ಎಲ್ಲಾ ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಪ್ರಪಂಚದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಸಹ ಸೇರಿದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂಬ ಸಂಗತಿ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ ಕರೋನಾ ಸಾಂಕ್ರಾಮಿಕದ ನಡುವೆಯೂ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತಗಳಿಂದ ಮೃತ ಪಟ್ಟಿದ್ದಾರೆ.

ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಅಂದರೆ ಪ್ರತಿ ದಿನ ಸರಾಸರಿ 328 ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರವು ರಸ್ತೆ ಅಪಘಾತಗಳನ್ನು ತಪ್ಪಿಸಲು ಹಾಗೂ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಎಲ್ಲಾ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕು ಎಂದು ಈ ಹಿಂದೆಯೇ ಹೇಳಿದ್ದರು.

ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಎಂಟು ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜನವರಿಯಲ್ಲಿ ಅನುಮೋದಿಸಿತ್ತು. ಇದೀಗ ಸಂಸತ್ತಿನಲ್ಲಿ ಇತ್ತೀಚಿನ ಪ್ರಕಟಣೆಯು ಟೈಮ್‌ಲೈನ್ ಅನ್ನು ನೀಡದಿದ್ದರೂ, ಹೊಸ ಕಾರುಗಳನ್ನು (ಅಕ್ಟೋಬರ್ 1, 2022 ರಿಂದ ತಯಾರಿಸಿದರೆ) ಹೊಸ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಭಾರತದಲ್ಲಿ ಹೆಚ್ಚಿನ ಜನರು ಖರೀದಿಸುವ ಬಜೆಟ್ ಕಾರುಗಳನ್ನು ಹೆಚ್ಚು ಏರ್ ಬ್ಯಾಗ್ ಗಳೊಂದಿಗೆ ಉತ್ಪಾದಿಸಬೇಕೆಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಸಣ್ಣ ಗಾತ್ರದ ಬಜೆಟ್ ಕಾರುಗಳಲ್ಲಿ ಹೆಚ್ಚಿನ ಏರ್ ಬ್ಯಾಗ್‌ಗಳನ್ನು ಅಳವಡಿಸುವ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿ ಪಡಿಸಿಕೊಳ್ಳಬಹುದು ಹಾಗೂ ರಸ್ತೆ ಅಪಘಾತಗಳಿಂದ ಉಂಟಾಗುವ ಸಾವುಗಳನ್ನು ತಡೆಯಬಹುದು ಎಂದು ಅವರು ಹೇಳಿದ್ದಾರೆ.

ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಕಾರುಗಳಿಗೆ ಭಾರತದ ಸುರಕ್ಷತಾ ಮಾನದಂಡಗಳು ಈ ಹಿಂದೆ ಉತ್ತಮವಾಗಿರಲಿಲ್ಲ. 2019ರ ಏಪ್ರಿಲ್ 1 ರಂದು ಚಾಲಕನಿಗೆ ಮಾತ್ರ ಏರ್‌ಬ್ಯಾಗ್ ಅನ್ನು ಅಳವಡಿಸುವುದು ಕಡ್ಡಾಯ ಮಾಡಲಾಗಿತ್ತು. ನಂತರ ಇದೇ ಜನವರಿಯಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಕಡ್ಡಾಯ ಮಾಡಲಾಯಿತು. ಡ್ಯುಯಲ್ ಏರ್‌ಬ್ಯಾಗ್‌ಗಳ ಜೊತೆಗೆ, ಎಲ್ಲಾ ಕಾರುಗಳಿಗೆ ಹಿಂಬದಿ ಪಾರ್ಕಿಂಗ್ ಸಂವೇದಕಗಳು ಮತ್ತು ಆಂಟಿ-ಲಾಕ್ ಬ್ರೇಕ್‌ಗಳನ್ನು ಪ್ರಮಾಣಿತ ಫಿಟ್‌ಮೆಂಟ್ ಹೊಂದಿರುವಂತೆ ಸರ್ಕಾರ ಆದೇಶಿಸಿದೆ.

ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ನಿತಿನ್ ಗಡ್ಕರಿ ಅವರ ಈ ಘೋಷಣೆಯು ರಸ್ತೆಗಳಲ್ಲಿ ಅಪಘಾತ ಸಂಭವಿಸಿ ಸಾವನ್ನಪ್ಪುವವರ ಜೀವಗಳನ್ನು ಉಳಿಸಲಿದೆ. 4 ಏರ್‌ಬ್ಯಾಗ್‌ಗಳೊಂದಿಗೆ ಕರ್ಟನ್ ಏರ್‌ಬ್ಯಾಗ್‌ಗಳನ್ನು ಸೇರಿಸುವುದರಿಂದ ಸೈಡ್-ಆನ್ ಕ್ರ್ಯಾಶ್ ಸಂದರ್ಭದಲ್ಲಿ ಕಾರುಗಳು ಸಾಕಷ್ಟು ಸುರಕ್ಷಿತವಾಗಿರುವುದನ್ನು ಖಚಿತಪಡಿಸುತ್ತವೆ. ಸೈಡ್ ಕರ್ಟೈನ್ ಏರ್‌ಬ್ಯಾಗ್‌ಗಳು ರೋಲ್‌ಓವರ್ ಸಂದರ್ಭದಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿರುಸುತ್ತವೆ.

ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ದೇಶದಲ್ಲಿ ಮಾರಾಟವಾಗುವ ಪ್ರತಿಯೊಂದು ಕಾರಿನ ಎಲ್ಲಾ ರೂಪಾಂತರಗಳು ಪ್ರಸ್ತುತ ಸೆಟಪ್‌ಗೆ ಬದಲಾಗಿ ಕನಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಹೊಂದಿರಬೇಕು ಎಂದು ಹೊಸ ಮಾನದಂಡಗಳು ಖಚಿತಪಡಿಸಿವೆ. ಈ ಹಿಂದೆ ಇದು ಲಭ್ಯವಿರುವ ಸುರಕ್ಷತಾ ವೈಶಿಷ್ಟ್ಯಗಳ ಸಂಪೂರ್ಣ ಸೆಟ್‌ನೊಂದಿಗೆ ಅಳವಡಿಸಲಾದ ಉನ್ನತ-ಸ್ಪೆಕ್ ಆವೃತ್ತಿಗಳಿಗೆ ಮಾತ್ರ ಸೀಮಿತವಾಗಿತ್ತು.

ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಏರ್‌ಬ್ಯಾಗ್‌ಗಳ ಸಂಪೂರ್ಣ ಶ್ರೇಣಿಯನ್ನು ನೀಡುವ ವಾಹನಗಳೆಂದರೆ ಮರ್ಸಿಡಿಸ್, ಆಡಿ ಮತ್ತು BMW ನಂತಹ ಯುರೋಪಿಯನ್ ಕಾರು ತಯಾರಕರ ಐಷಾರಾಮಿ ಕಾರುಗಳು ಮಾತ್ರ. ಹಾಗಾಗಿ ಹೊಸ ನಿಯಮಗಳ ಅನುಷ್ಠಾನದೊಂದಿಗೆ, ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ಹೊಸ ಕಾರುಗಳು ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಹೊಂದಿರಬೇಕು, ಈ ಮೂಲಕ ಎಲ್ಲಾ ಕಾರುಗಳ ಬೆಲೆಯೂ ಹೆಚ್ಚಳವಾಗಲಿದೆ.

ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಸೈಡ್ ಕರ್ಟನ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿರುವ ಆರು ಏರ್‌ಬ್ಯಾಗ್‌ಗಳ ಸಂಪೂರ್ಣ ಶ್ರೇಣಿಯನ್ನು ಸೇರಿಸುವುದರಿಂದ ಕಾರುಗಳ ಬೆಲೆಯನ್ನು ಕನಿಷ್ಠ 50,000 ರೂ.ಗಳಷ್ಟು ಹೆಚ್ಚಿಸಬಹುದು ಎಂದು ವರದಿಗಳು ಹೇಳುತ್ತಿವೆ. ಇದು ಬೆಲೆಗಳಲ್ಲಿ ತುಂಬಾ ಕಡಿದಾದ ಹೆಚ್ಚಳವೆಂದು ತೋರುತ್ತದೆಯಾದರೂ, ಜನರು ಸುರಕ್ಷಿತವಾಗಿರುವುದನ್ನು ಖಾತ್ರಿಪಡಿಸಲು ಬಯಸುತ್ತಿರುವ ಸರ್ಕಾರದ ನಿಲುವು ಉತ್ತಮವಾಗಿದೆ.

ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಆದರೆ ಏರ್‌ ಬ್ಯಾಗ್‌ಗಳಿಂದ ಕೆಲವು ಅನಾನುಕೂಲತೆಗಳಿವೆ. ಇವುಗಳಲ್ಲಿ ಪ್ರಮುಖ ಅನಾನುಕೂಲವೆಂದರೆ ಏರ್‌ ಬ್ಯಾಗ್‌ಗಳ ಹಠಾತ್ ವಿಸ್ತರಣೆ. ಅಪಘಾತದ ಸಮಯವನ್ನು ಹೊರತುಪಡಿಸಿ ದೊಡ್ಡ ರಸ್ತೆ ಗುಂಡಿಗಳಲ್ಲಿ ಕಾರು ಅನಿರೀಕ್ಷಿತವಾಗಿ ಅಪ್ಪಳಿಸಿದಾಗ ಏರ್‌ ಬ್ಯಾಗ್‌ಗಳು ವಿಸ್ತರಿಸಿ ಕೊಂಡ ಹಲವು ಘಟನೆಗಳು ಈ ಹಿಂದೆ ವರದಿಯಾಗಿದ್ದವು. ಏರ್ ಬ್ಯಾಗ್‌ಗಳ ಹಠಾತ್ ವಿಸ್ತರಣೆಯಿಂದಾಗಿ ತೊಂದರೆಗಳಾಗುತ್ತವೆ.

ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಜೊತೆಗೆ ವಿಸ್ತರಿಸಿದ ಏರ್‌ಬ್ಯಾಗ್‌ಗಳನ್ನು ಡ್ಯಾಶ್‌ಬೋರ್ಡ್ ಹಾಗೂ ಸ್ಟೀಯರಿಂಗ್ ವ್ಹೀಲ್‌ಗೆ ಮರು ಸೇರ್ಪಡೆಗೊಳಿಸುವುದಕ್ಕೆ ದುಬಾರಿ ವೆಚ್ಚವಾಗುತ್ತದೆ. ದುಬಾರಿ ವೆಚ್ಚವಾದರೂ ರಸ್ತೆ ಅಪಘಾತಗಳಾದಾಗ ಏರ್ ಬ್ಯಾಗ್‌ಗಳು ಪ್ರಯಾಣಿಕರ ಪ್ರಾಣ ಉಳಿಸುತ್ತವೆ ಎಂಬುದು ಸುಳ್ಳಲ್ಲ. ಈಗ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ಬೆಲೆಯ ಆಧಾರದ ಮೇಲೆ ಏರ್‌ಬ್ಯಾಗ್‌ಗಳನ್ನು ವಿವಿಧ ಸಂಖ್ಯೆಯಲ್ಲಿ ನೀಡಲಾಗುತ್ತದೆ.

ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಕಾರು ಅಪಘಾತದ ಸಂದರ್ಭಗಳಲ್ಲಿ ಏರ್‌ಬ್ಯಾಗ್‌ಗಳು ಕಾರು ಚಾಲಕರನ್ನು ಹಾಗೂ ಅವರೊಂದಿಗೆ ಪ್ರಯಾಣಿಸುವ ಇತರ ಪ್ರಯಾಣಿಕರ ಜೀವವನ್ನು ರಕ್ಷಿಸುತ್ತವೆ. ಅಪಘಾತದ ಸಮಯದಲ್ಲಿ ಕಾರಿನ ಏರ್ ಬ್ಯಾಗ್ ವಿಸ್ತರಿಸಿದರೆ ಅವುಗಳನ್ನು ಬದಲಾಯಿಸಬೇಕಾಗುತ್ತದೆ. ಹಾಗೆಯೇ ಸೆನ್ಸಾರ್‌ಗಳನ್ನು ಸಹ ಮರು ಹೊಂದಿಸಬೇಕು. ಇಲ್ಲದಿದ್ದರೆ ಅನಾಹುತಗಳಾಗುವುದು ಖಚಿತ.

ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಈ ಕಾರಣಗಳು ಏನೇ ಇರಲಿ ಸಚಿವ ಗಡ್ಕರಿ ಅವರು ಭಾರತೀಯ ರಸ್ತೆ ಬಳಕೆದಾರರಿಗೆ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನವರಿಯಲ್ಲಿ ಮೊದಲು ಅನಾವರಣಗೊಂಡ ಮತ್ತು ಈಗ ಸಂಸತ್ತಿನಲ್ಲಿ ದೃಢಪಡಿಸಿದ ಅವರ ಇತ್ತೀಚಿನ ಯೋಜನೆಗಳು ಅಪಘಾತ ಅಥವಾ ರೋಲ್‌ಓವರ್ ಸಂದರ್ಭದಲ್ಲಿ ಭಾರತೀಯ ರಸ್ತೆಗಳಲ್ಲಿ ಹೆಚ್ಚಿನ ಜೀವಗಳನ್ನು ಉಳಿಸಲಿವೆ.

Most Read Articles

Kannada
English summary
6 airbags mandatory for cars nitin gadkari
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X