆಟ್ ಸೇವೆ ಲಭ್ಯವಾಗುತ್ತದೆ.

24. ಕಡಲ್ಗಳ್ಳರು
2010ರಲ್ಲಿ 544 ಮಂದಿಯನ್ನು ಸೋಮಾಲಿಯಾ ಕಡಲ್ಗಳ್ಳರು ಒತ್ತೆಯಾಳುಯನ್ನಾಗಿ ಇರಿಸಿದ್ದರು. ಮಗದೊಂದು ಆಘಾತಕಾರಿ ಸುದ್ದಿಯೆಂದರೆ ವರ್ಷಂಪ್ರತಿ 2,000ದಷ್ಟು ನಾವಿಕರು ಹಲವಾರು ಪ್ರಕರಣಗಳಲ್ಲಾಗಿ ಸಮುದ್ರದಲ್ಲಿ ಸಾವಿಗೀಡಾಗುತ್ತಾರೆ.

23. ಸರಕು ಹಡಗು
ಸರಕು ಹಡಗೊಂದು ವರ್ಷದಲ್ಲಿ ಚಂದ್ರನ ಒಟ್ಟು ದೂರದ ಮುಕ್ಕಾಲು ಭಾಗದಷ್ಟು ಸಮುದ್ರದಲ್ಲಿ ಸಂಚರಿಸುತ್ತಿರುತ್ತವೆ.

22. ನಿರ್ಮಾಣ ವೆಚ್ಚ
ಬೃಹತ್ ಹಡಗೊಂದನ್ನು ನಿರ್ಮಿಸಲು ಸರಾಸರಿ 1000ದಿಂದ 1500 ಕೋಟಿ ರುಪಾಯಿಗಳಷ್ಟು ಖರ್ಚು ತಗಲುತ್ತದೆ.

21. ನಾವಿಕರು
ಜಗತ್ತಿನ ಒಟ್ಟು ನಾವಿಕರ ಸಂಖ್ಯೆಯ ಶೇಕಡಾ 2ರಷ್ಟು ಮಾತ್ರ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ ಪಿಲಿಫೈನ್ಸ್ ಅತಿ ಹೆಚ್ಚು ನಾವಿಕ ಬಳಗವನ್ನು ಹೊಂದಿದೆ.

20. ಬಾಳೆಹಣ್ಣು
ಬೃಹತ್ತಾದ ಹಡಗಿನಲ್ಲಿ 15 ಕಂಟೈನರ್ ಗಳಲ್ಲಾಗಿ 745 ದಶಲಕ್ಷದಷ್ಟು ಬಾಳೆ ಹಣ್ಣುಗಳನ್ನು ತುಂಬಿಸಿಡಬಹುದಾಗಿದೆ.

19. ಪ್ರಾಚೀನ ವ್ಯಾಪಾರ
ಹಡಗು ಉದ್ಯಮ ಪ್ರಾಚೀನ ಕಾಲದಿಂದಲೇ ಅಸ್ತಿತ್ವದಲ್ಲಿದ್ದು, ಪ್ರಮುಖವಾಗಿಯೂ ವ್ಯಾಪಾರ ಮತ್ತು ಹೊಸ ಹೊಸ ಪ್ರದೇಶಗಳ ಹುಡುಕಾಟಕ್ಕಾಗಿ ನೌಕೆಗಳನ್ನು ಬಳಕೆ ಮಾಡಲಾಗುತ್ತಿದ್ದವು.

18. ವ್ಯಾಪಾರಿ ಹಡಗು
ಬಲ್ಲ ಮೂಲಗಳ ಪ್ರಕಾರ ಜಗತ್ತಿನಲ್ಲಿ ಸರಕುಗಳನ್ನು ಸಾಗಿಸುವ 55,000ದಷ್ಟು ವ್ಯಾಪಾರಿ ಹಡಗುಗಳಿವೆ.

17. ನಾವಿಕರು
ಜಾಗತಿಕ ಹಡಗು ಉದ್ಯಮದಲ್ಲಿ 1.5 ಮಿಲಿಯನ್ ಗಳಷ್ಟು ನಾವಿಕರು ಹಾಗೂ ಸಿಬ್ಬಂದಿ ವರ್ಗ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

16. ಗ್ರೀನ್ ಹೌಸ್ ಗ್ಯಾಸ್
2009ರಲ್ಲಿ 15 ಬೃಹತ್ ಹಡಗುಗಳು 760 ಮಿಲಿಯನ್ ಕಾರುಗಳು ಹೊರಬಿಡುವುದಕ್ಕೆ ಸಮಾನವಾದ ಗ್ರೀನ್ ಹೌಸ್ ಗ್ಯಾಸ್ ಮಾಲಿನ್ಯವನ್ನು ಹೊರದಬ್ಬಿದ್ದವು.

