ಕಾರಿಗೆ 3 ವರ್ಷ, ಬೈಕ್‌ಗೆ 5 ವರ್ಷ ವಿಮೆ... ಮತ್ತೆ ನಿಯಮ ಜಾರಿ?

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಥರ್ಡ್‌ ಪಾರ್ಟಿ ಮತ್ತು ಐಚ್ಛಿಕ ಸ್ವಂತ ಹಾನಿಗಳಿಗೆ ರಕ್ಷಣೆ ಒದಗಿಸಲು 'ದೀರ್ಘಾವಧಿಯ ವಿಮಾ ನೀತಿ' ಬಗ್ಗೆ ಕರಡನ್ನು ಬಿಡುಗಡೆ ಮಾಡಿದೆ. 2018ರಲ್ಲಿ ದೇಶಾದ್ಯಂತ ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. ಆದರೆ, ಕೊರೋನಾ ಸೋಂಕಿನ ಕಾರಣ ಹಿಂಪಡೆಯಲಾಗಿತ್ತು.

ಈ ನೀತಿಯ ಜಾರಿಗೊಳಿಸುವ ಮೂಲಕ ತಮ್ಮ ವಾಹನಗಳಿಗೆ ವಿಮೆಯನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ವಿಶಾಲವಾದ ಆಯ್ಕೆ ನೀಡುವುದು ಇದರ ಗುರಿಯಾಗಿದೆ. ಇದು ಎಲ್ಲಾ ಸಾಮಾನ್ಯ ವಿಮಾದಾರರು ಅಥವಾ ಪಾಲಿಸಿದಾರರು, ಖಾಸಗಿ ಕಾರುಗಳಿಗೆ 3 ವರ್ಷದ ವಿಮಾ ಪಾಲಿಸಿ ಮತ್ತು ದ್ವಿಚಕ್ರ ವಾಹನಗಳಿಗೆ 5 ವರ್ಷದ ವಿಮಾ ಪಾಲಿಸಿಯನ್ನು ನೀಡಲು ಅನುಮತಿಸುತ್ತದೆ ಎಂದು ಹೇಳಬಹುದಾಗಿದ್ದು, ಇದು ಮೋಟಾರ್ ಥರ್ಡ್ ಪಾರ್ಟಿ ಹೊಣೆಗಾರಿಕೆ ಕವರ್ ಜೊತೆ ಕೋ- ಟರ್ಮಿನಸ್ ರಕ್ಷಣೆಯೊಂದಿಗೆ ಬರಲಿದೆ.

ಕಾರಿಗೆ 3 ವರ್ಷ, ಬೈಕ್‌ಗೆ 5 ವರ್ಷ ವಿಮೆ... ಮತ್ತೆ ನಿಯಮ ಜಾರಿ?

ವಿಮೆಯ ಮಾರಾಟದ ಸಮಯದಲ್ಲಿ ಪಾಲಿಸಿ ಕವರೇಜ್‌ನ ಸಂಪೂರ್ಣ ಅವಧಿಯ ಪ್ರೀಮಿಯಂ ಅನ್ನು ಸಂಗ್ರಹಿಸಲಾಗುತ್ತದೆ. ಡ್ರಾಫ್ಟ್‌ನ ಪ್ರಕಾರ, ಬೆಲೆ ನಿಗದಿಯು, ಕ್ಲೈಮ್‌ಗಳ ಆಧಾರ ಮೇಲೆ ದೀರ್ಘಾವಧಿ ರಿಯಾಯಿತಿ ಒಳಗೊಂಡಿರುತ್ತದೆ. ಅದರಲ್ಲಿ ಪಾಲಿಸಿ ಅವಧಿಯ ಅಂತ್ಯದ ವೇಳೆಗೆ ನಿರೀಕ್ಷಿತ ನೋ ಕ್ಲೈಮ್ ಬೋನಸ್ (NCB) ಲೆವೆಲ್ ಮತ್ತು ಅನ್ವಯವಾಗುವ ಸರ್ಕಾರಿ ತೆರಿಗೆಗಳು ಸೇರಿರಲಿವೆ. ಈ ಬಗ್ಗೆ ಎಲ್ಲಾ ಪಾಲುದಾರರಿಂದ ಡಿಸೆಂಬರ್ 22 ರೊಳಗೆ ತಮ್ಮ ಪ್ರತಿಕ್ರಿಯೆ ತಿಳಿಸುವಂತೆ ಕೇಳಲಾಗಿದೆ.

ಒಂದು ವರ್ಷದ ಮೋಟಾರ್ ಓನ್ ಡ್ಯಾಮೇಜ್ ಪಾಲಿಸಿಗಳಿಗೆ ಅಸ್ತಿತ್ವದಲ್ಲಿರುವ ನೋ ಕ್ಲೈಮ್ ಬೋನಸ್ (ಎನ್‌ಸಿಬಿ) ದೀರ್ಘಾವಧಿಯ ಪಾಲಿಸಿಗಳಿಗೂ ಅನ್ವಯಿಸುತ್ತದೆ ಎಂದು ಇದರಲ್ಲಿ ತಿಳಿಸಲಾಗಿದೆ. ಬೆಂಕಿ ಸೇರಿದಂತೆ ಇತರೆ ಸಂಭವಿಸಬಹುದಾದ ಅಪಾಯಗಳಿಗೆ ಸಂಬಂಧಿಸಿದ ಈ ಕರಡು ದೀರ್ಘಾವಧಿ ಪಾಲಿಸಿಯಲ್ಲಿ ವಿವರವಾಗಿ ಮಾಹಿತಿ ನೀಡಲಾಗಿದೆ. ಪಾಲಿಸಿಯು 30 ವರ್ಷಗಳವರೆಗೆ ವಾಹನ ಮಾಲೀಕರಿಗೆ ರಕ್ಷಣೆ ನೀಡುತ್ತದೆ ಎಂದು ಹೇಳಬಹುದು. ಪಾಲಿಸಿಯ ಅವಧಿಯಲ್ಲಿ ದೀರ್ಘಾವಧಿ ಅಗ್ನಿ ವಿಮೆಯನ್ನು ರದ್ದುಗೊಳಿಸಬಹುದು ಎಂದು ಹೇಳಲಾಗಿದೆ.

