ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರನ್ನು ಖರೀದಿಸಿದ ಖ್ಯಾತ ನಿರ್ದೇಶಕ
ಬಾಲಿವುಡ್‌ನ ಖ್ಯಾತ ನಿರ್ದೇಶಕರುಗಳಲ್ಲಿ ಒಬ್ಬರಾದ ರೋಹಿತ್ ಶೆಟ್ಟಿ ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ. ಈಗಾಗಲೇ ಲಂಬೋರ್ಗಿನಿ ಉರಸ್, ಫೋರ್ಡ್ ಮುಸ್ತಾಂಗ್ ಮತ್ತು ಮಾಸೆರೋಟಿ ಗ್ರ್ಯಾನ್ ಟ್ಯುರಿಸ್ಮೊ ಸ್ಪೋರ್ಟ್ ಸೇರಿದಂತೆ ಅತ್ಯಾಧುನಿಕ ವಾಹನಗಳನ್ನು ಹೊಂದಿರುವ ಅವರು, ಇದೀಗ ತಮ್ಮ ಗ್ಯಾರೇಜ್‌ಗೆ ಹೊಚ್ಚಹೊಸ ಮರ್ಸಿಡಿಸ್-ಎಎಮ್‌ಜಿ ಜಿ63 SUV ಅನ್ನು ಇಳಿಸಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ರೋಹಿತ್ ತಮ್ಮ ಹೊಸ ಕಾರಿನೊಂದಿಗೆ ಕಾಣಿಸಿಕೊಂಡಿದ್ದರು. ಇದು ಬಿಳಿ-ಬಣ್ಣದ Mercedes-AMG G63 ಆಗಿದ್ದು, ಯಾವುದೇ ಐಚ್ಛಿಕ ಹೆಚ್ಚುವರಿ ಅಥವಾ ಕಸ್ಟಮೈಸೇಷನ್ ಆಯ್ಕೆಗಳಿಲ್ಲದೆ ಆನ್-ರೋಡ್‌ಗೆ ಇಳಿಯಲು ಸುಮಾರು 3 ಕೋಟಿ ರೂ.ವರೆಗೆ ಆಗಬಹುದು ಎನ್ನಲಾಗಿದೆ.

ಭಾರತದಲ್ಲಿ, G-Wagen ನ G63 ಆವೃತ್ತಿ ಮಾತ್ರ ಲಭ್ಯವಿದೆ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಶಕ್ತಿಶಾಲಿ G65 ಆವೃತ್ತಿ ಕೂಡ ಲಭ್ಯವಿದೆ. ಈ ಮಾದರಿಯ ಕೊನೆಯ ಆವೃತ್ತಿಗೆ ಹೋಲಿಸಿದರೆ ಹೊಸ G63 AMG ಸ್ವಲ್ಪ ದುಂಡಗಿನ ಆಕಾರವನ್ನು ಪಡೆಯುತ್ತದೆ.

ಇದು ಸಿಗ್ನೇಚರ್ ಬಾಕ್ಸ್ ವಿನ್ಯಾಸವನ್ನು ಉಳಿಸಿಕೊಂಡು ವಿಶೇಷವಾಗಿ ಕಾಣುತ್ತದ್ದು, ಪೂರ್ಣ-LED ಸೆಟಪ್ ಅನ್ನು ಪಡೆಯುವ ಹೊಸ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಸಹ ಹೊಂದಿದೆ. ಹೆಡ್‌ಲ್ಯಾಂಪ್‌ಗಳ ಸುತ್ತಲೂ ವೃತ್ತಾಕಾರದ DRL ಮತ್ತು ಬಾನೆಟ್-ಮೌಂಟೆಡ್ ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಿದೆ.

ಇದು ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್ ಮತ್ತು ಫ್ಲೇರ್ಡ್ ವೀಲ್ ಆರ್ಚ್‌ಗಳನ್ನು ಪಡೆದುಕೊಂಡು ಈ ವಿಶೇಷ SUV ಗೆ ವಿಶಾಲ ನೋಟವನ್ನು ನೀಡುತ್ತದೆ. ಮರ್ಸಿಡಿಸ್-ಎಎಮ್‌ಜಿ ಜಿ63 21-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ. ಬೃಹತ್ 241mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುತ್ತದೆ.

