ವಿಡಿಯೋ ಮಾಡುತ್ತಿದ್ದಂತೆ ಕಾರಿನೊಳಗೆ ಜಿಗಿದ ಚಿರತೆ: ನಂತರ ಆಗಿದ್ದೇನು ವಿಡಿಯೋ ನೋಡಿ...

ಜಂಗಲ್ ಸಫಾರಿಗಳು ನಮ್ಮನ್ನು ಪ್ರಕೃತಿ ತಾಯಿಗೆ ಮತ್ತು ಕೆಲವೊಮ್ಮೆ ಕಾಡು ಪ್ರಾಣಿಗಳಿಗೆ ಹತ್ತಿರ ತರುತ್ತವೆ. ಈ ಮೂಲಕ ಪ್ರವಾಸಿಗರು ವಾಹನಗಳ ಹತ್ತಿರ ಬರುವ ಹುಲಿ, ಸಿಂಹ ಮತ್ತು ಆನೆಗಳಂತಹ ಪ್ರಾಣಿಗಳನ್ನು ನೋಡಿ ಆನಂದಿಸಬಹುದು. ಹಾಗೆಯೇ ಇತ್ತಿಚೆಗೆ ಸಫಾರಿ ಹೊರಟಿದ್ದ ವಾಹನದ ಒಳಕ್ಕೆ ಚಿರತೆಯೊಂದು ನುಗ್ಗಿದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ಪ್ರವಾಸಿ ವಾಹನಕ್ಕೆ ಚಿರತೆಯೊಂದು ನುಗ್ಗಿದ ಘಟನೆ ತಾಂಜಾನಿಯಾದಲ್ಲಿ ಸಫಾರಿ ಸವಾರಿ ನಡೆಸುತ್ತಿದ್ದ ವೇಳೆ ನಡೆದಿದೆ. ಏಕಾ ಏಕಿ ಕಾರಿನೊಳಗೆ ಏರಿದ ಚಿರತೆಯನ್ನು ಕಂಡು ಗಾಬರಿಗೊಳ್ಳದ ವ್ಯಕ್ತಿ ಯಾವುದೇ ಚಲನವಲನವಿಲ್ಲದೆ ಕುಳಿತಿದ್ದ. ಈ ದೃಶ್ಯಗಳನ್ನು ಟ್ವಿಟರ್‌ನಲ್ಲಿ ತನ್ಸು ಯೆಗೆನ್ ಎಂಬ ಬಳಕೆದಾರ ಹಂಚಿಕೊಂಡಿದ್ದಾನೆ. ವಾಹನದ ಮುಂಭಾಗದ ಸೀಟಿನಲ್ಲಿ ಬ್ರಿಟನ್ ಹೇಯ್ಸ್ ಎಂಬ ವ್ಯಕ್ತಿ ಕುಳಿತಿರುವುದನ್ನು ವಿಡಿಯೋ ತೋರಿಸುತ್ತದೆ. ಅದೇ ಸಮಯದಲ್ಲಿ, ಚಿರತೆಯೊಂದು ವಾಹನವನ್ನು ಪ್ರವೇಶಿಸಿ ಸುತ್ತಲೂ ನೋಡಲಾರಂಭಿಸುತ್ತದೆ.