ದೀರ್ಘಾವಧಿ ಮೋಟಾರ್ ಓನ್ ಡ್ಯಾಮೇಜ್ ಪಾಲಿಸಿಯನ್ನು ಅದರ ಅವಧಿಯಲ್ಲಿ ಪಾಲಿಸಿದಾರರಿಂದ ಅಥವಾ ವಿಮಾದಾರರಿಂದ ರದ್ದತಿ ಸೂಚನೆ ಪಡೆಯುವ ಮೂಲಕ ರದ್ದುಗೊಳಿಸಬಹುದು. ಅಂತಹ ನಿದರ್ಶನದಲ್ಲಿ ಪ್ರೀಮಿಯಂ ಮರುಪಾವತಿಯನ್ನು ಮುಂದಿನ ವರ್ಷದ ಪ್ರೀಮಿಯಂಗಳಿಗೆ ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆ. ಪಾಲಿಸಿ ರದ್ದತಿಯ ವರ್ಷದಲ್ಲಿ ಯಾವುದೇ ಕ್ಲೈಮ್‌ ಮಾಡಿದ್ದರೆ, ಪ್ರೊ-ರೇಟಾ ಪ್ರೀಮಿಯಂ ಮರುಪಾವತಿ ಅನ್ವಯವಾಗುತ್ತದೆ. ಆ ನಿರ್ದಿಷ್ಟ ವರ್ಷದಲ್ಲಿ ಯಾವುದೇ ಕ್ಲೈಮ್‌ಗಳನ್ನು ಮಾಡಿದ್ದರೆ ಯಾವುದೇ ಪ್ರೀಮಿಯಂ ಮರುಪಾವತಿಯನ್ನು ಒದಗಿಸಲಾಗುವುದಿಲ್ಲ ಎಂಬುದನ್ನು ತಿಳಿಯಿರಿ.

ಸೆಪ್ಟೆಂಬರ್ 1, 2019ರಂದು ಅಥವಾ ನಂತರ ಮಾರಾಟವಾಗುವ ಎಲ್ಲಾ ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ಈ ನಿಯಮವನ್ನು ಜಾರಿಗೆ ತರಲಾಗಿತ್ತು. ದ್ವಿಚಕ್ರ ವಾಹನಗಳಿಗೆ 5 ವರ್ಷಗಳು ಮತ್ತು ನಾಲ್ಕು ಚಕ್ರದ ವಾಹನಗಳಿಗೆ 3 ವರ್ಷಗಳ ಕಡ್ಡಾಯ ಥರ್ಡ್-ಪಾರ್ಟಿ ಕವರೇಜ್ ಬರುವುದನ್ನು ಸುಪ್ರೀಂಕೋರ್ಟ್ ಕಡ್ಡಾಯಗೊಳಿಸಿತ್ತು. ಆದಾಗ್ಯೂ, ಕೊರೋನಾ ಕಾರಣ ಘೋಷಿಸಲಾಗಿದ್ದ ಲಾಕ್‌ಡೌನ್ ನಿಂದ ಇದರ ಅನುಷ್ಠಾನ ಕಷ್ಟವಾದ ಕಾರಣ ಈ ನಿಯಮವನ್ನು ಆಗಸ್ಟ್ 2020ರಲ್ಲಿ ಸರ್ಕಾರ ಹಿಂಪಡೆದಿತ್ತು.

'ಮೋಟಾರ್ ಥರ್ಡ್ ಪಾರ್ಟಿ ವಿಮೆ ಮತ್ತು ಸ್ವಂತ ಹಾನಿ ವಿಮೆ ಎರಡನ್ನೂ ಒಳಗೊಂಡಿರುವ ದೀರ್ಘಾವಧಿ 'ಮೋಟಾರ್ ಓನ್ ಡ್ಯಾಮೇಜ್ ಪಾಲಿಸಿ' ಜಾರಿಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಕರಡನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಜಾರಿ ಮಾಡಲು ಚಿಂತನೆ ನಡೆಸುತ್ತಿದೆ. ಇದರಂದ ನಿಮ್ಮ ಮಾಲೀಕತ್ವದ ಕಾರು ಅಥವಾ ಬೈಕ್ ಸೇರಿದಂತೆ ಯಾವುದೇ ದ್ವಿಚಕ್ರ ವಾಹನಗಳಿಗೆ ಮತ್ತೆ ದೀರ್ಘಾವಧಿ ವಿಮಾ ಪಾಲಿಸಿ ಖರೀದಿಸಬಹುದಾಗಿದೆ. ಇದರಿಂದ ಒಂದಷ್ಟು ಪ್ರಯೋಜನಗಳನ್ನು ನೀವು ಪಡೆಯಬಹುದಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, December 9, 2022, 14:17 [IST]
English summary
3 year insurance for car 5 year insurance for bike proposes irdai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+