15. ಪರಿಸರ ಸ್ನೇಹಿ
ಹಾಗಿದ್ದರೂ ವಿಮಾನ ಹಾಗೂ ಟ್ರಕ್ ಗಳಿಗೆ ಹೋಲಿಸಿದರೆ ಹಡಗುಗಳು ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಂಡಿದೆ.

14. ಮಾಲಿನ್ಯ
ಹಡಗುಯಾನವನ್ನು ಒಂದು ದೇಶವಾಗಿ ಪರಿಗಣಿಸಿ ಅದರ ಮಾಲಿನ್ಯ ಪ್ರಮಾಣವನ್ನು ಅಳತೆ ಮಾಡಿದ್ದಲ್ಲಿ ವಿಶ್ವದ ಆರನೇ ಅತಿ ದೊಡ್ಡ ಮಾಲಿನ್ಯ ದೇಶವಾಗಿ ಹೊರಹೊಮ್ಮಲಿದೆ.

13. ಬಿಗಿಯಲ್ಲದ ತಪಾಸಣೆ
ವಿಶ್ವದ್ಯಾಂತ ಶೇಕಡಾ 2ರಿಂದ 10ರಷ್ಟು ಕಂಟೈನರ್ ಗಳನ್ನು ತಪಾಸಣೆಗೊಳಪಡಿಸಲಾಗುತ್ತದೆ. ಅಮೆರಿಕ ತೀರಾ ಪ್ರದೇಶಕ್ಕೆ ವರ್ಷಂಪ್ರತಿ ಆಗಮಿಸುವ 17 ಮಿಲಿಯನ್ ಕಂಟೈನರ್ ಗಳಲ್ಲಿ ಶೇಕಡಾ 5ರಷ್ಟನ್ನು ಮಾತ್ರ ಪರಿಶೀಲನೆಗೆ ಒಳಪಡಿಸಲಾಗುತ್ತದೆ.

12. ದೊಡ್ಡ ಹಡಗು ಪಡೆ
ಜರ್ಮನಿ, ಜಪಾನ್ ಮತ್ತು ಗ್ರೀಸ್ ದೇಶಗಳು ಅತಿ ಹೆಚ್ಚು ಭಾರವನ್ನು ನಿರ್ವಹಿಸಬಲ್ಲ ಅತಿ ದೊಡ್ಡ ಹಡಗು ಪಡೆಗಳನ್ನು ಹೊಂದಿವೆ.

11. ಮಾಲಿಕರ ವಿವರ ಗೌಪ್ಯ
ಬಹುತೇಕ ಹಡಗು ಸಂಸ್ಥೆಗಳಲ್ಲಿ ಮಾಲಿಕರ ವಿವರವನ್ನು ಗೌಪ್ಯವಾಗಿಡಲಾಗುತ್ತದೆ. ಉದಾಹರಣೆಗೆ ಗ್ರೀಕ್ ಹಡಗು ಮಾಲಿಕರ ಸಂಸ್ಥೆಯಲ್ಲಿ ಎಷ್ಟು ಸದ್ಯರಿದ್ದಾರೆ ಎಂಬುದು ನಿಗೂಢ.

10. ಕಂಟೈನರ್
ನಾವು ಇಲ್ಲಿ ಉಲ್ಲೇಖಿಸಿತ್ತಿರುವಾಗಲೇ ಈಗಿನ ಕ್ಷಣದಲ್ಲಿ ವಿಶ್ವದ್ಯಾಂತ ಸರಿ ಸುಮಾರು 20 ಮಿಲಿಯನ್ ಕಂಟೈನರ್ ಗಳು ಸಮುದ್ರದಲ್ಲಿ ತೇಲಾಡುತ್ತಿರುತ್ತದೆ.

09. ಬಲಶಾಲಿ
ಕಂಟೈನರ್ ಹಡಗು ಎಂಜಿನ್ ಸಾಮಾನ್ಯ ಫ್ಯಾಮಿಲಿ ಕಾರುಗಿಂತಲೂ ಸಾವಿರ ಪಟ್ಟು ಹೆಚ್ಚು ಬಲಶಾಲಿ ಎನಿಸಿಕೊಂಡಿದೆ.

08. ಹಡಗು ಸಾಗಣಿಕಾ ವೆಚ್ಚ
ಕನಿಷ್ಠ ಸೈಕಲ್ ವೊಂದನ್ನು ರವಾನಿಸಲು ಸರಾಸರಿ 10 ಡಾಲರ್ ಗಳಷ್ಟು ವೆಚ್ಚ ತಗುಗಲಿದೆ. ಹಾಗೆಯೇ ಸೋಡಾ ಬಾಟಲಿಯೊಂದನ್ನು ರವಾನಿಸಲು ಬ್ರಿಟಿಷ್ ಬೆಳ್ಳಿ ನಾಣ್ಯ ಮೌಲ್ಯಕ್ಕೆ ಸಮಾನವಾಗಿರಲಿದೆ.