ಇದಾದ ನಂತರ ಮತ್ತೊಂದು ಚಿರತೆ ಕೂಡ ಕಾರಿನ ಬಾನೆಟ್ ಮೇಲೆ ಹತ್ತಿತ್ತು. ಈ ವಿಡಿಯೋಗೆ ''ತಾಂಜಾನಿಯಾದಲ್ಲಿ ಸಫಾರಿಯಲ್ಲಿರುವ ವ್ಯಕ್ತಿ ಯಾವುದೇ ಚಲನೆಯಿಲ್ಲದೆ ಏನು ನಡೆಯುತ್ತಿದೆ ಎಂಬುದನ್ನು ರೆಕಾರ್ಡ್ ಮಾಡಲು ಪ್ರಾರಂಭಿಸುತ್ತಾನೆ'' ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ವಿಡಿಯೋ ಶೇರ್ ಆದ ತಕ್ಷಣ ವೈರಲ್ ಆಗಿದೆ. ಅನೇಕ ಬಳಕೆದಾರರು ವಿಡಿಯೋದಲ್ಲಿ ಇರುವ ವ್ಯಕ್ತಿಯ ತಾಳ್ಮೆಯನ್ನು ಮೆಚ್ಚಿದ್ದಾರೆ. ಸದ್ಯ ಈ ವೀಡಿಯೊ 2.7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಇದಲ್ಲದೆ, ಸ್ವಲ್ಪ ಸಮಯದ ನಂತರ ಚಿರತೆಗಳು ಕಾರನ್ನು ಬಿಟ್ಟು ಹೋಗಿದ್ದರಿಂದ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಂಡು ವಾಹನದಲ್ಲಿದ್ದ ವ್ಯಕ್ತಿ ಚಿರತೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಡಿಯೋ ಮಾಡಿಕೊಂಡಿದ್ದಾನೆ. ಕಾಡು ಪ್ರಾಣಿಗಳು ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ವಿಡಿಯೋದಲ್ಲಿ ಕಂಡುಬಂದ ಹಾಗೆ ಯಾರೂ ಕೂಡ ಪ್ರಯತ್ನಿಸದಿರುವುದು ಒಳಿತು. ಸುಮ್ಮನಿದ್ದರೂ ಕೆಲವೊಮ್ಮೆ ಪ್ರಾಣಿಗಳ ದಾಳಿಗೆ ಬಲಿಯಾದ ಹಲವು ಉದಾಹರಣೆಗಳು ಕೂಡ ಇವೆ.

ಬೊಲೆರೊವನ್ನು ಬೆನ್ನಟ್ಟಿದ ಮದಗಜ
ಆನೆಗಳು ಜನರ ಮೇಲೆ ದಾಳಿ ಮಾಡುವುದು ಅತಿ ಕಡಿಮೆ ಆದರೆ ಅವಕ್ಕೆ ಮದವೇರಿದರೆ ತನ್ನ ದಾರಿಯಲ್ಲಿ ಅಡ್ಡ ಬಂದ ವಸ್ತುಗಳನ್ನು ನುಜ್ಜುಗುಜ್ಜು ಮಾಡುತ್ತವೆ. ಅದೇ ರೀತಿ ಕಾಡಾನೆಯೊಂದು ಮಹೀಂದ್ರಾ ಬೊಲೆರೊವನ್ನು ಅಟ್ಟಿಸಿಕೊಂಡು ಹೋಗಿತ್ತು. ಈ ವಿಡಿಯೋ ಕೂಡ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಕುರಿತ ವಿಡಿಯೋವನ್ನು ಸುಪ್ರಿಯಾ ಸಾಹು ಐಎಎಸ್ ತಮ್ಮ ಟ್ವಿಟ್ಟರ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದರು.

ಈ ಘಟನೆ ಮೈಸೂರು ಸಮೀಪದ ಕಬಿನಿ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿತ್ತು. ಈ ವಿಡಿಯೋದಲ್ಲಿ ಗಂಡು ಆನೆಯೊಂದು ಸಫಾರಿ ಜೀಪಿನತ್ತ ಬರುತ್ತಿರುವುದು ಕಂಡು ಬಂದಿದೆ. ವಿಡಿಯೋದಲ್ಲಿ ಕಂಡುಬರುವ ಸಫಾರಿ ಜೀಪ್ ಮಹೀಂದ್ರಾ ಬೊಲೆರೊದಂತೆ ಕಾಣುತ್ತದೆ. ಟೂರಿಸ್ಟ್‌ಗಳಿಗಾಗಿ ರಾಷ್ಟ್ರೀಯ ಉದ್ಯಾನವನದೊಳಗೆ ಒಂದು ಮಾರ್ಗವನ್ನು ನಿರ್ಮಿಸಲಾಗಿದೆ. ಬೊಲೆರೊ ಘಟನಾ ಸ್ಥಳಕ್ಕೆ ತಲುಪಿದಾಗ ಆನೆ ರಸ್ತೆ ಮಧ್ಯೆ ನಿಂತಿತ್ತು. ಈ ವೇಳೆ ಆನೆ ಕಡಗೆ ನಿಧಾನವಾಗಿ ಜೀಪ್ ಮುಂದೆ ಸಾಗುವಾಗ ಆನೆಯು ವಾಹನದ ಶಬ್ದವನ್ನು ಕೇಳಿದೆ.