ಹೆಚ್ಚಿನ ಮಾಲೀಕರು G-Wagen ಆಫ್-ದಿ-ಟಾರ್ಮ್ಯಾಕ್ ಅನ್ನು ತೆಗೆದುಕೊಳ್ಳದಿದ್ದರೂ ಸಹ, ಇದು ಆಫ್-ರೋಡ್‌ನಲ್ಲಿ ಅಸಾಧಾರಣ ಪರ್ಫಾಮೆನ್ಸ್ ನೀಡುವ ಏಕೈಕ SUV ಆಗಿದೆ. ಹೊಸ Mercedes-AMG G63 4.0-ಲೀಟರ್ ಬೈ-ಟರ್ಬೊ V8 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಇದು 585 Bhp ನ ಬೃಹತ್ ಪವರ್ ಮತ್ತು 850 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸಬಲ್ಲದು. Mercedes-Benz ಹಿಂದಿನ ತಲೆಮಾರಿನ ಕಾರಿನೊಂದಿಗೆ ಲಭ್ಯವಿರುವ ಬೃಹತ್ 5.5-ಲೀಟರ್ V8 ಇಂಜಿನ್ ಅನ್ನು ಕಡಿಮೆಗೊಳಿಸಿ ಈ ಹೊಸ ಮಾದರಿಗೆ ನೀಡಲಾಗಿದೆ.

ರೋಹಿತ್ ಶೆಟ್ಟಿಯನ್ನು ಚೆನ್ನಾಗಿ ಬಲ್ಲವರಿಗೆ ಒಂದು ವಿಷಯ ಸ್ಪಷ್ಟವಾಗಿ ಗೊತ್ತು. ಅವರ ಚಿತ್ರಗಳಲ್ಲಿ ಕಾರ್ ಸ್ಟಂಟ್ ದೃಶ್ಯಗಳನ್ನು ಹೆಚ್ಚು ನೋಡಬಹುದು. ಈ ದೃಶ್ಯಗಳು ಆತನ ಕಾರುಗಳ ಮೇಲಿನ ಪ್ರೀತಿಯಿಂದ ಪ್ರಭಾವಿತವಾಗಿವೆ ಎಂದು ಹೇಳಲಾಗುತ್ತದೆ. ಸದ್ಯ ರೋಹಿತ್ ಶೆಟ್ಟಿ ಅಭಿಮಾನಿಗಳು ತಮ್ಮ ಹೊಸ ಕಾರಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ರೋಹಿತ್ ಶೆಟ್ಟಿ ಅವರ ಕಾರುಗಳು
ರೋಹಿತ್ ಶೆಟ್ಟಿ ಅವರು ಲಂಬೋರ್ಗಿನಿ ಉರಸ್ ಅನ್ನು ಸಹ ಹೊಂದಿದ್ದಾರೆ, ಅವರು ಈ ಕಾರನ್ನು ಆಗಾಗ ತಿರುಗಾಡಲು ಬಳಸುತ್ತಾರೆ. ಇಲ್ಲಿಯವರೆಗೆ, ಉರುಸ್ ದಿನನಿತ್ಯದ ಬಳಕೆಯ ಕಾರಾಗಿತ್ತು. ಆದರೆ ಇದೀಗ ಆ ಸ್ಥಾನಕ್ಕೆ G63 ಬಂದಿದೆ. ಲಂಬೋರ್ಗಿನಿ ಉರಸ್ ಹೊಸ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಪೆಟ್ರೋಲ್ ಎಂಜಿನ್‌ನಿಂದ ಪವರ್ ಪಡೆಯುತ್ತದೆ.

ಇದು ಗರಿಷ್ಠ 650 PS ಶಕ್ತಿಯನ್ನು ಮತ್ತು 850 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಶಾಶ್ವತ ಆಲ್-ವೀಲ್-ಡ್ರೈವ್ ಸಿಸ್ಟಮ್ ಅನ್ನು ಪಡೆದಿದ್ದು, ಶೇ40 ರಷ್ಟು ಪವರ್ ಅನ್ನು ಮುಂಭಾಗದ ಚಕ್ರಗಳಿಗೆ ಮತ್ತು ಶೇ 60 ರಷ್ಟು ಪವರ್ ಅನ್ನು ಹಿಂದಿನ ಚಕ್ರಗಳಿಗೆ ಕಳುಹಿಸುತ್ತದೆ. ಈ ಕಾರು 8-ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