07. ಆಗಾಧವಾದ ಉದ್ಯಮ
ಹಣಕಾಸಿನ ವಿಚಾರಕ್ಕೆ ಬಂದಾಗ ಹಡಗು ಯಾನವು ಆಗಾಧವಾದ ಉದ್ಯಮವಾಗಿದ್ದು, ಬ್ರಿಟನ್ ರೆಸ್ಟೋರೆಂಟ್ ಗಳ ಒಟ್ಟು ಆಂತರಿಕ ಉತ್ಪನ್ನಗಿಂತಲೂ (ಜಿಡಿಪಿ) ಹೆಚ್ಚಾಗಿದೆ.

06. ವ್ಯಾಪಾರ
ಹಡಗು ಉದ್ಯಮ ಎಷ್ಟು ಎತ್ತರಕ್ಕೆ ಬೆಳೆದು ನಿಂತಿದೆಯೆಂದರೆ ವಿಶ್ವ ವ್ಯಾಪಾರದ ಶೇಕಡಾ 90ರಷ್ಟನ್ನು ವಶಪಡಿಸಿಕೊಂಡಿದೆ.

05. ಸರಕುಗಳು
ಬೃಹತ್ತಾದ ಹಡಗಿನ ಸರಕುಗಳು ಒಂದರ ಮೇಲೊಂದನ್ನು ಕೂಡಿ ಹಾಕಿದ್ದಲ್ಲಿ ಫ್ರಾನ್ಸ್ ನ ವಿಶ್ವ ಪ್ರಖ್ಯಾತ 7,500ದಷ್ಟು ಈಫೆಲ್ ಗೋಪುರಕ್ಕೆ ಸಮಾನವಾಗಿರಲಿದೆ. ಇನ್ನು ಬಂದರಿನಲ್ಲಿ ಸರಕುಗಳನ್ನು ಹೊರ ತೆಗೆದು ಟ್ರಕ್ ಗಳಲ್ಲಿ ತುಂಬಿಸಿಡುವಾಗ 60 ಮೈಲುಗಳಷ್ಟು ದೂರದ ವರೆಗೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಲಿದೆ.

04. ಸುರಕ್ಷತಾ ಆಧಾರಿತ ಉದ್ಯಮ
ಇಷ್ಟೆಲ್ಲ ಆದರೂ ಹಡಗು ಉದ್ಯಮವನ್ನು ಸಾರ್ವತ್ರಿಕವಾಗಿ ಅತ್ಯಂತ ಸುರಕ್ಷಾ ಆಧಾರಿತ ಉದ್ಯಮಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ.

03. ತೈಲೋದ್ಯಮ
ಅಮೆರಿಕ ದೇಶವು ತನಗೆ ಬೇಕಾದ ತೈಲದ ಮೂರರಲ್ಲಿ ಎರಡು ಭಾಗದಷ್ಟನ್ನು ಹಡಗಿನಿಂದ ಆಮದು ಮಾಡುತ್ತಿದೆ.

02. ಹಡಗು ವ್ಯಾಪಾರ ವಿಧಗಳು
ಜಗತ್ತಿನಲ್ಲಿ ಆರು ವಿಧದ ವ್ಯಾಪಾರ ಹಡಗುಗಳಿವೆ. ಅವುಗಳೆಂದರೆ ಜನರಲ್ ಕಾರ್ಗೊ ಶಿಪ್, ಬಲ್ಕ್ ಕ್ಯಾರಿಯರ್ಸ್, ಫಿಶಿಂಗ್ ವೆಸೆಲ್ಸ್, ಕಂಟೈನರ್ ಶಿಪ್, ಪ್ಯಾಸೆಂಜರ್ ಶಿಪ್ ಮತ್ತು ಟ್ಯಾಂಕರ್ ಗಳು.

01. ಮಿತವ್ಯಯ
ಇತರೆ ಸಾಗಾಣಿಕೆಗಳಿಗೆ ಹೋಲಿಸಿದಾಗ ಹಡಗಿನಲ್ಲಿ ಸರಕುಗಳನ್ನು ಸಾಗಿಸುವುದು ಮಿತವ್ಯಯವೆನಿಸಿಕೊಂಡಿದ್ದು, ಹೆಚ್ಚು ಸುರಕ್ಷಿತವಾಗಿದೆ.


Click it and Unblock the Notifications