ಆನೆ ಜೀಪನ್ನು ನೋಡಿದ ಕೂಡಲೇ ಜೀಪಿನತ್ತ ಓಡಿಬರುತ್ತಿದ್ದ ಆನೆಯನ್ನು ಕಂಡ ಚಾಲಕ ಕೂಡಲೇ ರಿವರ್ಸ್‌ ಗೇರ್‌ ಹಾಕಿ ರಿವರ್ಸ್‌ ಓಡಿಸಲು ಆರಂಭಿಸಿದ. ಆನೆಯು ಅಪಾಯಕಾರಿಯಾಗಿ ವಾಹನದ ಸಮೀಪಕ್ಕೆ ತಲುಪಲು ಅತಿ ಹೆಚ್ಚು ವೇಗದಲ್ಲಿ ಓಡುತ್ತಿತ್ತು. ಆದರೆ, ಚಾಲಕ ತನ್ನ ಶಾಂತತೆಯನ್ನು ಕಳೆದುಕೊಳ್ಳದೇ ಬೊಲೆರೊವನ್ನು ಹಿಮ್ಮುಖವಾಗಿ ಬಹು ದೂರ ಓಡಿಸಿದ್ದಾನೆ. ಈ ವಿಡಿಯೋವು ಚಾಲಕ ನಿಜವಾಗಿ ಡ್ರೈವಿಂಗ್‌ನಲ್ಲಿ ಎಷ್ಟು ನುರಿತ ಎಂಬುದನ್ನು ತೋರಿಸುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಪರಿಸ್ಥಿತಿ ಎಷ್ಟು ಅಪಾಯಕಾರಿ ಎಂದು ಗ್ರಹಿಸಿದರೂ ಗಾಬರಿಯಾಗದೆ ಕಾರನ್ನು ಹಿಮ್ಮುಖವಾಗಿ ಓಡಿಸಿದ್ದಾನೆ. ಅಂತಹ ಸಫಾರಿ ವಾಹನಗಳ ಚಾಲಕರಿಗೆ ಪರಿಸ್ಥಿತಿಯನ್ನು ನಿಭಾಯಿಸಲು ತರಬೇತಿ ನೀಡಲಾಗುತ್ತದೆ. ಅವರು ನಿತ್ಯ ಕಾಡು ಪ್ರಾಣಿಗಳ ಪ್ರದೇಶದಲ್ಲಿ ಓಡಾಡುವುದರಿಂದ ಎಲ್ಲಾ ಪ್ರದೇಶಗಳ ಅರಿವಿರುತ್ತದೆ. ಅವರಂತೆ ನಾವು ಕೂಡ ಪ್ರಯತ್ನಿಸಬಾರದು ಎಂಬುದು ಇಲ್ಲಿನ ಉದ್ದೇಶ. ಪ್ರಯಾಣದ ವೇಳೆ ಜಾಗ್ರತೆ ವಹಿಸಿ ಆದಷ್ಟು ಕಾಡು ಪ್ರಾಣಿಗಳಿಗೆ ದೂರವಿರುವುದು ಉತ್ತಮ. ಒಂದು ವೇಳೆ ಹತ್ತಿರ ಬರುತ್ತಿವೆ ಎಂದು ತಿಳಿದರೆ ನಾವೇ ದೂರ ಸರಿಯಬೆಕು.

Most Read Articles

Kannada
English summary
A cheetha jumped into a car while recording a video
Story first published: Wednesday, December 14, 2022, 17:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X