ಮಾಸೆರೋಟಿ ಗ್ರ್ಯಾನ್ ಟ್ಯುರಿಸ್ಮೊ
ರೋಹಿತ್ ಶೆಟ್ಟಿ ಅವರು ದುಬಾರಿ ಮಾಸೆರೋಟಿ ಗ್ರ್ಯಾನ್ ಟ್ಯುರಿಸ್ಮೊ ಕೂಡ ಹೊಂದಿದ್ದಾರೆ. ಈ ಸ್ಪೋರ್ಟ್ಸ್ ಕಾರು ಸಾಕಷ್ಟು ಪವರ್‌ಫುಲ್ ಕಾರಾಗಿದ್ದು, 4.7-ಲೀಟರ್ V8 ಪೆಟ್ರೋಲ್ ಎಂಜಿನ್‌ನಿಂದ ಗರಿಷ್ಠ 453 Bhp ಮತ್ತು 520 Nm ಅನ್ನು ಉತ್ಪಾದಿಸಬಲ್ಲದು. ಈ ಕಾರು 299 ಕಿ.ಮೀ/ಗಂ ಸೀಮಿತ ವೇಗವನ್ನು ಹೊಂದಿದೆ. ಈ ನಿರ್ದೇಶಕನ ಕಾರಗಳಲ್ಲಿ ಇದೇ ಅತ್ಯಂತ ವೇಗದ ಕಾರಾಗಿದೆ.

ಮುಸ್ತಾಂಗ್ ಜಿಟಿ
ರೋಹಿತ್ ಶೆಟ್ಟಿ ಕಸ್ಟಮೈಸ್ ಮಾಡಿದ ಮುಸ್ತಾಂಗ್ ಜಿಟಿಯನ್ನು ಸಹ ಹೊಂದಿದ್ದಾರೆ. ಈ ಕಾರಿನ ಮೇಲೆ ಸೈಡ್-ಸ್ಕೂಪ್‌ಗಳೊಂದಿಗೆ ಬಾಡಿ ಕಿಟ್ ಅನ್ನು ಪಡೆಯುವ ಮೂಲಕ ರಸ್ತೆಯಲ್ಲಿ ಸಂಚಿರಿಸುತ್ತಿದ್ದರೇ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಹಿಂಭಾಗದ ಕ್ವಾರ್ಟರ್ ವಿಂಡೋದ ಸ್ಥಳದಲ್ಲಿ ಕೆಂಪು ಹೈಲೈಟ್‌ಗಳೊಂದಿಗೆ ಕಾರು ನಕಲಿ ಏರ್ ಸ್ಕೂಪ್‌ಗಳನ್ನು ಸಹ ಪಡೆಯುತ್ತದೆ. ಹೊಸ ಬೂದು-ಬಣ್ಣದ ಅಲಾಯ್ ವೀಲ್‌ಗಳು ಮತ್ತು ಕಡಿಮೆ-ಪ್ರೊಫೈಲ್ ಟೈರ್‌ಗಳನ್ನು ಒಳಗೊಂಡಿದೆ.

ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್
ಈ ಬಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ತಮ್ಮ ದೈನಂದಿನ ಪ್ರಯಾಣಕ್ಕಾಗಿ ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಅನ್ನು ಸಹ ಬಳಸುತ್ತಾರೆ. ಕಪ್ಪು ರೇಂಜ್ ರೋವರ್ ಬಾಡಿಯಾದ್ಯಂತ ಕಸ್ಟಮೈಸ್ ಮಾಡಿದ ಮುಖ್ಯಾಂಶಗಳನ್ನು ನಾವು ನೋಡಬಹುದು.

ಗ್ರಿಲ್ ಬೌಂಡರಿ, ಏರ್ ಡ್ಯಾಮ್‌ಗಳು, ಬಂಪರ್ ಇನ್ಸರ್ಟ್ ಮತ್ತು ರೆಕ್ಕೆಗಳಂತಹ ಭಾಗಗಳಾದ್ಯಂತ ರೆಡ್ ಆಕ್ಸೆಂಟ್‌ಗಳನ್ನು ನೋಡಬಹುದು. ಒಳಾಂಗಣದಲ್ಲಿ ಸೀಟ್‌ಗಳು ಸಹ ಕಸ್ಟಮ್ ಕೆಂಪು ಬಣ್ಣದಲ್ಲಿವೆ. ಅವರು ಕಾರಿನ ಥೀಮ್ ಅನ್ನು ನೀಲಿ ಮತ್ತು ಕೆಂಪು ಬಣ್ಣಕ್ಕೆ ಬದಲಾಯಿಸಿದ್ದಾರೆ.


Click it and Unblock the Notifications