ಕರೋನಾ ವೈರಸ್ ಎಫೆಕ್ಟ್: ಇನ್ನೂ ಸಹಜ ಸ್ಥಿತಿಗೆ ತಲುಪದ ಪೆಟ್ರೋಲ್, ಡೀಸೆಲ್ ಮಾರಾಟ

ಕರೋನಾ ವೈರಸ್ ಎಂಬ ಮಹಾಮಾರಿ ಹಲವರ ಜೀವನವನ್ನು ತತ್ತರಿಸುವಂತೆ ಮಾಡಿದೆ. ಇದರಿಂದ ಪೆಟ್ರೋಲ್ ಬಂಕ್ ಮಾಲೀಕರು ಸಹ ಹೊರತಾಗಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ವಾಹನಗಳ ಸಂಚಾರವು ಕಡಿಮೆಯಾಗಿದ್ದ ಕಾರಣ ಪೆಟ್ರೋಲ್, ಡೀಸೆಲ್ ಮಾರಾಟದಲ್ಲಿ ಕುಸಿತವಾಗಿತ್ತು.

ಕರೋನಾ ವೈರಸ್ ಎಫೆಕ್ಟ್: ಇನ್ನೂ ಸಹಜ ಸ್ಥಿತಿಗೆ ತಲುಪದ ಪೆಟ್ರೋಲ್, ಡೀಸೆಲ್ ಮಾರಾಟ

ಈಗ ಲಾಕ್‌ಡೌನ್ ನಿಂದ ವಿನಾಯಿತಿ ನೀಡಲಾಗಿದ್ದು, ವಾಹನಗಳ ಸಂಚಾರವು ಆರಂಭವಾಗಿದೆ. ಆದರೂ ಸಹ ಪೆಟ್ರೋಲ್, ಡೀಸೆಲ್ ಮಾರಾಟದಲ್ಲಿ ಏರಿಕೆ ಕಂಡು ಬಂದಿಲ್ಲ. ಈಗ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಆಯ್ಕೆಯನ್ನು ನೀಡಿವೆ. ಇದರ ಜೊತೆಗೆ ಶಾಲಾ, ಕಾಲೇಜುಗಳು ಇನ್ನೂ ಪುನರಾರಂಭಗೊಂಡಿಲ್ಲ. ಜೊತೆಗೆ ಸರಕು ಸಾಗಣೆಯು ಸಹ ಮೊದಲಿನಂತಿಲ್ಲ.

ಕರೋನಾ ವೈರಸ್ ಎಫೆಕ್ಟ್: ಇನ್ನೂ ಸಹಜ ಸ್ಥಿತಿಗೆ ತಲುಪದ ಪೆಟ್ರೋಲ್, ಡೀಸೆಲ್ ಮಾರಾಟ

ಈ ಎಲ್ಲಾ ಕಾರಣಗಳಿಂದ ಪೆಟ್ರೋಲ್, ಡೀಸೆಲ್ ಮಾರಾಟದಲ್ಲಿ ಕುಸಿತ ಮುಂದುವರೆದಿದೆ. ಜೊತೆಗೆ ಆರ್ಥಿಕ ಹಿಂಜರಿತವು ಮುಂದುವರೆದಿದೆ. ಕರೋನಾಗೂ ಮುನ್ನ ಇದ್ದ ಪರಿಸ್ಥಿತಿಗೆ ಹೋಲಿಸಿದರೆ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಪೆಟ್ರೋಲಿಯಂ ವಿತರಕರು ಇಂಧನ ಮಾರಾಟದಲ್ಲಿ 30%ನಷ್ಟು ನಷ್ಟ ಅನುಭವಿಸಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕರೋನಾ ವೈರಸ್ ಎಫೆಕ್ಟ್: ಇನ್ನೂ ಸಹಜ ಸ್ಥಿತಿಗೆ ತಲುಪದ ಪೆಟ್ರೋಲ್, ಡೀಸೆಲ್ ಮಾರಾಟ

ಈ ಕುರಿತು ಪ್ರತಿಕ್ರಿಯಿಸಿರುವ ಕೆಲವು ಪೆಟ್ರೋಲ್ ಬಂಕ್ ಮಾಲೀಕರು, ಅಹಮದಾಬಾದ್‌ನಲ್ಲಿ ಅನೇಕ ಜನರು ಸದ್ಯಕ್ಕೆ ವರ್ಕ್ ಫ್ರಂ ಹೋಂ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಸಗಿ ವಾಹನಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿಲ್ಲ. ಲಾಕ್‌ಡೌನ್ ನಂತರ ಪೆಟ್ರೋಲ್, ಡೀಸೆಲ್ ಮಾರಾಟ ಪ್ರಮಾಣವು ಕೇವಲ 70%ನಷ್ಟಾಗಿದೆ.

ಕರೋನಾ ವೈರಸ್ ಎಫೆಕ್ಟ್: ಇನ್ನೂ ಸಹಜ ಸ್ಥಿತಿಗೆ ತಲುಪದ ಪೆಟ್ರೋಲ್, ಡೀಸೆಲ್ ಮಾರಾಟ

ಇನ್ನೂ 30%ನಷ್ಟು ಮಾರಾಟವಾದರೆ ಮಾತ್ರ ಕರೋನಾಗೂ ಮುನ್ನ ಇದ್ದ ಮಟ್ಟವನ್ನು ತಲುಪಬಹುದು ಎಂದು ಹೇಳಿದ್ದಾರೆ. ಶಾಲೆಗಳ ಮುಚ್ಚುವಿಕೆ ಕೂಡ ಮತ್ತೊಂದು ಪ್ರಮುಖ ಕಾರಣವಾಗಿದೆ. ಶಾಲೆಗಳು ಮುಚ್ಚಿರುವುದರಿಂದ ಶಾಲಾ ವಾಹನಗಳ ಸಂಚಾರವು ಸ್ಥಗಿತಗೊಂಡಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕರೋನಾ ವೈರಸ್ ಎಫೆಕ್ಟ್: ಇನ್ನೂ ಸಹಜ ಸ್ಥಿತಿಗೆ ತಲುಪದ ಪೆಟ್ರೋಲ್, ಡೀಸೆಲ್ ಮಾರಾಟ

ಚಿತ್ರಮಂದಿರಗಳ ಮುಚ್ಚುವಿಕೆ, ಪ್ರವಾಸೋದ್ಯಮದ ಮೇಲೆ ನಿಷೇಧ ಹೇರಿರುವುದು ಸಹ ಪೆಟ್ರೋಲ್, ಡೀಸೆಲ್ ಮಾರಾಟ ಕುಸಿತಗೊಳ್ಳಲು ಮುಖ್ಯ ಕಾರಣಗಳಾಗಿವೆ. ಕರೋನಾ ವೈರಸ್ ಭೀತಿಯಿಂದ ಜನರು ಮನೆಗಳಿಂದ ಹೊರಬರಲು ಹೆದರುತ್ತಿರುವುದು ಸಹ ಪೆಟ್ರೋಲ್, ಡೀಸೆಲ್ ಮಾರಾಟ ಕಡಿಮೆಯಾಗಲು ಕಾರಣವಾಗಿದೆ.

ಕರೋನಾ ವೈರಸ್ ಎಫೆಕ್ಟ್: ಇನ್ನೂ ಸಹಜ ಸ್ಥಿತಿಗೆ ತಲುಪದ ಪೆಟ್ರೋಲ್, ಡೀಸೆಲ್ ಮಾರಾಟ

ಈ ಎಲ್ಲಾ ಕಾರಣಗಳು ಪೆಟ್ರೋಲ್, ಡೀಸೆಲ್ ಮಾರಾಟವನ್ನು ಕುಸಿಯುವಂತೆ ಮಾಡಿವೆ. ಪೆಟ್ರೋಲ್, ಡೀಸೆಲ್ ಮಾರಾಟಕ್ಕೆ ಹೋಲಿಸಿದರೆ, ಪೆಟ್ರೋಲ್ ಮಾರಾಟವು ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಆದರೆ ಡೀಸೆಲ್ ಮಾರಾಟ ಇನ್ನೂ ಏರಿಕೆಯನ್ನು ಕಂಡಿಲ್ಲ. ಲಾರಿಗಳಂತಹ ಕಮರ್ಷಿಯಲ್ ವಾಹನಗಳು ಸಾಮಾನ್ಯವಾಗಿ ಹೆಚ್ಚು ಡೀಸೆಲ್ ಬಳಸುತ್ತವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕರೋನಾ ವೈರಸ್ ಎಫೆಕ್ಟ್: ಇನ್ನೂ ಸಹಜ ಸ್ಥಿತಿಗೆ ತಲುಪದ ಪೆಟ್ರೋಲ್, ಡೀಸೆಲ್ ಮಾರಾಟ

ಆದರೆ ಉತ್ಪಾದನಾ ವಲಯದಲ್ಲಿನ ಆರ್ಥಿಕ ಹಿಂಜರಿತದಿಂದಾಗಿ ಲಾರಿಗಳ ಸಂಚಾರವು ಕಡಿಮೆಯಾಗಿದೆ. ಸಾಮಾನ್ಯ ಜನರು ಮೊದಲಿನಂತೆ ತಮ್ಮ ಸಂಚಾರವನ್ನು ಆರಂಭಿಸಿ, ಉತ್ಪಾದನಾ ವಲಯವು ಮೊದಲಿನ ಸ್ಥಿತಿಗೆ ತಲುಪಿದರೆ ಮಾತ್ರ ಪೆಟ್ರೋಲ್, ಡೀಸೆಲ್ ಮಾರಾಟವು ಮತ್ತೆ ಸಹಜ ಸ್ಥಿತಿಗೆ ಮರಳಲಿದೆ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
70 per cent petrol diesel sold after lockdown. Read in Kannada.
Story first published: Saturday, September 12, 2020, 19:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X